ಶಿವಮೊಗ್ಗ: ಪಿಇಎಸ್ ಶಿಕ್ಷಣ ಸಂಸ್ಥೆಗಳಿಗೆ ಸೇರಿದ ನಾಲ್ಕು ಬಸ್’ಗಳಿಂದ ರಾತ್ರೋರಾತ್ರಿ ಡಿಸೇಲ್ ಕಳ್ಳತನ!

ಶಿವಮೊಗ್ಗ: ನಗರದ ಪಿಇಎಸ್ ಶಿಕ್ಷಣ ಸಂಸ್ಥೆಗಳಿಗೆ ಸೇರಿದ ನಾಲ್ಕು ಬಸ್ ನಿಂದ ಡೀಸೆಲ್ ಕಳುವಾಗಿದೆ. ಶಿವಮೊಗ್ಗ ನಗರದ ಸೋಮಿನಕೊಪ್ಪದ ಮೈತ್ರಿ ಅಪಾರ್ಟ್‌ಮೆಂಟ್ ಬಳಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಿಲ್ಲಿಸಿದ್ದ ಬಸ್ಗಳಿಂದ ಡೀಸೆಲ್ ಕದಿಯಲಾಗಿದ್ದು, ಎರಡು ದೊಡ್ಡ ಬಸ್ ಮತ್ತು ಎರಡು ಮಿನಿ ಬಸ್ಗಳಿಂದ ತಡರಾತ್ರಿ ವೇಳೆ ಡೀಸೆಲ್ ಕದಿಯಲಾಗಿದೆ. ಡೀಸೆಲ್ ಮತ್ತು ಪೆಟ್ರೋಲ್ ದರ ದಿನ ನಿತ್ಯ ಏರುತ್ತಿರುವುದರಿಂದ ಡಿಸೇಲ್ ಕಳ್ಳರ ಟಾರ್ಗೆಟ್ ಆಗಿದೆ.ನಾಲ್ಕು ಬಸ್ ಗಳನ್ನೂ ಶಿಕ್ಷಣ ಸಂಸ್ಥೆ ಬಳಿ ಸೆಕ್ಯೂರಿಟಿ ನಡುವೆಯೇ ನಿಲ್ಲಿಸಲಾಗಿದ್ದರೂ ಕಳ್ಳರು…

Read More

ಶಿವಮೊಗ್ಗ: ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬ: ಜಯ ಕರ್ನಾಟಕ ಮಹಿಳಾ ಘಟಕದ ವತಿಯಿಂದ ಪ್ರತಿಭಟನೆ

ಶಿವಮೊಗ್ಗ : ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಮತ್ತು ಅಪೂರ್ಣ ಕಾಮಗಾರಿಯಿಂದ ಶನಿವಾರ ಆಗಸ್ಟ್ 28 ರಂದು ಅಮಾಯಕ ಶಿಕ್ಷಕರೊಬ್ಬರು ಜೀವ ಕಳೆದುಕೊಂಡಿದ್ದಾರೆ. ಈ ಮೊದಲಿನಿಂದಲು ನಾಗರಿಕರು ಸ್ಮಾರ್ಟ್ ಸಿಟಿಯ ನಿಧಾನಗತಿಯ ಮತ್ತು ಕಳಪೆ ಕಾಮಗಾರಿಯ ಬಗ್ಗೆ ಧ್ವನಿ ಎತ್ತುತ್ತಲೇ ಬಂದಿದ್ದಾರೆ ಆದರೆ ಇದರ ಬಗ್ಗೆ ಪಾಲಿಕೆಯಾಗಲೀ ಜಿಲ್ಲಾಡಳಿತವಾಗಲಿ ಉಸ್ತುವಾರಿ ಸಚಿವರಾಗಲಿ ಗಮನ ಹರಿಸಿದಿರುವುದು ನಿಜಕ್ಕೂ ವಿಷಾದನೀಯ,ಈಗಾಗಲೇ ನಗರದ ಮುಖ್ಯ ರಸ್ತೆಯನ್ನು ದ್ವಿಪಥ ರಸ್ತೆ 2 ವರ್ಷದಿಂದ ಅಗೆದು ಹಾಕಿ ಜನರಿಗೆ ತೊಂದರೆಯಾಗುವಂತೆ ಮಾಡಲಾಗಿದೆ ಎಂಜಿನಿಯರ್ ಮತ್ತು ಗುತ್ತಿಗೆದಾರರು…

Read More

ಶಿವಮೊಗ್ಗ: ಭೂಗಳ್ಳ ಅಧಿಕಾರಿಗಳು ಹಾಗು ಭ್ರಷ್ಟ ರಾಜಕಾರಣಿಗಳನ್ನು ಜೈಲಿಗಟ್ಟುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ:

  ಶಿವಮೊಗ್ಗ ತಾಲ್ಲೂಕು ವ್ಯಾಪ್ತಿ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಕೆಲವು ವರ್ಷಗಳಿಂದ ಭೂ ಮಾಫಿಯಾಗಳ ಹಾವಳಿ ತೀರಾ ಹಚ್ಚಾಗಿದ್ದು ಇದನ್ನ ತಡೆಯುವ ನಿಟ್ಟಿನಲ್ಲಿ ಉನ್ನತ ಮಟ್ಟದ ಪೊಲೀಸ್ ತಂಡವನ್ನ ರಚಿಸಬೇಕು ಎಂದು ಒತ್ತಾಯಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಮೌನ ಪ್ರತಿಭಟನೆ ನಡೆಸಿದೆ.  ಶಿವಮೊಗ್ಗ ನಗರ ಪ್ರದೇಶ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಏಕಾ ಏಕಿ ಭೂ ಮಾಫಿಯಾಗಳ ಹಾವಳಿ ಹೆಚ್ಚಾಗುತ್ತಿದ್ದು ಇದರ ಹಿಂದೆ ಜಿಲ್ಲೆಯ ಪ್ರಭಾವಿ…

Read More

ಶಿವಮೊಗ್ಗ:ಸ್ಮಾರ್ಟ್‌ಸಿಟಿ ಅವ್ಯವಸ್ಥೆಗೆ ಅಪಘಾತದಲ್ಲಿ ಶಿಕ್ಷಕ ಸಾವು

ಶಿವಮೊಗ್ಗ: ವಿನೋಬನಗರದಲ್ಲಿ ಸ್ಮಾರ್ಟ್‌ಸಿಟಿ ಅವ್ಯವಸ್ಥೆಗೆ ಇಂದು ಬೆಳಗ್ಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರೊಬ್ಬರು ಬಲಿಯಾಗಿದ್ದಾರೆ. ಕೃಷಿ ನಗರದ ನಿವಾಸಿ ರಂಗನಾಥ(47) ಮೃತರು. ಗೋಪಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕರಾಗಿದ್ದರು.ಇಂದು ಬೆಳಗ್ಗೆ ಮನೆಯಿಂದ ಶಾಲೆಗೆ ಬೈಕ್‌ನಲ್ಲಿ ತೆರಳುತಿದ್ದರು. ಈ ವೇಳೆ ನೂರು ಅಡಿ ರಸ್ತೆಯ ಮೈಸೂರು ಬ್ಯಾಂಕ್ ಎದುರು ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೆ  ಮೃತಪಟ್ಟಿದ್ದಾರೆ. ಪಶ್ಚಿಮ ಸಂಚಾರ ಠಾಣೆ ಪೊಲೀಸರು ಸ್ಥಳ ಪರಿಶೀಲಿಸಿದ್ದು, ಮದರಿಪಾಳ್ಯದ ಲಾರಿ ಚಾಲಕನ ವಿರುದ್ದ ಪ್ರಕರಣ…

Read More

ಶಿವಮೊಗ್ಗ: ಆಗಸ್ಟ್ 29ರಂದು ಕ್ರೀಡಾ ದಿನದ ಪ್ರಯುಕ್ತ ಫಿಟ್ ಇಂಡಿಯಾ ಫ್ರೀಡಂ ರನ್ :

ಶಿವಮೊಗ್ಗ :ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವರು ‘ಆಜಾದಿ ಕಾ ಅಮೃತ್ ಮಹೋತ್ಸವ’ವನ್ನು ಆಚರಿಸುತ್ತಿದ್ದು, ಇದರ ಅಂಗವಾಗಿ 75 ನೇ ಫಿಟ್ ಇಂಡಿಯಾ ಫ್ರೀಡಮ್ ರನ್ 2.0 ಕಾರ್ಯಕ್ರಮವನ್ನು ದೇಶಾದ್ಯಂತ ಆಯೋಜಿಸಲಾಗುತ್ತಿದೆ. ಮಾರ್ಚ್ 12 ರಂದು ಭಾರತದ ಪ್ರಧಾನ ಮಂತ್ರಿಯವರು ಆಜಾದಿ ಕಾ ಅಮೃತ ಮಹೋತ್ಸವ ಆಚರಣೆ ಕುರಿತು ಸ್ಪೂರ್ತಿದಾಯಕ ಭಾಷಣದ ಮೂಲಕ ಆಜಾದಿ ಕಾ ಅಮೃತ ಮಹೋತ್ಸವದ ಪರಿಕಲ್ಪನೆ ಬಗ್ಗೆ ತಿಳಿಸಿ, ಮಹೋತ್ಸವಕ್ಕೆ ಹಸಿರು ನಿಶಾನೆ ತೋರಿಸಿದ್ದರು. ಆಜಾದಿ ಕಾ ಅಮೃತ ಮಹೋತ್ಸವದ…

Read More

ರಿಪ್ಪನ್‌ಪೇಟೆ: ಪ್ರೀತಿಯನ್ನು ಶಂಕಿಸಿ ಯುವತಿಯನ್ನು ಕೊಲೆಗೈದು ವಿಷ ಸೇವಿಸಿದ್ದ ಭಗ್ನ ಪ್ರೇಮಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು!

ರಿಪ್ಪನ್‌ಪೇಟೆ: ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ನ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಾಗರ ತಾಲೂಕಿನ ಜೋಗ ಸಮೀಪದ ಕಾನೂರು ಗ್ರಾಮದ ಯುವತಿ ಕವಿತಾ (21) ಎಂಬಾಕೆಯನ್ನು ರಿಪ್ಪನ್‌ಪೇಟೆಯಲ್ಲಿ ಪಿಯುಸಿ ಓದುತ್ತಿರುವಾಗ ಪರಿಚಯ ಮಾಡಿಕೊಂಡು ಕಳೆದ ಐದಾರು ವರ್ಷದಿಂದ ಪ್ರೀತಿಸಿ ನಂತರ ಆಕೆ ಮೋಸ ಮಾಡಿ ಬೇರೊಂದು ಹುಡುಗನನ್ನು ಪ್ರೀತಿ ಮಾಡುತ್ತಿದ್ದಾಳೆಂಬ ಕಾರಣಕ್ಕೆ ತನ್ನ ಊರಿಗೆ ಕರೆಯಿಸಿಕೊಂಡು ವೇಲ್ ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ನಂತರ ತಾನು ಕಳೆನಾಶಕ ಕುಡಿದು ಆಸ್ಪತ್ರೆ ಸೇರಿದ ಯುವಕ ಚಿಕಿತ್ಸೆ…

Read More

ಆರಗ ಜ್ಞಾನೇಂದ್ರರಿಗೆ ಅಲ್ಪನಿಗೆ ಐಶ್ವರ್ಯ ಸಿಕ್ಕ ಹಾಗೇ ಆಗಿದೆ: ಬಿ.ಕೆ ಸಂಗಮೇಶ್

ಶಿವಮೊಗ್ಗ : ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅವರು ಅಲ್ಪನಿಗೆ ಐಶ್ವರ್ಯ ಸಿಕ್ಕ ರೀತಿಯಲ್ಲಿ ಆಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಬಿ.ಕೆ ಸಂಗಮೇಶ್ ಟೀಕಿಸಿದ್ದಾರೆ. ಗ್ಯಾಂಗ್ ರೇಪ್‍ನಲ್ಲಿ ಅರಗ ಜ್ಞಾನೇಂದ್ರ ಅವರ ಹೇಳಿಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜ್ಞಾನೇಂದ್ರ ಅವರು ಅಲ್ಪನಿಗೆ ಐಶ್ವರ್ಯ ಸಿಕ್ಕ ರೀತಿಯಲ್ಲಿ ಆಡುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆ ಅವರಿಗೆ ಫಿಟ್ ಆಗಿತ್ತು. ಶಾಂತಿ ಕಾಪಾಡೋದನ್ನು ಬಿಟ್ಟು, ಅಶಾಂತಿ ಮೂಡಿಸುತ್ತಿರುವುದು ದುರಾದೃಷ್ಟಕರವಾದ ಸಂಗತಿಯಾಗಿದೆ. ಅಶಾಂತಿ ಮೂಡಿಸುವ ಗೃಹ ಸಚಿವರು ನಮ್ಮ ಜಿಲ್ಲೆಗೆ ಸಿಕ್ಕಿರುವುದು ದುರಾದೃಷ್ಟ…

Read More

ಶಿವಮೊಗ್ಗ: ದೇಶದ ಆಸ್ತಿಯನ್ನು ಮಾರಲು ಹೊರಟಿರುವ ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಯುವ ಕಾಂಗ್ರೆಸ್ ನಿಂದ ರೈಲು ತಡೆಗೆ ಯತ್ನ :

ಶಿವಮೊಗ್ಗ : ರಾಷ್ಟ್ರೀಯ ಹಣಗಳಿಕೆ ನೀತಿ (NMP) ಯೋಜನೆಯಡಿ ದೇಶದ ಆರು ಲಕ್ಷ ಕೋಟಿ ಆಸ್ತಿಯನ್ನು ಖಾಸಗಿ ಒಡೆತನಕ್ಕೆ ಮಾರಾಟ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಇಂದು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ನಗರದ ರೈಲ್ವೆ ನಿಲ್ದಾಣ ದಲ್ಲಿ ರೈಲ್ವೆ ತಡೆ ಯತ್ನಿಸಿದ ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.  ದೇಶದಲ್ಲಿ ಅಚ್ಚೆ ದಿನ್ ತರುತ್ತೇನೆಂದು ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರ್ಕಾರ ದೇಶದ ಸಾರ್ವಜನಿಕ ವಲಯದ ಆಸ್ತಿಗಳನ್ನು ರಾಷ್ಟ್ರೀಯ ಹಣಗಳಿಕೆಯ ನೀತಿಯಡಿಯಲ್ಲಿ…

Read More

ರಾತ್ರೋರಾತ್ರಿ ಶಿವಮೊಗ್ಗದ ಮುನೇಶ್ವರ ದೇವಸ್ಥಾನದ ಬೀಗ ಒಡೆದು ಕಳ್ಳತನ :

ಶಿವಮೊಗ್ಗ :ಇಲ್ಲಿನ ತುಂಗಾ ನದಿ ತೀರದಲ್ಲಿರುವ ಅಪ್ಪಾಜಿರಾವ್ ಕಾಂಪೌಂಡ್’ನ  ಮುನೇಶ್ವರ ದೇವಸ್ಥಾನಲ್ಲಿ ಕಳ್ಳತನ ಮಾಡಲಾಗಿದೆ. ರಾತ್ರಿ ವೇಳೆ ದೇಗುಲದ ಬೀಗ ಒಡೆದು ಕಳವು ಮಾಡಿದ್ದಾರೆ. ದೇವಸ್ಥಾನದ ಬೀಗ ಮುರಿದ ಕಳ್ಳರು ದೇವರ ಅಭರಣ, ನಗದು ದೋಚಿದ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಪತ್ತೆ ಕಾರ್ಯ ಆರಂಭಿಸಿದ್ದಾರೆ. ದೇವಸ್ಥಾನದಲ್ಲಿ ಪೂಜೆ ಮುಗಿಸಿದ ಬಳಿಕ ಆಡಳಿತ ಮಂಡಳಿಯವರು ಬೀಗ ಹಾಕಿ ತೆರಳಿದ್ದರು. ರಾತ್ರಿ ಕಳ್ಳರು ದೇಗುಲದ ಬೀಗು ಮುರಿದಿದ್ದಾರೆ. ಒಳಗಿದ್ದ ಎರಡು ಗಾಡ್ರೇಜ್ ಬೀರುವಿನ ಬೀಗಗಳನ್ನು ಒಡೆದಿದ್ದಾರೆ. ದೇವಸ್ಥಾನದ…

Read More

ಶಿವಮೊಗ್ಗ : ಜಿಲ್ಲಾ ಯುವ ಕಾಂಗ್ರೆಸ್ ನಿಂದ ಶಾಸಕ ಬಸವನಗೌಡ ಯತ್ನಾಳ್ ಪ್ರತಿಕೃತಿ ದಹಿಸಿ ಪ್ರತಿಭಟನೆ..!

 ಶಿವಮೊಗ್ಗ: ಕಾಂಗ್ರೆಸ್ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಹಾಗೂ ರಾಜ್ಯದ ಬುದ್ಧಿಜೀವಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ಅವರ ಪ್ರತಿಕೃತಿ ದಹಿಸುವ ಮೂಲಕ ಯುವಕಾಂಗ್ರೆಸ್ ಪ್ರತಿಭಟನೆ ನಡೆಸಿತು. ನಗರದ ಬಿಹೆಚ್ ರಸ್ತೆಯಲ್ಲಿ ಬಿಜೆಪಿ ಶಾಸಕ ಯತ್ನಾಳ್ ಅವರ ಪ್ರತಿಕೃತಿ ದಹಿಸಿ ಯುವ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ. ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ನಾಯಕರ ವಿರುದ್ಧ ಮತ್ತು ಬುದ್ದಿ ಜೀವಿಗಳ ಬಗ್ಗೆ ಅಸಂಬದ್ದವಾಗಿ,ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹುಚ್ಚ…

Read More