ಶಿವಮೊಗ್ಗ :ಇಲ್ಲಿನ ತುಂಗಾ ನದಿ ತೀರದಲ್ಲಿರುವ ಅಪ್ಪಾಜಿರಾವ್ ಕಾಂಪೌಂಡ್’ನ ಮುನೇಶ್ವರ ದೇವಸ್ಥಾನಲ್ಲಿ ಕಳ್ಳತನ ಮಾಡಲಾಗಿದೆ. ರಾತ್ರಿ ವೇಳೆ ದೇಗುಲದ ಬೀಗ ಒಡೆದು ಕಳವು ಮಾಡಿದ್ದಾರೆ.
ದೇವಸ್ಥಾನದ ಬೀಗ ಮುರಿದ ಕಳ್ಳರು ದೇವರ ಅಭರಣ, ನಗದು ದೋಚಿದ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಪತ್ತೆ ಕಾರ್ಯ ಆರಂಭಿಸಿದ್ದಾರೆ.
ದೇವಸ್ಥಾನದಲ್ಲಿ ಪೂಜೆ ಮುಗಿಸಿದ ಬಳಿಕ ಆಡಳಿತ ಮಂಡಳಿಯವರು ಬೀಗ ಹಾಕಿ ತೆರಳಿದ್ದರು. ರಾತ್ರಿ ಕಳ್ಳರು ದೇಗುಲದ ಬೀಗು ಮುರಿದಿದ್ದಾರೆ. ಒಳಗಿದ್ದ ಎರಡು ಗಾಡ್ರೇಜ್ ಬೀರುವಿನ ಬೀಗಗಳನ್ನು ಒಡೆದಿದ್ದಾರೆ.
ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ಇರಿಸಿದ್ದ 50 ಸಾವಿರ ರೂ. ನಗದು, ಹುಂಡಿಯಲ್ಲಿದ್ದ 4 ಸಾವಿರ ರೂ. ಕಾಣಿಕೆ ಹಣ, ದೇವರ ಮೂರ್ತಿಗಾಗಿ ನಿರ್ಮಿಸಲಾಗಿದ್ದ ಬಂಗಾರದ ಕಣ್ಣುಗಳು, ಮೂಗುತಿಯನ್ನು ಕದ್ದೊಯ್ದಿದ್ದಾರೆ. ಇದರ ಮೌಲ್ಯ 26 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ವ್ಯಾಪಿಯಲ್ಲಿ ಕಳ್ಳತನ ಪ್ರಕರಣ ಹೆಚ್ಚುತಿದ್ದು ಪೊಲೀಸರು ಕಣ್ಮುಚ್ಚಿ ಕುಳಿತಿರುವಂತೆ ಕಾಣುತ್ತಿದೆ.. ಕಳ್ಳರ ಹೆಡೆಮುಡಿ ಕಟ್ಟದಿದ್ದರೆ ಕಳ್ಳರ ಹಾವಳಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ..
ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.