Headlines
GridArt 20250825 214041437 wm

ಗೌರಿ-ಗಣೇಶ – ಈದ್ ಮಿಲಾದ್ ಹಬ್ಬ ಸೌಹಾರ್ದದಿಂದ ಆಚರಿಸೋಣ : ಎಸ್‌ಪಿ ಮಿಥನ್ ಕುಮಾರ್ ಕರೆ

ಗೌರಿ-ಗಣೇಶ – ಈದ್ ಮಿಲಾದ್ ಹಬ್ಬ ಸೌಹಾರ್ದದಿಂದ ಆಚರಿಸೋಣ : ಎಸ್‌ಪಿ ಮಿಥನ್ ಕುಮಾರ್ ಕರೆ ರಿಪ್ಪನ್‌ಪೇಟೆ: ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಪರಸ್ಪರ ಗೌರವದಿಂದ ಹಾಗೂ ಸೌಹಾರ್ದತೆಯಿಂದ ಆಚರಿಸುವ ಮೂಲಕ ಗ್ರಾಮದಲ್ಲಿ ಶಾಂತಿ–ಸುವ್ಯವಸ್ಥೆ ಕಾಪಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥನ್ ಕುಮಾರ್ ಕರೆ ನೀಡಿದರು. ಇಂದು ರಿಪ್ಪನ್‌ಪೇಟೆಯ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು. ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ ಎಸ್‌ಪಿ ಮಾತನಾಡಿ, “ಧರ್ಮ ಎಲ್ಲರಿಗೂ ಶ್ರೇಷ್ಟ. ಆದರೆ ಧರ್ಮದ ಹೆಸರಿನಲ್ಲಿ ವಿಭಜನೆ…

Read Full News
GridArt 20250823 195825962 wm

ಹಿಂದೂ ಧಾರ್ಮಿಕ ಕ್ಷೇತ್ರದ ಬಗ್ಗೆ ಷಡ್ಯಂತ್ರ ಮಾಡುವವರನ್ನು ಗಲ್ಲಿಗೇರಿಸಿದರೂ ತಪ್ಪಿಲ್ಲ – ಆದರ್ಶ ಗೋಖಲೆ

ಹಿಂದೂ ಧಾರ್ಮಿಕ ಕ್ಷೇತ್ರದ ಬಗ್ಗೆ ಷಡ್ಯಂತ್ರ ಮಾಡುವವರನ್ನು ಗಲ್ಲಿಗೇರಿಸಿದರೂ ತಪ್ಪಿಲ್ಲ – ಆದರ್ಶ ಗೋಖಲೆ ಧಾರ್ಮಿಕ ಕ್ಷೇತ್ರಗಳ ವಿರುದ್ಧ ದಬ್ಬಾಳಿಕೆ ಶತ-ಶತಮಾನಗಳಿಂದಲ್ಲೂ ನಡೆಯುತ್ತ ಬಂದಿದ್ದು ಹಿಂದುಗಳು ಪೂಜಿಸುವ ಧಾರ್ಮಿಕ ಕ್ಷೇತ್ರಗಳ ಬಗ್ಗೆ ಷಡ್ಯಂತ್ರ ಮಾಡುವವರನ್ನು ಗಲ್ಲಿಗೇರಿಸಿದರೂ ತಪ್ಪಿಲ್ಲ ಎಂದು ಮಂಗಳೂರಿನ ಪ್ರಖ್ಯಾತ ಅಂಕಣ ಬರಹಗಾರರು ಮತ್ತು ಹಿಂದೂ ವಾಗ್ಮಿ ಆದರ್ಶ ಗೋಖಲೆ ಹೇಳಿದರು. ಹೊಸನಗರದಲ್ಲಿ ಹಿಂದೂ ಮಹಾ ಧರ್ಮಸ್ಥಳ ಭಕ್ತಾಧಿಗಳು ವೇದಿಕೆಯಿಂದ ಕೊಟ್ಯಂತರ ಹಿಂದುಗಳ ಪವಿತ್ರ ಕ್ಷೇತ್ರ ಶ್ರೀಧರ್ಮಸ್ಥಳ ಮಂಜುನಾಥ ಸ್ವಾಮಿ ಪುಣ್ಯ ಸನ್ನಿಧಿಗೆ ಕಳಂಕ ತಂದಿರುವವರ…

Read Full News
GridArt 20250822 215956613 wm (1)

ಕ್ರೀಡೆ ಸಹೋದರತ್ವವನ್ನು ಬೆಳೆಸುತ್ತದೆ – ಜಿ ಶೇಷಾಚಲ ನಾಯಕ್

ಕ್ರೀಡೆ ಸಹೋದರತ್ವವನ್ನು ಬೆಳೆಸುತ್ತದೆ – ಜಿ ಶೇಷಾಚಲ ನಾಯಕ್ ರಿಪ್ಪನ್ ಪೇಟೆ : ಮಕ್ಕಳ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರೀಡೆ ಸಹಕಾರಿಯಾಗಿದೆ. ಕ್ರೀಡೆಯಲ್ಲಿ ನೋಲು-ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸುವಂತಾಗಬೇಕು. ಕ್ರೀಡೆ ಸಹೋದರತ್ವವನ್ನು ಬೆಳಸುತ್ತದೆ. ದ್ವೇಷ ಅಸೂಯೆಯನ್ನು ದೂರ ಮಾಡುವ ಮೂಲಕ ಸಾಮರಸ್ಯವನ್ನು ಬೆಳಸುವಲ್ಲಿ ಕ್ರೀಡೆ ಉತ್ತಮ ವೇದಿಕೆಯಾಗಿದೆ ಎಂದು ತಾಲ್ಲೂಕು ಪಂಚಾಯಿತಿಯ ಪಿ.ಎಂ.ಘೋಷಣ್ ಸಹಾಯಕ ನಿರ್ದೇಶಕ ಜಿ.ಶೇಷಾಚಲ ನಾಯಕ್ ತಿಳಿಸಿದರು. ರಿಪ್ಪನ್‌ಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನ ಚಿನ್ನೇಗೌಡ ಕ್ರೀಡಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ…

Read Full News
GridArt 20250821

ಗಣೇಶೋತ್ಸವ , ಈದ್ ಮಿಲಾದ್ ಶಾಂತಿ ಸಭೆ | ಶಾಂತಿ ಕದಡುವವರ ವಿರುದ್ದ ಕಠಿಣ ಕ್ರಮ – ಅಡಿಷನಲ್ ಎಸ್ ಪಿ ಕಾರ್ಯಪ್ಪ ಎ ಜಿ

ಗಣೇಶೋತ್ಸವ , ಈದ್ ಮಿಲಾದ್ ಶಾಂತಿ ಸಭೆ | ಶಾಂತಿ ಕದಡುವವರ ವಿರುದ್ದ ಕಠಿಣ ಕ್ರಮ – ಅಡಿಷನಲ್ ಎಸ್ ಪಿ ಕಾರ್ಯಪ್ಪ ಎ ಜಿ ರಿಪ್ಪನ್ ಪೇಟೆ : ಗಣೇಶೋತ್ಸವ ಈದ್‌ಮಿಲಾದ್ ಹಬ್ಬಕ್ಕೆ ಡಿಜೆ ಸಂಪೂರ್ಣ ನಿಷೇಧಿಸಲಾಗಿದ್ದು, ಹಬ್ಬದ ಸಂದರ್ಭದಲ್ಲಿ ಶಾಂತಿ ಕದಡುವವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದೆಂದು  ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎ ಜಿ ಕಾರ್ಯಪ್ಪ ತಿಳಿಸಿದರು. ರಿಪ್ಪನ್‌ಪೇಟೆ ಪೊಲೀಸ್ ಇಲಾಖೆಯವರು ಶಿವಮಂದಿರದಲ್ಲಿ ಆಯೋಜಿಸಲಾದ ಶಾಂತಿಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಣೇಶೋತ್ಸವ ಮತ್ತು ಈದ್‌ಮಿಲಾದ್ ಹಬ್ಬಗಳು ಶಾಂತಿ…

Read Full News
IMG 20250821 WA0040

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸಿ – ಜಿಲ್ಲಾಧಿಕಾರಿ ಕರೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸಿ – ಜಿಲ್ಲಾಧಿಕಾರಿ ಕರೆ ಶಿವಮೊಗ್ಗ : ಆಗಸ್ಟ್ 21 :  :  ಆಗಸ್ಟ್‌ರಂದು ನಡೆಯಲಿರುವ ಗಣೇಶ ಚತುರ್ಥಿ ಮತ್ತು ಸೆಪ್ಟಂಬರ್‌ಅಚರಿಸಲಿರುವ ಈದ್‌ಮಿಲಾದ್‌ಹಬ್ಬಗಳನ್ನು ಸರ್ವ ಧರ್ಮಗಳ ಬಂಧುಗಳು ಸೌಹಾರ್ಧಯುತವಾಗಿ ಸಡಗರ ಸಂಭ್ರಮಗಳಿಂದ ಆಚರಿಸಲು ಅಗತ್ಯವಿರುವ ಸಿದ್ಧತೆಗಳನ್ನು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲಾಡಳಿತದ ವತಿಯಿಂದ ಮಾಡಿಕೊಳ್ಳಲಾಗಿದೆ ಎಂದು  ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದರು. ಅವರು ಇಂದು ನಗರದ ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ…

Read Full News
IMG 20250821 WA0039

ಶಾರ್ಟ್ ಸರ್ಕ್ಯೂಟ್‌ – ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಷ್ಟ

ಶಾರ್ಟ್ ಸರ್ಕ್ಯೂಟ್‌ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಷ್ಟ ಹೊಸನಗರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯೊಂದು ಹೊತ್ತಿ ಉರಿದಿರುವ ಘಟನೆ ಹೊಸನಗರ ತಾಲೂಕಿನ ಗೊರಗೋಡು ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಮನೆಯಲ್ಲಿದ್ದ ವಸ್ತುಗಳು ಮತ್ತು ಲಕ್ಷಾಂತರ ರೂಪಾಯಿ ಮೌಲ್ಯದ ಎಲೆಕ್ಟ್ರಿಕಲ್ ಸಾಮಗ್ರಿಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಮೇಲಿನ ಬೇಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊರಗೋಡು ಗ್ರಾಮದಲ್ಲಿ ಲಕ್ಷಣ್ ಅವರಿಗೆ ಸೇರಿದ ಮನೆಯನ್ನು ಬಾಡಿಗೆಗೆ ಪಡೆದು ದಂಪತಿಗಳು ವಾಸಿಸುತ್ತಿದ್ದರು. ದಂಪತಿಗಳು ಹೊರಗೆ ಹೋದ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆಯಲ್ಲಿ ಬೆಂಕಿ…

Read Full News
Screenshot 2025 08 20 21 36 44 029 com.miui.gallery edit

ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಿನ್ನೆಲೆಯಲ್ಲಿ ನಾಳೆ ರಿಪ್ಪನ್ ಪೇಟೆಯಲ್ಲಿ ಶಾಂತಿಸಭೆ – ಎಸ್ ಪಿ ಮಿಥುನ್ ಕುಮಾರ್ ಭಾಗಿ

ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಿನ್ನೆಲೆಯಲ್ಲಿ ನಾಳೆ ರಿಪ್ಪನ್ ಪೇಟೆಯಲ್ಲಿ ಶಾಂತಿಸಭೆ – ಎಸ್ ಪಿ ಮಿಥುನ್ ಕುಮಾರ್ ಭಾಗಿ ರಿಪ್ಪನ್ ಪೇಟೆ : ಮುಂಬರುವ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಾಳೆ (ಆ.21) ಬೆಳಗ್ಗೆ 10:30ಕ್ಕೆ ರಿಪ್ಪನ್‌ಪೇಟೆಯ ಶಿವಮೊಗ್ಗ ರಸ್ತೆಯಲ್ಲಿರುವ ಶಿವಮಂದಿರದಲ್ಲಿ ಶಿವಮೊಗ್ಗ ಎಸ್.ಪಿ. ಮಿಥುನ್ ಕುಮಾರ್ ನೇತೃತ್ವದಲ್ಲಿ ಶಾಂತಿಸಭೆ ಏರ್ಪಡಿಸಲಾಗಿದೆ ಎಂದು ರಿಪ್ಪನ್‌ಪೇಟೆ ಪೊಲೀಸ್ ಠಾಣೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ. ಈ ಸಭೆಗೆ ಠಾಣಾ ವ್ಯಾಪ್ತಿಯ ಎಲ್ಲಾ…

Read Full News
GridArt 20250820 093851063 wm

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಇಬ್ಬರು ಮೆಡಿಕಲ್‌ ವಿದ್ಯಾರ್ಥಿಗಳ ದುರ್ಮರಣ

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಇಬ್ಬರು ಮೆಡಿಕಲ್‌ ವಿದ್ಯಾರ್ಥಿಗಳ ದುರ್ಮರಣ ಶಿವಮೊಗ್ಗ: ನಗರದ ಸರ್ಕ್ಯೂಟ್‌ ಹೌಸ್‌ ಸರ್ಕಲ್‌ನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಎಂಬಿಬಿಎಸ್‌ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ ಹಾಗೂ ನಂದಿನಿ ಹಾಲಿನ ವಾಹನ ಪರಸ್ಪರ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ನಡೆದಿದೆ. ಮೃತರನ್ನು ಮೂರನೇ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳಾದ ಆದಿತ್ಯ ಮತ್ತು ಸಂದೀಪ್ ಎಂದು ಗುರುತಿಸಲಾಗಿದೆ. ಅಪಘಾತದ ವೇಳೆ ಇಬ್ಬರೂ ತೀವ್ರವಾಗಿ ರಸ್ತೆ ಮೇಲೆ ಬಿದ್ದು…

Read Full News
GridArt 20250819

ಸೌಜನ್ಯ ಹೆಸರಿನಲ್ಲಿ ದುಡ್ಡು ಮಾಡುವ ದಂಧೆ – ವಸಂತ್ ಗಿಳಿಯಾರ್

ಸೌಜನ್ಯ ಹೆಸರಿನಲ್ಲಿ ದುಡ್ಡು ಮಾಡುವ ದಂಧೆ – ವಸಂತ್ ಗಿಳಿಯಾರ್. ಧರ್ಮಸ್ಥಳದ ಮೇಲೆ ವ್ಯವಸ್ಥಿತ ದಾಳಿ  – ಆರಗ ಜ್ಯಾನೇಂದ್ರ. ತೀರ್ಥಹಳ್ಳಿ :- ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಸಾವನ್ನು ಅಸ್ತ್ರವಾಗಿ ಹಿಡಿದು ಒಂದಿಷ್ಟು ಮಂದಿ ದುಡ್ಡು ಮಾಡುವ ದಂಧೆ ಮಾಡುತ್ತಿದ್ದಾರೆ. ಅವರಿಗೆ ಧರ್ಮಸ್ಥಳದ ಮಂಜುನಾಥ ದೇವರು ಶಿಕ್ಷೆ ಕೊಡದೆ ಇದ್ದರೂ, ಅಣ್ಣಪ್ಪ ಶಿಕ್ಷೆ ಕೊಟ್ಟೇ ಕೊಡುತ್ತಾನೆ ಎಂದು ವಸಂತ್ ಗಿಳಿಯಾರ್ ಹೇಳಿದರು. ಇಂದು ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಬೃಹತ್ ಪ್ರತಿಭಟನೆಯಲ್ಲಿ ಅವರು…

Read Full News
Screenshot 2025 08 19 19 37 24 812 com.miui.mediaviewer edit

ಲಿಂಗನಮಕ್ಕಿ ಅಣೆಕಟ್ಟಿನಿಂದ 15 ಸಾವಿರ ಕ್ಯೂಸೆಕ್ ನೀರು ಬಿಡುಗಡೆ – ಜೋಗ ಜಲಪಾತದ ಸೊಬಗು ಮತ್ತಷ್ಟು ಹೆಚ್ಚಳ

ಲಿಂಗನಮಕ್ಕಿ ಅಣೆಕಟ್ಟಿನಿಂದ 15 ಸಾವಿರ ಕ್ಯೂಸೆಕ್ ನೀರು ಬಿಡುಗಡೆ – ಜೋಗ ಜಲಪಾತದ ಸೊಬಗು ಮತ್ತಷ್ಟು ಹೆಚ್ಚಳ ಶಿವಮೊಗ್ಗ, ಆಗಸ್ಟ್ 19: ಕಳೆದ ಕೆಲವು ದಿನಗಳಿಂದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಶರಾವತಿ ನದಿಯ ಜೀವನಾಡಿಯಾದ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿದೆ. ಅಣೆಕಟ್ಟಿನ ನೀರಿನ ಮಟ್ಟ 1816 ಅಡಿಗೆ ತಲುಪಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕರ್ನಾಟಕ ವಿದ್ಯುತ್ ನಿಗಮದ ಇಂಜಿನಿಯರ್‌ಗಳು 11 ರೇಡಿಯಲ್ ಗೇಟ್‌ಗಳನ್ನು ತೆರೆಯುವ ಮೂಲಕ ಸುಮಾರು 15 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ….

Read Full News
GridArt 20250819 151008612 wm

RIPPONPETE | ಅಡ್ಡೇರಿ ಸರ್ಕಾರಿ ಶಾಲೆ ಕುಸಿತ – ತಪ್ಪಿದ ಭಾರಿ ಅನಾಹುತ, ಮಕ್ಕಳಿಗೆ ತಾತ್ಕಾಲಿಕ ವ್ಯವಸ್ಥೆ ಅಗತ್ಯ

ಅಡ್ಡೇರಿ ಸರ್ಕಾರಿ ಶಾಲೆ ಕುಸಿತ – ತಪ್ಪಿದ ಭಾರಿ ಅನಾಹುತ, ಮಕ್ಕಳಿಗೆ ತಾತ್ಕಾಲಿಕ ವ್ಯವಸ್ಥೆ ಅಗತ್ಯ ರಿಪ್ಪನ್ ಪೇಟೆ : ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಡ್ಡೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಗೋಡೆಗಳು ಕುಸಿದು ಬಿದ್ದಿವೆ. ಘಟನೆ ಸೋಮವಾರ ರಾತ್ರಿ ನಡೆದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು 17 ವಿದ್ಯಾರ್ಥಿಗಳ ಭಾರಿ ಅನಾಹುತದಿಂದ ಪಾರಾಗಿದ್ದಾರೆ. ಶಾಲೆಯ ಕಟ್ಟಡ ಸಂಪೂರ್ಣ ಹಾನಿಗೊಳಗಾದ ಹಿನ್ನೆಲೆಯಲ್ಲಿ,…

Read Full News
JPEG 20250818 195229 3404820418031144563 wm

RIPPONPETE | ಮದ್ಯಪಾನ ಮಾಡಿ ಬಸ್ ಚಾಲನೆ ಮಾಡಿದ ಖಾಸಗಿ ಬಸ್ ಚಾಲಕ – ಪ್ರಕರಣ ದಾಖಲಿಸಿದ ಪೊಲೀಸರು

RIPPONPETE | ಮದ್ಯಪಾನ ಮಾಡಿ ಬಸ್ ಚಾಲನೆ ಮಾಡಿದ ಖಾಸಗಿ ಬಸ್ ಚಾಲಕ – ಪ್ರಕರಣ ದಾಖಲಿಸಿದ ಪೊಲೀಸರು ರಿಪ್ಪನ್ ಪೇಟೆ : ಮದ್ಯಪಾನ ಮಾಡಿ ಸಾರ್ವಜನಿಕರ ಪ್ರಾಣದೊಂದಿಗೆ ಆಟವಾಡುತ್ತಿದ್ದ ಖಾಸಗಿ ಬಸ್ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವ ಘಟನೆ ಇಂದು ಮಧ್ಯಾಹ್ನ ಪಟ್ಟಣದಲ್ಲಿ ನಡೆದಿದೆ. ಸಮಯೋಚಿತವಾಗಿ ಪೊಲೀಸರು ಕ್ರಮ ಕೈಗೊಂಡದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಸಾಗರದಿಂದ ತೀರ್ಥಹಳ್ಳಿಯತ್ತ ತೆರಳುತ್ತಿದ್ದ ಖಾಸಗಿ ಬಸ್‌ನ ಚಾಲಕ ಕಂಠಪೂರ್ತಿ ಮದ್ಯ ಸೇವಿಸಿ ವಾಹನವನ್ನು ನಿರ್ಲಕ್ಷ್ಯದಿಂದ ಓಡಿಸುತ್ತಿದ್ದಾನೆಂಬ ಮಾಹಿತಿ ಬಸ್ಸಿನಲ್ಲಿದ್ದ…

Read Full News
Images 2025 08 17T202655.337

ಭಾರಿ ಮಳೆ ಹಿನ್ನೆಲೆ: ಹೊಸನಗರ ಮತ್ತು ಸಾಗರ ತಾಲೂಕಿನ ಶಾಲೆಗಳಿಗೆ ನಾಳೆ (18-08-2025) ರಜೆ ಘೋಷಣೆ

ಭಾರಿ ಮಳೆ ಹಿನ್ನೆಲೆ: ಹೊಸನಗರ ಮತ್ತು ಸಾಗರ ತಾಲೂಕಿನ ಶಾಲೆಗಳಿಗೆ ನಾಳೆ (18-08-2025) ರಜೆ ಘೋಷಣೆ ಶಿವಮೊಗ್ಗ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹೊಸನಗರ ಮತ್ತು ಸಾಗರ ತಾಲೂಕುಗಳ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆ ಹಾಗೂ ಕಾಲೇಜುಗಳಿಗೆ ನಾಳೆ (ಆಗಸ್ಟ್ 18, ಸೋಮವಾರ) ರಜೆ ಘೋಷಿಸಲಾಗಿದೆ. ಸಾಗರ ತಹಶೀಲ್ದಾರ್ ಹಾಗೂ ಹೊಸನಗರದ ತಹಸೀಲ್ದಾರ್ ಈ ಬಗ್ಗೆ ಆದೇಶ ಹೊರಡಿಸಿದ್ದು, ಇಂದು ತಾಲೂಕಿನಾದ್ಯಂತ ಅತಿ ಹೆಚ್ಚು ಮಳೆಯಾಗಿರುವ ಹಿನ್ನೆಲೆಯಲ್ಲಿ ನಾಳೆಯೂ ಮಳೆಯ ಸಾಧ್ಯತೆ ಇರುವುದರಿಂದ ಮಕ್ಕಳ…

Read Full News
Picsart 25 08 16 19 50 30 569 wm

ಧರ್ಮಸ್ಥಳ ಅನನ್ಯ ಭಟ್ ಪ್ರಕರಣ – ರಿಪ್ಪನ್ ಪೇಟೆಗೆ ಎಸ್ಐಟಿ ತಂಡ ಭೇಟಿ..!!? ಸುಜಾತ ಭಟ್ ಜಾಡು ಪತ್ತೆಗೆ ಮುಂದಾಯ್ತಾ SIT!!???

ಧರ್ಮಸ್ಥಳ ಅನನ್ಯ ಪ್ರಕರಣ – ರಿಪ್ಪನ್ ಪೇಟೆಗೆ ಎಸ್ಐಟಿ ತಂಡ ಭೇಟಿ..!!? ಸುಜಾತ ಭಟ್ ಜಾಡು ಪತ್ತೆಗೆ ಮುಂದಾಯ್ತಾ SIT!!??? ರಿಪ್ಪನ್ ಪೇಟೆ : ಧರ್ಮಸ್ಥಳದ ಅನನ್ಯ ಭಟ್ ಪ್ರಕರಣ ರಾಜ್ಯದಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪ್ರಕರಣಕ್ಕೂ ರಿಪ್ಪನ್ ಪೇಟೆಗೂ ಲಿಂಕ್ ಇರುವ ಬಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ಹಲವು ಸಂಚಲನಕಾರಿ ಸಂಗತಿಗಳು ಬೆಳಕಿಗೆ ತಂದಿತ್ತು,ಹಾಗೇಯೆ ತನಿಖಾ ಪ್ರಕ್ರಿಯೆಯೂ ತೀವ್ರಗತಿಯಲ್ಲಿ ಸಾಗುತ್ತಿದೆ. ಇದೀಗ ಈ ಪ್ರಕರಣದ ತನಿಖೆಗೆ ನಿಯೋಜಿಸಲ್ಪಟ್ಟ ವಿಶೇಷ ತನಿಖಾ ತಂಡ (SIT) ಶಿವಮೊಗ್ಗ ಜಿಲ್ಲೆಯ…

Read Full News
GridArt 20250816

RIPPONPETE | ಸಂಸದ ಬಿ ವೈ ರಾಘವೇಂದ್ರ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ

RIPPONPETE | ಸಂಸದ ಬಿ ವೈ ರಾಘವೇಂದ್ರ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ ರಿಪ್ಪನ್‌ಪೇಟೆ : ಸಂಸದ ಬಿ ವೈ ರಾಘವೇಂದ್ರ ಹುಟ್ಟುಹಬ್ಬವನ್ನು ಪಟ್ಟಣದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಚರಿಸಿದರು. ಪಟ್ಟಣದ ಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಪಕ್ಷದ ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಕಾರ್ಯಕರ್ತರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ರಾಘವೇಂದ್ರ ಅವರು ಅಭಿವೃದ್ಧಿ ಕಾರ್ಯದಲ್ಲಿ 543 ಸಂಸದರಲ್ಲಿ ಎರಡನೆಯ ಸ್ಥಾನವನ್ನು ಪಡೆದುಕೊಂಡಿದ್ದಾರೆ,…

Read Full News
GridArt 20250816

RIPPONPETE | ಶಾಲಾ ಬಸ್ ಪಲ್ಟಿ : ತಪ್ಪಿದ ಭಾರಿ ಅನಾಹುತ

RIPPONPETE | ಶಾಲಾ ಬಸ್ ಪಲ್ಟಿ : ತಪ್ಪಿದ ಭಾರಿ ಅನಾಹುತ ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಕಾನುಗೋಡು ಗ್ರಾಮದ ಬಳಿ ಇಂದು ಬೆಳಿಗ್ಗೆ ನರ್ಸರಿ ಮಕ್ಕಳನ್ನು ಕರೆದೊಯ್ಯುತಿದ್ದ ಶಾಲಾ ಬಸ್ ಪಲ್ಟಿಯಾದ ಘಟನೆ ನಡೆದಿದೆ. ತಮ್ಮಡಿಕೊಪ್ಪ – ಮೂಗುಡ್ತಿ ಮಾರ್ಗದಲ್ಲಿ ಚಲಿಸುತ್ತಿದ್ದ ಶಾಲಾ ಬಸ್‌ ಕಾನುಗೋಡು ಬಳಿಯಲ್ಲಿ ಪಲ್ಟಿಯಾಗಿದೆ. ಗರ್ತಿಕೆರೆಯ ಖಾಸಗಿ ಶಾಲೆಯ ನರ್ಸರಿ ವಿಭಾಗದ 12 ಮಂದಿ ಮಕ್ಕಳು ಇದ್ದರು ಎನ್ನಲಾಗಿದೆ. ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ. ಸ್ಥಳೀಯರ ಪ್ರಕಾರ ಬಸ್ ಚಾಲಕನ…

Read Full News
GridArt 20250815

ಸ್ವಾತಂತ್ರ್ಯೋತ್ಸವದ ಪರೇಡ್ ವೇಳೆ ಅಸ್ವಸ್ಥರಾಗಿ ಬಿದ್ದ ಮಕ್ಕಳು :  ನೆರವಿಗೆ ಧಾವಿಸಿದ  ಡಾ. ಧನಂಜಯ ಸರ್ಜಿ

ಸ್ವಾತಂತ್ರ್ಯೋತ್ಸವದ ಪರೇಡ್ ವೇಳೆ ಅಸ್ವಸ್ಥರಾಗಿ ಬಿದ್ದ ಮಕ್ಕಳು :  ನೆರವಿಗೆ ಧಾವಿಸಿದ  ಡಾ. ಧನಂಜಯ ಸರ್ಜಿ ಶಿವಮೊಗ್ಗ : ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು, ತಾಲೂಕಿನ ಹಲವು ಶಾಲೆಯ ಮಕ್ಕಳು ಸ್ವಾತಂತ್ರ್ಯೋತ್ಸವದ ಪಥಸಂಚಲನಕ್ಕಾಗಿ ಆಗಮಿಸಿದ್ದರು. ಈ ವೇಳೆ ಪಥಸಂಚಲನದಲ್ಲಿ ಭಾಗಿಯಾಗಿದ್ದ 3 ಮಕ್ಕಳು ದಿಡೀರ್ ಕೆಳಗೆ ಬಿದ್ದಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ, ಅಲ್ಲಿಯೇ ಇದ್ದ ಸರ್ಕಾರಿ…

Read Full News
GridArt 20250815

ಹೊಸನಗರ ತಾಲೂಕಿನಾದ್ಯಂತ ಮಸೀದಿಗಳಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಹೊಸನಗರ ತಾಲೂಕಿನಾದ್ಯಂತ ಮಸೀದಿಗಳಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ಹೊಸನಗರ:- 79ನೇ ಸ್ವಾತಂತ್ರ್ಯೋತ್ಸವವನ್ನು ತಾಲೂಕಿನ ಹಲವು ಮಸೀದಿಗಳಲ್ಲಿ ಸಂಭ್ರಮ ಹಾಗೂ ಸಡಗರದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರು. ರಿಪ್ಪನ್ ಪೇಟೆ ರಿಪ್ಪನ್ ಪೇಟೆ ಮೊಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಅಧ್ಯಕ್ಷರಾದ ಹಸನಬ್ಬ ಬಾವ ಬ್ಯಾರಿ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು. ಈ ಸಂಧರ್ಭದಲ್ಲಿ ಧರ್ಮಗುರುಗಳಾದ ಮುನೀರ್ ಸಖಾಫಿ ಗ್ರಾಪಂ ಸದಸ್ಯ ಆಸೀಫ್ ಹಾಗೂ ಇನ್ನಿತರರು ಇದ್ದರು ನಿಟ್ಟೂರು ನಿಟ್ಟೂರು ಜುಮ್ಮಾ ಮಸೀದಿಯ ಧರ್ಮಗುರುಗಳಾದ ಉಬೇದುಲ್ಲಾ ಸಖಾಫಿ ಮಸೀದಿಯ ಆವರಣದಲ್ಲಿ…

Read Full News
Wmremove transformed (1)

ಮಳೆ ನಡುವೆ ಹೊಸನಗರ ನೆಹರು ಮೈದಾನದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಆಚರಣೆ

ಬೃಹತ್ ಪ್ರಮಾಣದ ಕೃಷಿ ಆಧಾರಿತ ಆರ್ಥಿಕತೆ ಇದ್ದು ಕೈಗಾರಿಕೆಗಳನ್ನು ಯೂರೋಪಿನ ಶಕ್ತಿಗಳು ನಿಯಂತ್ರಣ ಮಾಡುತ್ತಿದ್ದರು ಇವುಗಳ ಪರಿಣಾಮವಾಗಿ ದೇಶದ ಆರ್ಥಿಕತೆ ಹೆಚ್ಚು ಸೀಮಿತವಾಗಿದ್ದರೂ ಸ್ವಾತಂತ್ರ್ಯ ಪೂರ್ವದಲ್ಲಿ ಆರ್ಥಿಕ ಶಕ್ತಿಯಲ್ಲಿ ಬಲ ಹೊಂದಿದ್ದರೂ ಭಾರತದ ಜನತೆಗೆ ಮೂಲ ಸೌಕರ್ಯಗಳಿಲ್ಲದೇ ಆರ್ಥಿಕ ಸ್ಥಿತಿ ಶೋಚನೀಯ ಸ್ಥಿತಿಯಲ್ಲಿತ್ತು ಎಂದು ಹೊಸನಗರದ ತಹಸೀಲ್ದಾರ್ ರಶ್ಮಿ ಹಾಲೇಶ್‌ ಹೇಳಿದರು. ಇಲ್ಲಿನ ನೆಹರು ಮೈದಾನದ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಭಾರತವು ಮತ್ತು ಭಾರತೀಯರು ಬ್ರಿಟಿಷ್ ಆಡಳಿತದ…

Read Full News
GridArt 20250815

ರಿಪ್ಪನ್‌ಪೇಟೆಯ ವಿವಿಧೆಡೆ 79ನೇ ಸ್ವಾತಂತ್ಯ ಸಂಭ್ರಮ

ರಿಪ್ಪನ್‌ಪೇಟೆ ವಿವಿಧೆಡೆ 79ನೇ ಸ್ವಾತಂತ್ಯ ಸಂಭ್ರಮ ರಿಪ್ಪನ್ ಪೇಟೆ : ಪಟ್ಟಣದಲ್ಲಿ 79ನೇ ಸ್ವಾತಂತ್ಯ್ಯೋತ್ಸವ ಸಂಭ್ರಮ ಸಡಗರದೊಂದಿಗೆ ವಿವಿಧೆಡೆಯಲ್ಲಿ ಜರುಗಿತು. ಗ್ರಾಮ ಪಂಚಾಯ್ತಿಯಲ್ಲಿ ಗ್ರಾಮಾಧ್ಯಕ್ಷೆ ಧನಲಕ್ಷ್ಮಿ ಧ್ವಜಾರೋಹಣ ನೆರವೇರಿಸಿದರು. ಪೊಲೀಸ್‌ ಠಾಣೆಯಲ್ಲಿ ಪಿಎಸ್‌ಐ ರಾಜುರೆಡ್ಡಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಮಂಜಪ್ಪ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ.ಆಂಜನೇಯ , ನಾಡ ಕಛೇರಿಯಲ್ಲಿ ಉಪತಹಶೀಲ್ದಾರ್ ಗೌತಮ್, ಬಿ.ಸಿ.ಎಂ ವಸತಿ ನಿಲಯದಲ್ಲಿ ಮೇಲ್ವಿಚಾರಕಿ ಸುಮಿತ್ರಬಾಯಿ, ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ ಸಂತೋಷ, ಬರುವೆ ಸರ್ಕಾರಿ…

Read Full News
GridArt 20250815

RIPPONPETE | ಮಳೆಯಲ್ಲೂ ಯಶಸ್ವಿಯಾಗಿ ಸಾಗಿದ ತಿರಂಗ ಯಾತ್ರೆ

ಮಳೆಯಲ್ಲೂ ಯಶಸ್ವಿಯಾಗಿ ಸಾಗಿದ ತಿರಂಗ ಯಾತ್ರೆ ರಿಪ್ಪನ್ ಪೇಟೆ : ಪಟ್ಟಣದಲ್ಲಿ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ 300 ಅಡಿ ಉದ್ದದ ಬೃಹತ್ ತಿರಂಗಾ ಯಾತ್ರೆ ನಡೆಸಲಾಯಿತು. ಯಾತ್ರೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ದೇಶ ಮೊದಲು ಎನ್ನುವ ಘೋಷಣೆಗಳನ್ನು ಕೂಗುತ್ತಾ ತಿರಂಗಾವನ್ನು ಹಿಡಿದು ಗ್ರಾಮ ಪಂಚಾಯತ್ ಕಛೇರಿ ಮುಂಭಾಗದಿಂದ ವಿನಾಯಕ ವೃತ್ತದ ಮೂಲಕ ಸಾಗಿ ಪ್ರಮುಖ ರಸ್ತೆಗಳಲ್ಲಿ ತಿರಂಗಾ ಯಾತ್ರೆಯನ್ನು ನಡೆಸಿದರು. ತಿರಂಗ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಗ್ರಾಪಂ…

Read Full News
GridArt 20250814 193544927 wm

ಸುಜಾತಾ ಭಟ್ ಪ್ರಕರಣ – ರಿಪ್ಪನ್ ಪೇಟೆಯ ವ್ಯಕ್ತಿಯೊಂದಿಗೆ ಲಿವ್-ಇನ್ ರಿಲೇಷನ್‌ಶಿಪ್, ಇಲ್ಲದ ಮಗಳ ಗೂಢರಹಸ್ಯ.!!

ಸುಜಾತಾ ಭಟ್ ಪ್ರಕರಣ – ರಿಪ್ಪನ್ ಪೇಟೆಯ ವ್ಯಕ್ತಿಯೊಂದಿಗೆ ಲಿವ್-ಇನ್ ರಿಲೇಷನ್‌ಶಿಪ್, ಇಲ್ಲದ ಮಗಳ ಗೂಢರಹಸ್ಯ.!! ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಸುಜಾತ ಭಟ್ ಹಾಗೂ ಅವರ ಪುತ್ರಿ ಅನನ್ಯ ಭಟ್ ಬಗ್ಗೆ ದೇಶಾದ್ಯಂತ ಭಾರಿ ಸುದ್ದಿಯಲ್ಲಿದೆ. ಸುಜಾತ ಭಟ್ ಎಂಬ ಹೆಸರಿನ ಹಿಂದೆ ಹಲವು ಮರ್ಮಗಳಿವೆ.. 2003ರಲ್ಲಿ ಧರ್ಮಸ್ಥಳಕ್ಕೆ ಸ್ನೇಹಿತೆಯರೊಂದಿಗೆ ಬಂದಿದ್ದ ತನ್ನ ಮಗಳು ಅನನ್ಯ ಭಟ್ ನಾಪತ್ತೆಯಾಗಿದ್ದಾಳೆ ಹಾಗೂ ಆಕೆಯ ಮೇಲೆ ಅತ್ಯಾಚಾರವಾಗಿರಬಹುದು  ಎಂದು ಸುಜಾತ ಭಟ್ ದೂರು…

Read Full News
1003956180

ನಗ್ನ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

ನಗ್ನ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮಜ್ಜೆಗೆಹಳ್ಳಿಯಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಮಜ್ಜಿಗೆಹಳ್ಳಿ ಗ್ರಾಮದ ಸಮೀಪದ ಚಾನೆಲ್‌ ಬಳಿ, ಸುಮಾರು 35 ರಿಂದ 45 ವರ್ಷದೊಳಗಿನ ಮಹಿಳೆಯೊಬ್ಬರ ನಗ್ನ ಸ್ಥಿತಿಯ ಶವ ಪತ್ತೆಯಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಮೃತದೇಹವು ಈಗಾಗಲೇ ಕೊಳೆತ ಸ್ಥಿತಿಯಲ್ಲಿ ಇರುವುದರಿಂದ ಗುರುತಿನ ಪತ್ತೆ ಇನ್ನೂ ಸಾಧ್ಯವಾಗಿಲ್ಲ. ಚಾನೆಲ್‌ನಿಂದ ಹೆಣ ತೇಲಿ ಬಂದಿರಬಹುದೆಂಬ ಶಂಕೆಯಿದ್ದು, ಸಾವಿನ ನಿಖರ ಕಾರಣ ತಿಳಿದುಬರಬೇಕಿದೆ. ಅನುಮಾನಾಸ್ಪದ ಸಾವಿನ ಪ್ರಕರಣವೆಂದು ಭದ್ರಾವತಿ ಗ್ರಾಮಾಂತರ ಪೊಲೀಸ್…

Read Full News
1003956004

ಸಾಮೂಹಿಕ ವಿವಾಹದ ನೆಪದಲ್ಲಿ ಬಾಲ್ಯವಿವಾಹ – ಅಧಿಕಾರಿಗಳ ದಾಳಿ, ಎರಡು ಜೋಡಿ ವಿವಾಹ ಸ್ಥಗಿತ

ಸಾಮೂಹಿಕ ವಿವಾಹದ ನೆಪದಲ್ಲಿ ಬಾಲ್ಯವಿವಾಹ – ಅಧಿಕಾರಿಗಳ ದಾಳಿ, ಎರಡು ಜೋಡಿ ವಿವಾಹ ಸ್ಥಗಿತ ಶಿವಮೊಗ್ಗ: ನಗರದ ಶುಭ ಮಂಗಳ ಕಲ್ಯಾಣ ಮಂಟಪದಲ್ಲಿ ಸಾಮೂಹಿಕ ವಿವಾಹದ ನೆಪದಲ್ಲಿ ನಡೆಯುತ್ತಿದ್ದ ಇಬ್ಬರು ಅಪ್ರಾಪ್ತರ ಮದುವೆ ಕಾರ್ಯಕ್ರಮವನ್ನು ತಹಶೀಲ್ದಾರ್ ನೇತೃತ್ವದ ತಂಡ ತಡೆದ ಘಟನೆ ಇಂದು ನಡೆಯಿತು. ತಹಶೀಲ್ದಾರ್ ರಾಜೀವ್ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಂಗಾಬಾಯಿ ಮತ್ತು ರೇಖಾ ವಲಯ ಮೇಲ್ವಿಚಾರಕರು, ಮಕ್ಕಳ ಸಹಾಯವಾಣಿ ಸಿಬ್ಬಂದಿ ಹಾಗೂ ವಿನೋಬನಗರ ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ದಾಖಲಾತಿಗಳನ್ನು ಪರಿಶೀಲಿಸಿದಾಗ…

Read Full News
GridArt 20250812

ಜಿಲ್ಲೆಯಾದ್ಯಂತ ಡಿಜೆ ಸಿಸ್ಟಂ ಬಳಕೆ ನಿಷೇಧ – ಜಿಲ್ಲಾಧಿಕಾರಿ ಆದೇಶ

ಜಿಲ್ಲೆಯಾದ್ಯಂತ ಡಿಜೆ ಸಿಸ್ಟಂ ಬಳಕೆ ನಿಷೇಧಿಸಿ ಆದೇಶ : ಜಿಲ್ಲಾಧಿಕಾರಿಗಳು ಶಿವಮೊಗ್ಗ, ಆ.12 ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಆಚರಣೆ ಪೂರ್ಣಗೊಳ್ಳುವವರೆಗೆ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತ ದಿ: 27-08-202025 ರಿಂದ 15-09-2025 ರವರೆಗೆ ಡಿಜೆ ಸಿಸ್ಟಂ ಬಳಕೆಯನ್ನು ನಿಷೇಧಗೊಳಿಸಿ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಆದೇಶಿಸಿರುತ್ತಾರೆ. ದಿ: 27-08-2025 ರಂದು ಗಣೇಶ ಹಬ್ಬದ ಪ್ರಯಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಿ, ನಂತರ ವಿವಿಧ ದಿನಗಳಂದು ವಿಸರ್ಜನಾ…

Read Full News
IMG 20250812 WA0040

ಶ್ರೀಗಂಧ ಕಳ್ಳರ ಬಂಧನ – ಪೊಲೀಸ್ ನಾಯಿಯ ಸಹಾಯದಿಂದ ಕಳ್ಳನ ಬಂಧನ

ಶ್ರೀಗಂಧ ಕಳ್ಳರ ಬಂಧನ – ಪೊಲೀಸ್ ನಾಯಿಯ ಸಹಾಯದಿಂದ ಕಳ್ಳನ ಬಂಧನ ಶಿಕಾರಿಪುರ, ಆ. 12 – ತಾಲ್ಲೂಕಿನ ಕೆಂಗಟ್ಟೆ ಶ್ರೀಗಂಧ ಮೀಸಲಿನಲ್ಲಿ ಶ್ರೀಗಂಧ ಮರ ಕಳ್ಳತನಕ್ಕೆ ಯತ್ನಿಸಿದವರ ವಿರುದ್ಧ ವಲಯ ಅರಣ್ಯಾಧಿಕಾರಿ ರೇವಣಸಿದ್ಧಯ್ಯ ಬಿ. ಹಿರೇಮಠ್ ಹಾಗೂ ತಂಡ ಶೀಘ್ರ ಕಾರ್ಯಾಚರಣೆ ನಡೆಸಿ ಒಬ್ಬ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಶಿವಮೊಗ್ಗದ ಇಂದಿರಾನಗರ ಮೂಲದ ಆರು ಮಂದಿ ಆರೋಪಿಗಳು ರಾತ್ರಿ ವೇಳೆ, ವಿಶೇಷವಾಗಿ ಮಳೆಯ ಸಮಯವನ್ನು ಸದುಪಯೋಗಪಡಿಸಿಕೊಂಡು, ಬೇಲಿ ಕತ್ತರಿಸಿ ಅರಣ್ಯ ಪ್ರದೇಶಕ್ಕೆ ಪ್ರವೇಶಿಸಿದ್ದರು. ಅವರು ಶ್ರೀಗಂಧ…

Read Full News
GridArt 20250812

ಗಣಪತಿ ಹಬ್ಬ : ಶಾಂತಿ – ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸಜ್ಜು , 80 ಕಿಡಿಗೇಡಿಗಳ ಗಡಿಪಾರು | ಎಸ್ಪಿ ಮಿಥುನ್ ಕುಮಾರ್  ಮಾಹಿತಿ

ಗಣಪತಿ ಹಬ್ಬ : ಶಾಂತಿ – ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸಜ್ಜು , 80 ಕಿಡಿಗೇಡಿಗಳ ಗಡಿಪಾರು | ಎಸ್ಪಿ ಮಿಥುನ್ ಕುಮಾರ್  ಮಾಹಿತಿ ಶಿವಮೊಗ್ಗ: ಗೌರಿ ಮತ್ತು ಗಣೇಶ ಹಬ್ಬಗಳ ಹಿನ್ನಲೆಯಲ್ಲಿ ಗಣಪತಿ ಸಮಿತಿಗಳೊಂದಿಗೆ ಶಾಂತಿ ಸಭೆಗಳಿಗೆ ಚಾಲನೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಅವರು ಗಣಪತಿ ಸಮಿತಿಗಳಿಗೆ ಶಾಂತಿಯುತ ಮತ್ತು ವೈಭವದ ಹಬ್ಬ ಆಚರಣೆಗೆ ಸಲಹೆ ಸೂಚನೆಗಳನ್ನು ನೀಡಿದರು. ಕೋಟೆ ರಸ್ತೆಯ ಹಿಂದೂ ಮಹಾಸಭಾ ಸಮಿತಿಯೊಂದಿಗೆ ಶಾಂತಿಸಭೆ ಪ್ರಾರಂಭಿಸಿದ…

Read Full News
GridArt 20250812

ರಿಪ್ಪನ್‌ಪೇಟೆ ಸುತ್ತಮುತ್ತಲಿನ ಈ ಗ್ರಾಪಂ ವ್ಯಾಪ್ತಿಯಲ್ಲಿ ನಾಳೆ (13-08-2025) ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ ಗೊತ್ತಾ ?? ಈ ಸುದ್ದಿ ನೋಡಿ…

ರಿಪ್ಪನ್‌ಪೇಟೆ ಸುತ್ತಮುತ್ತಲಿನ ಈ ಗ್ರಾಪಂ ವ್ಯಾಪ್ತಿಯಲ್ಲಿ ನಾಳೆ (13-08-2025) ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ ಗೊತ್ತಾ ?? ಈ ಸುದ್ದಿ ನೋಡಿ… ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ನಾಳೆ 13/08/25 ರಂದು ಬೆಳಿಗ್ಗೆ 10-00 ರಿಂದ ಸಂಜೆ 06.00 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. 110/11 ಕೆವಿ ಮಾರ್ಗದ ತುರ್ತು ಕಾಮಗಾರಿಯ ನಿಮಿತ್ತ  ನಾಳೆ ಬೆಳಿಗ್ಗೆ 10-00 ರಿಂದ ಸಂಜೆ 06-00 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ರಿಪ್ಪನ್‌ಪೇಟೆ ಮೆಸ್ಕಾಂ ಇಲಾಖೆಯ…

Read Full News
GridArt 20250811

RIPPONPETE | ಅದ್ದೂರಿಯಾಗಿ ಜರುಗಿದ ಗುರುಸಾರ್ವಭೌಮರ 354ನೇ ಆರಾಧನ ಮಹೋತ್ಸವ 

ಅದ್ದೂರಿಯಾಗಿ ಜರುಗಿದ ಗುರುಸಾರ್ವಭೌಮರ 354ನೇ ಆರಾಧನ ಮಹೋತ್ಸವ  ರಿಪ್ಪನ್‌ಪೇಟೆ: ಸಮೀಪದ ಬೈರಾಪುರ ಗ್ರಾಮದ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರದ್ಧಾ ಭಕ್ತಿಯಿಂದ 354ನೇ ಗುರುಸಾರ್ವಭೌಮರ ಆರಾಧನಾ ಮಹೋತ್ಸವವು ಸಂಭ್ರಮದೊಂದಿಗೆ ಸಂಪನ್ನಗೊಂಡಿತು. ಬೆಳಗ್ಗೆ ಗುರುರಾಯರಿಗೆ ಪಂಚಾಮೃತ ಅಭಿಷೇಕ, ಪವಮಾನ ಪೂಜೆ ಹೋಮ ಹವನಗಳು ನಂತರ ರಾಯರಿಗೆ ಅಲಂಕಾರ ಪೂಜೆ, ಮಹಾಮಂಗಳಾರತಿ ಜರುಗಿತು. ಭಕ್ತಾಧಿಗಳಿಗೆ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಆರಾಧನ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರ ದಂಡು ಹರಿದು ಬಂದಿತು.

Read Full News
GridArt 20250811

ಧರ್ಮಸ್ಥಳ ಕ್ಷೇತ್ರ ನಿಂದನೆ ಸಲ್ಲದು ; ಹೊಂಬುಜ ಶ್ರೀಗಳು

ಧರ್ಮಸ್ಥಳ ಕ್ಷೇತ್ರ ನಿಂದನೆ ಸಲ್ಲದು ; ಹೊಂಬುಜ ಶ್ರೀಗಳು ರಿಪ್ಪನ್‌ಪೇಟೆ : ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮೇಲೆ ನಿರಂತರ ದೋಷಾರೋಪಣೆ ಮಾಡುವ ಮೂಲಕ ನಿಂದಿಸಿ ವಿಕೃತ ಸಂತೋಷವನ್ನು ಅನುಭವಿಸುತ್ತಿರುವ ಸಮಾಜ ಘಾತಕ ಶಕ್ತಿಗಳ ಮೇಲೆ ಸರ್ಕಾರ ಮತ್ತು ನ್ಯಾಯಾಲಯವು ಕಠಿಣ ಕ್ರಮ ಜರುಗಿಸಬೇಕೆಂದು ಹೊಂಬುಜ ಜೈನ ಮಠದ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳು ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಶ್ರೀಗಳು, ಕೋಟ್ಯಂತರ ಜನರ ಶ್ರದ್ಧಾ ಕೇಂದ್ರದ ಮೇಲೆ ಮಾನಹಾನಿ ಮಾಡುವ ಕಾಯಕವನ್ನು…

Read Full News