Headlines

ಶಿವಮೊಗ್ಗ ಜಿಲ್ಲೆಯ ಹಲವು ಸಬ್ ಇನ್ಸ್ ಪೆಕ್ಟರ್ ಗಳು ವರ್ಗಾವಣೆ

Many sub-inspectors in Shivamogga district transferred

ಶಿವಮೊಗ್ಗ : ಪೂರ್ವ ವಲಯ ವ್ಯಾಪ್ತಿಯ ೩೫ ಸಬ್‌ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ, ಪೊಲೀಸ್ ಮಹಾನಿರೀಕ್ಷಕ ಬಿ.ಆರ್. ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ. ಈ ವರ್ಗಾವಣೆಯ ಮೂಲಕ ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಪಿಎಸ್‌ಐಗಳಿಗೆ ಹೊಸ ನಿಯೋಜನೆ ದೊರೆತಿದೆ.

ಟಿ.ಎಂ. ನಾಗರಾಜು : ಸಾಗರ ಟೌನ್‌ನಿಂದ ಹಾವೇರಿ ಟೌನ್ ಪೊಲೀಸ್ ಠಾಣೆಗೆ

ಆರ್.ಹೆಚ್. ಸಂಗೊಳ್ಳಿ : ಭದ್ರಾವತಿ ಹೊಸಮನೆ ಶಿವಾಜಿ ಸರ್ಕಲ್‌ನಿಂದ ಭದ್ರಾವತಿ ಟ್ರಾಫಿಕ್ ಠಾಣೆಗೆ

ಅಕ್ಬರ್ ಮುಲ್ಲಾ : ಶಿಕಾರಿಪುರದಿಂದ ಶಿವಮೊಗ್ಗ ಪೂರ್ವ ಟ್ರಾಫಿಕ್ ಠಾಣೆಗೆ

ಸ್ವಪ್ನ ಎಲ್. : ಶಿವಮೊಗ್ಗ ಗ್ರಾಮಾಂತರದಿಂದ ಶಿವಮೊಗ್ಗ ಪಶ್ಚಿಮ ಸಂಚಾರ ಠಾಣೆಗೆ

ಸಿದ್ದಪ್ಪ : ತುಂಗಾನಗರದಿಂದ ಭದ್ರಾವತಿ ಹೊಸಮನೆ ಶಿವಾಜಿ ಸರ್ಕಲ್ ಠಾಣೆಗೆ

ಕೃಷ್ಣಕುಮಾರ್ ಮಾನೆ : ಭದ್ರಾವತಿ ಹೊಸಮನೆ ಶಿವಾಜಿ ಸರ್ಕಲ್‌ನಿಂದ ಭದ್ರಾವತಿ ಪೇಪರ್ ಟೌನ್ ಠಾಣೆಗೆ

ಈ. ಕವಿತ : ಪೇಪರ್ ಟೌನ್‌ನಿಂದ ಭದ್ರಾವತಿ ನ್ಯೂಟೌನ್ ಠಾಣೆಗೆ

ಶಿವಾನಂದ ಧರೇನವರ್ : ಮಾಳೂರಿನಿಂದ ದಾವಣಗೆರೆಯ ಕೆಟಿಜೆ ನಗರ ಠಾಣೆಗೆ

ಸುನಿಲ್ ಬಿ.ಸಿ. : ತೀರ್ಥಹಳ್ಳಿಯಿಂದ ದಾವಣಗೆರೆ ವಿದ್ಯಾನಗರ ಠಾಣೆಗೆ

ಶೋಭಾರಾಣಿ ಕೆ.ಎಸ್. : ಶಿಕಾರಿಪುರ ಗ್ರಾಮಾಂತರದಿಂದ ದಾವಣಗೆರೆ ನ್ಯಾಮತಿ ಠಾಣೆಗೆ

ಮಲ್ಲಾರೆಪ್ಪ ಜಿ. ವಗ್ಗಣ್ಣವರ : ಶಿವಮೊಗ್ಗ ಗ್ರಾಮಾಂತರದಿಂದ ಹಾವೇರಿ ಟೌನ್ ಠಾಣೆಗೆ

ಟ್ರಾಫಿಕ್ ಎಸ್‌ಐಗಳು ವಲಯ ಕಚೇರಿಗೆ

ಶಿವಮೊಗ್ಗ ಜಿಲ್ಲೆಯ ಮೂವರು ಟ್ರಾಫಿಕ್ ಸಬ್‌ಇನ್ಸ್‌ಪೆಕ್ಟರ್‌ಗಳಿಗೆ ಸ್ಥಳ ನಿರೀಕ್ಷಣೆ ನೀಡಲಾಗಿದ್ದು, ವಲಯ ಕಚೇರಿಗೆ ಕರೆಯಿಸಿಕೊಳ್ಳಲಾಗಿದೆ. ಇವರಲ್ಲಿ,

ಶಿವಮೊಗ್ಗ ಪೂರ್ವ ಸಂಚಾರ ಠಾಣೆಯ ನವೀನ್ ವಿ. ಮಠಪತಿ,

ಶಿವಮೊಗ್ಗ ಪಶ್ಚಿಮ ಸಂಚಾರ ಠಾಣೆಯ ತಿರುಮಲೇಶ್,

ಭದ್ರಾವತಿ ನ್ಯೂಟೌನ್ ಠಾಣೆಯ ಭಾರತಿ ಎಸ್.ಎನ್. ಸೇರಿದ್ದಾರೆ.