ರಿಪ್ಪನ್‌ಪೇಟೆ;-ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕುಸ್ತಿ ವಿನಾಶದತ್ತ ಸಾಗುತ್ತಿದೆ.ಕುಸ್ತಿ ಅಭ್ಯಾಸದಿಂದ ದೇಹದಲ್ಲಿನ ಸ್ನಾಯುಗಳು ಸದೃಡವಾಗುವ ಮೂಲಕ ದೈಹಿಕ ಸಾಮರ್ಥ್ಯವನ್ನು ವೃದ್ದಿಯಾಗುವುದರೊಂದಿಗೆ ಅರೋಗ್ಯವಂತರನ್ನಾಗಿಸುತ್ತದೆ ಎಂದು ಸಿದ್ದಿವಿನಾಯಕ ಸ್ವಾಮಿ ದೇವಸ್ಥಾನ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಎನ್.ಸತೀಶ್ ಹೇಳಿದರು.
ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟçಸೇನಾ ಸಮಿತಿಯ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ವಿಜಯ ದಶಮಿಯ ಅಂಗವಾಗಿ ಏರ್ಪಡಿಸಲಾಗಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಮಾತನಾಡಿದರು.
ಕುಕ್ಕಳಲೇ ಮುಗುಟಿಕೊಪ್ಪ ಸಿರಿ ಮತ್ತು ರಾಣೆಬೆನ್ನೂರು ಮಾರುತಿ,ಹಾಗೂ ಕೆರೆಹಳ್ಳಿ ಪರಶುರಾಮ ಮತ್ತು ಹನುಮಂತ ಇವರ ಕುಸ್ತಿ ಪ್ರದರ್ಶನ ರೋಚಕವಾಗಿದ್ದು ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.
ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟçಸೇನಾ ಸಮಿತಿಯ ಆಧ್ಯಕ್ಷ ಸುದೀರ್ ಪಿ., ಎಂ.ಸುರೇಶಸಿಂಗ್, ರವೀಂದ್ರಕೆರೆಹಳ್ಳಿ, ಆರ್.ರಾಘವೇಂದ್ರ, ಗ್ರಾಮ ಪಂಚಾಯಿತ್ ಉಪಾಧ್ಯಕ್ಷ ಸುದೀಂದ್ರಪೂಜಾರಿ, ಮುರುಳಿಧರ ಕೆರೆಹಳ್ಳಿ, ಶ್ರೀಧರ, ವೈ.ಜೆ.ಕೃಷ್ಣ,ಬಳೆಗಾರ ರಾಮಚಂದ್ರ, ನವೀನಗವಟೂರು, ಡಿ.ಈ.ರವಿಭೂಷಣ,ತೀರ್ಥೇಶ ಅಡಿಕಟ್ಟು,ಭೀಮರಾಜ್ ದೊಡ್ಡಿನಕೊಪ್ಪ ಇನ್ನತರರು ಪಾಲ್ಗೊಂಡಿದ್ದರು.

