POSTMAN NEWS

ನೈಜ ಸುದ್ದಿ ನೇರ ಬಿತ್ತರ..

ರಿಪ್ಪನ್‌ಪೇಟೆ; ಶರನ್ನವರಾತ್ರಿ ಸಂಭ್ರಮಾಚರಣೆಯೊಂದಿಗೆ ಸಂಪನ್ನ

GridArt 20251003

ರಿಪ್ಪನ್‌ಪೇಟೆ; ಶರನ್ನವರಾತ್ರಿ ಸಂಭ್ರಮಾಚರಣೆಯೊಂದಿಗೆ ಸಂಪನ್ನ

ರಿಪ್ಪನ್‌ಪೇಟೆ;-ಇತಿಹಾಸ ಪ್ರಸಿದ್ದ ಶ್ರೀ ಸಿದ್ದಿವಿನಾಯಕ ಸ್ವಾಮಿ ಮತ್ತು ಜಗನ್ಮಾತೆ ಆನ್ನಪೂರ್ಣೇಶವರಿ ಅಮ್ಮನವರ ದೇವಸ್ಥಾನದಲ್ಲಿ ಶರನ್ನವರಾತ್ರಿ ವಿಶೇಷ ಪೂಜಾ ಕಾರ್ಯಕ್ರಮ ಮತ್ತು ಆಯುಧ ಪೂಜೆ ಹಾಗೂ ವಿಜಯದಶಮಿಯ  ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ  `ಚಂಡಿಕಾ ಹೋಮ’ಇನ್ನಿತರ ಪೂಜಾ ಕೈಂಕರ್ಯಗಳು ಸಂಭ್ರಮಾಚರಣೆಯೊಂದಿಗೆ ಸಂಪನ್ನಗೊಂಡಿತು.

ದೇವಸ್ಥಾನದ ಪ್ರಧಾನ ಅರ್ಚಕ ಗುರುರಾಜ ಭಟ್ ಇವರ ನೇತೃತ್ವದಲ್ಲಿ ನಿತ್ಯ ಅಮ್ಮನವರ ಸನ್ನಿಧಾನದಲ್ಲಿ ಚಂಡಿಕಾ ಪಾರಾಯಣ ಮತ್ತು ವಿಶೇಷ ಪೂಜಾ ಕಾರ್ಯಗಳು ನಡೆದು ವಿಜಯ ದಶಮಿಯಂದು ಲೋಕಕಲ್ಯಾಣಾರ್ಥವಾಗಿ “ಚಂಡಿಕಾ ಹೋಮ’’ ನಂತರ ತೀರ್ಥಪ್ರಸಾದ ವಿತರಣೆ ಹಾಗೂ ಸಾಮೂಹಿಕ ಅನ್ನ ಸಂತರ್ಪಣೆ ಸಂಜೆ ಸಿದ್ದಿವಿನಾಯಕ ಸ್ವಾಮಿಯ ರಥೋತ್ಸವ ಜರುಗಿತು.

ಶ್ರೀ ಸ್ವಾಮಿಯ ರಥೋತ್ಸವವು ದೇವಸ್ಥಾನದಿಂದ ಹೊರಟು ಹಿಂಭಾಗದ ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿ ದೇವಸ್ಥಾನದ ಧರ್ಮದರ್ಶಿ ಸಮಿತಿಯವರು ಅಂಭುಛೇದನಗೊಳಿಸಿ ಬನ್ನಿ ಪತ್ರೆಯನ್ನು ಪರಸ್ಪರ ವಿನಮಯ ಮಾಡಿಕೊಳ್ಳುವುದರೊಂದಿಗೆ ಬನ್ನಿಕೊಟ್ಟು ಬಂಗಾರದಂತಾಗಲಿ ಎಂದು ಶುಭಹಾರೈಸಿಕೊಂಡ ದೃಶ್ಯ ವಿಶೇಷವಾಗಿತು.

ನಂತರ ಉತ್ಸವವು ವಿನಾಯಕ ವೃತ್ತದವರೆಗೆ ತೆರಳಿ ವಾಪಾಸ್ಸು ದೇವಸ್ಥಾನಕ್ಕೆ ಮರಳಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿ ಸಮಿತಿಯವರು ಭಕ್ತ ಸಮೂಹ ಪಾಲ್ಗೊಂಡಿದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.