Headlines

ಹೊಸನಗರಕ್ಕೆ ಖಡಕ್ ಸರ್ಕಲ್ ಇನ್ಸ್ ಪೆಕ್ಟರ್ ಮುತ್ತನಗೌಡ ವರ್ಗಾವಣೆ

ಹೊಸನಗರಕ್ಕೆ ಖಡಕ್ ಸರ್ಕಲ್ ಇನ್ಸ್ ಪೆಕ್ಟರ್ ಮುತ್ತನಗೌಡ ವರ್ಗಾವಣೆ

ಹೊಸನಗರದ ನೂತನ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಹಾವೇರಿ ಡಿಎಸ್ ಬಿ ಘಟಕದ ಖಡಕ್ ಹಾಗೂ ಜನಸ್ನೇಹಿ ಸರ್ಕಲ್ ಇನ್ಸ್ ಪೆಕ್ಟರ್ ಮುತ್ತನಗೌಡ ಗೌಡಪ್ಪಗೌಡರ್  ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

ಹೊಸನಗರ ಸರ್ಕಲ್ ಇನ್ಸ್ ಪೆಕ್ಟರ್ ಗುರಣ್ಣ ಹೆಬ್ಬಾಳ್ ಸೇರಿದಂತೆ ಜಿಲ್ಲೆಯ ಹಲವು ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಲಾಗಿತ್ತು. ಗುರಣ್ಣ ಹೆಬ್ಬಾಳ್ ರವರು ಬೆಂಗಳೂರಿನ‌ ಲೋಕಾಯುಕ್ತಕ್ಕೆ ವರ್ಗಾವಣೆಗೊಂಡಿದ್ದಾರೆ. ಅಗಸ್ಟ್ 2023 ರಿಂದ ಹೊಸನಗರದ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ ತಾಲೂಕಿನಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಗುರಣ್ಣ ಹೆಬ್ಬಾಳ್ ಪ್ರಮುಖ ಪಾತ್ರ ವಹಿಸಿದ್ದರು , ಮುತ್ತಿನಕೆರೆ ವೃದ್ದೆಯ ಕೊಲೆ ಪ್ರಕರಣವನ್ನು ಏಳು ದಿನಗಳಲ್ಲಿ ಪತ್ತೆ ಹಚ್ಚಿ ಆರೋಪಿಯ ಹೆಡೆಮುರಿ‌ ಕಟ್ಟಿದ್ದರು.

ಇನ್ನೂ ಮುತ್ತನಗೌಡ ಗೌಡಪ್ಪಗೌಡರ್ ರವರು ಹಾವೇರಿ ವಿಭಾಗದಲ್ಲಿ ಉತ್ತಮ ಆಡಳಿತ ನೀಡಿ ಜನಸ್ನೇಹಿ, ಸಮಾಜಮುಖಿ ಕಾರ್ಯಗಳಲ್ಲಿ ಗುರುತಿಸಿಕೊಂಡು ಸಾರ್ವಜನಿಕ ವಾಗಿ ಉತ್ತಮ ಬಾಂದವ್ಯ ಹೊಂದಿದ್ದರು.ಹೊಸನಗರಕ್ಕೆ ಖಡಕ್ ಸರ್ಕಲ್ ಮುತ್ತನಗೌಡ ವರ್ಗಾವಣೆ ಮಾಹಿತಿ ತಿಳಿಯುತ್ತಿದ್ದಂತೆ ಹೊಸನಗರ ತಾಲೂಕಿನ ಪ್ರಮುಖ ಪಟ್ಟಣಗಳಾದ ನಗರ ಮತ್ತು ರಿಪ್ಪನ್ ಪೇಟೆ ಯಲ್ಲಿ ಹಗಲಿರುಳು ನಡೆಯುತ್ತಿರುವ ಮರಳು ಮಾಫಿಯಾ. ಅಕ್ರಮ ಮದ್ಯ ಮಾರಾಟ. ಮತ್ತು ಗಾಂಜಾದ ಮಾಫಿಯಾ ನಡೆಸುವ ಕಳ್ಳಕಾಕರ ಎದೆಯಲ್ಲಿ ನಡುಕ ಹುಟ್ಟಿದೆ.

ಜನ ಸ್ನೇಹಿ ಹಾಗೂ ಖಡಕ್ ಪಿಐ ಮುತ್ತನಗೌಡ ರವರು ಹಾವೇರಿಯಲ್ಲಿ ಕಾರ್ಯನಿರ್ವಹಿಸಿರುವ ಹಾಗೇಯೇ ಹೊಸನಗರದಲ್ಲೂ ಕಾರ್ಯ ನಿರ್ವಹಿಸಿ ಕಳ್ಳಕಾಕರಿಗೆ ಹಾಗೂ ಸಮಾಜಘಾತುಕ ಶಕ್ತಿಗಳಿಗೆ ಕಡಿವಾಣ ಹಾಕುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಹೊಸನಗರ ತಾಲೂಕಿನ ಜನತೆ…