Headlines

ರಿಪ್ಪನ್‌ಪೇಟೆಯಲ್ಲಿ ಅಷ್ಟಲಕ್ಷ್ಮಿ ಹವನ – ನವರಾತ್ರಿ ಧಾರ್ಮಿಕ ವೈಭವ

ರಿಪ್ಪನ್‌ಪೇಟೆಯಲ್ಲಿ ಅಷ್ಟಲಕ್ಷ್ಮಿ ಹವನ – ನವರಾತ್ರಿ ಧಾರ್ಮಿಕ ವೈಭವ

ರಿಪ್ಪನ್‌ಪೇಟೆ: ಪಟ್ಟಣದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀರಾಮ ಮಂದಿರದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ನವರಾತ್ರಿ ಪ್ರಯುಕ್ತ ಅಷ್ಟಲಕ್ಷ್ಮಿ ಹವನವನ್ನು ಆಯೋಜಿಸಲಾಯಿತು. ಜಿ.ಎಸ್.ಬಿ ಸಮಾಜದ ಅನೇಕ ಬಂಧುಗಳು ಭಾಗವಹಿಸಿ ಭಕ್ತಿಪೂರ್ಣವಾಗಿ ಕಾರ್ಯಕ್ರಮವನ್ನು ನೆರವೇರಿಸಿದರು.

ನವರಾತ್ರಿಯ ಸಂದರ್ಭದಲ್ಲಿ ‘ಅಖಂಡ ದೀಪಪ್ರಜ್ವಲನೆ’ ಅಂದರೆ ಒಂಭತ್ತು ದಿನಗಳ ಕಾಲ ನಿರಂತರವಾಗಿ ದೀಪವನ್ನು ಬೆಳಗಿಸುವುದು, ಶ್ರೀ ದೇವಿಯ ಮಹಾತ್ಮೆಯ ಪಠಣ (ಚಂಡೀಪಾಠ), ಸಪ್ತಶತೀ ಪಾಠ, ದೇವಿಭಾಗವತ, ಬ್ರಹ್ಮಾಂಡಪುರಾಣದಲ್ಲಿನ ಲಲಿತೋಪಾಖ್ಯಾನ ಪಾರಾಯಣ, ಲಲಿತಾಪೂಜೆ, ಸರಸ್ವತಿಪೂಜೆ, ಉಪವಾಸ, ಜಾಗರಣೆ ಮುಂತಾದ ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಸಂಪ್ರದಾಯವನ್ನು ಸಮಾಜವು ಪಾಲಿಸುತ್ತಿದೆ.

ಈ ವರ್ಷದ ಮಹೋತ್ಸವದಲ್ಲಿಯೂ ಅಷ್ಟಲಕ್ಷ್ಮಿ ಹವನವನ್ನು ನೆರವೇರಿಸಿ, ಇಡೀ ಸಮಾಜದಲ್ಲಿ ಸುಖ-ಶಾಂತಿ, ನೆಮ್ಮದಿ ಮತ್ತು ಅಷ್ಟೈಶ್ವರ್ಯಗಳ ಪ್ರಾಪ್ತಿಗಾಗಿ ಸಮೂಹ ಪ್ರಾರ್ಥನೆ ಸಲ್ಲಿಸಲಾಯಿತು.

ಹವನದ ಪೌರೋಹಿತ್ಯವನ್ನು ವೇದಮೂರ್ತಿ ಸುದರ್ಶನ್ ಭಟ್ ಮತ್ತು ಗಣೇಶ್ ಭಟ್ ವಹಿಸಿದ್ದರು. ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ ಗಣೇಶ್ ಕಾಮತ್, ಹರೀಶ್ ಪ್ರಭು, ಜೆ. ರಾಧಾಕೃಷ್ಣ ರಾವ್, ಹರೀಶ್ ಸರಾಫ್, ಡಿ. ನರಸಿಂಹ ಕಾಮತ್, ದೀಪಕ್ ಭಗತ್, ಹಿರಿಯರಾದ ಮಂಜುನಾಥ್ ಕಾಮತ್, ರಾಮದಾಸ್ ನಾಯಕ್ ಮತ್ತಿತರರು ಹಾಜರಿದ್ದರು.