Headlines

ಹೊಸನಗರ ಸಿಪಿಐ ಗುರಣ್ಣ ಹೆಬ್ಬಾಳ್ ವರ್ಗಾವಣೆ | ಜಿಲ್ಲೆಯ ಹಲವು ಸರ್ಕಲ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ

ಹೊಸನಗರ ಸಿಪಿಐ ಗುರಣ್ಣ ಹೆಬ್ಬಾಳ್ ವರ್ಗಾವಣೆ | ಜಿಲ್ಲೆಯ ಹಲವು ಸರ್ಕಲ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ,

ಶಿವಮೊಗ್ಗ: ರಾಜ್ಯ ಸರ್ಕಾರವು ಇಂದು ಹಲವು ವರ್ಗಾವಣೆ ಆದೇಶವನ್ನು ಹೊರಡಿಸಿದ್ದು, 27 ಡಿವೈಎಸ್‌ಪಿ ಮತ್ತು 131 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ನಡೆದಿದೆ. ಈ ಪಟ್ಟಿಯಲ್ಲಿ ಹೊಸನಗರ ವೃತ್ತದ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಹೆಬ್ಬಾಳ್ ಅವರಿಗೂ ಬದಲಾವಣೆ ಆದೇಶ ಹೊರಡಿಸಲಾಗಿದೆ.

ಹೊಸನಗರದ ಸಿಪಿಐ ಆಗಿದ್ದ ಗುರಣ್ಣ ಹೆಬ್ಬಾಳ್ ಅವರನ್ನು ಕರ್ನಾಟಕ ಲೋಕಾಯುಕ್ತ ಇಲಾಖೆಗೆ ವರ್ಗಾಯಿಸಲಾಗಿದೆ, ಅವರ ಸ್ಥಾನಕ್ಕೆ ಹಾವೇರಿ ಜಿಲ್ಲೆಯ ಡಿಎಸ್‌ಬಿ ಘಟಕದ ಮುತ್ತನಗೌಡ ಐ. ಗೌಡಪ್ಪಗೌಡರ್ ಅವರನ್ನು ನಿಯುಕ್ತಿಗೊಳಿಸಲಾಗಿದೆ.

ಇತರ ಸರ್ಕಲ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆಗಳು ಹೀಗಿವೆ:

ಚಿದಾನಂದ – ಆಂತರಿಕ ಭದ್ರತಾ ವಿಭಾಗದಿಂದ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಗೆ.

ಜಗದೀಶ್ ಸಿ. ಹಂಚಿನಾಳ – ಭದ್ರಾವತಿ ಗ್ರಾಮಾಂತರ ಠಾಣೆಯಿಂದ ಶಿವಮೊಗ್ಗ ಡಿಎಸ್‌ಬಿಗೆ.

ಮುತ್ತನಗೌಡ ಐ. ಗೌಡಪ್ಪಗೌಡರ್ – ಹಾವೇರಿ ಡಿಎಸ್‌ಬಿಯಿಂದ ಹೊಸನಗರ ವೃತ್ತಕ್ಕೆ.

ಗುರುಣ್ಣ ಎಸ್. ಹೆಬ್ಬಾಳೆ – ಹೊಸನಗರ ವೃತ್ತದಿಂದ ಕರ್ನಾಟಕ ಲೋಕಾಯುಕ್ತಕ್ಕೆ.

ಮಹಾಂತೇಶ ಕೆ. ಲಂಬಿ – ಹಾವೇರಿಯ ಬ್ಯಾಡಗಿ ವೃತ್ತದಿಂದ ಸೊರಬ ವೃತ್ತಕ್ಕೆ.

ರಾಜಶೇಖರಯ್ಯ ಎಲ್. – ಸೊರಬ ವೃತ್ತದಿಂದ ಕರ್ನಾಟಕ ಲೋಕಾಯುಕ್ತಕ್ಕೆ.

ಅಣ್ಣಯ್ಯ ಕೆ.ಟಿ. – ಶಿವಮೊಗ್ಗ ಡಿಎಸ್‌ಬಿಯಿಂದ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ.