Headlines
ರಫ಼ಿ ರಿಪ್ಪನ್ ಪೇಟೆ

ರಫ಼ಿ ರಿಪ್ಪನ್ ಪೇಟೆ

ನಮಸ್ಕಾರ, ನಾನು ರಫಿ ರಿಪ್ಪನ್‌ಪೇಟೆ. ​'ಪೋಸ್ಟ್‌ಮ್ಯಾನ್ ನ್ಯೂಸ್' ಮಾಧ್ಯಮದ ಹಿಂದಿರುವ ಓರ್ವ ಅಪ್ಪಟ ಸುದ್ದಿಪ್ರೇಮಿ ಹಾಗೂ ಪತ್ರಕರ್ತ. "ನಮ್ಮೂರ ಸುದ್ದಿಗಳು ಜಗತ್ತಿಗೆ ತಲುಪಬೇಕು" ಎಂಬ ಆರು ವರ್ಷಗಳ ಕನಸಿನ ಕೂಸೇ ಈ ನಮ್ಮ ಪೋಸ್ಟ್‌ಮ್ಯಾನ್ ನ್ಯೂಸ್. ​ಸ್ಥಳೀಯ ಪತ್ರಿಕೆಗಳಿಂದ ಹಿಡಿದು ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೂ ಮಾಧ್ಯಮದ ನಾನಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದು. ಆದರೆ, ಈ ಪಯಣದಲ್ಲಿ ನನಗೊಂದು ಕೊರತೆ ಸದಾ ಕಾಡುತ್ತಿತ್ತು; ಅದೇನೆಂದರೆ, 'ನಿಜವಾದ ಸ್ಥಳೀಯ ಧ್ವನಿಗೆ ಅಲ್ಲಿ ಸೂಕ್ತ ವೇದಿಕೆ ಇರಲಿಲ್ಲ'. ಆ ಶೂನ್ಯವನ್ನು ತುಂಬಲು ಹುಟ್ಟಿಕೊಂಡ ಪರ್ಯಾಯ ವೇದಿಕೆಯೇ “ಪೋಸ್ಟ್‌ಮ್ಯಾನ್ ನ್ಯೂಸ್.” ​ಇಲ್ಲಿ 'ಸುದ್ದಿ' ಎಂದರೆ ಕೇವಲ ಸುದ್ದಿ ಮಾತ್ರ. ಇದು ಯಾವ ವ್ಯಕ್ತಿ ಅಥವಾ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಅತ್ಯಂತ ಸ್ಪಷ್ಟ: "ಸುದ್ದಿಯನ್ನು ಪ್ರಾಮಾಣಿಕವಾಗಿ ಹೇಳಬೇಕು, ತೀರ್ಪು ಕೊಡುವ ಕೆಲಸ ನಮಗಲ್ಲ." ಕೆಲವೊಮ್ಮೆ ನಮ್ಮ ವರದಿಗಳಿಗೆ ಬರುವ ಪ್ರತಿಕ್ರಿಯೆಗಳು ಬೇರೆಯದೇ ಬಣ್ಣ ಪಡೆಯಬಹುದು, ಆದರೆ ಅದಕ್ಕೆ ನನ್ನ ಏಕೈಕ ಉತ್ತರ ಕೇವಲ ನನ್ನ ಕೆಲಸದ ಮೂಲಕ ಮಾತ್ರ. ​'ಪೋಸ್ಟ್‌ಮ್ಯಾನ್ ನ್ಯೂಸ್' ಇಂದು ಕೇವಲ ಒಂದು ಸುದ್ದಿ ಪುಟವಾಗಿ ಉಳಿದಿಲ್ಲ, ಅದೊಂದು ಜಾಗೃತಿಯ ಚಳವಳಿಯಾಗಿ ರೂಪುಗೊಳ್ಳುತ್ತಿದೆ. ಕೇವಲ ವರದಿ ಮಾಡುವುದಷ್ಟೇ ನಮ್ಮ ಉದ್ದೇಶವಲ್ಲ; ನಮ್ಮೂರಿನ ಘಟನೆಗಳು, ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು, ಜ್ವಲಂತ ಸಮಸ್ಯೆಗಳು ಮತ್ತು ಸಾಧನೆಗಳನ್ನು ಹೊರಲೋಕಕ್ಕೆ ಪರಿಚಯಿಸುವ 'ಸೇತುವೆ'ಯಾಗಬೇಕೆಂಬುದು ನಮ್ಮ ಹೆಬ್ಬಯಕೆ. ಹಣ ಪಡೆದು, ಕಾಸಿಗಾಗಿ ಸುದ್ದಿ ಮಾಡುವ ಅಭ್ಯಾಸವೂ ನಮಗಿಲ್ಲ, ಆ ಹವ್ಯಾಸವೂ ನಮಗಿಲ್ಲ. ಸತ್ಯ ಮತ್ತು ನೈಜತೆಯೇ ನಮ್ಮ ಬಂಡವಾಳ. ​ನಮ್ಮ ಅಂತಿಮ ಗುರಿ ಒಂದೇ — "ಸಣ್ಣ ಊರುಗಳ ಸತ್ಯ ಕಥೆಗಳು, ಅತಿ ದೊಡ್ಡ ಮಟ್ಟದಲ್ಲಿ ಜಗತ್ತಿನ ಕಿವಿಗೆ ತಲುಪಬೇಕು." ​ತಮ್ಮ ಪ್ರೀತಿ ಮತ್ತು ಬೆಂಬಲ ಸದಾ ಹೀಗೆಯೇ ಇರಲಿ. ​ಸ್ನೇಹಪೂರ್ವಕವಾಗಿ, ರಫಿ ರಿಪ್ಪನ್‌ಪೇಟೆ ಸಂಪಾದಕರು, ಪೋಸ್ಟ್‌ಮ್ಯಾನ್ ನ್ಯೂಸ್ 🌐 [www.postmannewskannada.com]

ರಿಪ್ಪನ್ ಪೇಟೆಯ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇನ್ನೊರ್ವ ವ್ಯಕ್ತಿ ಸಾವು:

ರಿಪ್ಪನ್ ಪೇಟೆ:ಇಂದು ಮಧ್ಯಾಹ್ನ ಮೂಗೂಡ್ತಿ ಸಮೀಪ  ಚಾಲಕನ ನಿಯಂತ್ರಣ ತಪ್ಪಿದ ಟಾಟಾ ಸುಮೋ ಕಾರ್ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ  ಓರ್ವ ಮಹಿಳೆ ಮೃತ ಪಟ್ಟಿದ್ದರು.ಉಳಿದ ಮೂವರ ಸ್ಥಿತಿ ಗಂಭೀರವಾಗಿತ್ತು, ಇದೀಗ ಶಿವಮೊಗ್ಗದ  ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇನ್ನೊರ್ವ ವ್ಯಕ್ತಿ ವಿಜೇಂದ್ರ ಭಂಡಾರಿ (60) ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ವಿಜೇಂದ್ರ ಭಂಡಾರಿ (60) ರಿಪ್ಪನ್ ಪೇಟೆಯ ಸಮೀಪದ ದೂನ ಮೂಲದ ನಿವಾಸಿಯಾಗಿದ್ದಾರೆ. ಟಾಟಾ ಸುಮೊ ತೀರ್ಥಹಳ್ಳಿ ರಸ್ತೆಯ…

Read Full News

ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ:

ಸಾಗರ: ಇಲ್ಲಿನ ಗುಡ್ಡೆಕೌತಿ ಸಮೀಪದಲ್ಲಿ ಮೈಸೂರು-ತಾಳಗುಪ್ಪ ಇಂಟರ್ ಸಿಟಿ ರೈಲಿಗೆ ಮಧ್ಯಾಹ್ನದ ವೇಳೆ ತಲೆಕೊಟ್ಟು ಸುಮಾರು 36 ವರ್ಷ ವಯಸ್ಸಿನ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೃತನ ವಿಳಾಸ ತಿಳಿದು ಬಂದಿಲ್ಲಾ. ಸಾಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಶೋಕ್ ಕುಮಾರ್  ಮತ್ತು ಗ್ರಾಮಾಂತರ ಇನ್ಸ್ಪೆಕ್ಟರ್ ಗಿರೀಶ್ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು ಘಟನೆ ಕುರಿತು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಮಾಹಿತಿ: ಇಮ್ರಾನ್ ಸಾಗರ್

Read Full News

ವಾಣಿಜ್ಯ ಮಳಿಗೆಗೆ ಆಶ್ರಯ ಯೋಜನೆಯ ಹಣಬಳಕೆ: ಪಿ ಡಿ ಓ ಗೆ ಖಡಕ್ ಸಂದೇಶ ಕೊಟ್ಟ ಕುಮಾರ್ ಬಂಗಾರಪ್ಪ

ಸೊರಬ: ಇಲ್ಲಿನ ಚಂದ್ರಗುತ್ತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಆಶ್ರಯ ಯೋಜನೆಯಡಿಯಲ್ಲಿ ಎರಡು ಬಿಲ್ ಪಡೆದಿರುವ ಮನೆಯಲ್ಲಿ, ಅಬಕಾರಿ ಇಲಾಖೆಯ ಅಧಿಕೃತವಾದ ಲಿಕ್ಕರ್ ಶಾಪನ್ನು ಗ್ರಾಮ ಪಂಚಾಯ್ತಿಯ NOC ಪಡೆಯದೇ,ಯಾವುದೇ ಮಾಹಿತಿಯನ್ನು ನೀಡದೇ, ಪ್ರಾರಂಭ ಮಾಡಲಾಗಿದೆ. ಈ ಬಗ್ಗೆ ಸಾರ್ವಜನಿಕರ ದೂರಿನನ್ವಯ ಸರ್ಕಾರದ ಆದೇಶದ ಪ್ರಕಾರ, ಗ್ರಾಮ ಪಂಚಾಯತ್ ಪಂಚಾಯತ್ ACT ಪ್ರಕಾರ ಶಾಪ್ ನ್ನು ಮುಚ್ಚಿಸಲು ಹಾಗೂ ಬಡವರಿಗೆ ನೀಡಿದ ಮನೆಯನ್ನು ವಾಣಿಜ್ಯ ಮಳಿಗೆಗೆ ಬಳಸಿದ ಹಿನ್ನಲೆಯಲ್ಲಿ ಮನೆ ಫಲಾನುಭವಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಗ್ರಾಮ…

Read Full News

ರಿಪ್ಪನ್ ಪೇಟೆಯಲ್ಲಿ ಭೀಕರ ಅಪಘಾತ: ಮಹಿಳೆ ಸಾವು

ರಿಪ್ಪನ್ ಪೇಟೆ: ಸಮೀಪ  ವರನಹೊಂಡ ಎಂಬಲ್ಲಿ ಭೀಕರ ಅಪಘಾತ.ಚಾಲಕನ ನಿಯಂತ್ರಣ ತಪ್ಪಿದ ಟಾಟಾ ಸುಮೋ ಕಾರ್ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಒರ್ವ ಮಹಿಳೆ ಸಾವನ್ನಪ್ಪಿದ್ದಾರೆ.ಉಳಿದ ಮೂವರ ಸ್ಥಿತಿ ಗಂಭೀರ, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು.ಒಟ್ಟು ನಾಲ್ವರು ಪ್ರಯಾಣಿಸುತ್ತಿದ್ದರು. ಟಾಟಾ ಸುಮೊ ತೀರ್ಥಹಳ್ಳಿ ರಸ್ತೆಯ ಜಂಬಳ್ಳಿ ಕಡೆಯಿಂದ ರಿಪ್ಪನ್ ಪೇಟೆ ಗೆ ಆಗಮಿಸುತ್ತಿತ್ತು.ಮೃತ ಮಹಿಳೆ ನೀಲಮ್ಮ (60) ಎಂದು ಹೇಳಲಾಗುತ್ತಿದೆ.ಚಾಲಕ ಕೌಶಿಕ್ ಎನ್ನಲಾಗುತ್ತಿದೆ. ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ರಿಪ್ಪನ್ ಪೇಟೆ…

Read Full News

ಡಿ ಬಾಸ್ ಅಂಡ್ ಗ್ಯಾಂಗ್ ಮಾಡಿದ ದೌರ್ಜನ್ಯಕ್ಕೆ ವೇಟರ್ ಹೆಂಡತಿ ಪೊರಕೆ ಹಿಡಿದು ನಿಂತಿದ್ದಳು : ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ

ಬೆಂಗಳೂರು: ನಟ ದರ್ಶನ್​ರವರ ಲೋನ್ ಗೆ ಜಾಮೀನು ಕೇಸ್​ನಲ್ಲಿ ಸಿನಿಮಾ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಎಂಟ್ರಿಯಾಗಿದ್ದು, ಮೈಸೂರು ನಗರದಲ್ಲಿ ಪೊಲೀಸ್​ ಸ್ಟೇಷನ್​ಗಳು ಸೆಟಲ್​ಮೆಂಟ್​ ಸ್ಟೇಷನ್​ ಆಗಿದೆ. ಜನ ಸಾಮಾನ್ಯರಿಗೆ ನ್ಯಾಯವೇ ಸಿಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಗುರುವಾರ ಬೆಳಗ್ಗೆ ಗೃಹ ಸಚಿವ ಬೊಮ್ಮಾಯಿ ಅವರನ್ನು ಭೇಟಿಯಾದ ಇಂದ್ರಜಿತ್​ ಲಂಕೇಶ್​, ದರ್ಶನ್ ಹೆಸರಲ್ಲಿ ವಂಚನೆ ಯತ್ನ ಪ್ರಕರಣ, ಮೈಸೂರಿನಲ್ಲಿ ನಡೆದಿರೋ ಗಲಾಟೆ, ಮೈಸೂರಿನ ಸ್ಟಾರ್ ಹೋಟೆಲ್ ಒಂದರಲ್ಲಿ ನಡೆದಿರೋ ದಲಿತನ ಮೇಲಿನ ಹಲ್ಲೆ, ಅಲ್ಲಿನ ಬೆಳವಣಿಗೆ ಕುರಿತು ಮಾಹಿತಿಯನ್ನೊಳಗೊಂಡ…

Read Full News

ಹಲವು ವರ್ಷಗಳ ಹಿಂದೆಯೇ ಹಕ್ಕುಪತ್ರ ಹೊಂದಿರಬೇಕಾಗಿತ್ತು ತಡವಾಗಿದೆ : ಕುಮಾರ್ ಬಂಗಾರಪ್ಪ

ಸೊರಬ: ಚಂದ್ರಗುತ್ತಿಯ ಯಾತ್ರಿ ನಿವಾಸದಲ್ಲಿ ಶಾಸಕರಾದ ಶ್ರೀ ಎಸ್ ಕುಮಾರ್ ಬಂಗಾರಪ್ಪ ರವರ ಅಧ್ಯಕ್ಷತೆಯಲ್ಲಿ ಚಂದ್ರಗುತ್ತಿ ಹೋಬಳಿಗೆ ಸಂಬಂಧಿಸಿದಂತೆ ಬಗರ್ ಹುಕುಂ ಸಮಿತಿ ಪ್ರಗತಿ ಪರಿಶೀಲನಾ ಸಭೆ ನಡಸಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದರು.  ವಿತರಣೆ ಮಾಡುವ ಸಂಧರ್ಭದಲ್ಲಿ ಹಕ್ಕು ಪತ್ರ ಪಡೆದ ಫಲಾನುಭವಿಗಳು ಶಾಸಕರಿಗೆ ಅಭಿನಂದನೆ ಸಲ್ಲಿಸಿದರು. ಶಾಸಕರು ಅವರ ಅಭಿನಂದನೆಯನ್ನು ಸ್ವೀಕರಿಸಿ ನಿಮ್ಮ ಕೆಲಸ ಮಾಡಿಕೊಡುವುದೇ ನನ್ನ ಕೆಲಸ ಅದನ್ನು ನಾನು ಮಾಡಿದ್ದೇನೆ ನೀವುಗಳು ತುಂಬಾ ವರ್ಷಗಳ ಹಿಂದೆಯೇ ಹಕ್ಕು ಪತ್ರ ಹೊಂದಿರಬೇಕಾಗಿತ್ತು…

Read Full News

“ಉಳ್ಳವರಿಗೆ ಬೆಣ್ಣೆಯೂಟ; ಹಸಿದವರಿಗೆ ಬಣ್ಣದ ಮಾತು”. ಕೇಂದ್ರ ಸರಕಾರದ ಧ್ವಿಮುಖ ನೀತಿ: ಪಿ ಚಿದಂಬರಂ

ನವದೆಹಲಿ: ಒಂದು ನೇರಾನೇರ ಸಂವಾದದ ತಿರುಳು ಇದು. ಇಂದು (೧೩ಜುಲೈ) ರಾತ್ರಿ ‘ಇಂಡಿಯಾ ಟುಡೇʼ ಎಂಬ ಇಂಗ್ಲಿಷ್‌ ಚಾನೆಲ್ಲಿನಲ್ಲಿ ರಾಜದೀಪ್‌ ಸರ್ದೇಸಾಯಿ ಮತ್ತು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ನಡುವೆ ನಡೆದ ಸಂವಾದ ಇಲ್ಲಿದೆ. ನಮ್ಮ ಕನ್ನಡ ಚಾನೆಲ್‌ಗಳಲ್ಲಾಗಲೀ ಪತ್ರಿಕೆಗಳಲ್ಲಾಗಲೀ ಕಾಣಸಿಗದ ಸ್ಪಷ್ಟ ಚಿತ್ರಣವನ್ನು ಇಲ್ಲಿ ಕಾಣಬಹುದು. ನಾವು ಮಧ್ಯಮವರ್ಗದವರು ಎಂಥ ಇಕ್ಕಟ್ಟಿನಲ್ಲಿ ಸಿಲುಕಿದ್ದೇವೆ!  ರಾಜದೀಪ್‌ ಸರ್ದೇಸಾಯಿ: ಅಲ್ಲಾರೀ, ಕೇಂದ್ರ ಸರಕಾರ ಹೇಳುತ್ತೆ, ಪೆಟ್ರೋಲ್‌ ಬೆಲೆ ಏರಿಕೆಗೆ ತಾನೊಬ್ಬನೇ ಕಾರಣ ಅಲ್ಲ; ರಾಜ್ಯ ಸರಕಾರಗಳೂ ತೆರಿಗೆ ಹಾಕುತ್ತಿವೆ….

Read Full News

ಆಷಾಡ ಮಾಸದ ನಂತರ ಕುಮಾರಸ್ವಾಮಿ ರಂಗಪ್ರವೇಶ: ಸಿದ್ದವಾಗಿದೆ 150 ವಿಧಾನಸಭಾ ಕ್ಷೇತ್ರದ ನೀಲನಕ್ಷೆ

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಸದ್ದಿಲ್ಲದೆ ಸಜ್ಜಾಗುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಆಷಾಢ ಮಾಸ ಕಳೆಯುತ್ತಿದ್ದಂತೆ “ರಂಗಪ್ರವೇಶ’ಕ್ಕೆ ನೀಲನಕ್ಷೆ ರೂಪಿಸುತ್ತಿದ್ದಾರೆ. ಕಳೆದ ಎರಡು ವಿಧಾನಸಭೆ ಚುನಾವಣೆಯ ಅನುಭವದ ಆಧಾರದ ಮೇಲೆ 2023ರಲ್ಲಿ 150 ಕ್ಷೇತ್ರಗಳ ಗುರಿಯೊಂದಿಗೆ ರಾಜ್ಯ ಪ್ರವಾಸ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಈ ಸಂದರ್ಭದಲ್ಲಿ ಮತ್ತೆ ತಮಗೆ ಜನಪ್ರಿಯತೆ ತಂದುಕೊಟ್ಟ “ಗ್ರಾಮವಾಸ್ತವ್ಯ’ ನಡೆಸುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ. ಹಳೇ ಮೈಸೂರು, ಉತ್ತರ ಕರ್ನಾಟಕ ಹಾಗೂ ಮಲೆನಾಡು ಭಾಗದ ಕ್ಷೇತ್ರಗಳನ್ನು ಪಟ್ಟಿ ಮಾಡಿಕೊಂಡಿದ್ದು, ಪ್ರವಾಸದ ಅನಂತರ…

Read Full News

ದುಬೈನಲ್ಲಿ ಸುಖವಾಗಿದ್ದ ಮಹಿಳೆ, ಸಾಯೋದಕ್ಕಂತಲೇ ತವರಿಗೆ ಬರುವಂತಾದದ್ದು ದುರಂತ:

 ಉಡುಪಿ: ಒಂಟಿ ಮಹಿಳೆಯನ್ನು ವಯರ್ ಮೂಲಕ ಕತ್ತು ಹಿಸುಕಿ ಕೊಲೆ ಮಾಡಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಈ‌ ಒಂದು ಕೊಲೆ‌ ಹಲವು ಅನುಮಾನಗಳಿಗೆ ಎಡೆಮಾಡಿದೆ. ಬ್ರಹ್ಮಾವರದ ಕುಮ್ರಗೋಡುವಿನ ಫ್ಲಾಟ್ ನಲ್ಲಿ ಶವವಾದ ಮಹಿಳೆಯ ಹೆಸರು ವಿಶಾಲ ಗಾಣಿಗ(36). ಈಕೆಗೆ 7 ವರ್ಷದ ಮಗಳಿದ್ದಾರೆ. ದುಬೈನಲ್ಲಿ ಕಂಪೆನಿಯೊಂದರ ಮನೇಜರ್ ಆಗಿ ದುಡಿಯುವ ಪತಿ. ಆಸ್ತಿ-ಪಾಸ್ತಿ, ಮನೆ, ಭೂಮಿ ಯಾವುದಕ್ಕೂ ಕೊರತೆ ಇರಲಿಲ್ಲ. ಹತ್ತು ದಿನಗಳ ಹಿಂದೆ ಮಗಳು ಆರ್ವಿಯೊಂದಿಗೆ ಈಕೆ ದುಬೈನಿಂದ ತವರಿಗೆ ಬಂದಿದ್ದರು. ಮನೆಯ ಆಸ್ತಿ…

Read Full News

ಇಂದು ಅಥವಾ ನಾಳೆ ಭೂಮಿಗೆ ಅಪ್ಪಳಿಸಲಿದೆ ಪ್ರಬಲ ಸೌರಚಂಡಮಾರುತ:ಟಿ ವಿ,ಮೊಬೈಲ್, ಜಿಪಿಎಸ್ ಸಿಗ್ನಲ್ ಹಾನಿ ಸಾಧ್ಯತೆ.

ವಾಷಿಂಗ್ಟನ್: ಇಡೀ ಜಗತ್ತು ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವ ನಡುವೆಯೇ ಭಾರೀ ಪ್ರಮಾಣದ ಸೂರ್ಯನ ಶಾಖದ ಅಲೆಗಳು ಸೌರ ಚಂಡಮಾರುತದ ರೂಪದಲ್ಲಿ ಬುಧವಾರ ಅಥವಾ ಗುರುವಾರ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೂ ಮುನ್ನ ಭಾನುವಾರ ಅಥವಾ ಸೋಮವಾರ ಸೌರ ಚಂಡಮಾರುತ ಭೂಮಿಗೆ ಬಂದಪ್ಪಳಿಸುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಆಯಸ್ಕಾಂತೀಯ ಗುಣದ ಚಂಡಮಾರುತ ಎಂದು ಕರೆಯಲ್ಪಡುವ ಇದು ಅತೀ ವೇಗದ ಸೌರ ಮಾರುತವಾಗಿದ್ದು, ಭೂಮಿಯ ಮ್ಯಾಗ್ನೆಟಿಕ್ ವಲಯದ ಮೇಲೆ ಅಪ್ಪಳಿಸುವ ನಿರೀಕ್ಷೆ ಇದೆ ಎಂದು ಹವಾಮಾನ ತಜ್ಞರು…

Read Full News

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಪಾಳುಬಿದ್ದಿವೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ಪೋಲೀಸ್ ವಸತಿಗೃಹಗಳು:

ಆನಂದಪುರ: ಮಲೆನಾಡಿನ ಮಡಿಲಾದ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಪೊಲೀಸ್ ಉಪಠಾಣೆಯ ಸಿಬ್ಬಂದಿಗಳಿಗಾಗಿ ಸುಮಾರು ನಲವತ್ತು ವರ್ಷಗಳ ಹಿಂದೆ ಸರ್ಕಾರ ನಿರ್ಮಿಸಿದಂತಹ ಪೊಲೀಸ್ ವಸತಿ ಗೃಹಗಳು ಇಂದು ಸಂಪೂರ್ಣವಾಗಿ ಶಿಥಿಲಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಕಾಣುವಂತಹ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಾಗದಲ್ಲಿ ನಿರ್ಮಿಸಿರುವಂತಹ 5 ಪೊಲೀಸ್ ವಸತಿ ಗೃಹಗಳು ಇದೀಗ ಸಂಪೂರ್ಣವಾಗಿ ಪಾಳು ಬಿದ್ದಿದ್ದು ಅನೈತಿಕ ಚಟುವಟಿಕೆಯ ಮುಖ್ಯ ತಾಣವಾಗಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇದೆ. ಮದ್ಯವ್ಯಸನಿ ಗಳಿಗಂತೂ ಇದು ಅಡ್ಡವಾಗಿದ್ದು ಯಾವುದೇ ಭಯವಿಲ್ಲದೆ ವಸತಿಗೃಹದ…

Read Full News

ರಿಪ್ಪನ್ ಪೇಟೆ ತಾಪಂ ಕ್ಷೇತ್ರಕ್ಕೆ ಟಿಕೆಟ್ ಗಾಗಿ ಭಾರಿ ಪೈಪೋಟಿ:

ರಿಪ್ಪನ್ ಪೇಟೆ: ಕೊರೋನಾ ಕಾರಣಕ್ಕೆ ಮುಂದಿನ ಆರು ತಿಂಗಳ ಕಾಲ ಯಾವುದೇ ಚುನಾವಣೆ ಇಲ್ಲ ಎಂದು ರಾಜ್ಯ ಸರ್ಕಾರ ಘೋಷಿಸಿದೆ.ಆದರೆ ರಾಜ್ಯ ಚುನಾವಣಾ ಆಯೋಗ ಈ ಆದೇಶ ನಮಗೆ ಅನ್ವಯಿಸದು ಎನ್ನುವ ಮೂಲಕ ಯಾವುದೇ ಸಮಯದಲ್ಲಾದರೂ ಚುನಾವಣೆ ದಿನಾಂಕ ಪ್ರಕಟಿಸುವ ಸ್ಪಷ್ಟ ಸುಳಿವು ನೀಡಿದೆ.ಹಾಗಾಗಿ ರಾಜಕೀಯ ಪಕ್ಷಗಳು ಕೂಡ ಸದ್ದಿಲ್ಲದೇ ಚುನಾವಣೆಗೆ ಸಿದ್ದತೆ ನಡೆಸಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಾಲಾಗಿದ್ದ ಪ್ರತಿಷ್ಟೆಯ ಕಣ ರಿಪ್ಪನ್ ಪೇಟೆ ತಾಲೂಕ್ ಪಂಚಾಯತ್ ಕ್ಷೇತ್ರವು ಈ ಬಾರಿ ಸಾಮಾನ್ಯ ಮಹಿಳೆ ಮೀಸಲಾತಿ…

Read Full News

ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ:

     ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಗಾಜಿನಗೋಡು ಗ್ರಾಮದ ನಿವಾಸಿ, ಹೊಸನಗರ ತಾಲೂಕು ಗಂಗಾಮತಸ್ಥ ಸಂಘದ ಮಾಜಿ ನಿರ್ದೇಶಕ ಕೊಲ್ಲಪ್ಪ ಇವರು ಕೂಲಿ ಕೆಲಸಕ್ಕೆಂದು ಮೂರು ದಿನಗಳ ಹಿಂದೆ ಹೋದವರು ಇಂದು ಗಾಜಿನಗೋಡು ಸಮೀಪ ಕುಮದ್ವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.  ಕಳೆದ ಮೂರು ನಾಲ್ಕು ದಿನದಿಂದ ಬರುತ್ತಿರುವ ಅತಿಯಾದ ಮಳೆಗೆ ಕುಮದ್ವತಿ ನದಿ ಹರಿಯುತ್ತಿದ್ದು ಕಾಲುಜಾರಿ ಬಿದ್ದಿರಬಹುದೆಂದು ಊಹಿಸಲಾಗಿದೆ. ಗಾಜಿನ ಗೋಡು ಮತ್ತು  ಹಾರಂಬಳ್ಳಿ ಮಧ್ಯೆ ಹರಿಯುತ್ತಿರುವ ನದಿ ಇದಾಗಿದ್ದು ಕೂಲಿಯೂ ಸೇರಿದಂತೆ ಬೇರೆ…

Read Full News

SSLC ವಿಧ್ಯಾರ್ಥಿಗಳಿಗೆ ಪರೀಕ್ಷೆಯ ದಿನ ಉಚಿತ ಬಸ್ ವ್ಯವಸ್ಥೆ: ಕೆ ಎಸ್ ಆರ್ ಟಿ ಸಿ & ಬಿಎಂಟಿಸಿ ಯಿಂದ ಅದೇಶ

ಬೆಂಗಳೂರು: ಇದೇ ತಿಂಗಳ 19 ಹಾಗೂ 22 ರಂದು ನಡೆಯುವ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಇದೇ ಜುಲೈ 19 ಹಾಗೂ 22 ರಂದು ಪರೀಕ್ಷೆ ನಡೆಯಲಿದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಬಿಎಂಟಿಸಿ ಅನುಮತಿ ನೀಡಿದ್ದು ಈ ಬಗ್ಗೆ ಎರಡು ನಿಗಮಗಳು ಆದೇಶ ಹೊರಡಿಸಿವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಕ್ಕಳು ತಮ್ಮ ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಹೋಗಲು ಮತ್ತು…

Read Full News

ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಶಿವಮೊಗ್ಗ ಜಿಲ್ಲಾ ಪ್ರವಾಸ:

ಶಿವಮೊಗ್ಗ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜುಲೈ 15ರಿಂದ ಎರಡು ದಿನಗಳ ಶಿವಮೊಗ್ಗ ಮತ್ತು ದಾವಣಗೆರೆ ಪ್ರವಾಸ ಕೈಗೊಳ್ಳಲಿದ್ದಾರೆಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಮಾಹಿತಿ ನೀಡಿದರು. ಜುಲೈ 15ರ ಬೆಳಗ್ಗೆ 11 ಗಂಟೆಗೆ ಅವರು  ನೇರವಾಗಿ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸೂರಗೊಂಡನಕೊಪ್ಪಕ್ಕೆ ಆಗಮಿಸಿ ಅಲ್ಲಿ ಲಂಬಾಣಿ ಜನರೊಂದಿಗೆ ಕುಂದುಕೊರತೆ ಕುರಿತು ಸಂವಾದ ನಡೆಸುವರು. ನಂತರ 3 ಗಂಟೆಗೆ ಶಿಕಾರಿಪುರಕ್ಕೆ ತೆರಳಿ ಅಲ್ಲೂ ಕೂಡಾ ಲಂಬಾಣಿ ಜನರ ಸಮಸ್ಯೆ ಆಲಿಸುವರು ಅದೇ ರೀತಿ…

Read Full News

ಬಿಜೆಪಿ ಸರಕಾರದ ಭ್ರಷ್ಟಾಚಾರದ ವಿರುದ್ದ ತೀವ್ರ ಪ್ರತಿಭಟನೆ:ಹೆಚ್ ಎಸ್ ಸುಂದರೇಶ್

ಶಿವಮೊಗ್ಗ: ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಇದಕ್ಕೆ ಲಗಾಮ ಹಾಕುವವರೇ ಇಲ್ಲವಾಗಿದೆ. ಇದರ ವಿರುದ್ಧ ಕಾಂಗ್ರೆಸ್ ತನ್ನ ಪ್ರತಿಭಟನೆಯನ್ನು ತೀವ್ರಗೊಳಿಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಿಂದ ಹಿಡಿದು ಪಕ್ಷದ ಸಾಮಾನ್ಯ ಕಾರ್ಯಕರ್ತನವರೆಗೂ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಯಾವುದೇ ಹೊಸ ಯೋಜನೆಗಳು ಬಂದರೂ ಕೂಡಾ ಕಿಕ್‍ಬ್ಯಾಕ್ ಸಿದ್ಧವಾಗಿಯೇ ಇರುತ್ತದೆ. ಶೇ.20ರಷ್ಟು ಗುಣಮಟ್ಟದ ಕೆಲಸವನ್ನು ಮಾಡುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಬೇಕಾಬಿಟ್ಟಿ ಕೆಲಸಗಳು ನಡೆಯುತ್ತಿದೆ. ಕಳಪೆ ರಸ್ತೆಯಿಂದ ಹಿಡಿದು…

Read Full News

ಕೆಸರು ಗುಂಡಿಯಾದ ರಸ್ತೆ: ಗ್ರಾಮಸ್ಥರಿಂದ ಆಕ್ರೋಶ

ಸೊರಬ:ಇಲ್ಲಿನ ಚಂದ್ರಗುತ್ತಿಯ ಬೋವಿ ಕಾಲೋನಿಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಗಾಗಿ ಇಂತಹ ಮಳೆಗಾಲದಲ್ಲಿ ರಸ್ತೆ ಅಗೆದು ಓಡಾಡಲು ಬಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಅಳಲನ್ನು ತೋಡಿಕೊಂಡರು. ಗ್ರಾಮ ಪಂಚಾಯತಿಯ 14ನೇ ಹಣಕಾಸಿನಲ್ಲಿ 1.5 ಲಕ್ಷ ಅನುದಾನದಲ್ಲಿ ಮೊದಲಿದ್ದ 3ಇಂಚ್ ಪೈಪಲೈನ್ ಬದಲಾಯಿಸಿ 2ಇಂಚ್ ಪೈಪ್ ಹಾಕಿದರು. ಮೊದಲು 3 ಇಂಚ್ ಇದ್ದಾಗ ಸ್ವಲ್ಪವಾದರೂ ನೀರು ಬರುತ್ತಿತ್ತು ಆದರೆ ಈವಾಗ ಪೈಪ್ ಬದಲಾವಣೆಯಿಂದ ಸಮರ್ಪಕವಾಗಿ ನೀರು ಬರುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.  ಗುತ್ತಿಗೆದಾರರು ಬಿಲ್ ಗೋಸ್ಕರ…

Read Full News

ಅಕ್ಟೋಬರ್ ನಲ್ಲಿ ರಾಷ್ಟ್ರ ನಾಯಕರೊಬ್ಬರ ಹತ್ಯೆ,ದೇಶದಲ್ಲಿ ದಂಗೆ:ಭವಿಷ್ಯವಾಣಿ

ನವದೆಹಲಿ:ಕೊರೊನಾ ಮೊದಲನೇ,ಎರಡನೇ ಅಲೆಯ ವಿಚಾರದಲ್ಲಿ ಬಹುತೇಕ ಕರಾರುವಕ್ಕಾಗಿ ಭವಿಷ್ಯ ನುಡಿದಿದ್ದ ಉತ್ತರ ಭಾರತದ ಮೂಲದ ಖ್ಯಾತ ಜ್ಯೋತಿಷಿ ಕೆ.ಎಂ.ಸಿನ್ಹಾ ಮತ್ತೊಂದು ಆತಂಕಕಾರಿ ಭವಿಷ್ಯವನ್ನು ನುಡಿದಿದ್ದಾರೆ. ಮೇ 6ರಿಂದ 26ರವರೆಗಿನ ಅವಧಿಯಲ್ಲಿ ಕೊರೊನಾ ಗರಿಷ್ಠ ಮಟ್ಟಕ್ಕೆ ಹೋಗಲಿದೆ. ಈ ಅವಧಿ ಸ್ವಲ್ಪದಿನ ಅಂದರೆ ಜೂನ್ 3ರವರೆಗೆ ಹೋಗಬಹುದು. ಈ ಅವಧಿ ಮುಗಿದ ನಂತರ, ಕೊರೊನಾ ವೈರಸಿನ ಪ್ರಭಾವ ಕಮ್ಮಿಯಾಗಲಿದೆ ಎಂದು ಸಿನ್ಹಾ ಭವಿಷ್ಯ ನುಡಿದಿದ್ದರು. ಕೊರೊನಾ ಎರಡನೇ ಅಲೆ ನಿರ್ವಹಣೆಯಲ್ಲಿ ಪ್ರಧಾನಿ ಮೋದಿಯವರು ಎಡವಿದ್ದು ಅವರು ರಾಜೀನಾಮೆ ನೀಡಬೇಕಾದ…

Read Full News

ರಾಜ್ಯದಲ್ಲಿ ಜನಸಂಖ್ಯೆಯ ನಿಯಂತ್ರಣಕ್ಕಾಗಿ ಎರಡು ಮಕ್ಕಳ ಯೋಜನಾ ನೀತಿ ಬಗ್ಗೆ ಸಿಎಂ ಜೊತೆ ಚರ್ಚೆ: ಕೆ ಎಸ್ ಈಶ್ವರಪ್ಪ

ಶಿವಮೊಗ್ಗ : ಉತ್ತರ ಪ್ರದೇಶ ರಾಜ್ಯ ಸರ್ಕಾರ ಕುಟುಂಬಕ್ಕೆ 2 ಮಕ್ಕಳು ಇರಬೇಕು ಎಂಬ ತೀರ್ಮಾನ ಮಾಡಿದ್ದನ್ನು ನಾನು ಗಮನಿಸಿದ್ದೇನೆ. ರಾಜ್ಯದಲ್ಲಿ ಏನು ಮಾಡ್ಬೇಕು ಎಂದು ಸಿಎಂ ನೇತೃತ್ವದಲ್ಲಿ ಕುಳಿತು ಚರ್ಚೆ,ಯೋಚನೆ ಮಾಡುತ್ತೇವೆ.ದೇಶದಲ್ಲಿ ಜನಸಂಖ್ಯೆ ದಿನೇ ದಿನೇ ಜಾಸ್ತಿಯಾಗ್ತಾ ಹೋಗ್ತಾನೆ ಇದೆ. ಅದನ್ನು ಕಡಿಮೆ ಮಾಡಲು ಬಹಳ ವರ್ಷದಿಂದ ಕೇಂದ್ರ ಸರಕಾರಗಳು ಎಲ್ಲಾ ಪ್ರಯತ್ನ ಮಾಡುತ್ತಿದೆ. ಅದ್ರೇ, ಯಾವುದೇ ಪ್ರಯೋಜನವಾಗುತ್ತಿಲ್ಲ, ಇದರಿಂದ ಬಡತನ, ನಿರುದ್ಯೋಗ, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ದೇಶ ಸಂಪದ್ಭರಿತವಾಗಬೇಕಾದರೆ ಜನಸಂಖ್ಯೆ ನಿಯಂತ್ರಣ…

Read Full News

ಸೆಲ್ಫಿ ತೆಗೆದುಕೊಳ್ಳುವಾಗ ಸಿಡಿಲು ಬಡಿದು 11 ಜನ ಸಾವು:

ಜೈಪುರ (ಜುಲೈ.12); ಉತ್ತರ ಭಾರತದಲ್ಲಿ ಕಳೆದ ಹಲವು ದಿನಗಳಿಂದ ಬಾರೀ ಮಳೆಯಾಗುತ್ತಿದೆ. ಅದರಲ್ಲೂ ರಾಜಸ್ಥಾನ ಮತ್ತು ಉತ್ತರಪ್ರದೇಶದಲ್ಲಿ ಮಳೆ ಎಡೆಬಿಡದೆ ಸುರಿಯುತ್ತಿದೆ. ಸಿಡಿಲಿನ ಅಬ್ಬರವೂ ಈ ವರ್ಷ ಜೋರಾಗಿದ್ದು, ಈವರೆಗೆ ಉತ್ತರ ಭಾರತದಲ್ಲಿ 28ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಈ ನಡುವೆ ರಾಜಸ್ತಾನದಲ್ಲಿ 18 ಜನ ಸಿಡಿಲಿಗೆ ಬಲಿಯಾಗಿದ್ದಾರೆ. ಈ ಪೈಕಿ 11 ಜನ ಭಾನುವಾರ ಜೈಪುರದ ಅರಮನೆ ಗೋಪುರದ ಮೇಲೆ ನಿಂತು ಒಟ್ಟಾಗಿ ಸೆಲ್ಪೀ ತೆಗೆದುಕೊಳ್ಳುತ್ತಿದ್ದ ವೇಳೆ ಮಿಂಚು ತಾಕಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ರಾಜಸ್ಥಾನದ…

Read Full News

ಶಿಕಾರಿಪುರದ ಅಂಜನಾಪುರ ಜಲಾಶಯಕ್ಕೆ ಸಂಸದ ಬಿ ವೈ ರಾಘವೇಂದ್ರ ರವರಿಂದ ಬಾಗಿನ ಅರ್ಪಣೆ:

ಶಿಕಾರಿಪುರ: ಇಲ್ಲಿನ ಅಂಜನಾಪುರ ಜಲಾಶಯಕ್ಕೆ ಸಂಸದರಾದ ಶ್ರೀ ಬಿ ವೈ ರಾಘವೇಂದ್ರರವರು ಭಾಗಿನ ಸಮರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವರುಣ ದೇವ ಪ್ರತಿ ವರ್ಷ ಇದೇ ರೀತಿ ಕೃಪೆ ತೋರಬೇಕು. ಇದರಿಂದ ಮಳೆ-ಬೆಳೆಯಾಗಿ ರೈತ ಸಂತಸದಿಂದ ಇರುತ್ತಾನೆ. ರೈತರ ಅನುಕೂಲಕ್ಕೆ ಸಾಕಷ್ಟು ಯೋಜನೆಯನ್ನು ಮಾಡಿದ್ದೇವೆ, ಮುಂದೆ ಹಣಕಾಸಿನ ಸ್ಥಿತಿಗತಿ ನೋಡಿಕೊಂಡು ಮತ್ತಷ್ಟು ಮಾಡುತ್ತೇವೆ ಎಂದರು. ಈ ಸಂಧರ್ಭದಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶ್ರೀ ಗುರುಮೂರ್ತಿ ರವರು,ಶ್ರೀಮತಿ ತೇಜಸ್ವಿನಿ ರಾಘವೇಂದ್ರ ರವರು,ಸೇರಿದಂತೆ ಪ್ರಮುಖರು ಈ ಸಂದರ್ಭದಲ್ಲಿ…

Read Full News

ವಾಯುಭಾರ ಕುಸಿತ ನಾಳೆ ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ:

ಬೆಂಗಳೂರು: ಬಂಗಾಳ ಉಪ ಸಾಗರದಲ್ಲಿ ವಾಯುಭಾರ ಕುಸಿತ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ರಾಜ್ಯದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ನಾಳೆಯೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ವಿಭಾಗದ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ. ಇಂದು ಕೂಡ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಿದೆ. ಮುಲ್ಕಿಯಲ್ಲಿ 16 ಸೆಂ.ಮೀ, ಕಲಬುರಗಿಯಲ್ಲಿ 11 ಸೆಂ.ಮೀ, ಮಂಗಳೂರು, ಸುಬ್ರಹ್ಮಣ್ಯ,…

Read Full News

ಸ್ವಯಂಘೋಷಿತ ಆಸ್ತಿ ತೆರಿಗೆ ಹೆಚ್ಚಳ ಅವೈಜ್ಞಾನಿಕ: ಶಿವಮೊಗ್ಗದಲ್ಲಿ ಪ್ರತಿಭಟನೆ

ಶಿವಮೊಗ್ಗ: ಇಲ್ಲಿನ ಗೋಪಿ ಸರ್ಕಲ್ ನಲ್ಲಿ ನಾಗರಿಕ ಹಿತಾಸಕ್ತಿಯ ರಕ್ಷಣಾ ಒಕ್ಕೂಟ ಸ್ವಯಂಘೋಷಿತ ಆಸ್ತಿ ತೆರಿಗೆ ಹೆಚ್ಚಳ ಖಂಡಿಸಿ ಪೋಸ್ಟ್ ಕಾರ್ಡ್ ಚಳುವಳಿಯನ್ನು ನಡೆಸಿತು.  ಕೋವಿಡ್ ಸಂಕಷ್ಟ ಕಾಲದಲ್ಲಿ ಲಾಕ್ಡೌನ್ ನಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಇರುವಂತಹ ಇಂತಹ ಸಂದರ್ಭದಲ್ಲಿ, ಗಾಯದ ಮೇಲೆ ಬರೆ ಎಳೆಯುವಂತೆ 2021- 22 ನೇ ಸಾಲಿನ ಆಸ್ತಿ ತೆರಿಗೆಯನ್ನು ಕಾನೂನು ತಿದ್ದುಪಡಿ ಮಾಡುವ ಮೂಲಕ ಅವೈಜ್ಞಾನಿಕವಾಗಿ ಹೆಚ್ಚಿಸಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಎಸ್ಸಾರ್ ದರ ಆಧರಿಸಿ ವಾಸದ ಮನೆ, ವಾಣಿಜ್ಯ ಕಟ್ಟಡಗಳು, ಕೈಗಾರಿಕೆಗಳು…

Read Full News

ಸಾಗರದಲ್ಲಿ ಪಾದಚಾರಿಗೆ ಕಾರಿನಲ್ಲಿ ಗುದ್ದಿ ಚಾಲಕ ಪರಾರಿ:

ಸಾಗರ: ಇಲ್ಲಿನ ಸಿಂಗಂದೂರು ರಸ್ತೆಯ ಸಂಜಯ್ ಮೆಮೋರಿಯಲ್ ಕಾಲೇಜು ಬಳಿ ಆದಿಶಕ್ತಿ ನಗರದ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿರುವಾಗ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಜೆ 7.30 ರ ಸುಮಾರಿಗೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಆದಿಶಕ್ತಿ ನಗರದ ಬಾಬು(47) ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಸಾಗರ ಪೇಟೆ ಪೊಲೀಸ್ ಇನ್ಸ್ ಪೆಕ್ಟರ್ ಅಶೋಕ್ ಕುಮಾರ್ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ಶರೀರವನ್ನು ಸಾಗರ…

Read Full News

ಅನಗತ್ಯ ಬಾಕ್ಸ್ ಚರಂಡಿ ನಿರ್ಮಾಣಕ್ಕೆ ವಿರೋಧ :

ರಿಪ್ಪನ್ ಪೇಟೆ : ಇಲ್ಲಿಯ ಗ್ರಾಮ ಪಂಚಾಯಿತಿ ಮುಂಭಾಗದ ಹಾಸ್ಟೆಲ್ ರಸ್ತೆಯಲ್ಲಿ ಈ ಹಿಂದೆ ವಿಶ್ವ ಯೋಜನೆಯನ್ವಯ ಮಾಡಿರುವ ಚಪ್ಪಡಿ ಕಲ್ಲಿನಲ್ಲಿ ನಿರ್ಮಾಣಗೊಂಡ ಭದ್ರವಾದ ಚರಂಡಿಯನ್ನು ತೆಗೆದು ಹೊಸ ಬಾಕ್ಸ್ ಚರಂಡಿ ಮಾಡಲು ಹೊರಟಿರುವ ಗ್ರಾಮ ಪಂಚಾಯಿತಿ ವಿರುದ್ಧ ಸಾಮಾಜಿಕ ಹೋರಾಟಗಾರ ಟಿ. ಆರ್ .ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿ ಸ್ಥಳದಲ್ಲಿಯೇ ಧರಣಿ ನಡೆಸಿದರು.  ಹಿಂದಿನ ಗ್ರಾಮಪಂಚಾಯಿತಿ ಅವಧಿಯಲ್ಲಿ ಅಂದು ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಈಗ ಹಾಲಿ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ  ಮಹಾಲಕ್ಷ್ಮಿ ಅಣ್ಣಪ್ಪ ಇವರು ತಮ್ಮ ವಿವೇಚನಾ…

Read Full News

ಸಮಾಜ ಕಲ್ಯಾಣ ಇಲಾಖೆಯಿಂದ ಪಿಯುಸಿ ಪದವಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 35000 ಸಾವಿರ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ:

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯಿಂದ ಪಿಯುಸಿ ಪದವಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 35000 ಸಾವಿರ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.   ನಮ್ಮಲ್ಲಿ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆರ್ಥಿಕ ಪರಿಸ್ಥಿತಿಯಿಂದಾಗಿ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ಬಿಡುತ್ತಾರೆ. ಹೀಗಾಗಿ ಆರ್ಥಿಕ ಪರಿಸ್ಥಿತಿಯಿಂದ ಮಕ್ಕಳ ಶಿಕ್ಷಣ ಬಿಡಬಾರದೆಂದು ಕರ್ನಾಟಕ ಸಮಾಜ ಕಲ್ಯಾಣ ವತಿಯಿಂದ ಸರ್ಕಾರವು ಪ್ರತಿಭಾವಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. ಅಧ್ಯಯನಕ್ಕೆ ಪ್ರೋತ್ಸಾಹಧನವನ್ನು ವಿಂಗಡಿಸಲಾಗಿದೆ. ಪಿಯುಸಿ ಮತ್ತು ಡಿಪ್ಲೋಮೋ : 20000/- ಯಾವುದೇ ಪದವಿ…

Read Full News

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡರ ಹೆಸರನ್ನು ಇಡಲು ಆಗ್ರಹ:

ರಿಪ್ಪನ್ ಪೇಟೆ: ಶಿವಮೊಗ್ಗದಲ್ಲಿ ಉದ್ಘಾಟನೆಗೆ ಸಿದ್ದವಾಗಿರುವ ನೂತನ ವಿಮಾನ ನಿಲ್ದಾಣಕ್ಕೆ ಕರ್ನಾಟಕದಿಂದ ಆಯ್ಕೆಯಾಗಿ ದೇಶದ ಪ್ರಧಾನಿಯಾಗಿ ರಾಜ್ಯದ ಕೀರ್ತಿಯನ್ನು ಇಡೀ ದೇಶಕ್ಕೆ ಪರಿಚಯಿಸಿದ ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡರ ಹೆಸರನ್ನು  ಇಡಬೇಕೆಂದು ಮಾನ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಶಿವಮೊಗ್ಗ ಸಂಸದರಾದ ಬಿ ವೈ ರಾಘವೇಂದ್ರ ರವರಿಗೆ ರಾಜ್ಯ ಜೆಡಿಎಸ್ ಮಾಜಿ ಪ್ರಧಾನಕಾರ್ಯದರ್ಶಿಗಳಾದ ಅರ್ ಎ ಚಾಬುಸಾಬ್ ಒತ್ತಾಯಿಸಿದ್ದಾರೆ. .                     …

Read Full News

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಅಣ್ಣಾಮಲೈ ನೇಮಕ::

ನವದೆಹಲಿ: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ತಮಿಳುನಾಡು ಬಿಜೆಪಿ ಅಧ್ಯಕ್ಷನಾಗಿ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರನ್ನು ಗುರುವಾರ ನೇಮಿಸಿದ್ದಾರೆ. ಈ ಬಗ್ಗೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ನೇಮಕಾತಿ ಪತ್ರವನ್ನು ತಮಿಳುನಾಡು ಬಿಜೆಪಿಗೆ ರವಾನಿಸಿದ್ದಾರೆ. 2024 ರ ಲೋಕಸಭಾ ಚುನಾವಣೆಗೆ ಮುನ್ನ ತಮಿಳುನಾಡಿನಲ್ಲಿ ಪಕ್ಷವನ್ನು ಬಲಪಡಿಸಲು ಬಿಜೆಪಿ ಬುಧವಾರ ಪಕ್ಷದ ರಾಜ್ಯ ಅಧ್ಯಕ್ಷರಾಗಿದ್ದ ಎಲ್. ಮುರುಗನ್ ಅವರನ್ನು ಕೇಂದ್ರ ಸಚಿವಾಲಯದ ರಾಜ್ಯ ಸಚಿವರನ್ನಾಗಿ ನೇಮಿಸಿತ್ತು. ಅವರಿಗೆ ಮಾಹಿತಿ ಮತ್ತು…

Read Full News

ಮೂಗೂರು ಏತ ನೀರಾವರಿಗೆ ಸಂಬಂಧಿಸಿದ ಎಲ್ಲಾ ಕೆರೆಗಳ ಸಮಿತಿ ರಚನೆ ಕುರಿತು ಸಭೆ:

ಸೊರಬ: ತಾಲೂಕಿನ ಆನವಟ್ಟಿ ಪದವಿಪೂರ್ವ ಕಾಲೇಜು ರಂಗಮಂದಿರದಲ್ಲಿ ಮಾನ್ಯ ಶಾಸಕರಾದ ಶ್ರೀ ಎಸ್ ಕುಮಾರ್ ಬಂಗಾರಪ್ಪ ರವರ ಅಧ್ಯಕ್ಷತೆಯಲ್ಲಿ ಮೂಗೂರು ಏತನೀರಾವರಿಗೆ ಸಂಬಂಧಿಸಿದ ಎಲ್ಲಾ ಕೆರೆಗಳ ಸಮಿತಿ ರಚನೆ ಕುರಿತು ಸಭೆ ನಡೆಯಿತು. ಈ ಸಂಧರ್ಭದಲ್ಲಿ ತಹಶಿಲ್ದಾರ ಗ್ರೇಡ್ 2 ರವರು, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಆನವಟ್ಟಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು, ದಂಡಾವತಿ AEE ರವರು ಹಾಗೂ ಸಿಬ್ಬಂದಿ ವರ್ಗ, MI AEE ರವರು, AEE PRED ರವರು, ಪಿಡಿಒ , ರಾಜಸ್ತ ನಿರೀಕ್ಷಕರು ಮೂಗೂರು…

Read Full News

ನಾಳೆಯಿಂದ ಅರಸಾಳು ಮಾಲ್ಗುಡಿ ಮ್ಯೂಸಿಯಂ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ::

ರಿಪ್ಪನ್ ಪೇಟೆ: ಲಾಕ್ ಡೌನ್ ಸಡಿಲಿಕೆಯಿಂದಾಗಿ ಅರಸಾಳು ರೈಲ್ವೆ ನಿಲ್ದಾಣದಲ್ಲಿರುವ ಮಾಲ್ಗುಡಿ ಮ್ಯೂಸಿಯಂ ಪುನರಾರಂಭಗೊಳ್ಳಲಿದೆ.ಶಂಕರ್ ನಾಗ್ ನಟಿಸಿ ನಿರ್ದೇಶಿಸಿರುವ, ಆರ್ ಕೆ ನಾರಾಯಣ್ ಅವರ ಕೃತಿ ಆಧಾರಿತ ಮಾಲ್ಗುಡಿ ಡೇಸ್ ಧಾರವಾಹಿ, ಅರಸಾಳು ರೈಲ್ವೆ ನಿಲ್ದಾಣದಲ್ಲಿ ಚಿತ್ರೀಕರಣವಾಗಿತ್ತು ಹಾಗಾಗಿ ಅರಸಾಳು ರೈಲ್ವೆ ನಿಲ್ದಾಣದಲ್ಲಿ ಮಾಲ್ಗುಡಿ ಮ್ಯೂಸಿಯಂ ನಿರ್ಮಿಸಲಾಗಿತ್ತು.  ಮಾಲ್ಗುಡಿ ಡೇಸ್ ಧಾರಾವಾಹಿಯ ನೆನಪುಗಳನ್ನು ಕಲೆ ಹಾಕುತ್ತಿರುವ ಮಾಲ್ಗುಡಿ ಮ್ಯೂಸಿಯಂನನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದರು.‌ ಕೋವಿಡ್ ಕಾರಣದ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿನಿಂದ ಬಂದ್ ಆಗಿದ್ದ…

Read Full News