ನವದೆಹಲಿ:ಕೊರೊನಾ ಮೊದಲನೇ,ಎರಡನೇ ಅಲೆಯ ವಿಚಾರದಲ್ಲಿ ಬಹುತೇಕ ಕರಾರುವಕ್ಕಾಗಿ ಭವಿಷ್ಯ ನುಡಿದಿದ್ದ ಉತ್ತರ ಭಾರತದ ಮೂಲದ ಖ್ಯಾತ ಜ್ಯೋತಿಷಿ ಕೆ.ಎಂ.ಸಿನ್ಹಾ ಮತ್ತೊಂದು ಆತಂಕಕಾರಿ ಭವಿಷ್ಯವನ್ನು ನುಡಿದಿದ್ದಾರೆ.
ಮೇ 6ರಿಂದ 26ರವರೆಗಿನ ಅವಧಿಯಲ್ಲಿ ಕೊರೊನಾ ಗರಿಷ್ಠ ಮಟ್ಟಕ್ಕೆ ಹೋಗಲಿದೆ. ಈ ಅವಧಿ ಸ್ವಲ್ಪದಿನ ಅಂದರೆ ಜೂನ್ 3ರವರೆಗೆ ಹೋಗಬಹುದು. ಈ ಅವಧಿ ಮುಗಿದ ನಂತರ, ಕೊರೊನಾ ವೈರಸಿನ ಪ್ರಭಾವ ಕಮ್ಮಿಯಾಗಲಿದೆ ಎಂದು ಸಿನ್ಹಾ ಭವಿಷ್ಯ ನುಡಿದಿದ್ದರು.
ಕೊರೊನಾ ಎರಡನೇ ಅಲೆ ನಿರ್ವಹಣೆಯಲ್ಲಿ ಪ್ರಧಾನಿ ಮೋದಿಯವರು ಎಡವಿದ್ದು ಅವರು ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಎದುರಾಗಬಹುದು ಎನ್ನುವುದಕ್ಕೂ ಸಿನ್ಹಾ ಉತ್ತರ ನೀಡಿದ್ದರು. ಜೂನ್ 14ರ ವರೆಗೆ ಅವರ ಜಾತಕಫಲ ಸರಿಯಾಗಿರಲಿಲ್ಲ. ಆದರೂ, ಅವರು ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದೂ ಇವರು ಭವಿಷ್ಯ ನುಡಿದಿದ್ದರು.
ಈಗ ಮತ್ತೊಂದು ಭವಿಷ್ಯವನ್ನು ನುಡಿದಿರುವ ಸಿನ್ಹಾ, ಅಕ್ಟೋಬರ್ ತಿಂಗಳಲ್ಲಿ ರಾಷ್ಟ್ರ ನಾಯಕರೊಬ್ಬರ ಹತ್ಯೆ ನಡೆಯಲಿದೆ. ಇದರಿಂದ, ದೇಶದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣಗೊಳ್ಳಲಿದೆ ಎಂದು ಹೇಳಿದ್ದಾರೆ.
ರಾಜನೀತಿಯ ಕಾರಕ ಎಂದು ಕರೆಯಲ್ಪಡುವುದು ರಾಹು ರಾಶಿ. ಭಾರತದ ರಾಜಕೀಯದಲ್ಲಿ ಬಹಳದೊಡ್ಡ ಮಟ್ಟದಲ್ಲಿ ಪರಿವರ್ತನೆಯಾಗಲಿದೆ. ಸೆಪ್ಟಂಬರ್ ಹದಿನಾಲ್ಕರ ನಂತರ ಈ ಬದಲಾವಣೆಯನ್ನು ಕಾಣಬಹುದಾಗಿದೆ. ಈ ಬದಲಾವಣೆಯನ್ನು ರಾಜಕೀಯ ಭೂಕಂಪ ಎಂದು ಕರೆಯಬಹುದು ಎಂದು ಕೆ.ಎಂ.ಸಿನ್ಹಾ, ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿದ್ದಾರೆ.
ಮಿಥುನ ರಾಶಿಗೆ ರಾಹು ಪ್ರವೇಶಿಸಿಯಾಗಿದೆ. ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ ಪಂಜಾಬ್ ನಲ್ಲಿ ಚುನಾವಣೆಯನ್ನು ಗೆಲ್ಲಲಿದೆ. ಕೇಜ್ರಿವಾಲ್ ಅವರ ವರ್ಚಸ್ಸು ಇನ್ನಷ್ಟು ಹೆಚ್ಚಾಗಲಿದೆ. ಸೆಪ್ಟಂಬರ್ ಹದಿನಾಲ್ಕರಿಂದ ಡಿಸೆಂಬರ್ ಅಂತ್ಯದವರೆಗೆ ಅತಿಕೆಟ್ಟ ರಾಜಕೀಯಕ್ಕೆ ಭಾರತೀಯರು ಸಾಕ್ಷಿಯಾಗಬೇಕಿದೆ ಎಂದು ಸಿನ್ಹಾ ತಮ್ಮ ಭವಿಷ್ಯದಲ್ಲಿ ನುಡಿದಿದ್ದಾರೆ.
ಅಕ್ಟೋಬರ್ ಹನ್ನೊಂದರಂದು ರಾಷ್ಟ್ರ ನಾಯಕರೊಬ್ಬರ ಹತ್ಯೆಯಾಗಲಿದೆ, ಇವರು ರಾಜಕೀಯದಲ್ಲಿ ಅತ್ಯಂತ ಚಿರಪರಿಚಿತ ಮುಖಂಡರಾಗಿರುತ್ತಾರೆ. ಇದರಿಂದ ಇಡೀ ದೇಶದಲ್ಲಿ ಭಯದ ವಾತಾವರಣವಿರಲಿದೆ, ದಂಗೆಯೂ ನಡೆಯಲಿದೆ. ಆದರೆ ಈ ನಾಯಕ ಪ್ರಧಾನಿ ಮೋದಿಯಲ್ಲ ಎಂದು ಸಿನ್ಹಾ ಭವಿಷ್ಯ ನುಡಿದಿದ್ದಾರೆ.
ಮೇದಿನಿ ಭವಿಷ್ಯದ ಪ್ರಕಾರ, ಷಡ್ಯಂತ್ರದ ಮೂಲಕ ಜನಪ್ರಿಯ ನಾಯಕನ ಹತ್ಯೆಯಾಗಲಿದೆ. R ಅಥವಾ S ನಿಂದ ಆರಂಭವಾಗುವ ಮುಖಂಡರಿಗೆ ತೊಂದರೆಯಾಗಲಿದೆ. ಕೆಟ್ಟ ರಾಜಕೀಯದ ಪರಮಾವಧಿಯನ್ನು ಇದಾದ ನಂತರ ನೋಡಬಹುದಾಗಿದೆ ಎಂದು ಸಿನ್ಹಾ ಹೇಳಿದ್ದಾರೆ.
ವರದಿ:ರಾಮನಾಥ್
ಪೋಸ್ಟ್ ಮ್ಯಾನ್ ನ್ಯೂಸ್ ನ ಕಳಕಳಿ:
ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹರಡದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.