ಸೊರಬ:ಇಲ್ಲಿನ ಚಂದ್ರಗುತ್ತಿಯ ಬೋವಿ ಕಾಲೋನಿಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಗಾಗಿ ಇಂತಹ ಮಳೆಗಾಲದಲ್ಲಿ ರಸ್ತೆ ಅಗೆದು ಓಡಾಡಲು ಬಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಅಳಲನ್ನು ತೋಡಿಕೊಂಡರು.
ಗ್ರಾಮ ಪಂಚಾಯತಿಯ 14ನೇ ಹಣಕಾಸಿನಲ್ಲಿ 1.5 ಲಕ್ಷ ಅನುದಾನದಲ್ಲಿ ಮೊದಲಿದ್ದ 3ಇಂಚ್ ಪೈಪಲೈನ್ ಬದಲಾಯಿಸಿ 2ಇಂಚ್ ಪೈಪ್ ಹಾಕಿದರು. ಮೊದಲು 3 ಇಂಚ್ ಇದ್ದಾಗ ಸ್ವಲ್ಪವಾದರೂ ನೀರು ಬರುತ್ತಿತ್ತು ಆದರೆ ಈವಾಗ ಪೈಪ್ ಬದಲಾವಣೆಯಿಂದ ಸಮರ್ಪಕವಾಗಿ ನೀರು ಬರುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.
ಗುತ್ತಿಗೆದಾರರು ಬಿಲ್ ಗೋಸ್ಕರ ಮಳೆಯಲ್ಲಿ ದಿಡೀರನೆ ಅಸಮರ್ಪಕ ಕಾಮಗಾರಿ ಮಾಡಿದ್ದು ರಸ್ತೆಯನ್ನು ಕೆಸರು ಗುಂಡಿಯಾಗಿ ಮಾಡಿದ ಗುತ್ತಿಗೆದಾರನ ಮೇಲೆ ಕ್ರಮ ಜರುಗಿಸಬೇಕಾಗಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕೂಡಲೇ ಸ್ಥಳಕ್ಕಾಗಮಿಸಿದ ಜಿಲ್ಲಾ ಪಂಚಾಯತ್ ಇಂಜಿನೀಯರ್ ಗಣಪತಿ ನಾಯ್ಕ್ ಮತ್ತು ಗ್ರಾಮ ಪಂಚಾಯತ್ ಪಿ ಡಿ ಓ ಈಶ್ವರಪ್ಪ ಮಳೆ ಸ್ವಲ್ಪ ಕಡಿಮೆಯಾದ ತಕ್ಷಣ ರಸ್ತೆ ದುರಸ್ಥಿ ಮಾಡಿಸಿ,ನೀರಿಗಾಗಿ ಶಾಸಕರ ಅನುದಾನದಲ್ಲಿ ಕೊಳೆವೆಬಾವಿ ಮಂಜೂರಾಗಿದ್ದು ತಕ್ಷಣ ಕೊರೆಸಿ ನೀರಿನ ಸಮಸ್ಯೆಯನ್ನು ಪರಿಹರಿಸುತ್ತೇವೆಂದು ಭರವಸೆ ನೀಡಿದರು.
ಇಷ್ಟೆಲ್ಲ ನಡೆದರು ಗ್ರಾಮಸ್ಥರ ಹಾಗೂ ಕೂಲಿ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸದೆ ಸ್ಥಳಕ್ಕೆ ಬಾರದ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದ್ಯಸ್ಯರ ನಡುವಳಿಕೆ ಬಗ್ಗೆ ಜನರು ಆಕ್ರೋಶ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ದ್ಯಾಮಪ್ಪ,,ರಾಘವೇಂದ್ರ ಸಿ,ರಾಘುಫೋಟೋ,ನಾಗರಾಜ,ಪರಶುರಾಮ್,ಕೃಷ್ಣಪ್ಪ,ರವೀಂದ್ರ,
ಮಲ್ಲಪ್ಪ,ನೀಲಮ್ಮ,ಗೌರಿ,ರೇಣುಕಾ,ಶಿಲ್ಪಾ,ರತ್ನಕ್ಕ ಉಪಸ್ಥಿತರಿದ್ದರು.
ವರದಿ: ವೆಂಕಟೇಶ್ ಚಂದ್ರಗುತ್ತಿ ಸೊರಬ
ಪೋಸ್ಟ್ ಮ್ಯಾನ್ ನ್ಯೂಸ್ ನ ಕಳಕಳಿ:
ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹರಡದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.