WhatsApp Channel Join Now
Telegram Channel Join Now
ಸೊರಬ: ಚಂದ್ರಗುತ್ತಿಯ ಯಾತ್ರಿ ನಿವಾಸದಲ್ಲಿ ಶಾಸಕರಾದ ಶ್ರೀ ಎಸ್ ಕುಮಾರ್ ಬಂಗಾರಪ್ಪ ರವರ ಅಧ್ಯಕ್ಷತೆಯಲ್ಲಿ ಚಂದ್ರಗುತ್ತಿ ಹೋಬಳಿಗೆ ಸಂಬಂಧಿಸಿದಂತೆ ಬಗರ್ ಹುಕುಂ ಸಮಿತಿ ಪ್ರಗತಿ ಪರಿಶೀಲನಾ ಸಭೆ ನಡಸಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದರು. 

ವಿತರಣೆ ಮಾಡುವ ಸಂಧರ್ಭದಲ್ಲಿ ಹಕ್ಕು ಪತ್ರ ಪಡೆದ ಫಲಾನುಭವಿಗಳು ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.
ಶಾಸಕರು ಅವರ ಅಭಿನಂದನೆಯನ್ನು ಸ್ವೀಕರಿಸಿ ನಿಮ್ಮ ಕೆಲಸ ಮಾಡಿಕೊಡುವುದೇ ನನ್ನ ಕೆಲಸ ಅದನ್ನು ನಾನು ಮಾಡಿದ್ದೇನೆ ನೀವುಗಳು ತುಂಬಾ ವರ್ಷಗಳ ಹಿಂದೆಯೇ ಹಕ್ಕು ಪತ್ರ ಹೊಂದಿರಬೇಕಾಗಿತ್ತು ತಡವಾಗಿದೆ ಎಂದರು.

 ಸರ್ಕಾರದ ಯೋಜನೆಗಳು ಬಡವರಿಗೆ ಸಿಗುವಂತೆ ಮಾಡುವುದೇ ನನ್ನ ಕೆಲಸ. ಕೆಲವರಿಗೆ ನಿವೇಶನ, ಮನೆ ಇಲ್ಲದೇ ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ. ತಾಲ್ಲೂಕಿನಲ್ಲಿ ಇದುವರಿಗೂ ಅರ್ಜಿ ಸಲ್ಲಿಸಿರುವ ಅರ್ಹ ನಿವೇಶನ ರಹಿತರಿಗೆ ನಿವೇಶನ, ಮನೆ ನಿರ್ಮಿಸುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಸೊರಬ ತಹಶೀಲ್ದಾರರಾದ ಶಿವಾನಂದ್ ರಾಣೆ,ಬಗರ್ ಹುಕುಂ ಸಮಿತಿ ಸದ್ಯಸರಾದ ದೇವೇಂದ್ರಪ್ಪ, ಲಲಿತಾ ನಾರಾಯಣಪ್ಪ,ಮುಖಂಡರಾದ ಶಿವಕುಮಾರ್ ಕಡಸೂರು,
ಈಶ್ವರಪ್ಪ ಚನ್ನಪಟ್ಟಣ,ಪರಮೇಶ್ವರ್ ಮಣ್ಣತ್ತಿ,ಅಂಗಡಿ ಚಂದ್ರಪ್ಪ,
ಪ್ರಸನ್ನ ಶೇಟ್,ರಾಜು ಮಾವಿನಕೊಪ್ಪ,ರಮೇಶ್ ಮಾವಿನಕೊಪ್ಪ, ತಿರುಪತಿ ಬಾಡದಬೈಲ್,ಫಕೀರಪ್ಪ,ಬಂಗಾರಪ್ಪ ಅಂದವಳ್ಳಿ,ದ್ಯಾಮ,ದೇವರಾಜ್ ಹಾಗೂ  ವಲಯ ಅರಣ್ಯಾಧಿಕಾರಿಗಳು ಸೊರಬ, ADLR ಸೊರಬ ರವರು, ಉಪ ತಹಶಿಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಹಾಜರಿದ್ದರು.


ವರದಿ: ವೆಂಕಟೇಶ್ ಚಂದ್ರಗುತ್ತಿ ಸೊರಬ


ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..

Leave a Reply

Your email address will not be published. Required fields are marked *