ಡಿ ಬಾಸ್ ಅಂಡ್ ಗ್ಯಾಂಗ್ ಮಾಡಿದ ದೌರ್ಜನ್ಯಕ್ಕೆ ವೇಟರ್ ಹೆಂಡತಿ ಪೊರಕೆ ಹಿಡಿದು ನಿಂತಿದ್ದಳು : ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ

ಬೆಂಗಳೂರು: ನಟ ದರ್ಶನ್​ರವರ ಲೋನ್ ಗೆ ಜಾಮೀನು ಕೇಸ್​ನಲ್ಲಿ ಸಿನಿಮಾ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಎಂಟ್ರಿಯಾಗಿದ್ದು, ಮೈಸೂರು ನಗರದಲ್ಲಿ ಪೊಲೀಸ್​ ಸ್ಟೇಷನ್​ಗಳು ಸೆಟಲ್​ಮೆಂಟ್​ ಸ್ಟೇಷನ್​ ಆಗಿದೆ. ಜನ ಸಾಮಾನ್ಯರಿಗೆ ನ್ಯಾಯವೇ ಸಿಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಗುರುವಾರ ಬೆಳಗ್ಗೆ ಗೃಹ ಸಚಿವ ಬೊಮ್ಮಾಯಿ ಅವರನ್ನು ಭೇಟಿಯಾದ ಇಂದ್ರಜಿತ್​ ಲಂಕೇಶ್​, ದರ್ಶನ್ ಹೆಸರಲ್ಲಿ ವಂಚನೆ ಯತ್ನ ಪ್ರಕರಣ, ಮೈಸೂರಿನಲ್ಲಿ ನಡೆದಿರೋ ಗಲಾಟೆ, ಮೈಸೂರಿನ ಸ್ಟಾರ್ ಹೋಟೆಲ್ ಒಂದರಲ್ಲಿ ನಡೆದಿರೋ ದಲಿತನ ಮೇಲಿನ ಹಲ್ಲೆ, ಅಲ್ಲಿನ ಬೆಳವಣಿಗೆ ಕುರಿತು ಮಾಹಿತಿಯನ್ನೊಳಗೊಂಡ ಪತ್ರವನ್ನು ಕೊಟ್ಟರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರಜಿತ್​, ಸೆಲೆಬ್ರಿಟಿಗಳ ನಡವಳಿಕೆ ಮತ್ತು ಭಾಷೆ ಮಿತಿಮೀರುತ್ತಿದೆ. ಮೈಸೂರು ಪೊಲೀಸ್​ ಸ್ಟೇಷನ್​ಗಳು ಸ್ಟೇಷನ್​ಗಳಾಗಿ ಇಲ್ಲ. ಸೆಟಲ್​ಮೆಂಟ್​ ಸ್ಟೇಷನ್​ ಆಗಿವೆ. ಜನ ಸಾಮಾನ್ಯರಿಗೆ ನ್ಯಾಯವೇ ಸಿಗುತ್ತಿಲ್ಲ ಎಂದರು.
ಕಾರಿನಲ್ಲಿ ಕೂತು ಮಹಿಳೆಯೊಬ್ಬರಿಗೆ ನಟ ದರ್ಶನ್​ ಕಿರುಕುಳಕೊಟ್ಟಿದ್ದಾರೆ. ಅರುಣಾ ಕುಮಾರಿಗೆ ಹಿಂಸೆ ಮಾಡಿದ್ದಾರೆ. ಅಷ್ಟೇ ಅಲ್ಲ, ಮೈಸೂರಿನ ಸ್ಟಾರ್ ಹೋಟೆಲ್ ಒಂದರಲ್ಲಿ ವೇಟರ್​ ಕೆಲಸ ಮಾಡುತ್ತಿರುವ ದಲಿತ ಯುವಕನ ಮೇಲೆ ದರ್ಶನ್​ ಮತ್ತು ಅವರ ಸ್ನೇಹಿತರು ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ವೇಟರ್​ ಕಣ್ಣಿಗೆ ಗಾಯವಾಗಿದೆ.ಮಾರನೆ ದಿನ ದಲಿತ ವೇಟರ್ ನ ಹೆಂಡತಿ ಹೊಟೇಲ್ ಗೆ ಪೊರಕೆ ಹಿಡಿದುಕೊಂಡು ಬಂದಿದ್ದಳು ನಂತರ ಅವರನ್ನು ಕರೆಸಿ ಸೆಟಲ್​ಮೆಂಟ್​ ಮಾಡಿದ್ದಾರೆ. ಮೈಸೂರು ಪೊಲೀಸರೇನು ಬಳೆ ತೊಟ್ಟಿದ್ದಾರಾ? ಪೊಲೀಸರ ನಡವಳಿಕೆ ದುರಂತ ಅನ್ನಿಸುತ್ತೆ ಎಂದು ಇಂದ್ರಜಿತ್​ ಗಂಭೀರ ಆರೋಪ ಮಾಡಿದರು.
ವರದಿ: ರಾಮನಾಥ್
ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..

Leave a Reply

Your email address will not be published. Required fields are marked *