Headlines
ರಫ಼ಿ ರಿಪ್ಪನ್ ಪೇಟೆ

ರಫ಼ಿ ರಿಪ್ಪನ್ ಪೇಟೆ

ನಮಸ್ಕಾರ, ನಾನು ರಫಿ ರಿಪ್ಪನ್‌ಪೇಟೆ. ​'ಪೋಸ್ಟ್‌ಮ್ಯಾನ್ ನ್ಯೂಸ್' ಮಾಧ್ಯಮದ ಹಿಂದಿರುವ ಓರ್ವ ಅಪ್ಪಟ ಸುದ್ದಿಪ್ರೇಮಿ ಹಾಗೂ ಪತ್ರಕರ್ತ. "ನಮ್ಮೂರ ಸುದ್ದಿಗಳು ಜಗತ್ತಿಗೆ ತಲುಪಬೇಕು" ಎಂಬ ಆರು ವರ್ಷಗಳ ಕನಸಿನ ಕೂಸೇ ಈ ನಮ್ಮ ಪೋಸ್ಟ್‌ಮ್ಯಾನ್ ನ್ಯೂಸ್. ​ಸ್ಥಳೀಯ ಪತ್ರಿಕೆಗಳಿಂದ ಹಿಡಿದು ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೂ ಮಾಧ್ಯಮದ ನಾನಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದು. ಆದರೆ, ಈ ಪಯಣದಲ್ಲಿ ನನಗೊಂದು ಕೊರತೆ ಸದಾ ಕಾಡುತ್ತಿತ್ತು; ಅದೇನೆಂದರೆ, 'ನಿಜವಾದ ಸ್ಥಳೀಯ ಧ್ವನಿಗೆ ಅಲ್ಲಿ ಸೂಕ್ತ ವೇದಿಕೆ ಇರಲಿಲ್ಲ'. ಆ ಶೂನ್ಯವನ್ನು ತುಂಬಲು ಹುಟ್ಟಿಕೊಂಡ ಪರ್ಯಾಯ ವೇದಿಕೆಯೇ “ಪೋಸ್ಟ್‌ಮ್ಯಾನ್ ನ್ಯೂಸ್.” ​ಇಲ್ಲಿ 'ಸುದ್ದಿ' ಎಂದರೆ ಕೇವಲ ಸುದ್ದಿ ಮಾತ್ರ. ಇದು ಯಾವ ವ್ಯಕ್ತಿ ಅಥವಾ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಅತ್ಯಂತ ಸ್ಪಷ್ಟ: "ಸುದ್ದಿಯನ್ನು ಪ್ರಾಮಾಣಿಕವಾಗಿ ಹೇಳಬೇಕು, ತೀರ್ಪು ಕೊಡುವ ಕೆಲಸ ನಮಗಲ್ಲ." ಕೆಲವೊಮ್ಮೆ ನಮ್ಮ ವರದಿಗಳಿಗೆ ಬರುವ ಪ್ರತಿಕ್ರಿಯೆಗಳು ಬೇರೆಯದೇ ಬಣ್ಣ ಪಡೆಯಬಹುದು, ಆದರೆ ಅದಕ್ಕೆ ನನ್ನ ಏಕೈಕ ಉತ್ತರ ಕೇವಲ ನನ್ನ ಕೆಲಸದ ಮೂಲಕ ಮಾತ್ರ. ​'ಪೋಸ್ಟ್‌ಮ್ಯಾನ್ ನ್ಯೂಸ್' ಇಂದು ಕೇವಲ ಒಂದು ಸುದ್ದಿ ಪುಟವಾಗಿ ಉಳಿದಿಲ್ಲ, ಅದೊಂದು ಜಾಗೃತಿಯ ಚಳವಳಿಯಾಗಿ ರೂಪುಗೊಳ್ಳುತ್ತಿದೆ. ಕೇವಲ ವರದಿ ಮಾಡುವುದಷ್ಟೇ ನಮ್ಮ ಉದ್ದೇಶವಲ್ಲ; ನಮ್ಮೂರಿನ ಘಟನೆಗಳು, ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು, ಜ್ವಲಂತ ಸಮಸ್ಯೆಗಳು ಮತ್ತು ಸಾಧನೆಗಳನ್ನು ಹೊರಲೋಕಕ್ಕೆ ಪರಿಚಯಿಸುವ 'ಸೇತುವೆ'ಯಾಗಬೇಕೆಂಬುದು ನಮ್ಮ ಹೆಬ್ಬಯಕೆ. ಹಣ ಪಡೆದು, ಕಾಸಿಗಾಗಿ ಸುದ್ದಿ ಮಾಡುವ ಅಭ್ಯಾಸವೂ ನಮಗಿಲ್ಲ, ಆ ಹವ್ಯಾಸವೂ ನಮಗಿಲ್ಲ. ಸತ್ಯ ಮತ್ತು ನೈಜತೆಯೇ ನಮ್ಮ ಬಂಡವಾಳ. ​ನಮ್ಮ ಅಂತಿಮ ಗುರಿ ಒಂದೇ — "ಸಣ್ಣ ಊರುಗಳ ಸತ್ಯ ಕಥೆಗಳು, ಅತಿ ದೊಡ್ಡ ಮಟ್ಟದಲ್ಲಿ ಜಗತ್ತಿನ ಕಿವಿಗೆ ತಲುಪಬೇಕು." ​ತಮ್ಮ ಪ್ರೀತಿ ಮತ್ತು ಬೆಂಬಲ ಸದಾ ಹೀಗೆಯೇ ಇರಲಿ. ​ಸ್ನೇಹಪೂರ್ವಕವಾಗಿ, ರಫಿ ರಿಪ್ಪನ್‌ಪೇಟೆ ಸಂಪಾದಕರು, ಪೋಸ್ಟ್‌ಮ್ಯಾನ್ ನ್ಯೂಸ್ 🌐 [www.postmannewskannada.com]

ಬೈಕ್ ಅಪಘಾತ : ಗಾಯಾಳುವಿಗೆ ಸ್ಪಂದಿಸಿ ಮಾನವೀಯತೆ ಮೆರೆದ ಗೃಹ ಸಚಿವ ಆರಗ ಜ್ಞಾನೇಂದ್ರ

ಹುoಚದ ಕಟ್ಟೆ: ಇಲ್ಲಿನ ಸಮೀಪದ ಗುಂಡಿಬೈಲಿನ ಸಮೀಪದಲ್ಲಿ ಚಲಿಸುತ್ತಿದ್ದ ಬೈಕ್ ಗೆ ಹಸು ಅಡ್ಡ ಬಂದು ವ್ಯಕ್ತಿಯೊಬ್ಬರಿಗೆ ಗಾಯವಾದ ಘಟನೆ ನಡೆದಿತ್ತು. ಇದೇ ಸಂಧರ್ಭದಲ್ಲಿ ಅದೇ ದಾರಿಯಲ್ಲಿ ಸಾಗುತಿದ್ದ ಕರ್ನಾಟಕ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ತಕ್ಷಣ ವಾಹನವನ್ನು ನಿಲ್ಲಿಸಿ ಗಾಯಾಳುವನ್ನು ಸಂತೈಸಿ ಕೂಡಲೇ ಹೆಚ್ಚಿನ ಚಿಕಿತ್ಸೆಗೆ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ತಮ್ಮ ಬೆಂಗಾವಲು ವಾಹನದಲ್ಲಿ ಕಳುಹಿಸಿಕೊಟ್ಟರು.  ಸಾಗರದ ಬರದಹಳ್ಳಿಯ ಹಾಲಸ್ವಾಮಿ ಎನ್ನುವ ವ್ಯಕ್ತಿ ಅಪಘಾತವಾಗಿದ್ದು ಇವರನ್ನು ಹೆಚ್ಚಿನ ಚಿಕಿತ್ಸೆಗೆ ಸಚಿವ ಆರಗ ಜ್ಞಾನೇಂದ್ರ ರವರ…

Read Full News

ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ತಡರಾತ್ರಿ PFI ,SDPI ಕಾರ್ಯಕರ್ತರ ಮನೆ ಮೇಲೆ ದಾಳಿ : ಐವರು ವಶಕ್ಕೆ

ಶಿವಮೊಗ್ಗ : ಪಿಎಫ್‌ಐ ಸಂಘಟನೆ ಮುಖಂಡರು, ಕಾರ್ಯಕರ್ತರ ಮನೆಗಳ ಮೇಲೆ ದಾಳಿ ಮುಂದುವರೆದಿದೆ. ಇವತ್ತು ಬೆಳಗಿನ ಜಾವ ಶಿವಮೊಗ್ಗ ನಗರ ಮತ್ತು ಭದ್ರಾವತಿಯಲ್ಲಿ ದಾಳಿ ನಡೆದಿವೆ. ಶಿವಮೊಗ್ಗ ನಗರದ ಎರಡು ಕಡೆ ಮತ್ತು ಭದ್ರಾವತಿಯಲ್ಲಿ ಮೂರು ಕಡೆ ದಾಳಿ ನಡೆಸಲಾಗಿದೆ. ಈಗಾಗಲೇ ಐವರನ್ನು ವಶಕ್ಕೆ ಪಡೆದಿರುವ ಕುರಿತು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇನ್ನು ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಕಡೆ ಕಾರ್ಯಾಚರಣೆ ನಡೆಸಲಾಗಿದೆ. ಬೆಳಗಿನ ಜಾವ 3 ಗಂಟೆ ಹೊತ್ತಿಗೆ ಪೊಲೀಸರು…

Read Full News

ಕೋಳಿ ಕದಿಯುತ್ತಿದ್ದ ಎನ್ನುವ ಕಾರಣಕ್ಕೆ ಮೃಗವಧೆ ರಾಜು ಎಂಬಾತನನ್ನು ಬಡಿದು ಕೊಂದು ಬಿಟ್ರಾ ದುಷ್ಕರ್ಮಿಗಳು..!!!!!!!????

ಅಂಗಡಿಗಳಲ್ಲಿ ಕೋಳಿ ಕದಿಯುತ್ತಿದ್ದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಬಡಿದು ಕೊಂದಿರುವಂತಹ ಘಟನೆ ತೀರ್ಥಹಳ್ಳಿ ತಾಲ್ಲೂಕಿನ ಮೃಗವಧೆಯಲ್ಲಿ ನಡೆದಿದೆ ಎನ್ನಲಾಗುತ್ತಿದೆ.  ಮೃಗವಧೆಯ ರಾಜು ಹೇಗೆ ಸಾವನ್ನಪ್ಪಿರುವ ವಿಚಾರ ಇದೀಗ ಹೊರಕ್ಕೆ ಬಂದಿದೆ. ಆ ಊರು ಹಾಗೂ ಅಲ್ಲಿನ ಸ್ಥಳಿಯರು ಹೇಳುವ ಪ್ರಕಾರ ಆತ ಅಡಿಕೆ ಗೊನೆ ತೆಗೆಯುವವನಾಗಿದ್ದು ಹಾಗೂ ಮದ್ಯ ವ್ಯಸನಿಯಾಗಿದ್ದ. ಕಳೆದ ಮೂರು ದಿನಗಳಿಂದ ರಾಜು ಮನೆಯಲ್ಲಿರಲಿಲ್ಲ.  ಕೋಳಿಯಂಗಡಿಗಳಲ್ಲಿ ಕೋಳಿ ಕದಿಯುತ್ತಿದ್ದ ಎಂಬ ಕಾರಣಕ್ಕೆ ಆತನ ಮೇಲೆ ಶಿಶಿರ, ಶಿವು ಮತ್ತು ವಿಜಯೇಂದ್ರ ಎಂಬ ಆರೋಪಿಗಳು ಹಲ್ಲೆ…

Read Full News

ಅನಾರೋಗ್ಯ ಪೀಡಿತ ವ್ಯಕ್ತಿಗೆ ಆರ್ಥಿಕ ನೆರವು ನೀಡಿದ ಶಾಸಕ ಹರತಾಳು ಹಾಲಪ್ಪ

 ಹೊಸನಗರ ತಾಲೂಕ್ ವೀರಶೈವ ಲಿಂಗಾಯಿತ ಪರಿಷತ್ ನ ಮಾಸಿಕ ಸಭೆ ಆಲಗೇರಿ ಮಂಡ್ರಿಯ ದಯಾಕರ ಎಂಬುವವರ ಮನೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೊಸನಗರ ತಾಲೂಕ್ ವೀರಶೈವ ಲಿಂಗಾಯತ ಪರಿಷತ್ ನಡೆಸುತ್ತಿರುವ ಸಮಾಜಮುಖಿ ಕಾರ್ಯವನ್ನು ಪ್ರಶಂಸಿದರು. ನಂತರ ಇತ್ತೀಚೆಗೆ ಕೃಷಿ ಕಾರ್ಯದಲ್ಲಿ ತೊಡಗಿದ್ದಾಗ ಅಕಸ್ಮಿಕವಾಗಿ ಅವಘಡ ಸಂಭವಿಸಿ ಓಡಾಡದಂತಹ ಸ್ಥಿತಿಯಲ್ಲಿರುವ ರೈತ ಉಮೇಶ್ ಎಂಬುವರಿಗೆ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ವೈಯಕ್ತಿಕವಾಗಿ…

Read Full News

ಗೃಹ ಸಚಿವರ ಸ್ವಕ್ಷೇತ್ರದಲ್ಲಿಯೇ ವ್ಯಕ್ತಿಯೊಬ್ಬನ ಭೀಕರ ಹತ್ಯೆ!!!!!!!!

ತೀರ್ಥಹಳ್ಳಿ : ತಾಲೂಕಿನ ಶೇಡ್ಗಾರ್  ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೃಗಾವಧೆಯ ಬೆಳ್ಳಿಕೊಡಿಗೆ ವಾಸಿ ರಾಜು (45) ಬೆಳ್ಳಂಬೆಳಗ್ಗೆ ಮನೆ ಮುಂಭಾಗದಲ್ಲಿ ಹೆಣವಾಗಿದ್ದಾರೆ. ಸಾಯುವ ಮುನ್ನ ರಾಜು ಮಾರಾಮಾರಿ ವಿಚಾರ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಂಡಿದ್ದು, ಪೊಲೀಸರ ತನಿಖೆಯಿಂದ ಹೆಚ್ಚಿನ ಮಾಹಿತಿ ಬಹಿರಂಗವಾಗಬೇಕಾಗಿದೆ. ರಾಜು ಮೂರು ದಿನಗಳಿಂದ ಮನೆಗೆ ಬಂದಿರಲ್ಲಿಲ್ಲ. ಸೋಮವಾರ ಬೆಳಿಗ್ಗೆ 6.30ರ ಸುಮಾರಿಗೆ ಮೂವರು ದುಷ್ಕರ್ಮಿಗಳು ಯದ್ವತದ್ವ ಹಲ್ಲೆ ಮಾಡಿ ಬೈಕಿನಲ್ಲಿ ಮನೆ ಮುಂಭಾಗ ತಂದು ಎಸೆದಿದ್ದಾರೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಗಂಭೀರವಾಗಿ ಗಾಯಗೊಂಡ ರಾಜು ಜೋರಾಗಿ…

Read Full News

ಕಾಂಗ್ರೆಸ್ ಪಕ್ಷಕ್ಕೆ ರಾಜು ತಲ್ಲೂರು ರಾಜೀನಾಮೆ : ಮುಂದಿನ ನಡೆ ಬಗ್ಗೆ ಗೌಪ್ಯತೆ…!!!!!

ಶಿವಮೊಗ್ಗ: ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ತಾನು ಇವತ್ತು ರಾಜಿನಾಮೆ ನೀಡುತ್ತಿರುವುದಾಗಿ ಸೊರಬ ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದ ರಾಜು ತಲ್ಲೂರು ಘೋಷಿಸಿದ್ದಾರೆ. ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಸಂಪೂರ್ಣ ನಿಷ್ಕ್ರಿಯ ರಾಗಿದ್ದಾರೆ. ಜಿಲ್ಲೆಯಲ್ಲಿ ಅವರಿಂದ ಪಕ್ಷ ಚೇತರಿಕೆ ಕಾಣದು. ವ್ಯಕ್ತಿಪೂಜೆಯಲ್ಲಿ ಅವರು‌ ನಿರತರಾಗಿದ್ದಾರೆ. ಪಕ್ಷಕ್ಕೆ ಹೊಸ ಪದಾಧಿಕಾರಿಗಳನ್ನು ನೇಮಿಸಿಲ್ಲ ಎಂದು ಆರೋಪಿಸಿದರು. ಜಿಲ್ಲಾ ಕಾಂಗ್ರೆಸಿನಲ್ಲಿ ಒಗ್ಗಟ್ಟಿಲ್ಲ. ಈ ಬಗ್ಗೆ ರಾಜ್ಯದ ಮುಖಂಡರಿಗೆ ಮಾಹಿತಿ ನೀಡಿದ್ದೆ. ಕೆಲಸ ಮಾಡಲು‌ ಮನಸ್ಸಿಲ್ಲದವರು ಪಕ್ಷದಲ್ಲಿದ್ದಾರೆ.  ಇದರಿಂದ…

Read Full News

ಹಸುವಿಗೆ ನೀರು ಕುಡಿಸಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು

 ಹಸುವಿಗೆ ನೀರು ಕುಡಿಸಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಬೀರನಕೆರೆ ಗ್ರಾಮದಲ್ಲಿ‌ ನಡೆದಿದೆ. ಬೀರನಕೆರೆ ಗ್ರಾಮದ ರವಿ ನಾಯ್ಕ(18) ಮೃತ ಯುವಕ. ರವಿನಾಯ್ಕ ಭಾನುವಾರ ಮಧ್ಯಾಹ್ನ ಹಸುವಿಗೆ ನೀರು ಕುಡಿಸಲು ಗ್ರಾಮದ ಎಂಪಿಎಂ ಕಟ್ಟೆಯ ಬಳಿ‌ ಹೋದಾಗ, ಹಸು ನೀರಿಗೆ ಇಳಿದಿದೆ. ಈ ವೇಳೆ ಹಸು‌ ನೀರಿನ ಆಳಕ್ಕೆ ಹೋದಾಗ ಹಸುವನ್ನು ಕರೆದುಕೊಂಡು ಬರಲು ಹೋಗಿ ಆತ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಹಸು ಮನೆಗೆ ಬಂದಿದೆ. ಆದರೆ ರವಿ ಮನೆಗೆ ಬಾರದೆ…

Read Full News

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ಸ್ಮರಣೀಯರು : ಅಭಿಷೇಕ್ ಹುಂಚ

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ಸ್ಮರಣೀಯರು. ಅವರು ದೇಶದ ಸ್ವಾಭಿಮಾನ, ಸಮಾನತೆ, ಸೋದರ ಭಾವನೆಗಳನ್ನು ಬೆಳೆಸುವ ಸನ್ಮಾರ್ಗಕ್ಕೆ ಬೆಳಕಾಗಿದ್ದರು ಎಂದು ಯುವ ಮುಖಂಡ ಅಭಿಷೇಕ್ ಹುಂಚ ಹೇಳಿದರು. ಹುಂಚದಲ್ಲಿ(HUMCHA) ಇಂದು ಪಂಡಿತ್ ದೀನ್ ದಯಾಳ್ ಜೀ ಅವರ ಜನ್ಮದಿನಾಚರಣೆ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು ದೀನ್ ದಯಾಳ್ ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ. ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುವ ಕಳಕಳಿ ಹೊಂದಿದ್ದರು. ಸಮಾಜದಲ್ಲಿ ಮೇಲು-ಕೀಳು ಭಾವನೆ ದೂರವಾಗಬೇಕೆಂದು ಬಯಸಿದ್ದರು. ಸರಕಾರಿ ಯೋಜನೆಗಳು…

Read Full News

ವಿದ್ಯುತ್ ಸ್ಪರ್ಶದಿಂದ ಎರಡು ಕಾಡಾನೆಗಳು ಸಾವು : ಜಮೀನು ಮಾಲೀಕ ವಶಕ್ಕೆ….

  ವಿದ್ಯುತ್ ಸ್ಪರ್ಶದಿಂದ ಎರಡು ಕಾಡಾನೆಗಳು ಮೃತಪಟ್ಟ ಘಟನೆ ಶಿವಮೊಗ್ಗ ತಾಲೂಕು ಶೆಟ್ಟಿಹಳ್ಳಿ ಕಾಡಿನ ಆನೆ ವನ್ಯಜೀವಿ ವಲಯದಲ್ಲಿ ನಡೆದಿದೆ. ರವಿವಾರ ಬೆಳಗಿನ ಜಾವ ಆಹಾರ ಅರಸಿ ಬಂದ ಎರಡು ಗಂಡು ಕಾಡಾನೆಗಳು ಸಮೀಪದ ಆನೆಸರದ ಮೂಲಕ ಚನ್ನಹಳ್ಳಿಯ ಹೊಲಕ್ಕೆ ಹೋಗಿವೆ.ಅಲ್ಲಿ ವನ್ಯಜೀವಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಕಟ್ಟಿದ್ದಾರೆನ್ನಲಾದ ಐಬಿಕ್ಸ್ ವಿದ್ಯುತ್ ತಂತಿಯನ್ನು ಆನೆಗಳು ತುಳಿದು ವಿದ್ಯುತ್ ಪ್ರವಹಿಸಿದೆ ಎಂದು ತಿಳಿದು ಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಜಮೀನು ಮಾಲಕ ಚಂದ್ರನಾಯ್ಕ್…

Read Full News

ಹುಂಚಾ ಕೃಷಿ ಪತ್ತಿನ ಸಹಕಾರ ಸಂಘ 7 ಲಕ್ಷ ರೂ ನಿವ್ವಳ ಲಾಭ | ಗೊಂದಲಗಳ ನಡುವೆ ಸುಖಾಂತ್ಯಗೊಂಡ ವಾರ್ಷಿಕ ಸರ್ವ ಸದಸ್ಯರ ಸಭೆ

ರಿಪ್ಪನ್‌ಪೇಟೆ;- ಹುಂಚಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2021-22 ನೇ ಸಾಲಿನಲ್ಲಿ 4.22 ಕೋಟಿ ರೂ ವ್ಯವಹಾರ ನಡೆಸುವುದರೊಂದಿಗೆ 7.72.109 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದು ಕೃಷಿ ಸಹಕಾರ ಬ್ಯಾಂಕ್ ಅಧ್ಯಕ್ಷ ಹೆಚ್.ಎಸ್.ಯದುಕುಮಾರ್ ಹೊಂಡಲಗದ್ದೆ  ತಿಳಿಸಿ ಮುಂದಿನ ದಿನಗಳಲ್ಲಿ ಸಂಘವನ್ನು ಉತ್ತುಂಗಕ್ಕೆ ತರುವ ಬಗ್ಗೆ ಹಲವು ಅಶೋತ್ತರಗಳನ್ನು ಇಟ್ಟುಕೊಂಡಿದ್ದು ಸಂಘದ ಸದಸ್ಯರು ಪ್ರೋತ್ಸಾಹಿಸಿದಲ್ಲಿ ಸಂಘವನ್ನು ಲಾಭದತ್ತ ತರುವ ಗುರಿ ನಮ್ಮದಾಗಿದೆ ಎಂದರು. ರಿಪ್ಪನ್‌ಪೇಟೆ  ಸಮೀಪದ ಹುಂಚಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ…

Read Full News

ನೀರಿನ ತೊಟ್ಟಿಗೆ ಬಿದ್ದು 11 ತಿಂಗಳ ಮಗು ಸಾವು : ಹೃದಯ ಹಿಂಡುತ್ತಿರುವ ಕುಟುಂಬಸ್ಥರ ಆಕ್ರಂದನ

ಮನೆಯ ಮುಂದಿನ ನೀರಿನ ತೊಟ್ಟಿಗೆ ಬಿದ್ದು 11 ತಿಂಗಳ ಮಗುವೊಂದು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದ ಛಾಯಾಗ್ರಾಹಕ ದೇವರಾಜ್ ಹಾಗೂ ಅನುಷಾ ದಂಪತಿಯ ೧೧ ತಿಂಗಳ ಮಗು ಅಕ್ಷಯ್ ಮನೆಯ ಮುಂದಿನ ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿದೆ. ಮುಂದಿನ ವಾರ ಒಂದನೇ ವರ್ಷಕ್ಕೆ ಕಾಲಿಡುತ್ತಿದ್ದು ಮಗುವಿನ ಜನ್ಮ ದಿನವನ್ನು ಅದ್ಧೂರಿಯಾಗಿ ಆಚರಿಸಲು ಯೋಚಿಸಿದ್ದ ಮನೆಯಲ್ಲೀಗ ಸ್ಮಶಾನ ಮೌನ ಆವರಿಸಿದೆ. ಮಹಾಲಯ ಅಮವಾಸ್ಯೆ ದಿನವಾದ ಭಾನುವಾರ ಮನೆಯವರು ವಾಹನ ತೊಳೆಯುವುದು, ಪೂಜೆ ಪುನಸ್ಕಾರದ ಕಡೆ ಗಮನ…

Read Full News

ವಿಶೇಷ ಪ್ರಕಟಣೆ : 108 ಆಂಬ್ಯುಲೆನ್ಸ್ ಸಂಪರ್ಕಕ್ಕೆ ಪರ್ಯಾಯ ದೂರವಾಣಿ ಸಂಖ್ಯೆ ಕಲ್ಪಿಸಿದ ಆರೋಗ್ಯ ಇಲಾಖೆ

ತಾಂತ್ರಿಕ ದೋಷದಿಂದಾಗಿ ರಾಜ್ಯಾದ್ಯಂತ ಸೆಪ್ಟೆಂಬರ್​ 24ರ ರಾತ್ರಿಯಿಂದ 108 ಆಯಂಬುಲೆನ್ಸ್​ ಸೇವೆ ಸ್ಥಗಿತಗೊಂಡಿದೆ. ಜಿವಿಕೆ ಏಜೆನ್ಸಿ ನಡೆಸುತ್ತಿರುವ 108 ಸಹಾಯವಾಣಿಗೆ, ಆರೋಗ್ಯ ಎಮರ್ಜನ್ಸಿ ಎಂದು ಯಾರೇ ಕರೆಮಾಡಿದರೂ ಅದನ್ನು ಸ್ವೀಕರಿಸುತ್ತಿಲ್ಲ.ಹೀಗಾಗಿ ಅನೇಕ ರೋಗಿಗಳು ಪರದಾಡುವಂತಾಗಿದೆ. ಆಂಬುಲೆನ್ಸ್​ಗಳು ಸಿಗದೆ ಕಷ್ಟಪಡುವಂತಾಗಿದೆ. ಈ ಸಮಸ್ಯೆಗೆ ತಕ್ಷಣ ಸ್ಪಂದಿಸಿರುವ ಆರೋಗ್ಯ ಇಲಾಖೆ ಆಯಾ ಆಯಾ ತಾಲೂಕುಗಳಿಗೆ ಪರ್ಯಾಯ ದೂರವಾಣಿ ಸಂಖ್ಯೆಯನ್ನು ಕಲ್ಪಿಸಿದೆ. Due to non functional of 108 call centre,District has made an alternative arrangements for…

Read Full News

ರಾಜ್ಯಾದ್ಯಂತ ಸೆ.24 ರ ರಾತ್ರಿಯಿಂದ 108 ಆಂಬ್ಯುಲೆನ್ಸ್ ಸೇವೆ ಸ್ಥಗಿತ : 108 ನಂಬರ್ ಗೆ ಕರೆ ಮಾಡಿದರೆ ಇಲ್ಲಾ ರೆಸ್ಪಾನ್ಸ್

ರಾಜ್ಯಾದ್ಯಂತ ಸೆಪ್ಟೆಂಬರ್​ 24ರ ರಾತ್ರಿಯಿಂದ 108 ಆಂಬುಲೆನ್ಸ್​ ಸೇವೆ ಸ್ಥಗಿತಗೊಂಡಿದೆ. ಜಿವಿಕೆ ಏಜೆನ್ಸಿ ನಡೆಸುತ್ತಿರುವ 108 ಸಹಾಯವಾಣಿಗೆ, ಆರೋಗ್ಯ ಎಮರ್ಜನ್ಸಿ ಎಂದು ಯಾರೇ ಕರೆಮಾಡಿದರೂ ಅದನ್ನು ಸ್ವೀಕರಿಸುತ್ತಿಲ್ಲ. ಹೀಗಾಗಿ ಅನೇಕ ರೋಗಿಗಳು ಪರದಾಡುವಂತಾಗಿದೆ. ಆಂಬುಲೆನ್ಸ್​ಗಳು ಸಿಗದೆ ಕಷ್ಟಪಡುವಂತಾಗಿದೆ. ಹೀಗೆ ಆಂಬುಲೆನ್ಸ್​ ಸೇವೆ ಸ್ಥಗಿತಗೊಳ್ಳಲು ತಾಂತ್ರಿಕ ದೋಷವೇ ಕಾರಣ ಎಂದು ಹೇಳಲಾಗಿದೆ. 108 ತುರ್ತು ಸೇವೆಗೆ ದಿನವೊಂದಕ್ಕೆ ಏನಿಲ್ಲವೆಂದರೂ ರಾಜ್ಯದೆಲ್ಲೆಡೆಯಿಂದ 20 ಸಾವಿರ ಕರೆಗಳು ಬರುತ್ತದೆ. ಆದರೆ ನಿನ್ನೆ ರಾತ್ರಿಯಿಂದ 108ಕ್ಕೆ ಕರೆ ಮಾಡಿದರೆ ಫೋನ್​ ಸಂಪರ್ಕ ಸಿಗುತ್ತಿಲ್ಲ. …

Read Full News

ಸಚಿವ ಅಶ್ವಥ್ ನಾರಾಯಣ್ ಕೂಡಲೇ ರಾಜೀನಾಮೆ ನೀಡಿ ಕುಮಾರಸ್ವಾಮಿ ಕ್ಷಮೆ ಯಾಚಿಸುವಂತೆ ಜೆಡಿಎಸ್ ಮುಖಂಡ ಯಡೂರು ರಾಜಾರಾಮ್ ಆಗ್ರಹ

ರಿಪ್ಪನ್‌ಪೇಟೆ : ಬಿಎಂಎಸ್‌ ಶಿಕ್ಷಣ ಟ್ರಸ್ಟ್‌ನಲ್ಲಿ ನಡೆದ ಅಕ್ರಮಗಳಿಗೆ ಸಹಕಾರ ನೀಡಿದ್ದಾರೆ ಎನ್ನಲಾಗುತ್ತಿರುವ ಕಾರಣ ಅಶ್ವಥ್ ನಾರಾಯಣ್ ರಾಜೀನಾಮೆ ನೀಡಬೇಕು ರಾಜೀನಾಮೆ ಜತೆಗೆ ಈ ಅಕ್ರಮಗಳ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕು. ಟ್ರಸ್ಟ್‌ ಮತ್ತು ಅದರ ಎಲ್ಲಾ ಸ್ವತ್ತುಗಳನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ತೀರ್ಥಹಳ್ಳಿ ಜೆಡಿಎಸ್ ಯುವ ಮುಖಂಡ ಯಡೂರು ರಾಜಾರಾಮ್ ಆಗ್ರಹಿಸಿದ್ದಾರೆ. ಪಟ್ಟಣದಲ್ಲಿ ಪತ್ರೀಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ನಮ್ಮ ನಾಯಕರಾದ ಕುಮಾರಸ್ವಾಮಿ ಬಗ್ಗೆ ಮಾತನಾಡುವಾಗ ಅಶ್ವಥ್ ನಾರಾಯಣ ಅವರು ಎಚ್ಚರಿಯಿಂದಿರಬೇಕು.ಇಲ್ಲದಿದ್ದಲ್ಲಿ ಮುಂದಿನ…

Read Full News

ನವೆಂಬರ್ ಅಂತ್ಯಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ

ಶಿವಮೊಗ್ಗ ಸಮೀಪದ ಸೋಗಾನೆಯಲ್ಲಿ ವಿಮಾನ ನಿಲ್ದಾಣದ ರನ್‌ವೇ, ಟರ್ಮಿನಲ್ ಕಟ್ಟಡ, ವಿಮಾನಸಂಚಾರ ನಿಯಂತ್ರಣ ಘಟಕ ಸೇರಿದಂತೆ ಅನೇಕ ಕಾಮಗಾರಿಗಳು ಭರದಿಂದ ಸಾಗಿದ್ದು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಅಂತಿಮ ಹಂತದ ಕಾಮಗಾರಿ ಪ್ರಗತಿಯಲ್ಲಿದೆ.ಈ ಎಲ್ಲಾ ಕಾಮಗಾರಿಗಳು ನವೆಂಬರ್ ಮಾಸಾಂತ್ಯಕ್ಕೆ ಪೂರ್ಣಗೊಂಡು ವಿಮಾನ ನಿಲ್ಧಾಣ ಲೋಕಾರ್ಪಣೆಗೆ ಸರ್ವಸನ್ನದ್ಧಗೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.  ಅವರು ಇಂದು ಸೋಗಾನೆ ವಿಮಾನ ನಿಲ್ದಾಣಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಅಪರ ಕಾರ್ಯದರ್ಶಿ ಶ್ರೀಮತಿ ಉಷಾಪಾಧಿ, ಗೌರವಗುಪ್ತಾ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೆಲ್ವಕುಮಾರ್…

Read Full News

ಬಂಧಿತರಾಗಿರುವ ಶಂಕಿತ ಉಗ್ರರದ್ದು ತೀರ್ಥಹಳ್ಳಿಯ ಮೂಲ ಹೌದು ಆದರೆ ಸಹವಾಸ ಮಂಗಳೂರಿನ ಕರಾವಳಿಯದ್ದು : ಆರಗ ಜ್ಞಾನೇಂದ್ರ

ಶಿವಮೊಗ್ಗದಲ್ಲಿ ಮೂವರು ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಮುಂದೆ ನಡೆಯಲಿದ್ದ ಅನಾಹುತವನ್ನು ಶಿವಮೊಗ್ಗ ಪೊಲೀಸರು ತಪ್ಪಿಸಿದ್ದಾರೆ ಎಂದು ತಿಳಿಸಿದರು. ತೀರ್ಥಹಳ್ಳಿಯಲ್ಲಿ ಮಾತನಾಡಿದ ಗೃಹ ಸಚಿವರು, ಮತಾಂಧರ ಪರಿಚಯದಿಂದ ಈ ರೀತಿಯಾಗಿದೆ.ಬಂಧಿತ ಶಂಕಿತ ಉಗ್ರರಿಗೆ ಕರಾವಳಿ, ಕೇರಳ ಲಿಂಕ್ ಇದೆ. ಹೀಗಾಗಿಯೇ ಇಂತಹ ಕೃತ್ಯ ನಡೆಯುತ್ತಿದೆ. ಈ ಹಿಂದೆ ತೀರ್ಥಹಳ್ಳಿಯಲ್ಲಿ ಸ್ಯಾಟಲೈಟ್ ಪೋನ್ ಬಳಕೆ ಸಹ ಆಗಿದೆ. ನಮ್ಮ ಪೊಲೀಸರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಹೇಳಿದರು. ಈ ಹಿಂದೆ…

Read Full News

ರಿಪ್ಪನ್‌ಪೇಟೆ : ಮೂರು ಪಕ್ಷಗಳಿಂದ ಜನ ಭ್ರಮನಿರಸನಗೊಂಡಿದ್ದಾರೆ – ಮುಖ್ಯಮಂತ್ರಿ ಚಂದ್ರು | ನಮ್ಮದು ಪ್ರಣಾಳಿಕೆಯಲ್ಲ , ಗ್ಯಾರಂಟಿ ಕಾರ್ಡ್ : ಪೃಥ್ವಿ ರೆಡ್ಡಿ

ರಿಪ್ಪನ್‌ಪೇಟೆ: ರಾಜ್ಯ ಹಾಗೂ ರಾಷ್ಟ್ರದಲ್ಲಿ  ಜನತೆ ಮೂರು ಪಕ್ಷಗಳಿಂದ ಭ್ರಮ ನಿರಸನಗೊಂಡಿದ್ದಾರೆ  ಧೈರ್ಯ ಮತ್ತು ಎದೆಗಾರಿಕೆಯಿಂದ ಭ್ರಷ್ಟಾಚಾರದ ವಿರುದ್ಧ ಆಮ್ ಆದ್ಮಿ ಪಕ್ಷದ  ಕಾರ್ಯಕರ್ತರು ಮುನ್ನುಗ್ಗಿ ವಿಚಾರದಿಂದ ಪ್ರಚಾರದಿಂದ ಪಕ್ಷ ಬೆಳೆಯುವುದಿಲ್ಲ. ವಿಚಾರಗಳು ಅನುಷ್ಟಾನುಗೊಳ್ಳಬೇಕು. ಇದಕ್ಕೆ ಆಮ್ ಆದ್ಮಿ ಪಕ್ಷವೇ ಪರಿಹಾರವಾಗಿದೆ. ಆಮ್‌ ಆದ್ಮಿ ಪಕ್ಷ ಬರಬೇಕೆಂದು ಕಾಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನಪರ ಯೋಜನೆಗಳೊಂದಿಗೆ, ಚುನಾವಣೆ ಎದುರಿಸಿ ಅಧಿಕಾರಕ್ಕೆ ಬರೋಣ. ಜನಸಾಮಾನ್ಯರ ಸಮಸ್ಯೆಯನ್ನು ಅಮೂಲಾಗ್ರವಾಗಿ ಪರಿಹರಿಸೋಣ ಎಂದು ರಾಜ್ಯ ಎಎಪಿ  ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ…

Read Full News

ವಿಜೃಂಭಣೆಯೊಂದಿಗೆ ಸಂಪನ್ನಗೊಂಡ ಜೇನುಕಲ್ಲಮ್ಮ ಜಾತ್ರಾ ಮಹೋತ್ಸವ

ರಿಪ್ಪನ್ ಪೇಟೆ;-ಪುರಾಣ ಪ್ರಸಿದ್ದ ಹೆಬ್ಬಂಡೆಯಲ್ಲಿ ನೆಲೆಸಿರುವ ಜಗನ್ಮಾತೆ ಜೇನುಕಲ್ಲಮ್ಮ ದೇವಿಯ ಜಾತ್ರಾಮಹೋತ್ಸವವು ವಿಜೃಂಭಣೆಯೊಂದಿಗೆ ಸಂಪನ್ನ ಗೊಂಡಿತು. ಭಾದ್ರಪದ ಮಾಸದ ಹುಣ್ಣಿಮೆಯಿಂದ ಮಹಾಲಯ ಅಮಾವಾಸ್ಯೆಯವರೆಗೆ ಎರಡು ಮಂಗಳವಾರ ಶುಕ್ರವಾರದ ಪಿತೃ ಪಕ್ಷದಲ್ಲಿ ಅಮ್ಮನಘಟ್ಟದ ಜೇನುಕಲ್ಲಮ್ಮ ದೇವಿಯ ಜಾತ್ರಾಮಹೋತ್ಸವವು ಶ್ರದ್ದಾಭಕ್ತಿಯಿಂದ ಅದ್ದೂರಿಯಾಗಿ ನೆರವೇರಿತು. ದೇವಸ್ಥಾನದ ಪ್ರಧಾನ ಅರ್ಚಕ ಭಾಸ್ಕರ್ ಜೋಯ್ಸ್ ನೇತೃತ್ವದಲ್ಲಿ ಹಳೆಯ ಅಮ್ಮನಘಟ್ಟದಲ್ಲಿ ತಾಯಿ ಮಹಾಮಾತೆ ಜೇನುಕಲ್ಲಮ್ಮ ತಾಯಿಗೆ ಕಂಕಣ ಧಾರಣೆ ಮಾಡಿ ಎರಡು ಮಂಗಳವಾರ ಮತ್ತು ಎರಡು ಶುಕ್ರವಾರದೊಂದು ದೇವಿಗೆ ವಿಶೆಷ ಅಲಂಕಾರಿಕಾ ಪೂಜೆಯೊಂದಿಗೆ ವಿವಿಧ ಧಾರ್ಮಿಕ…

Read Full News

ರಿಪ್ಪನ್‌ಪೇಟೆ : ಕಾಮಗಾರಿ ಹಂತದಲ್ಲಿ ಕಿತ್ತು ಹೋದ ಬರುವೆ ಬಡಾವಣೆಯಲ್ಲಿನ ಕಾಂಕ್ರೀಟ್ ಸಂಪರ್ಕ ರಸ್ತೆ | ಇದು 40% ಅಲ್ಲಾ..!!! 60% ಕಮಿಷನ್ ನ ಕಾಮಗಾರಿಯೇ…??????

ರಿಪ್ಪನ್‌ಪೇಟೆ : ವಿಧಾನ ಪರಿಷತ್ ಸದಸ್ಯರಾಗಿದ್ದ ಆರ್ ಪ್ರಸನ್ನ ಕುಮಾರ್ ಅವಧಿಯಲ್ಲಿ ರಿಪ್ಪನ್‌ಪೇಟೆ ಗ್ರಾಮ ಪಂಚಾಯತಿ ಹೊಸಬಡಾವಣೆಯಲ್ಲಿ ರಸ್ತೆ ಕಾಮಗಾರಿಗೆ ಸರ್ಕಾರದಿಂದ ಕರ್ನಾಟಕ ನೀರಾವರಿ ನಿಗಮದಿಂದ ಅನುದಾನ ಬಿಡುಗಡೆ ಮಾಡಲಾಗಿದ್ದು ಕಾಮಗಾರಿ ಹಂತದಲ್ಲಿ ಸಂಪೂರ್ಣ ಕಿತ್ತು ಹೋಗಿ ಸಾರ್ವಜನಿಕರಲ್ಲಿ ಹಾಸ್ಯದ ವಿಷಯವಾಗಿ ಸುದ್ದಿಗೆ ಗ್ರಾಸವಾಗಿದೆ. ಶೇಕಡಾ 40% ಪರ್ಸೆಂಟ್‌ನ ರಾಜ್ಯ ಬಿಜೆಪಿ ಸರ್ಕಾರ ಎಂದು ಬೀಗುತ್ತಿರುವ ವಿರೋಧಪಕ್ಷದವರು ತಮ್ಮ ಪಕ್ಷದ ಅಗಿನ ಎಂ.ಎಲ್.ಸಿ, ಅನುದಾನದಡಿ ಬಿಡುಗಡೆ ಮಾಡಲಾದ ಹೊಸಬಡಾವಣೆಯ  ಕಾಂಕ್ರೇಟ್  ರಸ್ತೆ ಕಾಮಗಾರಿ ಅಪೂರ್ಣ ಮತ್ತು ಕಳಪೆ…

Read Full News

ಅಧ್ಯಕ್ಷರ ರಾಜಿನಾಮೆ ಪ್ರಹಸನದಿಂದ ಹುಂಚಾ ಸೊಸೈಟಿಗೆ ಬಿತ್ತು ಎರಡು ಲಕ್ಷ ಬಡ್ಡಿ…..!!! ಕಟ್ಟೋದ್ಯಾರು ಆಡಳಿತ ಮಂಡಳಿನಾ ?? ರೈತರಿಗೆ ಗುನ್ನಾನಾ???ಹುಂಚಾ ಸೊಸೈಟಿಯಲ್ಲಿ ಬಗೆಹರಿಯದ ಗೊಂದಲ!!!!!!

ಹುಂಚ : ಇತ್ತೀಚೆಗೆ ಹುಂಚಾ ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷರು ಸೇರಿದಂತೆ ಐವರು ನಿರ್ದೇಶಕರು ರಾಜಿನಾಮೆ ಪ್ರಹಸನ ಸುಖಾಂತ್ಯವಾಯಿತು ಎನ್ನುವ ಮೊದಲು ಡಿಸಿಸಿ ಬ್ಯಾಂಕ್ ಈಗ ಸುಸ್ತಿದಾರ ಸೊಸೈಟಿ ಎಂದು ಘೋಷಿಸಿ ಎರಡು ಲಕ್ಷಕ್ಕೂ ಹೆಚ್ಚು ಬಡ್ಡಿ ವಿಧಿಸಿದ್ದಾರೆಂದು ತಿಳಿದು ಬಂದಿದೆ. ಹುಂಚಾ ವ್ಯವಸಾಯ ಸಹಕಾರಿಯ ಆಡಿಟ್ ವರದಿಯಲ್ಲಿ ಐವತ್ತು ಲಕ್ಷಕ್ಕೂ ಹೆಚ್ಚೂ ವ್ಯತ್ಯಾಸವಾಗಿದೆ ಎಂಬ ಸುದ್ದಿಗೆ ಬೆದರಿ ಅಧ್ಯಕ್ಷರು ಸೇರಿದಂತೆ ಐವರು ನಿರ್ದೇಶಕರು ರಾಜಿನಾಮೆ ನೀಡಿದ್ದರು . ಉಳಿದ ನಿರ್ದೇಶಕರು ಎದ್ದು ಬಿದ್ದು ಆಡಿಟರ್ ರಿಂದ…

Read Full News

ತಾತ್ಕಾಲಿಕ ಮಿನಿ ಅಂಗನವಾಡಿ ಶೆಡ್ ತೆರವಿಗೆ ಮುಂದಾದ ಅರಣ್ಯಾಧಿಕಾರಿಗಳು : ಗ್ರಾಮಸ್ಥರಿಂದ ಪ್ರತಿಭಟನೆ

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹೊಟ್ಯಾಳಪುರ ಗ್ರಾಮದ ಮಿನಿ ಅಂಗನವಾಡಿ ನಿರ್ಮಾಣಕ್ಕೆ ಅರಣ್ಯಾಧಿಕಾರಿಗಳು ಅಡ್ಡಗಾಲು ಹಾಕುತ್ತಿರುವ ಹಿನ್ನಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಸುಮಾರು ಐದಾರು ವರ್ಷಗಳ ಹಿಂದೆ ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಮ್ಮಡಿಕೊಪ್ಪ ಮಜರೆ ಹೊಟ್ಯಾಳಪುರ ಮಿನಿ ಅಂಗನವಾಡಿಯಲ್ಲಿ  ಮಗುವೊಂದಕ್ಕೆ ಹಾವು ಕಡಿದು ಸಾವನ್ನಪ್ಪಿರುವ ಘಟನೆ ನಡೆದಿತ್ತು. ಈ ಘಟನೆ ಜನಮಾನಸದಿಂದ ಮಾಸುವ ಮುನ್ನವೇ ಸರ್ಕಾರದಿಂದ ಸುಸಜ್ಜಿತ ಮಿನಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿತ್ತು ಆದರೆ ಜಾಗ ಇಲ್ಲದೆ ಕಟ್ಟಡ…

Read Full News

ಕಾರು ಹಾಗೂ ಬಸ್ ನಡುವೆ ಮುಖಾಮುಖಿ ಡಿಕ್ಕಿ : ಓರ್ವ ಸಾವು ,ಇನ್ನೊಬ್ಬ ಗಂಭೀರ

ಪೋಸ್ಟ್ ಮ್ಯಾನ್ ನ್ಯೂಸ್ ಡೆಸ್ಕ್ …………………ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಜೋಗ ಸಮೀಪದಲ್ಲಿ ಕಾರು ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ಚಿಕ್ಕಮಗಳೂರು ನಿಂದ ಕಾರವಾರಕ್ಕೆ ಹೊರಟ ಸರ್ಕಾರಿ ಬಸ್ ಹಾಗೂ ವಡನ್ ಬೈಲ್ ಪದ್ಮಾವತಿ ದೇವಾಲಯದ ಧರ್ಮಧರ್ಶಿ ಹಾಗೂ ಸಹೋದರ ಚಲಿಸುತ್ತಿದ್ದ ಮಾರುತಿ ಓಮ್ನಿ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ದೇವಯ್ಯಾ ಜೈನ್ ಮೃತರಾಗಿದ್ದಾರೆ.ಇವರು ನಿವೃತ್ತ ಕೆಪಿಸಿ ಉದ್ಯೋಗಿಯಾಗಿದ್ದರು. ಸಹ ಪ್ರಯಾಣಿಕ ರಾಜೇಂದ್ರ ಜಯಂತ್ ಸ್ವಾಮೀಜಿ ರವರ ತಲೆಗೆ…

Read Full News

ದೇಶಾದ್ಯಂತ 100ಕ್ಕೂ ಹೆಚ್ಚು ಕಡೆ ಎನ್ ಐಎ(NIA) ದಾಳಿ : ಶಿವಮೊಗ್ಗದಲ್ಲಿಯೂ ಕೆಲ ಸಂಘಟನೆಯ ಮುಖಂಡರ ಮನೆ ಮೇಲೆ ದಾಳಿ

 ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಇವತ್ತು ಬೆಂಗಳೂರು, ಮಂಗಳೂರು ಮತ್ತು ಶಿವಮೊಗ್ಗ ಸೇರಿದಂತೆ ದೇಶಾದ್ಯಂತ 100ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದಾರೆ. ವಿವಿಧ ಸಂಘಟನೆಗೆ ಸೇರಿದ ಹಲವರನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದಲ್ಲಿ ಬೆಳಗಿನ ಜಾವ ಎನ್ ಐಎ(NIA) ದಾಳಿ ನಡೆದಿದೆ.  ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲಷ್ಕರ್ ಮೊಹಲ್ಲಾದ ಮನೆಯೊಂದರ ಮೇಲೆ ಬೆಳಗಿನ ಜಾವ ದಾಳಿಯಾಗಿದೆ. ಸಂಘಟನೆಯೊಂದರ ಮುಖಂಡನ್ನು ವಶಕ್ಕೆ ಪಡೆದು, ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ಎರಡು ತಂಡವಾಗಿ ದಾಳಿ ನಡೆಸಿದ ಎನ್ಐಎ…

Read Full News

ರಿಪ್ಪನ್‌ಪೇಟೆ : ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಶಾರದಾ ರಾಮಕೃಷ್ಣ ವಿದ್ಯಾ ಶಾಲೆಯ ಮಕ್ಕಳ ಉತ್ತಮ ಸಾಧನೆ

ರಿಪ್ಪನ್ ಪೇಟೆ : ಇಲ್ಲಿನ ಶಾರದಾ ರಾಮಕೃಷ್ಣ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  ರಿಪ್ಪನ್ ಪೇಟೆಯ ಚಿನ್ನೆಗೌಡ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಬಾಲಕರ ವಿಭಾಗದ ಕಬ್ಬಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಿಲೇ ಸ್ಪರ್ಧೆಯಲ್ಲಿ ಬಾಲಕ ಬಾಲಕಿಯರು ದ್ವಿತೀಯ ಹಾಗು ತೃತೀಯ ಸ್ಥಾನವನ್ನು ಪಡೆಯುವುದರ ಜೊತೆಗೆ ವೈಯಕ್ತಿಕ ವಿಭಾಗದಲ್ಲಿ 1500 ಹಾಗೂ 800 ಮೀಟರ್ ಓಟದಲ್ಲಿ…

Read Full News

ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಪೋಷಣ್ ಅಭಿಯಾನ: ಚಂದ್ರಕಲಾ | ಗರ್ಭಿಣಿಯರು ಧನಾತ್ಮಕವಾಗಿ ಆಲೋಚಿಸಲಿ : ಉಬೇದುಲ್ಲಾ ಷರೀಫ್

ರಿಪ್ಪನ್‌ಪೇಟೆ: ಸಮಾಜದ ಪ್ರತಿಯೊಬ್ಬರು ಆರೋಗ್ಯವಾಗಿದ್ದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ಪ್ರಸ್ತುತ ಅಪೌಷ್ಠಿಕತೆಯಿಂದ ಬಳಲುತ್ತಿರುವ ಜನರನ್ನು ಅನಾರೋಗ್ಯ ಮುಕ್ತರನ್ನಾಗಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಉದ್ದೇಶದಿಂದ ಸರಕಾರ ಪೋಷಣ್ ಅಭಿಯಾನವನ್ನು ಜಾರಿಗೆ ತಂದಿಗೆ ಎಂದು ಹೊಸನಗರ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಚಂದ್ರಕಲಾ  ಹೇಳಿದರು.        ಸಮೀಪದ ಮೂಗುಡ್ತಿ ಸಭಾಭವನದಲ್ಲಿ ಬುಧವಾರ ಗ್ರಾಮ ಪಂಚಾಯತಿ ಹೆದ್ದಾರಿಪುರ ಮತ್ತು ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶುಅಭಿವೃದ್ಧಿ ಯೋಜನೆಯ…

Read Full News

ಪಡಿತರದಾರರ ದಿಕ್ಕು ತಪ್ಪಿಸುತ್ತಿರುವ ಅನಾಮಧೇಯ ಕರಪತ್ರ : ನ್ಯಾಯಬೆಲೆ ಅಂಗಡಿ‌ ಮಾಲೀಕನ ಆಕ್ರೋಶ

ರಿಪ್ಪನ್‌ಪೇಟೆ; ಸಮೀಪದ ಹೆದ್ದಾರಿಪುರ ಗ್ರಾಮದಲ್ಲಿನ ನ್ಯಾಯಬೆಲೆ ಅಂಗಡಿ ಕಳೆದ 34 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ಈ ನ್ಯಾಯಬೆಲೆ ಅಂಗಡಿಯ ಕಾರ್ಡ್‌ದಾರರನ್ನು ಪಕ್ಕದ ನ್ಯಾಯಬೆಲೆ ಅಂಗಡಿಯವರು ತಮ್ಮ ಕಡೆ ಸೆಳೆಯುವ ಉದ್ದೇಶದಲ್ಲಿ ಅನಾಮಿಕವಾದ ಕರಪತ್ರವನ್ನು ಹಂಚಿ ಪಡಿತರ ಫಲಾನುಭವಿಗಳ ದಿಕ್ಕು ತಪ್ಪಿಸುವ ಕಾರ್ಯದಲ್ಲಿ ತೊಡಗಿದ್ದಾರೆಂದು ಹೆದ್ದಾರಿಪುರ ನ್ಯಾಯಬೆಲೆ ಅಂಗಡಿ ಮಾಲೀಕ ಹೆಜ್‌ ಕೆ ನಾಗರಾಜ್ ಆರೋಪಿಸಿದ್ದಾರೆ. ರಿಪ್ಪನ್‌ಪೇಟೆಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ ಇತ್ತೇಚೆಗೆ ವಡ ಹೊಸಳ್ಳಿ ಗ್ರಾಮದಲ್ಲಿ ಹೊಸದಾಗಿ ತರೆಯಲಾಗಿರುವ ನ್ಯಾಯಬೆಲೆ ಅಂಗಡಿಗೆ ಹೆದ್ದಾರಿಪುರ ನ್ಯಾಯಬೆಲೆ ಅಂಗಡಿಯಿಂದ ವರ್ಗಾವಣೆ ಮಾಡಿದ…

Read Full News

ದೂರು ನೀಡಲು ಬಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹೆಡ್ ಕಾನ್ ಸ್ಟೇಬಲ್ ಬಂಧನ :

…………………………ಪೋಸ್ಟ್ ಮ್ಯಾನ್ ನ್ಯೂಸ್ : ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಪಟ್ಟಣದಲ್ಲಿ ಹೆಡ್‌ ಕಾನ್‌ಸ್ಟೇಬಲ್‌ (head constable) ವಿರುದ್ಧ ಮಹಿಳೆಯೊಬ್ಬರು ಭದ್ರಾವತಿಯ ಟೌನ್‌ ಸರ್ಕಲ್‌ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದಾರೆ. ಹೊಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೆಡ್‌ ಕಾನ್‌ಸ್ಟೇಬಲ್‌ ರಾಘವೇಂದ್ರ ವಿರುದ್ಧ ಕೆ.ರೇಖಾ ಎಂಬುವವರು ಆರೋಪ ಮಾಡಿದ್ದಾರೆ. ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದ ಕೆ.ರೇಖಾ 2019ರ ಫೆಬ್ರವರಿಯಲ್ಲಿ ತನ್ನ ಪತಿ ಆಂಜನೇಯ ಮತ್ತು ಅವರ ತಮ್ಮ ರಮೇಶನ ನಡುವೆ ಆಸ್ತಿಯ ವಿಚಾರವಾಗಿ (matter of…

Read Full News

ನಾರಾಯಣ ಗುರು ವಿಚಾರ ವೇದಿಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಪುನೀತ್ ಬೆಳ್ಳೂರು ನೇಮಕ :

ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಶಿವಮೊಗ್ಗ ಜಿಲ್ಲಾ ಸಂಘಟನ ಕಾರ್ಯದರ್ಶಿಯಾಗಿ ಪತ್ರಕರ್ತ ಪುನೀತ್ ಬೆಳ್ಳೂರು ಅವರನ್ನ ಆಯ್ಕೆ ಮಾಡಿ   ರಾಜ್ಯ ಅಧ್ಯಕ್ಷರಾದ ಸತ್ಯಜಿತ್‌ ಸುರತ್ಕಲ್ ಅದೇಶ ಹೊರಡಿಸಿದ್ದಾರೆ. ನೂತನ ಹುದ್ದೆ ಅಲಂಕರಿಸಿದ ಪುನೀತ್ ಬೆಳ್ಳೂರು ಪೋಸ್ಟ್ ಮ್ಯಾನ್ ಸುದ್ದಿ ಬಳಗದೊಂದಿಗೆ ಮಾತನಾಡಿ ಸಂಘಟನೆಯು ನನಗೆ ಅತ್ಯಂತ ಜವಾಬ್ದಾರಿ ಹುದ್ದೆಯನ್ನ ನೀಡಿದೆ,ಹಾಗೂ ನನ್ನನ್ನು ಗುರುತಿಸಿದ ಶಿವಮೊಗ್ಗ ಜಿಲ್ಲಾ ಸಮಿತಿಗೆ ನಾನು ಧನ್ಯವಾದ ತಿಳಿಸುತ್ತೇನೆ,ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಈಗಾಗಲೇ ಹಲವು ಸಮಾಜ ಮುಖಿ ಕೆಲಸ ಮಾಡುತ್ತ…

Read Full News

ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಪತಿರಾಯ : ಆರೋಪಿ ಬಂಧನ

ಪತ್ನಿಯನ್ನು ಚಾಕುವಿನಿಂದ ಇರಿದು ಪತಿಯೇ ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ದುಮ್ಮಳ್ಳಿಯಲ್ಲಿ ಇಂದು ನಡೆದಿದೆ. ಕೊಲೆಗೆ ಕೌಟುಂಬಿಕ ಕಲಹ ಕಾರಣವೆಂದು ಶಂಕಿಸಲಾಗಿದೆ. ಕರುಣಾಕರ ಎಂಬ 33 ವರ್ಷದ ಎಂಬಿಎ ಪದವೀಧರ ಎರಡು ವರೆ ವರ್ಷದ ಹಿಂದೆ ಬುಳ್ಳಾಪುರದ ಯುವತಿ ಅಮಿತಾ(26) ಎಂಬಾಕೆಯೊಂದಿಗೆ ಮದುವೆಯಾಗಿದ್ದ. ಮದುವೆಯಾಗಿ ಎರಡೂವರೆ ವರ್ಷ ಕಳೆದಿದ್ದರು ಮಕ್ಕಳಾಗಿರಲಿಲ್ಲ. ಆದರೆ ಮಕ್ಕಳ ವಿಚಾರದಲ್ಲಿ ಗಲಾಟೆಯಾಗಿಲ್ಲವೆಂದು ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ. ಪದೇ ಪದೇ ಜಗಳವಾಡುತ್ತಿದ್ದ ಪತಿಪತ್ನಿ ಕಳೆದ ವರ್ಷ ಗಂಡನ ಮನೆ ತೊರೆದು ಪತ್ನಿ ಅಮಿತಾ ತವರು ಮನೆ…

Read Full News

ಹೊಸನಗರ ತಾಲೂಕಿನಲ್ಲಿ ಮಕ್ಕಳ ಅಪಹರಣಕ್ಕೆ ಪ್ರಯತ್ನ ಸುಳ್ಳು ಸುದ್ದಿ | ತಪ್ಪು ಸಂದೇಶ ರವಾನಿಸುವವರ ಮೇಲೆ ಕಠಿಣ ಕ್ರಮ : ಸಿಪಿಐ ಗಿರೀಶ್ ಖಡಕ್ ಎಚ್ಚರಿಕೆ

ಹೊಸನಗರ: ಹೊಸನಗರ ಗ್ರಾಮದಲ್ಲಿ ಮಕ್ಕಳ ಕಳ್ಳ ಸಿಕ್ಕಿಬಿದ್ದು ಓಡಿ ಹೋಗಿದ್ದಾನೆ ಈತ ಸಿಕ್ಕಿದರೆ ಪೊಲೀಸರಿಗೆ ತಿಳಿಸಿ ಎಂಬ ಮಾಹಿತಿ ಸಹಿತ ವ್ಯಕ್ತಿಯೊಬ್ಬನ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಹೊಸನಗರ ಸರ್ಕಲ್ ಇನ್ಸಪೆಕ್ಟರ್ ಗಿರೀಶ್ ಬಿ ಸಿ  ಸ್ಪಷ್ಟನೆ ನೀಡಿದ್ದು ಇಂತಹ ಯಾವುದೇ ಪ್ರಕರಣ ತಾಲೂಕಿನಲ್ಲಿ ನಡೆದಿಲ್ಲ ಎಂದು ತಿಳಿಸಿದ್ದಾರೆ. ಇಂತಹ ಮಾಹಿತಿಗಳ ಸತ್ಯಾಸತ್ಯತೆ ಅರಿಯಬೇಕು. ಮಾಹಿತಿ ಅರಿಯದೆ ಬೇರೆ ವ್ಯಕ್ತಿಗಳಿಗೆ, ಜಾಲತಾಣದ ಗ್ರೂಪ್ ಗಳಿಗೆ ಫಾರ್ ವರ್ಡ್ (FORWORD) ಮಾಡುವುದು…

Read Full News