w
Headlines
Home » ರಿಪ್ಪನ್‌ಪೇಟೆ : ಕಾಮಗಾರಿ ಹಂತದಲ್ಲಿ ಕಿತ್ತು ಹೋದ ಬರುವೆ ಬಡಾವಣೆಯಲ್ಲಿನ ಕಾಂಕ್ರೀಟ್ ಸಂಪರ್ಕ ರಸ್ತೆ | ಇದು 40% ಅಲ್ಲಾ..!!! 60% ಕಮಿಷನ್ ನ ಕಾಮಗಾರಿಯೇ…??????

ರಿಪ್ಪನ್‌ಪೇಟೆ : ಕಾಮಗಾರಿ ಹಂತದಲ್ಲಿ ಕಿತ್ತು ಹೋದ ಬರುವೆ ಬಡಾವಣೆಯಲ್ಲಿನ ಕಾಂಕ್ರೀಟ್ ಸಂಪರ್ಕ ರಸ್ತೆ | ಇದು 40% ಅಲ್ಲಾ..!!! 60% ಕಮಿಷನ್ ನ ಕಾಮಗಾರಿಯೇ…??????

ರಿಪ್ಪನ್‌ಪೇಟೆ : ವಿಧಾನ ಪರಿಷತ್ ಸದಸ್ಯರಾಗಿದ್ದ ಆರ್ ಪ್ರಸನ್ನ ಕುಮಾರ್
ಅವಧಿಯಲ್ಲಿ ರಿಪ್ಪನ್‌ಪೇಟೆ ಗ್ರಾಮ ಪಂಚಾಯತಿ ಹೊಸಬಡಾವಣೆಯಲ್ಲಿ ರಸ್ತೆ ಕಾಮಗಾರಿಗೆ ಸರ್ಕಾರದಿಂದ ಕರ್ನಾಟಕ ನೀರಾವರಿ ನಿಗಮದಿಂದ ಅನುದಾನ ಬಿಡುಗಡೆ ಮಾಡಲಾಗಿದ್ದು ಕಾಮಗಾರಿ ಹಂತದಲ್ಲಿ ಸಂಪೂರ್ಣ ಕಿತ್ತು ಹೋಗಿ ಸಾರ್ವಜನಿಕರಲ್ಲಿ ಹಾಸ್ಯದ ವಿಷಯವಾಗಿ ಸುದ್ದಿಗೆ ಗ್ರಾಸವಾಗಿದೆ.


ಶೇಕಡಾ 40% ಪರ್ಸೆಂಟ್‌ನ ರಾಜ್ಯ ಬಿಜೆಪಿ ಸರ್ಕಾರ ಎಂದು ಬೀಗುತ್ತಿರುವ ವಿರೋಧಪಕ್ಷದವರು ತಮ್ಮ ಪಕ್ಷದ ಅಗಿನ ಎಂ.ಎಲ್.ಸಿ, ಅನುದಾನದಡಿ ಬಿಡುಗಡೆ ಮಾಡಲಾದ ಹೊಸಬಡಾವಣೆಯ  ಕಾಂಕ್ರೇಟ್  ರಸ್ತೆ ಕಾಮಗಾರಿ ಅಪೂರ್ಣ ಮತ್ತು ಕಳಪೆ ಗುಣಮಟ್ಟದಿಂದಾಗಿ ಸಂಪೂರ್ಣ ಕಿತ್ತು ಹೋಗಿದೆ.ಹೊಸಬಡಾವಣೆಯಲ್ಲಿನ ನಿವಾಸಿಗಳಾದ ಗಂಗಾಧರ.ಸುರೇಂದ್ರ ಶೆಟ್ಟಿ ಇನ್ನಿತರರು ಕಾಮಗಾರಿ ಹಂತದಲ್ಲಿಯೇ ಕಿತ್ತು ಹೋಗಿರುವ ಕಾಂಕ್ರೇಟ್  ರಸ್ತೆ  ಮತ್ತು ಬಾಕ್ಸ್  ಚರಂಡಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಮತ್ತು ಕ್ಯೂರಿಂಗ್ ಸಹ ಮಾಡಿರುವುದಿಲ್ಲ ಎಂದು ತಮ್ಮ ಆಕ್ರೊಶವನ್ನು ವ್ಯಕ್ತಪಡಿಸಿದ್ದಾರೆ.


ಈ ಬಗ್ಗೆ ಗ್ರಾಮ ಪಂಚಾಯ್ತಿ ಪಿಡಿಓ ಮತ್ತು ಗ್ರಾಮಾಧ್ಯಕ್ಷರ ಗಮನಕ್ಕೆ ತರಲಾಗಿದ್ದು ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಈ ಹಿಂದಿನ ಎಂ.ಎಲ್.ಸಿ.ಆರ್.ಪ್ರಸನ್ನ ಕುಮಾರ್ ಅನುದಾನದಡಿ ಕಾಮಗಾರಿ ನಿರ್ವಹಿಸಿರುವುದು ಎಂದು ಹೇಳಿ ಸಾಗಹಾಕುತ್ತಿದ್ದಾರೆ.ಕಾಮಗಾರಿ ಮಾಡಿ ತಿಂಗಳಲ್ಲಿ ಕಿತ್ತು ಹೋಗಿರುವುದು ಸಾರ್ವಜನಿಕರ ಮತ್ತು ಬಡಾವಣೆಯ ನಿವಾಸಿಗಳಲ್ಲಿನ ಅಕ್ರೋಶಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.