ರಿಪ್ಪನ್ ಪೇಟೆ;-ಪುರಾಣ ಪ್ರಸಿದ್ದ ಹೆಬ್ಬಂಡೆಯಲ್ಲಿ ನೆಲೆಸಿರುವ ಜಗನ್ಮಾತೆ ಜೇನುಕಲ್ಲಮ್ಮ ದೇವಿಯ ಜಾತ್ರಾಮಹೋತ್ಸವವು ವಿಜೃಂಭಣೆಯೊಂದಿಗೆ ಸಂಪನ್ನ ಗೊಂಡಿತು.
ಭಾದ್ರಪದ ಮಾಸದ ಹುಣ್ಣಿಮೆಯಿಂದ ಮಹಾಲಯ ಅಮಾವಾಸ್ಯೆಯವರೆಗೆ ಎರಡು ಮಂಗಳವಾರ ಶುಕ್ರವಾರದ ಪಿತೃ ಪಕ್ಷದಲ್ಲಿ ಅಮ್ಮನಘಟ್ಟದ ಜೇನುಕಲ್ಲಮ್ಮ ದೇವಿಯ ಜಾತ್ರಾಮಹೋತ್ಸವವು ಶ್ರದ್ದಾಭಕ್ತಿಯಿಂದ ಅದ್ದೂರಿಯಾಗಿ ನೆರವೇರಿತು.
ದೇವಸ್ಥಾನದ ಪ್ರಧಾನ ಅರ್ಚಕ ಭಾಸ್ಕರ್ ಜೋಯ್ಸ್ ನೇತೃತ್ವದಲ್ಲಿ ಹಳೆಯ ಅಮ್ಮನಘಟ್ಟದಲ್ಲಿ ತಾಯಿ ಮಹಾಮಾತೆ ಜೇನುಕಲ್ಲಮ್ಮ ತಾಯಿಗೆ ಕಂಕಣ ಧಾರಣೆ ಮಾಡಿ ಎರಡು ಮಂಗಳವಾರ ಮತ್ತು ಎರಡು ಶುಕ್ರವಾರದೊಂದು ದೇವಿಗೆ ವಿಶೆಷ ಅಲಂಕಾರಿಕಾ ಪೂಜೆಯೊಂದಿಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರೆವರಿಸುತ್ತಾ ಸಂಕಷ್ಟ ಪರಿಹರಿಸು ತಾಯಿ ಎಂದು ಹರಿಕೆ ಹೊತ್ತು ಬರುವ ಭಕ್ತರು ಸಮೂಹಕ್ಕೆ ಸಂಕಷ್ಟ ಪರಿಹರಿಸುವ ತಾಯಿಯ ದರ್ಶನಕ್ಕೆ ತಂಡೋಪ ತಂಡದಲ್ಲಿ ಭಕ್ತರು ಹರಿದು ಬಂದಿರುವುದು ಈ ಭಾರಿಯ ವಿಶೇಷವಾಗಿದೆ ಎಂದು ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಬಿ.ಸ್ವಾಮಿರಾವ್ ವಿವರಿಸಿದರು.
ದೇವಸ್ಥಾನ ಸೇವಾ ಸಮಿತಿ ಪ್ರಧಾನಕಾರ್ಯದರ್ಶಿ ಸುದೀರ್ ಭಟ್,ಹರೀಶ್‌ಕಲ್ಯಾಣಪ್ಪಗೌಡ,ಇನ್ನಿತರ ಪದಾಧಿಕಾರಿಗಳು ದೇವಸ್ಥಾನ ಸೇವಾ ಸಿಬ್ಬಂದಿವರ್ಗ ಹಾಜರಿದ್ದರು.