ರಿಪ್ಪನ್‌ಪೇಟೆ: ರಾಜ್ಯ ಹಾಗೂ ರಾಷ್ಟ್ರದಲ್ಲಿ ಜನತೆ ಮೂರು ಪಕ್ಷಗಳಿಂದ ಭ್ರಮ ನಿರಸನಗೊಂಡಿದ್ದಾರೆ ಧೈರ್ಯ ಮತ್ತು ಎದೆಗಾರಿಕೆಯಿಂದ ಭ್ರಷ್ಟಾಚಾರದ ವಿರುದ್ಧ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮುನ್ನುಗ್ಗಿ ವಿಚಾರದಿಂದ ಪ್ರಚಾರದಿಂದ ಪಕ್ಷ ಬೆಳೆಯುವುದಿಲ್ಲ. ವಿಚಾರಗಳು ಅನುಷ್ಟಾನುಗೊಳ್ಳಬೇಕು. ಇದಕ್ಕೆ ಆಮ್ ಆದ್ಮಿ ಪಕ್ಷವೇ ಪರಿಹಾರವಾಗಿದೆ. ಆಮ್ ಆದ್ಮಿ ಪಕ್ಷ ಬರಬೇಕೆಂದು ಕಾಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನಪರ ಯೋಜನೆಗಳೊಂದಿಗೆ, ಚುನಾವಣೆ ಎದುರಿಸಿ ಅಧಿಕಾರಕ್ಕೆ ಬರೋಣ. ಜನಸಾಮಾನ್ಯರ ಸಮಸ್ಯೆಯನ್ನು ಅಮೂಲಾಗ್ರವಾಗಿ ಪರಿಹರಿಸೋಣ ಎಂದು ರಾಜ್ಯ ಎಎಪಿ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ರಿಪ್ಪನ್ ಪೇಟೆ ಪಟ್ಟಣದ ಸಾಗರ ರಸ್ತೆಯ ಗೌರಿಶಂಕರ ಕಾಂಪ್ಲೆಕ್ಸ್ ನಲ್ಲಿ ಆಮ್‌ಆದ್ಮಿ ಪಕ್ಷದ ಕಛೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ದೇಶದ ಹಾಗೂ ರಾಜ್ಯದ ಹಿತ ದೃಷ್ಟಿಯಿಂದ ಜನ ಹಿತ ಸರಕಾರದ ಅವಶ್ಯಕತೆ ಇದೆ. ಈ ಬಗ್ಗೆ ರಾಷ್ಟ್ರದ ಹಾಗೂ ರಾಜ್ಯದ ನಾಗರಿಕರು ಗಮನ ಹರಿಸಬೇಕು.ಸ್ವಾತಂತ್ರ್ಯ ನಂತರ ನಮ್ಮ ರಾಷ್ಟ, ರಾಜ್ಯದ ರಾಜಕಾರಣಿಗಳು ನಡೆದುಕೊಂಡಿರುವ ರೀತಿ ಜನರಲ್ಲಿ ಅಸಹ್ಯವುಂಟುಮಾಡಿದೆ. ಇದು ಪರಿವರ್ತನೆಯಾಗಬೇಕು ಎಂದರು
ಆಮ್ ಆದ್ಮಿ ಪಕ್ಷದ ರಾಜ್ಯ ಅಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ ರಾಜ್ಯದಲ್ಲಿ ಮೂರು ಪಕ್ಷಗಳು ರಾಜ್ಯವನ್ನು ಲೂಟಿಮಾಡುತ್ತಿದ್ದಾರೆ. ಇನ್ನುಮುಂದೆ ನಾವು ಅವಕಾಶಕೊಡುವುದಿಲ್ಲ. ಕೇಜ್ರಿವಾಲ್‌ರವರು ನಮ್ಮ ಕೈಗೆ ಪೊರಕೆಕೊಟ್ಟಿದ್ದಾರೆ ಎಲ್ಲಾ ಕಸವನ್ನು ಗುಡಿಸಿ ಹಾಕುತ್ತೇವೆ ಎಂದರು.
ಕರ್ನಾಟಕ ಭೌಗೋಳಿಕವಾಗಿ ವಿಭಿನ್ನ ನೆಲೆಗಟ್ಟನ್ನು ಹೊಂದಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ವಿಭಿನ್ನ ಸಮಸ್ಯೆಗಳು, ಸವಾಲುಗಳಿವೆ. ಹಾಗಾಗಿ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಣಾಳಿಕೆ ಸಿದ್ಧಪಡಿಸಲಾಗುವುದು. ಅದು ಬರೀ ಪ್ರಣಾಳಿಕೆಯಲ್ಲ. ಗ್ಯಾರಂಟಿ ಕಾರ್ಡ್ ಇದ್ದಂತೆ. ಅದರಲ್ಲಿ ರಾಷ್ಟ್ರೀಯ ಅಧ್ಯಕ್ಷ ಅರವಿಂದ ಕೇಜ್ರಿವಾಲ್ ಅವರ ಸಹಿ ಇರಲಿದ್ದು ಭರವಸೆ ಈಡೇರಿಸದೇ ಇದ್ದರೆ ಜನಸಾಮಾನ್ಯರು ಕಾನೂನು ಹೋರಾಟ ಮಾಡಬಹುದು. ನಾವು ಎಸಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದಿಲ್ಲ. ಕೊಟ್ಟ ಭರವಸೆ ಈಡೇರಿಸುವುದು ನಮ್ಮ ಜವಾಬ್ದಾರಿ ಆಗಿರಲಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ದರ್ಶನ್ ಜೈನ್,ಆಶ್ರಿತಾ ಸಂತೋಷ,ಹಸನಬ್ಬ
ಈಶ್ವರಪ್ಪ ಕುಕ್ಕಳಲೆ,ಕಿರಣ್. ಕೆ. ರವಿ ಇನ್ನಿತರರಿದ್ದರು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇