Headlines

ಹುಂಚಾ ಕೃಷಿ ಪತ್ತಿನ ಸಹಕಾರ ಸಂಘ 7 ಲಕ್ಷ ರೂ ನಿವ್ವಳ ಲಾಭ | ಗೊಂದಲಗಳ ನಡುವೆ ಸುಖಾಂತ್ಯಗೊಂಡ ವಾರ್ಷಿಕ ಸರ್ವ ಸದಸ್ಯರ ಸಭೆ

ರಿಪ್ಪನ್‌ಪೇಟೆ;- ಹುಂಚಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2021-22 ನೇ ಸಾಲಿನಲ್ಲಿ 4.22 ಕೋಟಿ ರೂ ವ್ಯವಹಾರ ನಡೆಸುವುದರೊಂದಿಗೆ 7.72.109 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದು ಕೃಷಿ ಸಹಕಾರ ಬ್ಯಾಂಕ್ ಅಧ್ಯಕ್ಷ ಹೆಚ್.ಎಸ್.ಯದುಕುಮಾರ್ ಹೊಂಡಲಗದ್ದೆ  ತಿಳಿಸಿ ಮುಂದಿನ ದಿನಗಳಲ್ಲಿ ಸಂಘವನ್ನು ಉತ್ತುಂಗಕ್ಕೆ ತರುವ ಬಗ್ಗೆ ಹಲವು ಅಶೋತ್ತರಗಳನ್ನು ಇಟ್ಟುಕೊಂಡಿದ್ದು ಸಂಘದ ಸದಸ್ಯರು ಪ್ರೋತ್ಸಾಹಿಸಿದಲ್ಲಿ ಸಂಘವನ್ನು ಲಾಭದತ್ತ ತರುವ ಗುರಿ ನಮ್ಮದಾಗಿದೆ ಎಂದರು.

ರಿಪ್ಪನ್‌ಪೇಟೆ  ಸಮೀಪದ ಹುಂಚಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಅವರಣದಲ್ಲಿ ಇಂದು ನಡೆದ ವಾರ್ಷೀಕ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ರೈತ ಸದಸ್ಯರು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿದರೆ ಸಂಘದ ಏಳಿಗ್ಗೆ ಸಾಧ್ಯವಾಗುವುದು ಸುಸ್ಥಿದಾರರಾದರೆ ಸಂಘದ ಪ್ರಗತಿ ಅಸಾಧ್ಯವೆಂದು ಹೇಳಿ 2019-20 ನೇ ಸಾಲಿನಿಂದಲೂ ಸಂಘದಲ್ಲಿ 78 ಜನ ಪಡೆದ ಸಾಲ ಸುಮಾರು 54 ಲಕ್ಷ ರೂ ಬಾಕಿ ಬರಬೇಕಾಗಿದೆ  ಅವರಿಗೆ ಈಗಾಗಲೇ ಎರಡು ಮೂರು ನೋಟಿಸ್ (ತಿಳುವಳಿಕೆ ಪತ್ರ)ವನ್ನು ಕೊಡಲಾಗಿದೆ ಅದರೂ ಸಾಲ ಮರುಪಾವತಿಸಲು ಮೀನಾ ಮೇಷ ಎಣಿಸುತ್ತಿದ್ದಾರೆಂದು ಸಭೆಯಲ್ಲಿ ವಿವರಿಸಿಸದಾಗ ಸಭೆಯಲ್ಲಿ ಸತೀಶ್, ಮತ್ತು ಕಿರಣ್ ,ನಟೇಶ್.ಮಂಜಪ್ಪ ಇನ್ನಿತರರು  ಸಾಲಗಾರರ ಹೆಸರು ಬಹಿರಂಗ ಪಡಿಸಿ ಎಂದು ಪಟ್ಟು ಹಿಡಿದರು.ಆಗ ಅಧ್ಯಕ್ಷರು  ಮತ್ತು ಅಡಳಿತ ಮಂಡಳಿಯವರು ಅದನ್ನು ಬಹಿರಂಗ ಪಡಿಸಲು ಅಗುವುದಿಲ್ಲ ಎಂದು ಹೇಳಿ ಸುಸ್ಥಿದಾರರಿಗೆ ಸಭೆಯಲ್ಲಿ ಮಾತಾಡಲು ಅವಕಾಶವಿಲ್ಲ ಎಂದು ಹೇಳಿದಾಗ ಕೆಲಸಮಯ ಗೊಂದಲ ಏರ್ಪಟ್ಟು ಕೊನೆಗೆ ಸಭೆಯಲ್ಲಿ 78 ಜನ ಸಾಲಗಾರರ ಹೆಸರನ್ನು ರಾಜಶೇಖರ್ ಹಿರೇಬೈಲು ಓದಿದರು.

ಇದೇ ಸಂದರ್ಭದಲ್ಲಿ ಸತೀಶ್ ಮತ್ತು ಕಿರಣ್ ಹಾಗೂ ನಟೇಶ್ ಇನ್ನಿತರ ಕೆಲ ಷೇರುದಾರರು 2019-20 ರಲ್ಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿನ ಲೋಪ ದೋಷ ಕುರಿತು ಮತ್ತು 2020-21 ಸಾಲಿನ ಹಾಗೂ 21-22 ರ ಅಡಿಟ್ ವರದಿಯ ಮೇಲೆ ಚರ್ಚಿಸಬೇಕಾಗಿದ್ದು ಅದರ ವರದಿ ಬಂದಿಲ್ಲ ಏಕೆ ಎಂದು ಪ್ರಶ್ನಿಸಿದಾಗ ಸಿಇಓ ಇಂದು ಕುಮಾರ್ ಉತ್ತರಿಸಿ ಸಂಘದ ಹಿಂದಿನ ಕಾರ್ಯದರ್ಶಿಯವರ ಅವಧಿಯಲ್ಲಿ ಅದ ಕೆಲವು ತಾಂತ್ರಿಕ ಕಾರಣದಿಂದಾಗಿ ಸಹಾಯಕ ನಿಬಂಧಕರ ಕಛೇರಿಯಲ್ಲಿ ಕೇಸ್ ದಾಖಲಾಗಿದ್ದು ವಿಚಾರಣೆಯ ಹಂತದಲ್ಲಿರುವ ಕಾರಣ ವಿಳಂಬವಾಗಿದೆ.ಅಲ್ಲದೆ ಕೃಷಿ ಮತ್ತು  ವ್ಯವಹಾರಕ್ಕಾಗಿ ಸಾಲ ಪಡೆದವರು ನಿತ್ಯ ನಿಧಿ ಠೇವಣಿ ಮೇಲೆ ಪಡೆದ ಸಾಲ ಮರುಪಾವತಿಸುವಲ್ಲಿ ವಿಳಂಬ ಮಾಡುವುದರಿಂದಾಗಿ ಸಾಲ ವಿತರಣೆಯಲ್ಲಿ ಸಕಾಲದಲ್ಲಿ ಸಾಲ ಕೊಡಲು ತೊಡಕಾಗಿದೆ ಎಂದರು.


ಇತ್ತೀಚೆಗೆ ಪೋಸ್ಟ್ ಮ್ಯಾನ್ ನ್ಯೂಸ್  ಡಿಸಿಸಿ ಬ್ಯಾಂಕ್ ಬಡ್ಡಿ ವಿಧಿಸಿರುವ ಬಗ್ಗೆ ವಿಸ್ತೃತ ವರದಿ ಮಾಡಿತ್ತು ಈ ವರದಿಯ ಬಗ್ಗೆ ಸದಸ್ಯರು ಸಭೆಯಲ್ಲಿ ಪ್ರಶ್ನಿಸಿದಾಗ ಸಿಇಒ ಇಂದುಕುಮಾರ್ ಮಾತನಾಡಿ ಸಂಘದಿಂದಲೇ ಈಗಾಗಲೇ ಜಿಲ್ಲಾ ಸಹಕಾರ ಬ್ಯಾಂಕ್‌ಗೆ 1.85 ಲಕ್ಷ ರೂ ಬಡ್ಡಿ ಹಣವನ್ನು ಕಟ್ಟಲಾಗಿದೆ ಆದರೆ ಅದು ಅಧ್ಯಕ್ಷರ ರಾಜೀನಾಮೆಯಿಂದ ಸೃಷ್ಟಿಯಾದ ಬಡ್ಡಿಯಲ್ಲ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ಹೆಚ್.ಆರ್.ರಾಘವೇಂದ್ರ,ನಿರ್ದೇಶಕರಾದ ಈ.ಅರ್.ಮಂಜುಭಟ್,ಗೇರುಗಲ್ಲು ಸತೀಶ್,ಹೆಚ್.ಜಿ.ರಾಜಶೇಖರ್,ಕೃಷ್ಣಪ್ಪ ಸಮಟಗಾರು,ವಿನಾಕ,ನಾಗೇಶ್‌ಕುಬಟಹಳ್ಳಿ,ಯಶಸ್ವತಿವೃಷಭರಾಜ್ ಜೈನ್,ಮಲ್ಲಿಕಾ ಜೀವಂಧರ್,ಪ್ರೇಮ,ಚAದ್ರಮ್ಮ ನಿವೃತ್ತ ಟ್ರಜೇರಿಯರ್ ರೇಣುಕಪ್ಪ,ಮಾಜಿ ಅಧ್ಯಕ್ಷ ಪ್ರೇಮ ಕುಮಾರ್ ಆರ್.ಈ.ಮಂಜುನಾಥ ಇನ್ನಿತರರು ಪಾಲ್ಗೊಂಡಿದ್ದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Leave a Reply

Your email address will not be published. Required fields are marked *