Headlines

ಗೃಹ ಸಚಿವರ ಸ್ವಕ್ಷೇತ್ರದಲ್ಲಿಯೇ ವ್ಯಕ್ತಿಯೊಬ್ಬನ ಭೀಕರ ಹತ್ಯೆ!!!!!!!!

ತೀರ್ಥಹಳ್ಳಿ : ತಾಲೂಕಿನ ಶೇಡ್ಗಾರ್  ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೃಗಾವಧೆಯ ಬೆಳ್ಳಿಕೊಡಿಗೆ ವಾಸಿ ರಾಜು (45) ಬೆಳ್ಳಂಬೆಳಗ್ಗೆ ಮನೆ ಮುಂಭಾಗದಲ್ಲಿ ಹೆಣವಾಗಿದ್ದಾರೆ. ಸಾಯುವ ಮುನ್ನ ರಾಜು ಮಾರಾಮಾರಿ ವಿಚಾರ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಂಡಿದ್ದು, ಪೊಲೀಸರ ತನಿಖೆಯಿಂದ ಹೆಚ್ಚಿನ ಮಾಹಿತಿ ಬಹಿರಂಗವಾಗಬೇಕಾಗಿದೆ.

ರಾಜು ಮೂರು ದಿನಗಳಿಂದ ಮನೆಗೆ ಬಂದಿರಲ್ಲಿಲ್ಲ. ಸೋಮವಾರ ಬೆಳಿಗ್ಗೆ 6.30ರ ಸುಮಾರಿಗೆ ಮೂವರು ದುಷ್ಕರ್ಮಿಗಳು ಯದ್ವತದ್ವ ಹಲ್ಲೆ ಮಾಡಿ ಬೈಕಿನಲ್ಲಿ ಮನೆ ಮುಂಭಾಗ ತಂದು ಎಸೆದಿದ್ದಾರೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಗಂಭೀರವಾಗಿ ಗಾಯಗೊಂಡ ರಾಜು ಜೋರಾಗಿ ಚೀರಾಟ ನಡೆಸಿದ್ದರಿಂದ ಸ್ಥಳೀಯರು ಮತ್ತು ಕುಟುಂಬ ಸದಸ್ಯರಿಗೆ ಮಾಹಿತಿ ತಿಳಿದಿದೆ.

ತಕ್ಷಣ ಸ್ಥಳಕ್ಕೆ ಆಗಮಿಸಿ ರಾಜು ಅವರನ್ನು ಆಸ್ಪತ್ರಗೆ ದಾಖಲಿಸುವ ಪ್ರಯತ್ನ ನಡೆಸಿದ್ದಾರೆ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಬೆಳ್ಳಿಕೊಡುಗೆ ರಾಜು ಅವರಿಗೆ ನೀರು ಕುಡಿಸುವ ಪ್ರಯತ್ನ ನಡೆಸಿದ ಕುಟುಂಬ ಸದಸ್ಯರ ಮುಂದೆ ಶಿಶಿರ, ಶಿವು ಮತ್ತು ವಿಜಯೇಂದ್ರ ಎಂಬುವವರಿಂದ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಲ್ಲದೇ ಹಲ್ಲೆ ನಡೆಸಿದವರು ಬಾರೀ ಪ್ರಭಾವ ಬೀರುತ್ತಿದ್ದ ಪ್ರಕರಣ ಮುಚ್ಚು ಹಾಕುವ ಪ್ರಯತ್ನ ನಡೆದಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಗೃಹಸಚಿವರು ಮತ್ತು ಅವರ ಬೆಂಬಲಿಗರ ಸಹಾಯವನ್ನು ಹಲ್ಲೆ ನಡೆಸಿದವರು ಕೇಳಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ.

ಬಡತನದಲ್ಲಿ ಜೀವನ ನಡೆಸಿದ್ದ ಮೃತ ಕುಟುಂಬದಲ್ಲಿ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಇಲ್ಲಸಲ್ಲದ ಭರವಸೆಗಳನ್ನು ನೀಡುವ ಪ್ರಯತ್ನ ನಡೆದಿದ್ದು, ಪ್ರಕರಣದ ದಿಕ್ಕು ತಪ್ಪಿಸುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *