ಹೊಸನಗರ ತಾಲೂಕ್ ವೀರಶೈವ ಲಿಂಗಾಯಿತ ಪರಿಷತ್ ನ ಮಾಸಿಕ ಸಭೆ ಆಲಗೇರಿ ಮಂಡ್ರಿಯ ದಯಾಕರ ಎಂಬುವವರ ಮನೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೊಸನಗರ ತಾಲೂಕ್ ವೀರಶೈವ ಲಿಂಗಾಯತ ಪರಿಷತ್ ನಡೆಸುತ್ತಿರುವ ಸಮಾಜಮುಖಿ ಕಾರ್ಯವನ್ನು ಪ್ರಶಂಸಿದರು.
ನಂತರ ಇತ್ತೀಚೆಗೆ ಕೃಷಿ ಕಾರ್ಯದಲ್ಲಿ ತೊಡಗಿದ್ದಾಗ ಅಕಸ್ಮಿಕವಾಗಿ ಅವಘಡ ಸಂಭವಿಸಿ ಓಡಾಡದಂತಹ ಸ್ಥಿತಿಯಲ್ಲಿರುವ ರೈತ ಉಮೇಶ್ ಎಂಬುವರಿಗೆ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿ ಸರ್ಕಾರದಿಂದಲೂ ಹೆಚ್ಚಿನ ನೆರವು ಕೊಡಿಸುವ ಭರವಸೆ ನೀಡಿದರು.
ಈ ಸಭೆಯ ಅಧ್ಯಕ್ಷತೆಯನ್ನು ತಾಲೂಕು ವೀರಶೈವ ಲಿಂಗಾಯತ ಪರಿಷತ್ ಅಧ್ಯಕ್ಷ ಮೆಣಸೆ ಆನಂದ ವಹಿಸಿದ್ದರು.
ಹೊಸನಗರ ತಾಲೂಕ್ ವೀರಶೈವ ಲಿಂಗಾಯತ್ ಪರಿಷತ್ ವತಿಯಿಂದ ರೈತ ಉಮೇಶ್ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಯಿತು
ತಾ.ಪಂ.ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಜಿಲ್ಲಾ ಯುನಿಯನ್ ಬ್ಯಾಂಕ್ ಅಧ್ಯಕ್ಷ ವಾಟಗೋಡು ಸುರೇಶ್, ಹೊಸನಗರ ತಾಲ್ಲೂಕ್ ಜೆಡಿಎಸ್ ಅಧ್ಯಕ್ಷ ಎನ್.ವರ್ತೇಶ್, ಬಿಜೆಪಿ ತಾಲ್ಲೂಕ್ ಪ್ರಧಾನಕಾರ್ಯದರ್ಶಿ ನಾಗಾರ್ಜುನಸ್ವಾಮಿ,ಯೋಗೇಂದ್ರಪ್ಪ ಗೌಡ,ಮಲ್ಲಿಕಾರ್ಜುನ , ಕುಕ್ಕಳಲೇ ಈಶ್ವರಪ್ಪಗೌಡ ಇನ್ನಿತರರು ಹಾಜರಿದ್ದರು.