Headlines

ಪಡಿತರದಾರರ ದಿಕ್ಕು ತಪ್ಪಿಸುತ್ತಿರುವ ಅನಾಮಧೇಯ ಕರಪತ್ರ : ನ್ಯಾಯಬೆಲೆ ಅಂಗಡಿ‌ ಮಾಲೀಕನ ಆಕ್ರೋಶ

ರಿಪ್ಪನ್‌ಪೇಟೆ; ಸಮೀಪದ ಹೆದ್ದಾರಿಪುರ ಗ್ರಾಮದಲ್ಲಿನ ನ್ಯಾಯಬೆಲೆ ಅಂಗಡಿ ಕಳೆದ 34 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ಈ ನ್ಯಾಯಬೆಲೆ ಅಂಗಡಿಯ ಕಾರ್ಡ್‌ದಾರರನ್ನು ಪಕ್ಕದ ನ್ಯಾಯಬೆಲೆ ಅಂಗಡಿಯವರು ತಮ್ಮ ಕಡೆ ಸೆಳೆಯುವ ಉದ್ದೇಶದಲ್ಲಿ ಅನಾಮಿಕವಾದ ಕರಪತ್ರವನ್ನು ಹಂಚಿ ಪಡಿತರ ಫಲಾನುಭವಿಗಳ ದಿಕ್ಕು ತಪ್ಪಿಸುವ ಕಾರ್ಯದಲ್ಲಿ ತೊಡಗಿದ್ದಾರೆಂದು ಹೆದ್ದಾರಿಪುರ ನ್ಯಾಯಬೆಲೆ ಅಂಗಡಿ ಮಾಲೀಕ ಹೆಜ್‌ ಕೆ ನಾಗರಾಜ್ ಆರೋಪಿಸಿದ್ದಾರೆ.


ರಿಪ್ಪನ್‌ಪೇಟೆಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ ಇತ್ತೇಚೆಗೆ ವಡ ಹೊಸಳ್ಳಿ ಗ್ರಾಮದಲ್ಲಿ ಹೊಸದಾಗಿ ತರೆಯಲಾಗಿರುವ ನ್ಯಾಯಬೆಲೆ ಅಂಗಡಿಗೆ ಹೆದ್ದಾರಿಪುರ ನ್ಯಾಯಬೆಲೆ ಅಂಗಡಿಯಿಂದ ವರ್ಗಾವಣೆ ಮಾಡಿದ 187 ಪಡಿತರ ಚೀಟಿಗಳನ್ನು ಅಂಗಡಿ ಸಂಖ್ಯೆ-21 ಹೆಚ್.ಕೆ.ನಾಗರಾಜ್‌ ಬಿನ್ ಕೃಷ್ಣಪ್ಪ ಶೆಟ್ಟಿ ಮಾಲೀಕತ್ವದ ಹೆದ್ದಾರಿಪುರ ನ್ಯಾಯಬೆಲೆ ಅಂಗಡಿಗೆ ವಾಪಸ್ಸು ವರ್ಗಾಯಿಸಿ ಈ ಹಿಂದಿನಂತೆ ಪಡಿತರ ಹಂಚಿಕೆ ಮಾಡುವಂತೆ ರಾಜ್ಯ ಉಚ್ಚ ನ್ಯಾಯಾಲಯ ಅದೇಶಿಸಿದೆ.



 ನ್ಯಾಯಾಲಯದ ಆದೇಶದಂತೆ ಶಿವಮೊಗ್ಗ ಜಿಲ್ಲಾ ಅಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ಹೆಚ್.ಕೆ.ನಾಗರಾಜ್‌ ಇವರಿಗೆ ಪಡಿತರ ವಿತರಣೆಗೆ ಅವಕಾಶ ಕಲ್ಪಿಸಲಾಗಿದ್ದರೂ ಕೂಡಾ ವಡಾಹೊಸಳ್ಳಿ ನ್ಯಾಯಬೆಲೆ ಅಂಗಡಿಯವರು ಅನಾಮಿಕ ಕರಪತ್ರವನ್ನು ಪ್ರಕಟಿಸಿ ಗ್ರಾಹಕರಿಗೆ ಹಂಚಿ ದಿಕ್ಕು ತಪ್ಪಿಸುವ ಹುನ್ನಾರ ನಡೆಸುತ್ತಿದ್ದಾರೆಂದು ನಾಗರಾಜ್‌ ಹೇಳಿ ನಂತರ ನ್ಯಾಯಲಯದ ಆದೇಶ ಪ್ರತಿಗಳನ್ನು ಮಾದ್ಯಮದರಿಗೆ ನೀಡಿದರು.

Leave a Reply

Your email address will not be published. Required fields are marked *