Headlines
ರಫ಼ಿ ರಿಪ್ಪನ್ ಪೇಟೆ

ರಫ಼ಿ ರಿಪ್ಪನ್ ಪೇಟೆ

ನಮಸ್ಕಾರ, ನಾನು ರಫಿ ರಿಪ್ಪನ್‌ಪೇಟೆ. ​'ಪೋಸ್ಟ್‌ಮ್ಯಾನ್ ನ್ಯೂಸ್' ಮಾಧ್ಯಮದ ಹಿಂದಿರುವ ಓರ್ವ ಅಪ್ಪಟ ಸುದ್ದಿಪ್ರೇಮಿ ಹಾಗೂ ಪತ್ರಕರ್ತ. "ನಮ್ಮೂರ ಸುದ್ದಿಗಳು ಜಗತ್ತಿಗೆ ತಲುಪಬೇಕು" ಎಂಬ ಆರು ವರ್ಷಗಳ ಕನಸಿನ ಕೂಸೇ ಈ ನಮ್ಮ ಪೋಸ್ಟ್‌ಮ್ಯಾನ್ ನ್ಯೂಸ್. ​ಸ್ಥಳೀಯ ಪತ್ರಿಕೆಗಳಿಂದ ಹಿಡಿದು ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೂ ಮಾಧ್ಯಮದ ನಾನಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದು. ಆದರೆ, ಈ ಪಯಣದಲ್ಲಿ ನನಗೊಂದು ಕೊರತೆ ಸದಾ ಕಾಡುತ್ತಿತ್ತು; ಅದೇನೆಂದರೆ, 'ನಿಜವಾದ ಸ್ಥಳೀಯ ಧ್ವನಿಗೆ ಅಲ್ಲಿ ಸೂಕ್ತ ವೇದಿಕೆ ಇರಲಿಲ್ಲ'. ಆ ಶೂನ್ಯವನ್ನು ತುಂಬಲು ಹುಟ್ಟಿಕೊಂಡ ಪರ್ಯಾಯ ವೇದಿಕೆಯೇ “ಪೋಸ್ಟ್‌ಮ್ಯಾನ್ ನ್ಯೂಸ್.” ​ಇಲ್ಲಿ 'ಸುದ್ದಿ' ಎಂದರೆ ಕೇವಲ ಸುದ್ದಿ ಮಾತ್ರ. ಇದು ಯಾವ ವ್ಯಕ್ತಿ ಅಥವಾ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಅತ್ಯಂತ ಸ್ಪಷ್ಟ: "ಸುದ್ದಿಯನ್ನು ಪ್ರಾಮಾಣಿಕವಾಗಿ ಹೇಳಬೇಕು, ತೀರ್ಪು ಕೊಡುವ ಕೆಲಸ ನಮಗಲ್ಲ." ಕೆಲವೊಮ್ಮೆ ನಮ್ಮ ವರದಿಗಳಿಗೆ ಬರುವ ಪ್ರತಿಕ್ರಿಯೆಗಳು ಬೇರೆಯದೇ ಬಣ್ಣ ಪಡೆಯಬಹುದು, ಆದರೆ ಅದಕ್ಕೆ ನನ್ನ ಏಕೈಕ ಉತ್ತರ ಕೇವಲ ನನ್ನ ಕೆಲಸದ ಮೂಲಕ ಮಾತ್ರ. ​'ಪೋಸ್ಟ್‌ಮ್ಯಾನ್ ನ್ಯೂಸ್' ಇಂದು ಕೇವಲ ಒಂದು ಸುದ್ದಿ ಪುಟವಾಗಿ ಉಳಿದಿಲ್ಲ, ಅದೊಂದು ಜಾಗೃತಿಯ ಚಳವಳಿಯಾಗಿ ರೂಪುಗೊಳ್ಳುತ್ತಿದೆ. ಕೇವಲ ವರದಿ ಮಾಡುವುದಷ್ಟೇ ನಮ್ಮ ಉದ್ದೇಶವಲ್ಲ; ನಮ್ಮೂರಿನ ಘಟನೆಗಳು, ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು, ಜ್ವಲಂತ ಸಮಸ್ಯೆಗಳು ಮತ್ತು ಸಾಧನೆಗಳನ್ನು ಹೊರಲೋಕಕ್ಕೆ ಪರಿಚಯಿಸುವ 'ಸೇತುವೆ'ಯಾಗಬೇಕೆಂಬುದು ನಮ್ಮ ಹೆಬ್ಬಯಕೆ. ಹಣ ಪಡೆದು, ಕಾಸಿಗಾಗಿ ಸುದ್ದಿ ಮಾಡುವ ಅಭ್ಯಾಸವೂ ನಮಗಿಲ್ಲ, ಆ ಹವ್ಯಾಸವೂ ನಮಗಿಲ್ಲ. ಸತ್ಯ ಮತ್ತು ನೈಜತೆಯೇ ನಮ್ಮ ಬಂಡವಾಳ. ​ನಮ್ಮ ಅಂತಿಮ ಗುರಿ ಒಂದೇ — "ಸಣ್ಣ ಊರುಗಳ ಸತ್ಯ ಕಥೆಗಳು, ಅತಿ ದೊಡ್ಡ ಮಟ್ಟದಲ್ಲಿ ಜಗತ್ತಿನ ಕಿವಿಗೆ ತಲುಪಬೇಕು." ​ತಮ್ಮ ಪ್ರೀತಿ ಮತ್ತು ಬೆಂಬಲ ಸದಾ ಹೀಗೆಯೇ ಇರಲಿ. ​ಸ್ನೇಹಪೂರ್ವಕವಾಗಿ, ರಫಿ ರಿಪ್ಪನ್‌ಪೇಟೆ ಸಂಪಾದಕರು, ಪೋಸ್ಟ್‌ಮ್ಯಾನ್ ನ್ಯೂಸ್ 🌐 [www.postmannewskannada.com]

ಜೆಸಿಐ ಹೊಸನಗರ ಕೊಡಚಾದ್ರಿ ವಲಯ ವತಿಯಿಂದ “ನಮಸ್ತೆ” ಸಪ್ತಾಹದಡಿ ವಿಭಿನ್ನ ಸಾಮಾಜಿಕ ಕಾರ್ಯಕ್ರಮ :. ನ್ಯಾಷನಲ್ ಬ್ಯೂಟಿ ಪೆಜೆನ್ಟ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ದೆಹಲಿಯತ್ತ ಪಯಣಿಸಿರುವ ಸೀಮಾಕಿರಣ್

ಜೆಸಿಐ ಹೊಸನಗರ ಕೊಡಚಾದ್ರಿ ವಲಯದ ವತಿಯಿಂದ  “ನಮಸ್ತೆ”ಎಂಬ ಶೀರ್ಷಿಕೆಯಡಿ ಜೆಸಿಐ ಸಪ್ತಾಹದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸೆ. 9 ರಿಂದ 15 ರವರೆವಿಗೆ ಪ್ರತಿ ದಿನವೂ ವಿಭಿನ್ನ ಕಾರ್ಯಕ್ರಮ ಗಳನ್ನು ರೂಪಿಸಿಕೊಳ್ಳಲಾಗಿತ್ತು.ಸಪ್ತಾಹದ ಅಂಗವಾಗಿ ಅನಾಥಾಶ್ರಮದ ಬೇಟಿ, ಆಹಾರಧಾನ್ಯಗಳ ವಿತರಣೆ, ಆರೋಗ್ಯ ತಪಾಸಣೆ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರಣಗಿರಿ ಸರ್ಕಾರಿ ಶಾಲೆಯಲ್ಲಿ ಅಣುಕು ಪಾರ್ಲಿಮೆಂಟ್ ಮತ್ತು ಪ್ರಾಮಾಣಿಕ ಅಂಗಡಿ, ಬೇರೆ ಬೇರೆ ಶಾಲೆಗಳಲ್ಲಿ ವಿವಿಧ ವಿಚಾರಗಳ  ಪ್ರಬಂಧ ಸ್ಪರ್ಧೆ ಗಳು,ಭಾವಗೀತೆ, ಜನಪದಗೀತೆ, ನೃತ್ಯ, ರಂಗೋಲಿ,ಹೊಸ ರುಚಿ, ಒಂದು ನಿಮಿಷದಲ್ಲಿ…

Read Full News

ಮಲೆನಾಡಿನಲ್ಲಿ ಉಗ್ರರ ಕರಿನೆರಳು!!!! : ಶಿವಮೊಗ್ಗದಲ್ಲಿ ಎಂಜಿನಿಯರ್ ಯಾಸಿನ್ ಸಹಿತ ಇಬ್ಬರು ಶಂಕಿತ ಉಗ್ರರ ಬಂಧನ – ಇನ್ನಿಬ್ಬರಿಗೆ ಶೋಧ

ಮಲೆನಾಡಿಗೂ ಉಗ್ರರ ನಂಟು ತಗುಲಿವ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಪೂರಕ ಎಂಬಂತೆ ಶಿವಮೊಗ್ಗ ಜಿಲ್ಲೆಯ ಇಬ್ಬರು ಮತ್ತು ಮಂಗಳೂರು ಮೂಲದ ಓರ್ವನ ವಿರುದ್ಧ ಶಿವಮೊಗ್ಗ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ನಿಷೇಧಿತ ಭಯೋತ್ಪಾದಕ ಸಂಘಟನೆಯ ನಂಟನ್ನು ಹೊಂದಿರುವ ಕಾರಣ ಇವರನ್ನು ಯುಎಪಿಎ ಕಾಯ್ದೆಯಡಿ ಬಂಧಿಸಲಾಗಿದೆ. ಮೂವರು ಶಂಕಿತರಾದ ಶಿವಮೊಗ್ಗದ ಸಿದ್ದೇಶ್ವರ ನಗರದ ನಿವಾಸಿ ಸಯ್ಯದ್ ಯಾಸೀನ್(21) ಹಾಗೂ ಮಂಗಳೂರಿನ ಮಾಜ್ ಮುನೀರ್ ಅಹಮ್ಮದ್ (22) ಮತ್ತು ತೀರ್ಥಹಳ್ಳಿ ಸೂಪ್ಪುಗುಡ್ಡೆಯ ನಿವಾಸಿ ಶಾರೀಕ್ ಮೇಲೆ ಯುಎಪಿಎ (UNLAWFUL ACTIVITIES (PREVEVNTION…

Read Full News

ರಿಪ್ಪನ್‌ಪೇಟೆ : ಸಾಲಭಾದೆಗೆ ಬೇಸತ್ತು ಜಮೀನಿನಲ್ಲಿಯೇ ವಿಷ ಸೇವಿಸಿ ರೈತ ಆತ್ಮಹತ್ಯೆ

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಗೌಡಕೊಪ್ಪ ಗ್ರಾಮದ ರೈತನೊಬ್ಬ ಸಾಲಭಾದೆಗೆ ತತ್ತರಿಸಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹೊಸನಗರ ತಾಲೂಕಿನ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಗೌಡಕೊಪ್ಪ ಗ್ರಾಮದ ರೈತ ಮಂಜಪ್ಪ(55) ಎಂಬುವವರು ಸಾಲಭಾದೆಗೆ ಹೆದರಿ ತಮ್ಮ ಸ್ವಂತ ಜಮೀನಿನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಗೌಡಕೊಪ್ಪ ಗ್ರಾಮದ ರೈತ ಮಂಜಪ್ಪ ರವರಿಗೆ ಮನೆ ಹಿಂಬದಿಯಲ್ಲಿಯೇ ಒಂದೂವರೆ ಎಕರೆ ಜಮೀನು ಇದ್ದು ಅದರಲ್ಲಿಯೇ ಸಾಗುವಳಿ ಮಾಡಿಕೊಂಡು ಬರುತ್ತಿದ್ದು ಸದರಿ ಜಮೀನಿನ ಆಧಾರದ ಮೇಲೆ…

Read Full News

ಹೆಬ್ಬಂಡೆಯ ಆಲಯ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಭಕ್ತಸಾಗರ :

ರಿಪ್ಪನ್‌ಪೇಟೆ;-ಇತಿಹಾಸ ಪ್ರಸಿದ್ದ ಹೆಬ್ಬಂಡೆಯ ಅಲಯ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಭಕ್ತಜನಸಾಗರವೇ ಶ್ರದ್ದಾಭಕ್ತಿಯಿಂದಾ ಹರಿದು ಬಂದಿತು. ಅಮ್ಮನಘಟ್ಟ ಜಾತ್ರೆ ನಾಡಿನ ಪ್ರಮುಖ ಜಾತ್ರೆಗಳಲ್ಲಿ ಒಂದಾಗಿದ್ದು ಮಲೆನಾಡಿನ ಸಹ್ಯಾದ್ರಿಯ ಪರ್ವತ ತಪ್ಪಲಿನಲ್ಲಿ  ವಿಶಿಷ್ಟ ಪ್ರಾಕೃತ್ತಿಕ ಸೌಂದರ್ಯದಲ್ಲಿ ಕಂಗೊಳಿಸುವ ಧಾರ್ಮಿಕ ಶ್ರದ್ದಾಕೇಂದ್ರವಾದ ಜೇನುಕಲ್ಲಮ್ಮ ಹಲವು ಜನಾಂಗಗಳ ಕುಲದೇವತೆಯಾಗಿ ನೆಲೆ ನಿಂತಿರುವ ದೇವಿಗೆ ಪ್ರಧಾನ ಅರ್ಚಕ ಭಾಸ್ಕರ್ ಜೋಯ್ಸ್ ನೇತೃತ್ವದಲ್ಲಿ ಪುರೋಹಿತ ಬಳಗ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಪಿತೃ ಪಕ್ಷದಲ್ಲಿ ಹುಣ್ಣಿಮೆಯಿಂದ ಅಮಾವಾಸ್ಯೆಯ ವರೆಗೆ ಎರಡು ಮಂಗಳವಾರ ಶುಕ್ರವಾರದೊಂದು…

Read Full News

ಹೊಸ ತಿರುವು ಪಡೆದುಕೊಂಡ ಮಹಿಳೆ ನಾಪತ್ತೆ ಪ್ರಕರಣ : ಪತ್ನಿಯನ್ನು ಕೊಲೆ ಮಾಡಿ ನದಿಗೆ ಎಸೆದಿದ್ದ ಪತಿರಾಯ

ಮಹಿಳೆ ನಾಪತ್ತೆಯಾಗಿದ್ದ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಪತಿಯೆ ಈ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯ ಕೆರೆಕೊಪ್ಪ ಗ್ರಾಮದಲ್ಲಿ ದಿನಾಂಕ 04-08-2022ರಂದು ಮಹಿಳೆ ಕಾಣೆಯಾಗಿದ್ದಾಳೆಂದು ಮಹಿಳೆಯ ಅಣ್ಣ ಅಣ್ಣಪ್ಪ ಸೊರಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಾಣೆಯಾದ ಪುಷ್ಪಾವತಿ ಯನ್ನು ಆಕೆಯ ಗಂಡ ದಯಾನಂದ ಕೊಲೆ ಮಾಡಿ ವರದಾ ನದಿಯಲ್ಲಿ ಎಸೆದಿರುವುದು ಪೊಲೀಸ್ ತನಿಖೆಯಲ್ಲಿ ದೃಢಪಟ್ಟಿದೆ. ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.   ರಾಜಶೇಖರ್ ವೃತ್ತ ನಿರೀಕ್ಷಕರು ಸೊರಬ ಹಾಗೂ ದೇವರಾಯ ಉಪನಿರೀಕ್ಷಕರು ಸೊರಬ ಠಾಣೆ…

Read Full News

ಪವರ್ ಹೌಸ್ ನಲ್ಲಿ ದಿಡೀರ್ ಪ್ರತ್ಯಕ್ಷವಾದ ಚಿರತೆ : ಕೋಲಿನಿಂದ ಬೆದರಿಸಿ ಚಿರತೆ ಬಾಯಿಯಿಂದ ನಾಯಿಯನ್ನು ರಕ್ಷಿಸಿದ ಸೆಕ್ಯುರಿಟಿ ಗಾರ್ಡ್ : ವೀಡಿಯೋ ವೈರಲ್

ಮಾಸ್ತಿಕಟ್ಟೆ : ಮಲೆನಾಡಿನಾದ್ಯಂತ ಸೆಕ್ಯುರಿಟಿ ಗಾರ್ಡ್ ಒಬ್ಬರು ಚಿರತೆಯನ್ನು ಹೆದರಿಸಿ ನಾಯಿಯನ್ನು ರಕ್ಷಿಸಿದ  ವಿಡಿಯೋ ವೈರಲ್ ಆಗುತ್ತಿದೆ.  ಆ ರಾತ್ರಿ ಪವರ್ ಹೌಸ್ ನಲ್ಲಿ ನಡೆದಿದ್ದೇನು??? ಅವತ್ತು ರಾತ್ರಿ ಹೊಸಂಗಡಿ ಪವರ್ ಹೌಸ್ ಭದ್ರತಾ ಕೊಠಡಿಯಲ್ಲಿ ಸೆಕ್ಯುರಿಟಿ ಈರಪ್ಪ ಗೌಡ ಕರ್ತವ್ಯ ನಿರತರಾಗಿದ್ದರು. ಈ ವೇಳೆ ಅಲ್ಲಿದ್ದ ಒಂದು ನಾಯಿಯನ್ನು ಎಲ್ಲಿಂದಲೋ ಬಂದ ಚಿರತೆಯೊಂದು ಹಿಡಿದು ಓಡಲು ಆರಂಭಿಸಿತು. ಅಷ್ಟರಲ್ಲಿ ಅಲ್ಲಿಯೇ ಇದ್ದ ಇನ್ನೊಂದು ಶ್ವಾನ ಜೋರಾಗಿ ಬೊಗಳಿದೆ. ತಕ್ಷಣ ಅಲರ್ಟ್ ಆದ ಭದ್ರತಾ ಸಿಬ್ಬಂದಿ ಈರಪ್ಪ…

Read Full News

ಅಕಾಲಿಕ ಮಳೆಗೆ ರಸ್ತೆ ಕುಸಿದು ಸಂಪರ್ಕ ಕಡಿತ : ದುರಸ್ತಿಗಾಗಿ ಗ್ರಾಮಸ್ಥರ ಒತ್ತಾಯ

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹಾರಂಬಳ್ಳಿ ಮಳವಳ್ಳಿ ಗಾಜಿನಗೋಡು ಗ್ರಾಮದ ಸಂಪರ್ಕ ರಸ್ತೆಯು ಇತ್ತೀಚೆಗೆ ಬಂದ ಅಕಾಲಿಕ ಭಾರಿ ಮಳೆಯಿಂದಾಗಿ ರಸ್ತೆ ಮಧ್ಯದಲ್ಲಿ ಅಳದ ಬೃಹತ್ ಹೊಂಡ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ.  ಈ ರಸ್ತೆಯ ಮಾರ್ಗದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಮತ್ತು  ಕೃಷಿ ಚಟುವಟಿಕೆಗಾಗಿ ಓಡಾಡುವ ಸಂಪರ್ಕ ರಸ್ತೆಯಾಗಿದ್ದು ಭಾರಿ ಮಳೆಯಿಂದಾಗಿ ಗುಡ್ಡದ ನೀರು ಏಕಾಏಕಿ ನುಗ್ಗಿ ಚರಂಡಿ ತುಂಬಿ ಉಕ್ಕಿ ಹರಿದ ಪರಿಣಾಮ ಸಂಪರ್ಕ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿ ಓಡಾಡಕ್ಕೆ ತುಂಬಾ…

Read Full News

ಗ್ರಾಮೀಣ ವಿದ್ಯಾರ್ಥಿಗಳ ಕನಸು ನನಸಾಗಿಸಲು ಪ್ರಾಯೋಗಿಕ ತರಗತಿಗಳು ಸಹಕಾರಿ : ಆರಗ ಜ್ಞಾನೇಂದ್ರ – 45 ದಿನಗಳ ಕಾಲ ನಡೆದ ಆಧುನಿಕ ತಾಂತ್ರಿಕ ಮತ್ತು ವೈಜ್ಞಾನಿಕ ಆವಿಷ್ಕಾರಗಳ ಪ್ರಾಯೋಗಿಕ ತರಗತಿಗಳ ಸಮಾರೋಪ ಕಾರ್ಯಕ್ರಮ

ಕೋಣಂದೂರು : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಕನಸು ನಿರ್ಮಾಣಗೊಳ್ಳಲು ಪ್ರಾಯೋಗಿಕ ತರಗತಿಗಳು ಸಹಕಾರಿ ಆಗಿದೆ  ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಇಲ್ಲಿನ  ಸಮೀಪದ ಗುಡ್ಡೇಕೊಪ್ಪ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬೆಂಗಳೂರಿನ ಯುವಿಪೆಪ್ ಎಜುಕೇಶನ್ ಪ್ರೈವೇಟ್ ಲಿಮಿಟೆಡ್  45 ದಿನಗಳ ಕಾಲ ಆಯೋಜಿಸಿದ್ದ ಆಧುನಿಕ ತಾಂತ್ರಿಕ ಮತ್ತು ವೈಜ್ಞಾನಿಕ ಆವಿಷ್ಕಾರಗಳ ಪ್ರಾಯೋಗಿಕ ತರಗತಿಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.  ಗ್ರಾಮೀಣ ಭಾಗದ  ಶಾಲೆಯನ್ನು ಆಯ್ದುಕೊಂಡು ,ಆ ಮಕ್ಕಳಲ್ಲಿ ವಿಜ್ಞಾನದ ಅರಿವನ್ನು ಮೂಡಿಸಿ ಭವಿಷ್ಯದ ಆವಿಷ್ಕಾರಕ್ಕೆ ಅಣಿಗೊಳಿಸುವ…

Read Full News

ಅಧಿಕಾರದಲ್ಲಿದ್ದಾಗ ಒಂದೂ ಸೇತುವೆಯನ್ನು ಕಟ್ಟದೆ ಇದ್ದವರು ಈಗ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ : ಹರತಾಳು ಹಾಲಪ್ಪ

ಹಸಿರುಮಕ್ಕಿ ಸೇತುವೆ ಕಾಮಗಾರಿ ವಿಳಂಬಕ್ಕೆ ನಾನು ಕಾರಣವಲ್ಲ. ಅನಗತ್ಯವಾಗಿ ನನ್ನ ಮೇಲೆ ಆರೋಪ ಹೊರಿಸುವ ಕೆಲಸವನ್ನು ಕಾಂಗ್ರೆಸ್ ಸೇರಿದಂತೆ ವಿರೋಧಿಗಳು ಮಾಡುತ್ತಿದ್ದಾರೆ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ತಾಲೂಕಿನ ಹಸಿರುಮಕ್ಕಿ ಸೇತುವೆಯನ್ನು ಭಾನುವಾರ ವೀಕ್ಷಣೆ ಮಾಡಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ತಾವು ಅಧಿಕಾರದಲ್ಲಿದ್ದಾಗ ಒಂದೂ ಸೇತುವೆಯನ್ನು ಕಟ್ಟದೆ ಇದ್ದವರು ಈಗ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿ, ಶೀಘ್ರದಲ್ಲಿ ಎದುರಾಗಲಿರುವ ಚುನಾವಣೆಯಲ್ಲಿ ಲಾಭ ಗಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ…

Read Full News

ರಿಪ್ಪನ್‌ಪೇಟೆ : ಮದುವೆಗೆ ನಿರಾಕರಿಸಿದ ಪ್ರಿಯಕರ – ವಿಷ ಸೇವಿಸಿ ಯುವತಿ ಆತ್ಮಹತ್ಯೆ

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹಾಲುಗುಡ್ಡೆ ಗ್ರಾಮದ ಕ್ಯಾಂಪ್ ನಲ್ಲಿ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹಾಲುಗುಡ್ಡೆ ಕ್ಯಾಂಪ್ ನಲ್ಲಿ ಅನುಷಾ (19) ಎಂಬ ಯುವತಿ ನಿನ್ನೆ ಮನೆಯಲ್ಲಿದ್ದಾಗ ಕೀಟನಾಶಕ ಕುಡಿದು ತನ್ನ ಪ್ರಿಯಕರನಿಗೆ ಕರೆ ಮಾಡಿ ವಿಷ ಸೇವಿಸಿರುವುದಾಗಿ ತಿಳಿಸಿದ್ದಾಳೆ.ಕೂಡಲೇ ಪ್ರಿಯಕರ ಮಂಜುನಾಥ್ ಓಡಿ ಬಂದು ಯುವತಿಯನ್ನ ಆನಂದಪುರ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾನೆ. ಆನಂದಪುರ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು ನಂತರ ಹೆಚ್ಚಿನ ಚಿಕಿತ್ಸೆಗೆ ಯುವತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಗೆ…

Read Full News

ಮಲೆನಾಡಿನಲ್ಲೊಂದು ಸೋರುತ್ತಿರುವ ಸರ್ಕಾರಿ ಪ್ರೌಡ ಶಾಲೆ – ಮಳೆ ಬಂದರೆ ತರಗತಿಗಳಲ್ಲಿ ಅರಳುತ್ತವೆ ಬಣ್ಣ ಬಣ್ಣದ ಛತ್ರಿಗಳು

ರಿಪ್ಪನ್‌ಪೇಟೆ : ಇಲ್ಲಿನ ಚಿಕ್ಕಜೇನಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮಳೆ ಬಂದರೇ ಸಾಕು ವಿದ್ಯಾರ್ಥಿಗಳು ತರಗತಿ ಕೊಠಡಿಯಲ್ಲಿ ಬಣ್ಣ ಬಣ್ಣದ ಛತ್ರಿ ಹಿಡಿದು ಕುಳಿತುಕೊಳ್ಳುವುದರೊಂದಿಗೆ ಪಾಠ ಪ್ರವಚನ ಕೇಳುವ ದುಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಶಿಕ್ಷಣಕ್ಕಾಗಿ ಕೋಟ್ಯಾಂತರ ಹಣ ವ್ಯಯ ಮಾಡುತ್ತಿದ್ದು ಶಾಲಾ ಕಾಲೇಜ್‌ಗಳ ಕಟ್ಟಡ ನಿರ್ಮಾಣಕ್ಕೂ ಹೆಚ್ಚು ಅನುದಾನ ನೀಡುತ್ತಿದ್ದರೂ ಕೂಡಾ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಚಿಕ್ಕಜೇನಿ ಸರ್ಕಾರಿ ಪ್ರೌಢಶಾಲೆ ಮಾತ್ರ ಕಣ್ಣಿಗೆ ಕಂಡಿಲ್ಲವೇನೂ ಎಂಬ ಅನುಮಾನ ಕಾಡುವಂತಾಗಿದೆ. 2006 ರಲ್ಲಿ…

Read Full News

ಶ್ರಮ ಸಂಸ್ಕೃತಿಯ ಪ್ರತೀಕ ವಿಶ್ವಕರ್ಮರು : ಡಾ.ಕೆ.ಶ್ರೀಪತಿ ಹಳಗುಂದ

ರಿಪ್ಪನ್ ಪೇಟೆ; ವಿಶ್ವಕರ್ಮ ಜನಾಂಗವು  ಸೃಷ್ಟಿಯ ಪ್ರತಿನಿಧಿಯಾಗಿ ದೇವಶಿಲ್ಪಿ ಎಂದು ಕರೆಸಿ ಕೊಳ್ಳುವ ಮೂಲಕ  ಶ್ರಮ ಸಂಸ್ಕೃತಿಯ ಪ್ರತೀಕವಾಗಿ ತಮ್ಮದೇ ಆದ ವೃತ್ತಿಯನ್ನು ಅವಲಂಬಿಸಿ ರುವುದು ಶ್ಲಾಘನೀಯ  ಎಂದು ಪಟ್ಟಣದ  ಸರ್ಕಾರಿ ಪ್ರಥಮ ದರ್ಜೆ  ಕನ್ನಡ ಉಪನ್ಯಾಸಕ  ಶ್ರೀಪತಿ ಹಳಗುಂದ ಅಭಿಪ್ರಾಯಪಟ್ಟರು . ಕೆರೆಹಳ್ಳಿ ಹೋಬಳಿಯ ವಿಶ್ವಕರ್ಮ ಸಮಾಜದ ವತಿಯಿಂದ ಶನಿವಾರ  ರಾಮಮಂದಿರದಲ್ಲಿ ಏರ್ಪಡಿಸಿದ್ದ  ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಮ್ಮಾರ. ಅಕ್ಕಸಾಲಿಗ, ಬಡಿಗ, ಎರಕ ಸೇರಿದಂತೆ ಪಂಚಲೋಹಗಳ ಮೂಲಕವೇ ಬಗೆ ಬಗೆಯ ವಸ್ತುಗಳನ್ನು ತಯಾರಿಸಿ…

Read Full News

ಮಾದಾಪುರದಲ್ಲಿ ಮನೆಗಳಿಗೆ ನುಗ್ಗಿದ ನೀರು-ಜನಪ್ರತಿನಿಧಿಗಳ ನಿರ್ಲಕ್ಷ ಧೋರಣೆಗೆ ಗ್ರಾಮಸ್ಥರ ಆಕ್ರೋಶ : ಸ್ಥಳಕ್ಕೆ ಭೇಟಿ ನೀಡಿದ ಬೇಳೂರು

ರಿಪ್ಪನ್‌ಪೇಟೆ;-ಚುನಾವಣೆಯಲ್ಲಿ ಮತ ಕೇಳಲು ಮಾತ್ರ ಗ್ರಾಮಕ್ಕೆ ಬರುತ್ತಾರೆ ಅದರೆ ಇಂತಹ ಸಮಸ್ಯೆಗಳು ಉದ್ಭವಿಸಿದರೆ ಯಾವ ಜನಪ್ರತಿನಿಧಿಗಳು ಇತ್ತ ತಲೆ ಸಹಹಾಕುವುದಿಲ್ಲ ಇಲ್ಲಿನ ಶಾಸಕರು ಕಳೆದ ನಾಲ್ಕುವರೆ ವರ್ಷದಲ್ಲಿ ಮಾದಾಪುರಕ್ಕೆ ಭೇಟಿ ನೀಡದೆ ಜನರ ಸಮಸ್ಯೆಗೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಬಳಿ ಗ್ರಾಮಸ್ಥರು ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದರು.  ಕಳೆದ ಒಂದು ವಾರದಿಂದ ಅಕಾಲಿಕವಾಗಿ ಭಾರಿ ಮಳೆ ಸುರಿದ ಪರಿಣಾಮದಿಂದಾಗಿ ತುಪ್ಪೂರು ತಟ್ಟೆಕೆರೆ ಕೋಡಿ ಒಡೆದು ಚರಂಡಿಗಳಲಿಲ್ಲದೆ ಮಾದಾಪುರದೊಳಗೆ ನೀರು ನುಗ್ಗಿ ಮನೆಯೊಳಗೆಲ್ಲಾ ನೀರೋ…

Read Full News

ಪ್ರಧಾನಿ ನರೇಂದ್ರ ಮೋದಿ 72ನೇ ಜನ್ಮದಿನ : ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ

ಪ್ರಧಾನಿ ನರೇಂದ್ರ ಮೋದಿಯವರ 72ನೇ ಜನ್ಮ ದಿನಾಚರಣೆಯ ಅಂಗವಾಗಿ ರಿಪ್ಪನ್‌ಪೇಟೆಯ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ನೆರೆವೇರಿಸಲಾಯಿತು.  ರಿಪ್ಪನ್‌ಪೇಟೆ-ಹುಂಚ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ ಬಿ ಮಂಜುನಾಥ್ ಮಾತನಾಡಿ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಜನ್ಮದಿನದ ಅಭಿಮಾನಪೂರ್ವಕ ಶುಭಕಾಮನೆಗಳು. ಆರೋಗ್ಯಪೂರ್ಣವಾಗಿ ಇನ್ನೂ ಬಹಳ ವರ್ಷಗಳ ಕಾಲ ಮೋದಿಯವರ ರಾಷ್ಟ್ರಸೇವೆ ಹೀಗೆಯೇ ಮುಂದುವರಿಯುವಂತೆ ದೇವರು ಆಶೀರ್ವದಿಸಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್…

Read Full News

ರಿಪ್ಪನ್‌ಪೇಟೆ : ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಮಹಿಳೆ ಉಡುಪಿಯಲ್ಲಿ ಪತ್ತೆ : ಸುಖಾಂತ್ಯಗೊಂಡ ನಾಪತ್ತೆ ಪ್ರಕರಣ

ರಿಪ್ಪನ್‌ಪೇಟೆ : ಇತ್ತೀಚೆಗೆ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ  ಹೆದ್ದಾರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿದ್ಯಾನಗರದ ನಿವಾಸಿ ಸೌಂದರ್ಯ ತನ್ನ ಇಬ್ಬರು ಮಕ್ಕಳೊಂದಿಗೆ ಉಡುಪಿಯ ಸಾಂತ್ವಾನ ಕೇಂದ್ರದಲ್ಲಿ ಪತ್ತೆಯಾಗಿದ್ದಾರೆ. ಕಳೆದ ಹತ್ತು ವರ್ಷದ ಹಿಂದೆ ಹೆದ್ದಾರಿಪುರ ಗ್ರಾಮದ ಶಶಿಕುಮಾರ್ ಎಂಬಾತನೊಂದಿಗೆ ಸೌಂದರ್ಯ ವಿವಾಹವಾಗಿದ್ದರು . ಶಶಿ ಕುಮಾರ್ ಪತ್ನಿಗೆ ಮಾನಸಿಕ ಕಿರುಕುಳ ದೈಹಿಕ ಹಲ್ಲೆ ನಡೆಸುತ್ತಿದ್ದ ಕಾರಣ ಪತಿಯ ನಡೆಗೆ ಬೇಸತ್ತು ತನ್ನ ಇಬ್ಬರು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದಾರೆ. ನಿನ್ನೆ ಮೂವರು ಪತ್ತೆಯಾಗಿ ಉಡುಪಿ ಸಾಂತ್ವಾನ ಕೇಂದ್ರದಲ್ಲಿದ್ದಾರೆ….

Read Full News

ತುಮಕೂರು ಮೂಲದ ಯುವಕ ಶಿವಮೊಗ್ಗ ನಗರದ ಲಾಡ್ಜ್ ನಲ್ಲಿ ಆತ್ಮಹತ್ಯೆ :

ಶಿವಮೊಗ್ಗ  ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸಮೀಪದ ಲಾಡ್ಜ್ ಒಂದರಲ್ಲಿ ಯುವಕನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆತ್ಮ ಹತ್ಯೆ ಮಾಡಿಕೊಂಡ ಯುವಕ ತುಮಕೂರು ಜಿಲ್ಲೆ ಕೆರೆಸೂರಗೊಂಡನ ಹಳ್ಳಿಯ ಮಂಜು ನಾಥ್ (26) ಎಂದು ತಿಳಿದು ಬಂದಿದೆ. ಡೆತ್‌ನೋಟ್‌ ಪತ್ತೆ:  ಈತ ಅಕ್ಕ ಸುಧಾಳನ್ನು ಕೊಲೆಗೈದಿದ್ದಾಗಿ ಡೆತ್‌ನೋಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಸುಧಾ ತನ್ನ ಗಂಡನನ್ನು ಅವಳ ಸ್ನೇಹಿತರ ಜತೆ ಸೇರಿ ಕೊಲೆ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಳು. ಈ ಕೋಪದಲ್ಲಿ ಸುಧಾಳನ್ನು ಕೊಲೆ…

Read Full News

ಅಕೇಶಿಯಾ ನೆಡುತೋಪಿನಲ್ಲಿ ಅಕ್ರಮ ಮರ ಕಡಿತಲೆ : ಪ್ರಕರಣ ದಾಖಲು

ರಿಪ್ಪನ್ ಪೇಟೆ ; ಹುಂಚ ವ್ಯಾಪ್ತಿಯ ಮಳಲಿಕೊಪ್ಪ ಗ್ರಾಮದ ಸರ್ವೇ ನಂಬರ್ 04  ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ಗಡಿಭಾಗವಾದ ಹುಂಚದಕಟ್ಟೆ ಗ್ರಾಮದ ಸರ್ವೇ ನಂಬರ್ 18 ರಲ್ಲಿ ಅಕ್ರಮವಾಗಿ ಅಕೇಶಿಯಾ ನೆಡುತೋಪಿನಲ್ಲಿ ಅಕೇಶಿಯಾ  ಮರಗಳನ್ನು ಕಡಿತಲೆ ಮಾಡಿ ಕಳ್ಳಸಾಗಾಣಿಕೆ ಮಾಡುತ್ತಿದ್ದ ಆರೋಪದ ಅಡಿಯಲ್ಲಿ ಅರಸಾಳು ವಲಯ ಅರಣ್ಯಾಧಿಕಾರಿಗಳು  ಇಬ್ಬರ ಮೇಲೆ ಅರಣ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.  ಹುಂಚದ ಕಟ್ಟೆ ಗ್ರಾಮದ ಕುಪುಟಹಳ್ಳಿ ನಿವಾಸಿಗಳಾದ ರಾಮಚಂದ್ರ ಹಾಗೂ ಮುದ್ದಪ್ಪ ಎಂಬುವರ ಮೇಲೆ ಅರಸಾಳು ವಲಯ ಅರಣ್ಯಾಧಿಕಾರಿ kfa…

Read Full News

ಪೋಕ್ಸೋ ಪ್ರಕರಣದಲ್ಲಿ ತನ್ನ ಪರ ತೀರ್ಪು ಬರುವ ಮುನ್ನವೇ ಆತ್ಮಹತ್ಯೆ ಮಾಡಿಕೊಂಡ ಯುವಕ :

 ಪೋಕ್ಸೋ‌ ಪ್ರಕರಣದಲ್ಲಿ ತನ್ನ ಪರ ತೀರ್ಪು ಬರುವ ಮುನ್ನವೇ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನಲ್ಲಿ ನಡೆದಿದೆ. ಮದನ ಕುಮಾರ್ (25) ಎಂಬಾತ ನಿನ್ನೆ ತನ್ನ ಗ್ರಾಮದಲ್ಲಿ ನೇಣಿಗೆ ಶರಣಾಗಿದ್ದಾನೆ. ಮದನ್ ಕುಮಾರ್ ವಿರುದ್ದ ಅದೇ ಗ್ರಾಮದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಎಂಬ ಆರೋಪದ ಮೇಲೆ ಪೋಕ್ಸೋ ಪ್ರಕರಣ ಕಳೆದ ಐದಾರು ವರ್ಷದ ಹಿಂದೆ ದಾಖಲಾಗಿತ್ತು. ನಂತರ ಮದನ ಕುಮಾರ್​ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಜಾಮೀನಿನ ಮೇಲೆ ಹೊರ ಬಂದಿದ್ದ. ಪ್ರಕರಣದಲ್ಲಿ…

Read Full News

ರಿಪ್ಪನ್‌ಪೇಟೆ : ಶಾಲೆಯ ಮೇಲೆ ಉರುಳಿಬಿದ್ದ ಬೃಹತ್ ಮರ – ತಪ್ಪಿದ ಭಾರಿ ಅನಾಹುತ

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಮಳವಳ್ಳಿ ಗ್ರಾಮದಲ್ಲಿ ಶಾಲಾ ಸಮಯದಲ್ಲೇ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೇಲೆ ಭಾರಿ ಮರವೊಂದು ಉರುಳಿಬಿದ್ದರೂ ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದ ಘಟನೆ ನಡೆದಿದೆ. ಮಳವಳ್ಳಿ ಗ್ರಾಮದ ಶಾಲೆಯ ಪಕ್ಕದಲ್ಲಿದ್ದ ದೊಡ್ಡಗಾತ್ರದ ಮರ ಉರುಳಿ ಬಿದ್ದ ಪರಿಣಾಮ ಶಾಲೆಯ ಎರಡು ಛಾವಣಿ ಸಂಪೂರ್ಣ ಹಾನಿಯಾಗಿದೆ. ಇಂದು ಮೂಗೂಡ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮವಿದ್ದ ಹಿನ್ನಲೆಯಲ್ಲಿ ಶಾಲೆಗೆ ಬಂದಿದ್ದ ಎಲ್ಲಾ ಮಕ್ಕಳನ್ನು ಬೆಳಿಗ್ಗೆ 9.30 ರ ಸಮಯಕ್ಕೆ ಮೂಗೂಡ್ತಿ…

Read Full News

ಇಬ್ಬರು ಮಕ್ಕಳೊಂದಿಗೆ ವಿವಾಹಿತ ಮಹಿಳೆ ನಾಪತ್ತೆ : ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ರಿಪ್ಪನ್ ಪೇಟೆ : ತಾಯಿಯೊಂದಿಗೆ ಇಬ್ಬರು ಮಕ್ಕಳು  ಸೆಪ್ಟೆಂಬರ್12  ರಿಂದ ನಾಪತ್ತೆಯಾಗಿದ್ದಾರೆಂದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೆದ್ದಾರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ  ವಿದ್ಯಾನಗರದ ನಿವಾಸಿ ಸೌಂದರ್ಯ(26) ಅನ್ವಿತಾ(8)  ಶ್ರೀಜಿತ್( 6) ಎನ್ನಲಾಗಿದೆ. ಕಳೆದ ಹತ್ತು ವರ್ಷದ ಹಿಂದೆ ಶಶಿ ಕುಮಾರ್ ಎಂಬಾತನೊಂದಿಗೆ  ಸೌಂದರ್ಯಳ  ವಿವಾಹವಾಗಿತ್ತು.  ಶಶಿಕುಮಾರ್ ಪತ್ನಿಗೆ ಮಾನಸಿಕ ಕಿರುಕುಳ ದೈಹಿಕ ಹಲ್ಲೆ ನಡೆಸುತ್ತಿದ್ದ ಕಾರಣ ಪತಿಯ ನಡೆಗೆ ಬೇಸತ್ತು ತನ್ನ ಇಬ್ಬರು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ  ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ…

Read Full News

ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 15 ಲಕ್ಷದವರೆಗೆ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ :

ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದಿಂದ ಪ್ರವರ್ಗ-3 ರಡಿ 2(ಎ) ಯಿಂದ (ಎಫ್) ವರೆಗೆ ಬರುವ ಮರಾತ, ಮರಾಠ, ಅರೆಕ್ಷತ್ರಿ, ಅರೆ ಮರಾಠ, ಆರ್ಯಮರಾಠ, ಆರ್ಯ, ಆರ್ಯರು, ಕೊಂಕಣ ಮರಾಠ, ಕ್ಷತ್ರಿಯ ಮರಾತ/ಕ್ಷತ್ರಿ ಮರಾಠ, ಕುಳವಾಡಿ ಜನರ ಶೈಕ್ಷಣಿಕ ಮತ್ತು ಆರ್ಥಿಕಾಭಿವೃದ್ದಿಗಾಗಿ 2022-23 ನೇ ಸಾಲಿಗೆ ವಿವಿಧ ಯೋಜನೆಗಳಡಿ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಜೀಬಾವು-ಜಲ ಭಾಗ್ಯ ಯೋಜನೆ(ಗಂಗಾ ಕಲ್ಯಾಣ ನೀರಾವರಿ ಈ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ಒಂದು ಕೊಳವೆ ಬಾವಿ…

Read Full News

ಶಿವಮೊಗ್ಗ ಯುವಕರಿಂದ ಜಗತ್ತಿನ ಅತಿ ಎತ್ತರದ ರಸ್ತೆಯಲ್ಲಿ ಪುನೀತ್ ಪೋಟೋ – ಕನ್ನಡ ಧ್ವಜ ಹಾರಾಟ

ಜಗತ್ತಿನ ಅತಿ ಎತ್ತರದ ರಸ್ತೆ ಪ್ರದೇಶವಾಗಿರುವ ಭಾರತದ ಹಿಮಾಚಲ ಪ್ರದೇಶದ ಖರದುಂಗ್ಲಾ(17,982 ಅಡಿ) ದಲ್ಲಿ ಅಪ್ಪುವಿನ ಫೋಟೋ ಹಾಗೂ ಕನ್ನಡದ ಧ್ವಜವನ್ನು ಹಾರಿಸುವ ಮೂಲಕ ಶಿವಮೊಗ್ಗದ ಯುವಕರು ಗಮನ ಸೆಳೆದಿದ್ದಾರೆ. ಪ್ರಸ್ತುತ ಲಡಾಖ್ ಪ್ರವಾಸದಲ್ಲಿರುವ ಶಿವಮೊಗ್ಗ ನಗರ ಯುವ ಕಾಂಗ್ರೆಸ್‌ ಅಧ್ಯಕ್ಷ ವಿನಯ್ ತಾಂದ್ಲೆ ಹಾಗೂ ಸ್ನೇಹಿತರಾದ ಪ್ರಮೋದ್, ಗೌತಮ್, ಹರೀಶ್, ಕಿರಣ್ ಅವರು ತಮ್ಮ ನೆಚ್ಚಿನ ನಾಯಕನ ಭಾವಚಿತ್ರ ಹಾಗೂ ಕನ್ನಡ ಧ್ವಜವನ್ನು ಅತ್ಯಂತ ಎತ್ತರ ಪ್ರದೇಶದಲ್ಲಿ ಹಾರಿಸುವ ಸಲುವಾಗಿಯೇ ಪ್ರಯಾಣ ಬೆಳೆಸಿದ್ದರು. ಅಪ್ಪು ಕೇವಲ…

Read Full News

ಕೋಳಿ ಫಾರಂಗೆ ನುಗ್ಗಿದ ಹೆಬ್ಬಾವು : ಉರಗತಜ್ಞ ಸ್ನೇಕ್ ಕಿರಣ್ ರಿಂದ ರಕ್ಷಣೆ

ಕೋಳಿಗಳನ್ನು ತಿನ್ನಲು ಕೋಳಿ ಫಾರಂಗೆ ನುಗ್ಗಿದ್ದ ಹೆಬ್ಬಾವನ್ನು ಸ್ನೇಕ್ ಕಿರಣ್ ರಕ್ಷಿಸಿ, ಕಾಡಿಗೆ ಬಿಟ್ಟಿದ್ದಾರೆ.‌ ಶಿವಮೊಗ್ಗ ತಾಲೂಕು ಗಾಜನೂರು ತುಂಗಾ ಅಣೆಕಟ್ಟೆ ಪಕ್ಕದ ಲಕ್ಷ್ಮೀ ಕೋಳಿ ಫಾರಂಗೆ ಬುಧವಾರ ಬೆಳಗ್ಗೆ, ಸುಮಾರು ಏಳೂವರೆ ಅಡಿ ಉದ್ದದ ಹೆಬ್ಬಾವು ಬಂದಿದೆ. ಕೋಳಿ‌ ಫಾರಂ ಪಕ್ಕದ ಅಡಿಕೆ ತೋಟದಲ್ಲಿ ಹೆಬ್ಬಾವು ಪತ್ತೆಯಾಗಿದೆ. ತೋಟದ ಕೆಲಸಕ್ಕೆ ಬಂದವರು ಹೆಬ್ಬಾವನ್ನು ಕಂಡು ಮಾಲೀಕರಿಗೆ ತಿಳಿಸಿದ್ದಾರೆ. ಮಾಲೀಕರಾದ ರಾಕೇಶ್ ಅವರು ತಕ್ಷಣ ಸ್ನೇಕ್ ಕಿರಣ್​ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದು ಅವರು, ಹೆಬ್ಬಾವನ್ನು ಸುರಕ್ಷಿತವಾಗಿ…

Read Full News

ಕೆಪಿಸಿಸಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯಾಧ್ಯಕ್ಷರಾಗಿ ಮಧು ಬಂಗಾರಪ್ಪ ನೇಮಕ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಒಬಿಸಿ ಮೋರ್ಚಾ ಕಾರ್ಯಾಧ್ಯಕ್ಷರಾಗಿ ಮಧು ಬಂಗಾರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಈ ಕುರಿತಂತೆ ಎಐಸಿಸಿ ಒಬಿಸಿ ಅಧ್ಯಕ್ಷ ಕ್ಯಾ.ಅಜಯ್ ಸಿಂಗ್ ಆದೇಶ ಹೊರಡಿಸಿದ್ದು, ರಾಜ್ಯ ಘಟಕದ ಕಾರ್ಯಾಧ್ಯಕ್ಷರನ್ನಾಗಿ ತತಕ್ಷಣದಿಂದ ಜಾರಿಗೆ ಬರುವಂತೆ ಮಧು ಬಂಗಾರಪ್ಪ ಅವರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

Read Full News

ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಕೆಳಗೆ ಬಿದ್ದು ತಂದೆ-ಮಗ ಸಾವು :

ಶಿವಮೊಗ್ಗ: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಪ್ಲಾಟ್ ಫಾರಂನಿಂದ ಕೆಳಗೆ ಬಿದ್ದು ತಂದೆ, ಮಗ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂ 1ರಲ್ಲಿ ಘಟನೆ ಸಂಭವಿಸಿದೆ. ತಾಳಗುಪ್ಪ – ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿದ ಇವರಿಬ್ಬರು ಸಾವನ್ನಪ್ಪಿದ್ದಾರೆ. ಭಾನುವಾರ ರಾತ್ರಿ ರೈಲು ಹತ್ತುವಾಗ ಕಾಲು ಜಾರಿ ಬಿದ್ದು ಘಟನೆ ನಡೆದಿದೆ. ಮೋಹನ್ ಪ್ರಸಾದ್ (70) ಮತ್ತು ಅಮರನಾಥ್ (30) ಮೃತರು. ತಂದೆ ಮತ್ತು ಮಗ ರಾತ್ರಿ ರೈಲಿನಲ್ಲಿ ಬೆಂಗಳೂರಿಗೆ…

Read Full News

ಯುವಕನಿಗೆ ಡಿಕ್ಕಿ ಹೊಡೆದು ಪರಾರಿಯಾದ ವಾಹನ : ಯುವಕ ಸ್ಥಳದಲ್ಲೇ ಸಾವು

ಸಾಗರ : ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಪ್ರಗತಿ ಶಾಲೆಯ ಬಳಿ ವಾಹನವೊಂದು ಢಿಕ್ಕಿಯಾಗಿ ಪರಾರಿಯಾದ ಕಾರಣ ಬೈಕ್‌ ಸವಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.  ವಾಹನ ಮುಂಭಾಗದಿಂದ ಢಿಕ್ಕಿ ಹೊಡೆದು,ಸುಮಾರು ದೂರ ಯುವಕನ ದೇಹವನ್ನು ಎಳೆದುಕೊಂಡು ಹೋಗಿದೆ. ಬೈಕ್‌ ಚಲಾಯಿಸುತ್ತಿದ್ದ ಕುಗ್ವೆ ಗ್ರಾಮದ ನಿವಾಸಿ ರಂಜಿತ್ ಕುಮಾರ್ (26) ಎನ್ನುವ ಯುವಕ ರಸ್ತೆಗೆ ಅಪ್ಪಳಿಸಿ ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರಸ್ತೆಗೆ ಬಿದ್ದ ಪರಿಣಾಮ ತಲೆ ಒಡೆದು ತೀವ್ರವಾಗಿ ರಕ್ತ ಸ್ರಾವವಾಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ.  ಪೊಲೀಸರು…

Read Full News

ದಂಪತಿಗಳ ಪೋಷಾಕಿನಲ್ಲಿ ಬಾಡಿಗೆ ಮನೆ ಕೇಳಿಕೊಂಡು ಬಂದು ಮನೆಗೆ ನುಗ್ಗಿ ಕಳ್ಳತನ – ಖತರ್ನಾಕ್ ಮಹಿಳೆ ಬಂಧನ

ಮನೆ ಬಾಡಿಗೆಗೆ ಬೇಕು ಎಂದು ದಂಪತಿಗಳ ಪೋಷಾಕಿನಲ್ಲಿ ಬಂದ ಅಪರಿಚಿತ ಪುರುಷ ಮತ್ತು ಮಹಿಳೆ ಮಾಲೀಕನ ಮನೆಗೆ ನುಗ್ಗಿ ಚಿನ್ನಾಭರಣವನ್ನ ಹೊತ್ತೊಯ್ದ ಘಟನೆ ಶಿವಮೊಗ್ಗದ ಜಯನಗರದಲ್ಲಿ ನಡೆದಿದೆ.ಕಳ್ಳತನಕ್ಕೆ ಬುರ್ಖಾ ಧರಿಸಿ ಬಂದಿದ್ದ ಖತರ್ನಾಕ್ ಲೇಡಿಯನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯ ಹಿನ್ನಲೆ : ಶಿವಮೊಗ್ಗ ನಗರದ  ಜಯನಗರ ಮೊದಲನೇ ತಿರುವಿನಲ್ಲಿರುವ ಸಮರ್ಥ ಅಪಾರ್ಟ್ ಮೆಂಟ್ ನ ಬಳಿ ಬುರ್ಕಾ ಹಾಕಿಕೊಂಡು ಬಂದ ಅಪರಿಚಿತ ಮಹಿಳೆ ಮತ್ತು ಅಪರಿಚಿತ ಪುರುಷ ಮನೆ ಬಾಡಿಗೆ ಇದೆಯಾ ಎಂದು ವಿಚಾರಿಸಿದ್ದಾರೆ..  ಪಕ್ಕದ…

Read Full News

ನಗರ ಶೂಟೌಟ್ ಪ್ರಕರಣ : ಅಂಬರೀಶ್ ಕೊಲೆ ಕೇಸನ್ನು ಮುಚ್ಚಿಹಾಕಲು ಗೃಹಸಚಿವ ಆರಗ ಜ್ಞಾನೇಂದ್ರ ಪ್ರಯತ್ನಿಸುತ್ತಿದ್ದಾರೆ – ಬೇಳೂರು ಆರೋಪ !!

ತೀರ್ಥಹಳ್ಳಿ : ನಗರ ಹೋಬಳಿಯ ನೇಗಿಲೋನಿ ಗ್ರಾಮದ ಅಂಬರೀಶ್ ಎನ್ನುವವರ ಗನ್ ಶಾಟ್ ಘಟನೆ ನಡೆದು 26 ದಿನವಾದರೂ ಕುಟುಂಬದವರಿಗೆ  ನ್ಯಾಯ ಸಿಕ್ಕಿಲ್ಲ. ಈ ಕೂಡಲೇ ಸರಿಯಾದ ರೀತಿಯಲ್ಲಿ ತನಿಖೆ ನೆಡೆಸಿ ಕುಟುಂಬದವರಿಗೆ ನ್ಯಾಯ ಕೊಡಿಸದಿದ್ದರೆ ಉಗ್ರ ಹೋರಾಟದ ನಡೆಸಲಾಗುವುದು ಎಂದು ಸಾಗರ ಕ್ಷೇತ್ರದ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಎಚ್ಚರಿಕೆ ನೀಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು ನೇಗಿಲೋನಿ ಗ್ರಾಮದಲ್ಲಿ ಶೂಟೌಟ್ ಆಗಿದ್ದು ಬಡ ಕುಟುಂಬದ…

Read Full News

ನಾಳೆಯಿಂದ ಅಮ್ಮನಘಟ್ಟ ಜೇನುಕಲ್ಲಮ್ಮ ಜಾತ್ರಾ ಮಹೋತ್ಸವ : ಜಾತ್ರಾಮಹೋತ್ಸವಕ್ಕೆ ಎಲ್ಲಾ ಸಿದ್ದತೆಗಳನ್ನು ನಡೆಸಲಾಗಿದೆ : ಬಿ ಸ್ವಾಮಿರಾವ್

ರಿಪ್ಪನ್‌ಪೇಟೆ;-ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ  ಶ್ರೀ ಜೇನುಕಲ್ಲಮ್ಮ ದೇವಿಯ ಜಾತ್ರಾಮಹೋತ್ಸವಕ್ಕೆ ಸಕಲ ಸಿದ್ದತೆ ನಡೆಸಲಾಗಿದ್ದು ಸೆ.೧೩ ರಿಂದ ೨೩ ರವರೆಗೆ ಎರಡು ಮಂಗಳವಾರ ಎರಡು ಶುಕ್ರವಾರದೊಂದು ಜಾತ್ರೆ ಅಯೋಜಿಸಲಾಗಿದೆ ಎಂದು ಮಾಜಿ ಶಾಸಕ ಹಾಗೂ ಜೇನುಕಲ್ಲಮ್ಮ ದೇವಸ್ಥಾನದ ಧರ್ಮದರ್ಶಿ ಸಮಿತಿ ಅಧ್ಯಕ್ಷ ಬಿ.ಸ್ವಾಮಿರಾವ್ ತಿಳಿಸಿದರು.  ಜೇನುಕಲ್ಲಮ್ಮ ದೇವಸ್ಥಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪಿತೃಪಕ್ಷದಲ್ಲಿ ಹುಣ್ಣಿಮೆಯಿಂದ ಅಮವಾಸ್ಯೆಯವರೆಗೆ ಸೆಪ್ಟಂಬರ್ ೧೩ ಮತ್ತು ೧೬ ಹಾಗೂ ೨೦ ಮತ್ತು ೨೩ ಮಂಗಳವಾರ ಹಾಗೂ ಶುಕ್ರವಾರದೊಂದು ಈ ಜಾತ್ರಾಮಹೋತ್ಸವ ಜರುಗಲಿದೆ ಸಕಲ ಭಕ್ತಾಧಿಗಳು ಹೆಚ್ಚಿನ…

Read Full News

ರಿಪ್ಪನ್‌ಪೇಟೆ : ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ದಿಗಾಗಿ ಪಣ – ಸಂಸದ ಬಿ ವೈ ರಾಘವೇಂದ್ರ

ರಿಪ್ಪನ್ ಪೇಟೆ : ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಎಲ್ಲಾ ಸಮಾಜದ ಉನ್ನತಿಗಾಗಿ ಸಮುದಾಯ ಭವನಗಳ ನಿರ್ಮಾಣವಾಗಿದೆ ಕೆಲವು ಮಾತ್ರ ನಿರ್ಮಾಣ ಹಂತದಲ್ಲಿದ್ದು ಶೀಘ್ರ ಕೆಲಸವನ್ನು ಪೂರ್ಣಗೊಳಿಸಲು ಸೂಚಿಸಿದ್ದೇನೆ ಎಂದು ಸಂಸದರಾದ ಬಿ ವೈ ರಾಘವೇಂದ್ರ ತಿಳಿಸಿದರು. ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಶಿವ ಮಂದಿರ ಹಾಗೂ ಶ್ರೀ ರಾಮಭವನದ ಕಾಮಗಾರಿಯನ್ನು ವೀಕ್ಷಿಸಿ ನಂತರ ಅವರು ಮಾತನಾಡಿದರು.ನೂತನ ರೈಲ್ವೇ ಕಾಮಗಾರಿ, ವಿಮಾನ ನಿಲ್ದಾಣ, ನ್ಯಾಷನಲ್ ಹೈವೇ, ಸ್ಮಾರ್ಟ್ ಸಿಟಿ, ವಿಶ್ವ ವಿಖ್ಯಾತ ಜೋಗ ಜಲಪಾತದ ಅಭಿವೃದ್ಧಿ ಹಾಗೂ ಹೊಸನಗರ ತಾಲೂಕಿನ ಕೊಡಚಾದ್ರಿ…

Read Full News