ಜೆಸಿಐ ಹೊಸನಗರ ಕೊಡಚಾದ್ರಿ ವಲಯ ವತಿಯಿಂದ “ನಮಸ್ತೆ” ಸಪ್ತಾಹದಡಿ ವಿಭಿನ್ನ ಸಾಮಾಜಿಕ ಕಾರ್ಯಕ್ರಮ :. ನ್ಯಾಷನಲ್ ಬ್ಯೂಟಿ ಪೆಜೆನ್ಟ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ದೆಹಲಿಯತ್ತ ಪಯಣಿಸಿರುವ ಸೀಮಾಕಿರಣ್

ಜೆಸಿಐ ಹೊಸನಗರ ಕೊಡಚಾದ್ರಿ ವಲಯದ ವತಿಯಿಂದ  “ನಮಸ್ತೆ”ಎಂಬ ಶೀರ್ಷಿಕೆಯಡಿ ಜೆಸಿಐ ಸಪ್ತಾಹದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಸೆ. 9 ರಿಂದ 15 ರವರೆವಿಗೆ ಪ್ರತಿ ದಿನವೂ ವಿಭಿನ್ನ ಕಾರ್ಯಕ್ರಮ ಗಳನ್ನು ರೂಪಿಸಿಕೊಳ್ಳಲಾಗಿತ್ತು.ಸಪ್ತಾಹದ ಅಂಗವಾಗಿ ಅನಾಥಾಶ್ರಮದ ಬೇಟಿ, ಆಹಾರಧಾನ್ಯಗಳ ವಿತರಣೆ, ಆರೋಗ್ಯ ತಪಾಸಣೆ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.


ಕಾರಣಗಿರಿ ಸರ್ಕಾರಿ ಶಾಲೆಯಲ್ಲಿ ಅಣುಕು ಪಾರ್ಲಿಮೆಂಟ್ ಮತ್ತು ಪ್ರಾಮಾಣಿಕ ಅಂಗಡಿ, ಬೇರೆ ಬೇರೆ ಶಾಲೆಗಳಲ್ಲಿ ವಿವಿಧ ವಿಚಾರಗಳ  ಪ್ರಬಂಧ ಸ್ಪರ್ಧೆ ಗಳು,ಭಾವಗೀತೆ, ಜನಪದಗೀತೆ, ನೃತ್ಯ, ರಂಗೋಲಿ,ಹೊಸ ರುಚಿ, ಒಂದು ನಿಮಿಷದಲ್ಲಿ ಸೀರೆ ಉಡಿಸುವುದು ಕನ್ನಡಿ ಇಲ್ಲದೆ ಮೇಕಪ್ , ಪಿಕ್ ಅಂಡ್ ಆಕ್ಟ್ ಸ್ಪರ್ಧೆ , ಮಿಸ್ಟರ್ ಅಂಡ್ ಮಿಸ್ ಹೊಸನಗರ, ಲಿಟಲ್ ಮಿಸ್ ಹೊಸನಗರ, ಚಡ್ಡಿ ಪೈಲ್ವಾನ್ ನಂತಹ ಮೆಗಾ ಶೋಗಳು    ಆಕರ್ಷಣೀಯವಾಗಿದ್ದವು, 


ತೀರ್ಥಹಳ್ಳಿ ಮತ್ತು ಹಲವಾರು ಹಳ್ಳಿಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು, ಚಡ್ಡಿ ಪೈಲ್ವಾನ್ ನಲ್ಲಿ ಹೋಲಿ ರೆಡಿಮರ್ ಕಾನ್ವೆಂಟ್ನಲ್ಲಿ U, K, G ,ಓದುತ್ತಿರುವ ಅರಸು H ಗೌಡ (5 ವರ್ಷ)ಮತ್ತು ತೀರ್ಥಹಳ್ಳಿಯ ಮೂರು ವರುಷದ ಆರ್ಯವೀರ್ ಪ್ರಥಮ ಸ್ಥಾನ ಪಡೆದರು, ಶ್ರೀ ರಾಮಕೃಷ್ಣ ವಿದ್ಯಾಲಯ ಹೊಸನಗರ, L, K, G,ಓದುತ್ತಿರುವ ಅನಿವರನ್,ಮತ್ತು ಅಂಶ್ ಅಂಜನ್, ರವರು ದ್ವಿತೀಯ ಬಹುಮಾನ ಪಡೆದರು.

ಮಿಸ್ಟರ್ ಹೊಸನಗರ ಕಾರ್ತಿಕ್ ಕೋಡೂರು,  ಮಿಸ್ ಹೊಸನಗರ ಗೀತಾ, ಇಬ್ಬರೂ ಪ್ರಥಮ ದರ್ಜೆ ಕೊಡಚಾದ್ರಿ ಕಾಲೇಜು ಹೊಸನಗರ ದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ಲಿಟಲ್ ಮಿಸ್ ಹೊಸನಗರ, ಅನುಷ್ಕ ರಾವ್, ರನ್ನರ್ ಅಪ್ ಆಗಿ  ಸಹ್ಯಾದ್ರಿ ಬೆಟ್ಟಮಕ್ಕಿ ಐ ಸಿ ಎ ಇ ತಿರ್ಥಹಳ್ಳಿಯಲ್ಲಿ ಓದುತ್ತಿದ್ದು ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾರೆ, 

ಡಾ|| ಶ್ರೀನಿವಾಸ್, ಸಮರ್ಥ್ ಬಡ್ಕು ಮನೆ ಇವರಿಗೆ ಕಮಲ ಪತ್ರ ಅವಾರ್ಡ್ ನೀಡಲಾಯಿತು, ಮೊನ್ನೆಯಷ್ಟೇ ಡಾಕ್ಟರೇಟ್ ಪಡೆದಂತಹ  ಡಾ|| ಸೌಮ್ಯಪಡಗೋಡಿ , ಡಾ|| ಅಕ್ಷತಾBG, ಮತ್ತು ರಾಜಕೀಯ ಮತ್ತು ಸಮಾಜ ಸೇವೆಯಲ್ಲಿ ಸದಾ ಮಂಚೂಣಿಯಲ್ಲಿರುವ ಸುಮಾ ಸುಬ್ರಮಣ್ಯ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು, ಶಿಕ್ಷಣ ಆರೋಗ್ಯ ಕಲೆ-ಸಂಸ್ಕೃತಿ, ಕ್ರೀಡೆ,ಹಾಗೂ ಕ್ಯಾನ್ಸರ್ ರೋಗಿಗಳಿಗೆ ಕೇಶ ದಾನ ಮಾಡಿದಂತಹ, ಅರ್ಚನಾ ಕರ್ವಾಲ್ಲೋ,ರೇನಿಟ ಬಾಂಜ್,ಮತ್ತು ಸಮಾಜಸೇವೆಯಲ್ಲಿ, ಗುರುತಿಸಿಕೊಂಡ, ಜೆಸಿ ಪೂರ್ಣೇಶ್, ಜೆಸಿ ಸುರೇಶ್  BS, ಜೆಸಿ ಪ್ರದೀಪ್, ಜೆಸಿ  ಹರೀಶ್,ಜೆಸಿ ಜ್ಯೋತಿ ಪೂರ್ಣೇಶ್,ಗಜೇಂದ್ರ, ಶಾಲಿನಿ,ಮೇಘನಾ ಬಿ,ತೀರ್ಥಹಳ್ಳಿಯ ಯಾಂಕರ್ ನಂದನ್ ರವರಿಗೆ, ಸನ್ಮಾನಿಸಲಾಯಿತು.

ಇದೇ ಸಂಧರ್ಭದಲ್ಲಿ ಜೆಸಿ ಹೊಸನಗರ ಕೊಡಚಾದ್ರಿ ವಲಯ 24,20 22ರ ಅಧ್ಯಕ್ಷರಾದ HGF ಸೀಮಾ ಕಿರಣ್ ರವರ ಕವನಸಂಕಲನದ ಮುಖಪುಟ ಬಿಡುಗಡೆಗೊಳಿಸಲಾಯಿತು.


ನ್ಯಾಷನಲ್ ಬ್ಯೂಟಿ ಪೆಜೆನ್ಟ್ ನಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳುತ್ತಿರುವ ಜೆಸಿಐ ಸೀಮಾ ಕಿರಣ್


ನ್ಯಾಶನಲ್ ಬ್ಯೂಟಿ ಪೆಜೆನ್ಟ್ ಸೆ.22 ರಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದ್ದು ಸೀಮಾ ಶೆರಾವೊ ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸಲು ದೆಹಲಿಯತ್ತ ಪ್ರಯಾಣಿಸಿದ್ದಾರೆ.

ಬೆಂಗಳೂರಿನಲ್ಲಿ ಜುಲೈ30 ರಂದು ನಡೆದ ಮಾವಿನ್ ಪ್ಲಸ್ ಇಂಡಿಯಾ ಬ್ಯೂಟಿ ಪೆಜೆನ್ಟ್ ಅಡಿಷನ್ ನಲ್ಲಿ ಹೊಸನಗರದ ಜೆಸಿಐ ಕೊಡಚಾದ್ರಿ ಅಧ್ಯಕ್ಷೆ ಸೀಮಾ ಶೆರಾವೊ ನ್ಯಾಷನಲ್ ಬ್ಯೂಟಿ ಪೆಜೆನ್ಟ್ ಗೆ ಆಯ್ಕೆಯಾಗಿದ್ದರು ಈಗ ಕರ್ನಾಟಕ ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸಲು ದೆಹಲಿಯತ್ತ ಪಯಣ ಬೆಳೆಸಿದ್ದಾರೆ.

ಹೊಸನಗರದ ಸೀಮಾ 11 ವರ್ಷದಿಂದ ಹೊಸನಗರದ ಸಿಯಂಟೋ ಬ್ಯೂಟಿ ಸಲೂನ್ ನಡೆಸುತ್ತಿದ್ದು, 20 -22ರ ಜೆಸಿಐ ಹೊಸನಗರ ಕೊಡಚಾದ್ರಿಯ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಕೂಡ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದಾರೆ. ಬ್ಯೂಟಿಷನ್ ಅಸೋಸಿಯೇಷನ್ ಹೊಸನಗರದ ಮೊದಲ ಅಧ್ಯಕ್ಷರು ಹಾಗೂ ಸ್ಥಾಪಕ ಅಧ್ಯಕ್ಷರಾಗಿ ಕೂಡ ತೊಡಗಿಸಿಕೊಂಡಿದ್ದಾರೆ.

ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ ಹೊಸನಗರ ತಾಲೂಕಿನ ಅಧ್ಯಕ್ಷರಾಗಿರುವ ಸೀಮಾ ಇದೀಗ ಕರ್ನಾಟಕ ರಾಜ್ಯದಿಂದ ನ್ಯಾಶನಲ್ ಬ್ಯೂಟಿ ಸ್ಪರ್ಧೆಗೆ ಆಯ್ಕೆಯಾಗಿ ಹಳ್ಳಿಯಿಂದ ದಿಲ್ಲಿಗೆ ಆಯ್ಕೆಯಾಗುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.


Leave a Reply

Your email address will not be published. Required fields are marked *