Headlines

ಹೆಬ್ಬಂಡೆಯ ಆಲಯ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಭಕ್ತಸಾಗರ :

ರಿಪ್ಪನ್‌ಪೇಟೆ;-ಇತಿಹಾಸ ಪ್ರಸಿದ್ದ ಹೆಬ್ಬಂಡೆಯ ಅಲಯ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಭಕ್ತಜನಸಾಗರವೇ ಶ್ರದ್ದಾಭಕ್ತಿಯಿಂದಾ ಹರಿದು ಬಂದಿತು.

ಅಮ್ಮನಘಟ್ಟ ಜಾತ್ರೆ ನಾಡಿನ ಪ್ರಮುಖ ಜಾತ್ರೆಗಳಲ್ಲಿ ಒಂದಾಗಿದ್ದು ಮಲೆನಾಡಿನ ಸಹ್ಯಾದ್ರಿಯ ಪರ್ವತ ತಪ್ಪಲಿನಲ್ಲಿ  ವಿಶಿಷ್ಟ ಪ್ರಾಕೃತ್ತಿಕ ಸೌಂದರ್ಯದಲ್ಲಿ ಕಂಗೊಳಿಸುವ ಧಾರ್ಮಿಕ ಶ್ರದ್ದಾಕೇಂದ್ರವಾದ ಜೇನುಕಲ್ಲಮ್ಮ ಹಲವು ಜನಾಂಗಗಳ ಕುಲದೇವತೆಯಾಗಿ ನೆಲೆ ನಿಂತಿರುವ ದೇವಿಗೆ ಪ್ರಧಾನ ಅರ್ಚಕ ಭಾಸ್ಕರ್ ಜೋಯ್ಸ್ ನೇತೃತ್ವದಲ್ಲಿ ಪುರೋಹಿತ ಬಳಗ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.


ಪಿತೃ ಪಕ್ಷದಲ್ಲಿ ಹುಣ್ಣಿಮೆಯಿಂದ ಅಮಾವಾಸ್ಯೆಯ ವರೆಗೆ ಎರಡು ಮಂಗಳವಾರ ಶುಕ್ರವಾರದೊಂದು ಜಾತ್ರೆ ನಡೆಯುತ್ತಿದ್ದು ತನ್ನಲ್ಲಿಗೆ ಬರುವ ಭಕ್ತರನ್ನು ಎಂದಿಗೂ ಕೈಬಿಡಲಾರಳು.ಬೇಡಿ ಬರುವ ಭಕ್ತರ ಸಂಕಷ್ಟವನ್ನು ಪರಿಹರಿಸುವ ಕರುಣಾಳು ತಾಯಿ ಜಗನ್ಮಾತೆ ಜೇನುಕಲಮ್ಮ ದೇವಿಯ ದರ್ಶನಕ್ಕಾಗಿ ಸಹಸ್ರಾರು ಸಂಖ್ಯೆಯಲ್ಲಿ ಜನಸಾಗರವೇ ಘಟ್ಟಕ್ಕೆ ಬರುತ್ತಾರೆ.ಬಂದವರು ತಮ್ಮ ಹರಿಕೆ ಸಲ್ಲಿಸಿ ಪೂಜೆ ನಡೆಸಿ ಬುತ್ತಿಸೇವೆ ಒಪ್ಪಿಸುವುದು ಇಲ್ಲಿನ ವಿಶೇಷವಾಗಿದೆ.

ಬುತ್ತಿಸೇವೆ;-

ಅಮ್ಮನಿಗೆ ನಡೆದುಕೊಳ್ಳುವ ಜನಾಂಗದವರು ಬುತ್ತಿ ಸೇವೆ ಒಪ್ಪಿಸದೇ ಜಾತ್ರೆಗೆ ಬರುವಂತಿಲ್ಲ.ಜಾತ್ರೆಯಂದು ಬುತ್ತಿಕಟ್ಟಿಕೊಂಡು ಬರುವ ಕುಟುಮಬಸ್ಥರು ದೇವಿಗೆ ವಿಶೆಷ ಪೂಜೆ ಸಲ್ಲಿಸಿ ಬುತ್ತಿ ನೈವೇದ್ಯ ಮಾಡಿ ಜಾತ್ರೆಯಲ್ಲಿನ ಹಲವು ಸಂಬಂಧಿಕರಿಗೆ ಹಾಗೂ ಭಕ್ತರಿಗೆ ಹಂಚಿ ಮೀಸಲು ಮೊಸರು ಬುತ್ತಿ ಸವಿಯುತ್ತಾರೆ.

ಕೊರೋನಾ ಕಾರಣ ಎರಡು ವರ್ಷ ಜಾತ್ರಾ ಮಹೋತ್ಸವಕ್ಕೆ ಬ್ರೇಕ್ ಬಿದ್ದಿದ್ದು ಈ ಭಾರಿ ಇತಿಹಾಸದಲ್ಲಿ ಇಷ್ಟು ಸಂಖ್ಯೆಯಲ್ಲಿ ಭಕ್ತರ ಸಂಖ್ಯೆ ಹರಿದು ಬಂದಿರುವುದು ದಾಖಲೆಯಾಗಿದೆ ಎಂದು ಜೇನುಕಲ್ಲಮ್ಮ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಿ.ಸ್ವಾಮಿರಾವ್ ಮಾಧ್ಯಮದವರಿಗೆ ತಿಳಿಸಿ ಇದೊಂದು ಪುಣ್ಯ ಕ್ಷೇತ್ರ ಪ್ರಕೃತಿಯ ರಮಣೀಯ ತಾಣದಲ್ಲಿ ನೆಲೆ ನಿಂತಿರುವ ಜೇನುಕಲ್ಲಮ್ಮ ದರ್ಶನಕ್ಕಾಗಿ ಬರುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ತಾಯಿಯಲ್ಲಿ ಹರಿಕೆ ಹೊತ್ತು ಬರುವುದರೊಂದಿಗೆ ಮಗಳ ಮದುವೆ ಮತ್ತು ನವದಂಪತಿಗಳು ಮತ್ತು ಮಕ್ಕಳಾಗಲಿ ಎಂದು ಹಾಗೂ ತಮ್ಮ ಜಮೀನಿನಲ್ಲಿ ಹಾಕಲಾದ ಬೆಳೆಗಳಿಗೆ ರೋಗ ರುಜನೆ ಹರಡದಂತೆ ರಕ್ಷಿಸು ಎಂದು ಪ್ರಾರ್ಥಿಸಿ ಹರಿಕೆ ಕಾಣಿಕೆ ಸಪರ್ಮಣೆ ಮಾಡುವುದು ಈ ಜಾತ್ರಾ ಮಹೋತ್ಸವದ ವಿಶೇಷವೆಂದರು.

ಸೆ.28 ರಂದು ಧರ್ಮಸಭೆ;-

ಸೆಪ್ಟಂಬರ ೨೮ ರಂದು ಜಾತ್ರಾ ಕಾರ್ಯಕ್ರಮದಲ್ಲಿ ಧರ್ಮಸಭೆಯನ್ನು ಅಯೋಜಿಸಲಾಗಿದೆ.ಧರ್ಮಸಭೆಯ ದಿವ್ಯಸಾನಿಧ್ಯವನ್ನು ಮೂಲೆಗದ್ದೆ ಸದಾನಂದಶಿವಯೋಗಾಶ್ರಮದ ಮ.ನಿ.ಪ್ರ.ಅಭಿನವಚನ್ನಬಸವ ಮಹಾಸ್ವಾಮಿಜಿ.ಹಾಗೂ ನಿಟ್ಟೂರು ನಾರಾಯಣಗುರು ಸಂಸ್ಥಾನಮಠದ ಶ್ರೀ ರೇಣುಕಾನಂದ ಸ್ವಾಮಿಜಿ ವಹಿಸಿ ಅಶೀರ್ವಚನ ನೀಡುವರು.

ಅಕ್ಟೋಬರ್ ೧ ರಂದು ಕಾಮಗಾರಿ ವೀಕ್ಷಣೆ;-

ಜೇನುಕಲ್ಲಮ್ಮ ದೇವಸ್ಥಾನದ ಬಳಿಯಲ್ಲಿ ಸರ್ಕಾರದ ಅನುದಾನದಡಿಯಲ್ಲಿ ನಿರ್ಮಿಸಲಾಗುತ್ತಿರುವ ಅಭಿವೃದ್ದಿ ಕಾಮಗಾರಿಗಳ ವೀಕ್ಷಣೆಗೆ ಸಂಸದ ಬಿ.ವೈ.ರಾಘವೇಂದ್ರ,ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ,ಶಾಸಕ ಹರತಾಳು ಹಾಲಪ್ಪ ಭೇಟಿ ನೀಡಿ ಪರಿಶೀಲನೆ ನಡೆಸುವರು ಎಂದು ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಬಿ.ಸ್ವಾಮಿರಾವ್, ಪ್ರಧಾನಕಾರ್ಯದರ್ಶಿ ಸುದೀರ್ ಭಟ್,ಸಮಿತಿ ಪದಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *