ರಿಪ್ಪನ್ ಪೇಟೆ ; ಹುಂಚ ವ್ಯಾಪ್ತಿಯ ಮಳಲಿಕೊಪ್ಪ ಗ್ರಾಮದ ಸರ್ವೇ ನಂಬರ್ 04 ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ಗಡಿಭಾಗವಾದ ಹುಂಚದಕಟ್ಟೆ ಗ್ರಾಮದ ಸರ್ವೇ ನಂಬರ್ 18 ರಲ್ಲಿ ಅಕ್ರಮವಾಗಿ ಅಕೇಶಿಯಾ ನೆಡುತೋಪಿನಲ್ಲಿ ಅಕೇಶಿಯಾ ಮರಗಳನ್ನು ಕಡಿತಲೆ ಮಾಡಿ ಕಳ್ಳಸಾಗಾಣಿಕೆ ಮಾಡುತ್ತಿದ್ದ ಆರೋಪದ ಅಡಿಯಲ್ಲಿ ಅರಸಾಳು ವಲಯ ಅರಣ್ಯಾಧಿಕಾರಿಗಳು ಇಬ್ಬರ ಮೇಲೆ ಅರಣ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.
ಹುಂಚದ ಕಟ್ಟೆ ಗ್ರಾಮದ ಕುಪುಟಹಳ್ಳಿ ನಿವಾಸಿಗಳಾದ ರಾಮಚಂದ್ರ ಹಾಗೂ ಮುದ್ದಪ್ಪ ಎಂಬುವರ ಮೇಲೆ ಅರಸಾಳು ವಲಯ ಅರಣ್ಯಾಧಿಕಾರಿ kfa 1963-u/s 33,50,62,80 ಮತ್ತು kfr 1969-u/s 144,165 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಅಕೇಶಿಯಾ ನಾಟಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಗೊಂದಲದ ಗೂಡಾಗಿದ್ದ ಪ್ರಕರಣ :
ತೀರ್ಥಹಳ್ಳಿ ತಾಲ್ಲೂಕಿನ ಗಡಿಭಾಗದಲ್ಲಿ ನಡೆದ ಪ್ರಕರಣವಾಗಿದ್ದರಿಂದ ತೀರ್ಥಹಳ್ಳಿ, ಹೊಸನಗರ ಮತ್ತು ಅರಸಾಳು ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಕ್ಷೇತ್ರದ ಗೊಂದಲವುಂಟಾಗಿದರಿಂದ ಹಾಗೂ ಪ್ರಭಾವಿ ವ್ಯಕ್ತಿಗಳ ಕೈವಾಡವಿರುವ ಕಾರಣ ಕೇಸ್ ದಾಖಲಿಸಲು ಹಿಂದೇಟು ಹಾಕಿದ್ದರು ನಂತರ ವಿಷಯ ಎಲ್ಲೆಡೇ ಹಬ್ಬುತಿದ್ದಂತೆ ಎಚ್ಚೆತ್ತುಕೊಂಡ ಅರಣ್ಯ ಅಧಿಕಾರಿಗಳು ಕೇಸ್ ದಾಖಲಿಸಿದ್ದಾರೆ ಎನ್ನಲಾಗುತ್ತಿದೆ….
ಒತ್ತುವರಿ ಕಾರಣಕ್ಕಾಗಿ ಎಂಪಿಎಂ ನಡುತೋಪಿನಲ್ಲಿ ಕಡಿತಲೆ ನಡೆಸಿ, ಅದನ್ನು ರಾಜಾರೋಷವಾಗಿ ಸಾಗಿಸುತ್ತಿದ್ರು, ಅರಣ್ಯ ಇಲಾಖೆ ಮೌನವೇ ಆಭರಣ ಎಂಬಂತ್ತಿತ್ತು.ಕಾಡು ರಕ್ಷಣೆಯ ಹೊಣೆ ತಮ್ಮದಲ್ಲದ ಕೆಲಸ ಅಂದುಕೊಂಡಿದ್ದರೇನೋ ದೊಡ್ಡ ಮಟ್ಟದ ಅಧಿಕಾರಿಗಳು, ಅಥವಾ ಜನವಸತಿ ಜಾಗವನ್ನು ಕಾಡಿನೊಳಕ್ಕೆ ಸೇರಿಸುವ ಆರ್ಥಿಕ ಯೋಜನೆಯಲ್ಲಿದ್ದಾರೋ ಏನೋ? ಆ ದೇವರೇ ಬಲ್ಲ …..