ರಿಪ್ಪನ್ ಪೇಟೆ : ಇಲ್ಲಿನ ಶಾರದಾ ರಾಮಕೃಷ್ಣ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಿಪ್ಪನ್ ಪೇಟೆಯ ಚಿನ್ನೆಗೌಡ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಬಾಲಕರ ವಿಭಾಗದ ಕಬ್ಬಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಿಲೇ ಸ್ಪರ್ಧೆಯಲ್ಲಿ ಬಾಲಕ ಬಾಲಕಿಯರು ದ್ವಿತೀಯ ಹಾಗು ತೃತೀಯ ಸ್ಥಾನವನ್ನು ಪಡೆಯುವುದರ ಜೊತೆಗೆ ವೈಯಕ್ತಿಕ ವಿಭಾಗದಲ್ಲಿ 1500 ಹಾಗೂ 800 ಮೀಟರ್ ಓಟದಲ್ಲಿ ಆಯುಷ್ ಎಚ್.ಆರ್ .ಪ್ರಥಮ ಸ್ಥಾನ, ಎತ್ತರ ಜಿಗಿತದಲ್ಲಿ ಸೌರವ್. ಎಂ . ದ್ವಿತೀಯ ಸ್ಥಾನ ಬಾಲಕಿಯರ ವಿಭಾಗದ ಜಾವಲಿನ್ ಎಸೆತದಲ್ಲಿ ತನ್ಮಯಿ .ಎಚ್ .ಜಿ . ದ್ವಿತೀಯ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜೊತೆಗೆ ಬಾಲಕಿಯರ ರಿಲೆಯಲ್ಲಿ ತೃತೀಯ ಸ್ಥಾನವನ್ನು ಸಹ ಪಡೆದಿರುತ್ತಾರೆ.
ಸ್ಪರ್ಧೆಯಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಶಾಲಾ ಸಂಸ್ಥಾಪಕರಾದ ಡಿ. ದೇವರಾಜ್ ,ವ್ಯವಸ್ಥಾಪಕ ಸಂದೇಶ ಎಂ. ಎನ್ .ಮುಖ್ಯ ಶಿಕ್ಷಕ ರವಿ ದೈಹಿಕ ಶಿಕ್ಷಕ ವಿನಯ್ ಮುಂತಾದವರು ಜಿಲ್ಲಾ ಮಟ್ಟದಲ್ಲಿಯೂ ಸಹ ಉತ್ತಮ ಸಾಧನೆ ತೋರಲಿ ಎಂದು ಶುಭ ಹಾರೈಸಿದ್ದಾರೆ.