ರಿಪ್ಪನ್ ಪೇಟೆ: ಶೈಕ್ಷಣಿಕ ಸೇವೆ ಎನ್ನುವುದು ಸಮಾಜದಲ್ಲಿ ಅತ್ಯುತ್ತಮ ಕಾರ್ಯವಾಗಿದ್ದು ಇದು ಜನಮಾನಸದಲ್ಲಿ ಉಳಿಯುತ್ತದೆ ಎಂದು ವೈದ್ಯ ರತ್ನ ಪ್ರಶಸ್ತಿ ವಿಜೇತ ಹಾಗೂ ಮಾಜಿ ಶಾಸಕ ಡಾ.ಜಿ. ಡಿ. ನಾರಾಯಣಪ್ಪ ಹೇಳಿದರು.
ಸರಕಾರಿ ಪದವಿ ಪೂರ್ವ ಕಾಲೇಜು ಅಮೃತ ಮತ್ತು ಅಮೃತ ಗ್ರಾಮಸ್ಥರು ಶನಿವಾರ ದಿವಂಗತ ಜಿ. ಎಸ್.ಗಣೇಶ್ ಮೂರ್ತಿ ಪ್ರಾಚಾರ್ಯರು ಮತ್ತು ಶಿಕ್ಷಣತಜ್ಞರು ಮತ್ತು ಎಂ.ಹೆಚ್.ಪ್ರಕಾಶ್ ಪ್ರಾಚಾರ್ಯರು ರ ವರಿಗೆ ಆಯೋಜಿಸಲಾಗಿದ್ದ ಭಾವಾಂಜಲಿ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ತೀರ್ಥಳ್ಳಿ ಹಾಗೂ ಹೊಸನಗರ ತಾಲೂಕಿನ ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎಂದು ಹಗಲಿರುಳು ಶ್ರ ಮಿಸು ವುದರ ಮೂಲಕ ಅವರುಗಳ ಶೈಕ್ಷಣಿಕ ಜೀವನಕ್ಕೆ ದಾರಿದೀಪ ವಾಗಿದ್ದರು. ಸಮಾಜಸೇವೆಯಲ್ಲಿ ಶೈಕ್ಷಣಿಕ ಸೇವೆ ಅತ್ಯುತ್ತಮ ಸೇವೆಯಾಗಿದೆ ಎಂದು ನಂಬಿದ್ದ ಅವರು ತಮ್ಮ ಜೀವಿತದ ಕೊನೆಯ ಗಳಿಗೆಯಲ್ಲಿಯೂ ಶೈಕ್ಷಣಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.ಅವರ ಅಕಾಲಿಕ ನಿಧನ ಶೈಕ್ಷಣಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಅಮೃತ ಕಾಲೇಜಿನ ನಿವೃತ್ತ ಪ್ರಾಚಾರ್ಯ ಶೇಖರ್ ಗೌಳೆರ್ ಆಕಾಲಿಕವಾಗಿ ಮೃತರಾದ ಪ್ರಾಚಾರ್ಯ ಎಂ. ಎಚ್. ಪ್ರಕಾಶ್ ರವರ ಕುರಿತು ಮಾತನಾಡಿ ನಡೆ ನುಡಿಗಳಲ್ಲಿ ನೇರ ವ್ಯಕ್ತಿತ್ವ ಮತ್ತು ಕರ್ತವ್ಯ ನಿಷ್ಠೆಯ ಮೂಲಕ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕ ರ ಜನಮಾನಸದಲ್ಲಿ ಉಳಿದುಕೊಂಡಿರುವ ವ್ಯಕ್ತಿಯಾಗಿದ್ದರು. ಅವರ ಆಕಾಲಿಕ ಮರಣ ವಿದ್ಯಾರ್ಥಿಗಳಿಗೆ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ. ಎಸ್. ನಾರಾಯಣರಾವ್. ಶಿಕ್ಷಣ ತಜ್ಞ ದಿವಂಗತ ಗಣೇಶ್ ಮೂರ್ತಿ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ವತ್ಸಲಾ ಗಣೇಶಮೂರ್ತಿ ಸುಧಾ ಪ್ರಕಾಶ್ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಂಡಿ ರಾಮಚಂದ್ರ. ಸೋಮಶೇಖರ ಟಿ.ಡಿ ಕಾರ್ಯಧ್ಯಕ್ಷರು ಕಾಲೇಜು ಅಭಿವೃದ್ಧಿ ಸಮಿತಿ.ಗ್ರಾಮ ಪಂಚಾಯಿತಿ ಅಧ್ಯಕ್ಷರು.ಸದಸ್ಯರು. ಅಮೃತ ಸರಕಾರಿ ಪದವಿ ಪೂರ್ವ ಕಾಲೇಜಿನ ಹಳೆಯ ವಿದ್ಯಾರ್ಥಿಗಳು. ಅಮೃತ ಗ್ರಾಮದ ಗ್ರಾಮಸ್ಥರು. ದಿವಂಗತ ಹೆಚ್.ಎಸ್ ಗಣೇಶ್ ಮೂರ್ತಿ .ಮತ್ತು ಎಂ. ಹೆಚ್.ಪ್ರಕಾಶ್ ಕುಟುಂಬಗಳ ಸದಸ್ಯರುಗಳು ಭಾಗವಹಿಸಿದ್ದರು.