ಡಿ ದರ್ಜೆ ನೌಕರನ ನಿವೃತ್ತಿಗೆ ಸ್ಪೆಷಲ್ ಗಿಫ಼್ಟ್ – ಉಪವಿಭಾಗಧಿಕಾರಿ ಕಾರಿನಲ್ಲಿ ಮನೆಗೆ ಬೀಳ್ಕೊಡುಗೆ
ಸಾಗರ : ತಮ್ಮ ಕಚೇರಿಯ ನೌಕರ ನಿವೃತ್ತಿಯಾದ ಹಿನ್ನೆಲೆಯಲ್ಲಿ ಸಾಗರ ಉಪವಿಭಾಗಾಧಿಕಾರಿ ವಿಶೇಷ ಗೌರವದೊಂದಿಗೆ ಆತನಿಗೆ ಬೀಳ್ಕೊಡಿಗೆ ಕೊಟ್ಟಿದ್ದಾರೆ.
ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಅವರು ನಿವೃತ್ತಿಯಾದ ನೌಕರ ಕೃಷ್ಣಪ್ಪ ಅವರನ್ನ ತಮ್ಮ ಸರ್ಕಾರಿ ವಾಹನದಲ್ಲಿ ಕೂರಿಸಿಕೊಂಡು ಹೋಗಿ ಮನೆಗೆ ಡ್ರಾಪ್ ಮಾಡುವ ಮೂಲಕ ಹೃದಯಸ್ಪರ್ಶಿ ಬೀಳ್ಕೊಡಿಗೆ ನೀಡಿದ್ದಾರೆ.
ಸಾಗರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸುಮಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ ಕೃಷ್ಣಪ್ಪ ಅವರು ಸೋಮವಾರದಂದು ವಯೋನಿವೃತ್ತಿ ಹೊಂದಿದ ಪ್ರಯುಕ್ತ ಸಾಗರ ಉಪವಿಭಾಗಾಧಿಕಾರಿ ಕಚೇರಿ ವತಿಯಿಂದ ಬೀಳ್ಕೊಡಲಾಯಿತು.
ನೌಕರರಾದ ಕೃಷ್ಣಪ್ಪ ವಯೋನಿವೃತ್ತಿ ಪ್ರಯುಕ್ತ ಉಪವಿಭಾಗಾಧಿಕಾರಿ ಪಲ್ಲವಿ ಅವರು ಸರ್ಕಾರಿ ವಾಹನದಲ್ಲಿ ಕೃಷ್ಣಪ್ಪ ಅವರನ್ನು ಮನೆಗೆ ತಲುಪಿಸಿ ಅವರಿಗೆ ವಿಶೇಷವಾಗಿ ಬೀಳ್ಕೊಟ್ಟರು.
ನೌಕರ ಮತ್ತು ಅಧಿಕಾರಿ ಎನ್ನುವ ಬೇಧಭಾವ ತೋರದೇ ಇರುವ, ಅಧಿಕಾರಿಗಳ ಕಾರ್ಯ ಮಾದರಿಯಾಯ್ತು.