ನಿದ್ದೆ ಮಂಪರಿನಲ್ಲಿದ್ದ ಕಾರು ಚಾಲಕನಿಂದ ಸರಣಿ ಅಪಘಾತ – ತಪ್ಪಿದ ಭಾರಿ ಅನಾಹುತ
ತೀರ್ಥಹಳ್ಳಿ: ನಿದ್ದೆ ಮಂಪರಿನಲ್ಲಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮೂರು ಬೈಕ್ ಗಳಿಗೆ ಡಿಕ್ಕಿಯಾಗಿ ನಂತರ ಕಾರು ಹಲಸಿನ ಮರಕ್ಕೆ ಹೊಡೆದ ಘಟನೆ ತಾಲೂಕಿನ ರಾಮಕೃಷ್ಣಪುರ ಸಮೀಪದಲ್ಲಿ ಸೋಮವಾರ ಸಂಭವಿಸಿದೆ.
ಜನನಿಬಿಡ ಪ್ರದೇಶವಾದ ಇಲ್ಲಿ ಅದೃಷ್ಟವಶಾತ್ ಅಪಘಾತ ನಡೆಯುವ ಸಂಧರ್ಭದಲ್ಲಿ ಯಾರು ಇಲ್ಲದೇ ಇದ್ದದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ಕಮ್ಮರಡಿಯ ಮಾನಪ್ಪ ಎಂಬುವರ ಕಾರು ಅಪಘಾತಕ್ಕೆ ಒಳಗಾಗಿದ್ದು ಕಾರು ಚಲಾಯಿಸುತಿದ್ದಾಗ ನಿದ್ದೆ ಮಂಪರಿನಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮೂರು ಬೈಕ್ ಗಳಿಗೆ ಡಿಕ್ಕಿ ಹೊಡೆದ ಕಾರು ನಂತರ ಪಕ್ಕದಲ್ಲಿದ್ದ ಹಲಸಿನ ಮರಕ್ಕೆ ಡಿಕ್ಕಿಯಾಗಿದೆ.
ಘಟನೆಯಲ್ಲಿ ಮೂರು ಬೈಕ್ ಹಾಗೂ ಕಾರು ನುಜ್ಜು ಗುಜ್ಜಾಗಿದೆ. ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿರುವುದಿಲ್ಲ.
ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.