POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಕೆಲಸಕ್ಕೆಂದು ಮನೆಯಿಂದ ತೆರಳಿದ್ದ ಕೆದಲಗುಡ್ಡೆಯ ಲಕ್ಷ್ಮಣ ನಾಪತ್ತೆ: ಪತ್ತೆಗೆ ಸಹಕರಿಸುವಂತೆ ಪೊಲೀಸರ ಮನವಿ

Screenshot 2026 08 21 15 30 19 542 com.picsart.studio edit

ಕೆಲಸಕ್ಕೆಂದು ಮನೆಯಿಂದ ತೆರಳಿದ್ದ ಕೆದಲಗುಡ್ಡೆಯ ಲಕ್ಷ್ಮಣ ನಾಪತ್ತೆ: ಪತ್ತೆಗೆ ಸಹಕರಿಸುವಂತೆ ಪೊಲೀಸರ ಮನವಿ

30-year-old Lakshman from Kedalagudde, Kenchanala, Hosanagara, went missing after leaving home for daily wage work in Puramatha village on July 29, 2026.

ರಿಪ್ಪನ್ ಪೇಟೆ : ಇಲ್ಲಿನ ಕೆಂಚನಾಲ ಗ್ರಾಮದ ಕೆದಲಗುಡ್ಡೆ ನಿವಾಸಿ, 30 ವರ್ಷದ ಲಕ್ಷ್ಮಣ ತಂದೆ ದಿವಂಗತ ಗಿರಿಯಪ್ಪ ಎಂಬವರು ಕಾಣೆಯಾಗಿದ್ದಾರೆ.

ಲಕ್ಷ್ಮಣ ಅವರು ಜುಲೈ 29, 2026ರಂದು ಕೆದಲಗುಡ್ಡೆಯಲ್ಲಿರುವ ತಮ್ಮ ಮನೆಯಿಂದ ಪುರಮಠ ಗ್ರಾಮಕ್ಕೆ ಕೂಲಿ ಕೆಲಸಕ್ಕೆ ತೆರಳಿದ್ದರು. ಆದರೆ ಕೆಲಸಕ್ಕೆ ತೆರಳಿದ ಬಳಿಕ ಮನೆಗೆ ವಾಪಸ್ ಬಂದಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಕಾಣೆಯಾಗಿರುವ ಲಕ್ಷ್ಮಣ ಅವರ ಎತ್ತರ ಸುಮಾರು 5.5 ಅಡಿ ಇದ್ದು, ಮನೆಯಿಂದ ತೆರಳುವಾಗ ಕೆಂಪು ಬಣ್ಣದ ಶರ್ಟ್ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದರು. ಅವರು ಕನ್ನಡ ಭಾಷೆ ಮಾತನಾಡುತ್ತಾರೆ ಎಂದು ತಿಳಿಸಲಾಗಿದೆ.

ಲಕ್ಷ್ಮಣ ಅವರು ಎಲ್ಲಿಯಾದರೂ ಕಂಡುಬಂದಲ್ಲಿ ಅಥವಾ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಸಂಪರ್ಕ ಸಂಖ್ಯೆ:  8277983045  8050816349

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.