Headlines

ಆನಂದಪುರದಲ್ಲಿ ರಸ್ತೆ ಅಪಘಾತ: 8 ವರ್ಷದ ಬಾಲಕನಿಗೆ ಲಗೇಜ್ ಆಟೋ ಡಿಕ್ಕಿಯಾಗಿ ಗಂಭೀರ ಗಾಯ, ಚಿಕಿತ್ಸೆಗೆ ನೆರವಿನ ಮನವಿ

JPEG 20260929 131711

ಆನಂದಪುರದಲ್ಲಿ ರಸ್ತೆ ಅಪಘಾತ: 8 ವರ್ಷದ ಬಾಲಕನಿಗೆ ಲಗೇಜ್ ಆಟೋ ಡಿಕ್ಕಿಯಾಗಿ ಗಂಭೀರ ಗಾಯ, ಚಿಕಿತ್ಸೆಗೆ ನೆರವಿನ ಮನವಿ

An 8-year-old boy was seriously injured after a Tata luggage auto hit him near Panduranga Temple in Dasakoppa, Sagara taluk. Anandapura Police have registered a case and investigation is underway.

ಸಾಗರ: ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ರಸ್ತೆ ಬದಿಯಲ್ಲಿ ನಿಂತಿದ್ದ 8 ವರ್ಷದ ಬಾಲಕನಿಗೆ ಲಗೇಜ್ ಆಟೋ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಾಗರ ತಾಲೂಕಿನ ದಾಸಕೊಪ್ಪ ಗ್ರಾಮದ ಪಾಂಡುರಂಗ ದೇವಾಲಯದ ಬಳಿ ಸೆ.27ರಂದು ಸಂಜೆ ನಡೆದಿದೆ.

ಗೌತಮಪುರ ಕಡೆಯಿಂದ ಆನಂದಪುರದತ್ತ ಟಾಟಾ ಲಗೇಜ್ ಆಟೋವನ್ನು ಚಾಲಕ ಸಂತೋಷ್ ಕೊಲ್ಲಪ್ಪ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದರು. ಈ ವೇಳೆ ಅತಿವೇಗ ಹಾಗೂ ಜಾಗರೂಕತೆ ವಹಿಸದೆ ವಾಹನ ಚಾಲನೆ ಮಾಡಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆನಂದಪುರ–ಶಿಕಾರಿಪುರ ರಸ್ತೆಯ ಬದಿಯಲ್ಲಿರುವ ದಾಸಕೊಪ್ಪ ಗ್ರಾಮದ ಅಂಗಡಿ ಬಳಿ ನಿಂತಿದ್ದ ತನ್ಮಯ್ (8), ತಂದೆ ಪ್ರಶಾಂತ್ ಕೃಷ್ಣಮೂರ್ತಿ ಎಂಬ ಬಾಲಕನಿಗೆ ಆಟೋದ ಗ್ರಿಲ್ ತಾಗಿ ಗಾಯವಾಗಿದೆ.

ಅಪಘಾತದಲ್ಲಿ ಬಾಲಕನ ಬಲ ಹಣೆ ಹಾಗೂ ಬಲಕೈಗೆ ಗಂಭೀರ ಗಾಯಗಳಾಗಿದ್ದು, ಹಣೆ ಭಾಗದಲ್ಲಿ ತೆರೆದ ಗಾಯವಾಗಿ ರಕ್ತಸ್ರಾವವಾಗಿದೆ. ಕೂಡಲೇ ಬಾಲಕನನ್ನು ಆನಂದಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಬಾಲಕನ ಚಿಕಿತ್ಸೆಗೆ ನೆರವಿನ ಮನವಿ

ಬಾಲಕನಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದು ಈಗಾಗಲೇ ಆನಂದಪುರ ಪಿಎಸ್ ಐ ಪ್ರವೀಣ್ ಎಸ್ ಪಿ ಹಾಗೂ ಸಿಬ್ಬಂದಿಗಳು ಆರ್ಥಿಕ ನೆರವು ನೀಡಿದ್ದು , ಚಿಕಿತ್ಸಾ ವೆಚ್ಚವೂ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಬಡ ಬಾಲಕನ ಚಿಕಿತ್ಸೆಗೆ ಸಾಧ್ಯವಾದಷ್ಟು ನೆರವು ನೀಡುವ ಮೂಲಕ ಮಾನವೀಯತೆ ಮೆರೆಯುವಂತೆ ಮನವಿ ಮಾಡಲಾಗಿದೆ.

ನೆರವು ನೀಡಲು ಬಯಸುವವರು ಕುಟುಂಬದವರನ್ನು ಸಂಪರ್ಕಿಸಿ, ಅಗತ್ಯ ಮಾಹಿತಿ ಪಡೆದು ಸಹಾಯ ಮಾಡಬಹುದು. ಹೆಚ್ಚಿನ ಮಾಹಿತಿಗೆ ಈ ನಂಬರ್ ನ್ನು ಸಂಪರ್ಕಿಸಿ : 7975326065 ,9480168013 , 9738703405