Headlines

ಮತ್ತೆ ಬಂತು ನ್ಯೂಸ್ 18 ಕರುನಾಡ ಹಬ್ಬ –  ಅಕ್ಟೋಬರ್ 2 ರಿಂದ ಭರ್ಜರಿ ಆರಂಭ

IMG 20260929 WA0005

ಮತ್ತೆ ಬಂತು ನ್ಯೂಸ್ 18 ಕರುನಾಡ ಹಬ್ಬ –  ಅಕ್ಟೋಬರ್ 2 ರಿಂದ ಭರ್ಜರಿ ಆರಂಭ | News18 Kannada’s popular Karunada Habba returns with a grand celebration from October 2, showcasing Karnataka’s culture, heritage, art, literature and Kannada pride.

ಶಿವಮೊಗ್ಗ : ಕನ್ನಡ ಸಂಸ್ಕೃತಿ, ಕಲೆ, ಆಹಾರ, ಮನೋರಂಜನೆ, ಹಾಗೂ ಶಾಪಿಂಗ್ ನ ಅದ್ದೂರಿ ಉತ್ಸವವು ಶಿವಮೊಗ್ಗದಲ್ಲಿ ನ್ಯೂಸ್ 18 ಕನ್ನಡ ವಾಹಿನಿಯ ನೇತೃತ್ವದಲ್ಲಿ ಕರುನಾಡ ಹಬ್ಬವಾಗಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು ಅಕ್ಟೋಬರ್ 2 ರಿಂದ ಮೂರು ದಿನಗಳ ಕಾಲ ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಗಳಿಗೆ ಪ್ರವೇಶ ಉಚಿತವಾಗಿದ್ದು ಇಲ್ಲಿ ವಿವಿಧ ರೀತಿಯ ಕಾರ್ಯಕ್ರಮ ನಡೆಯಲಿದೆ.

ಏನೆಲ್ಲಾ ಕಾರ್ಯಕ್ರಮ ಇರಲಿದೆ..!?

02-10-2026 ಶುಕ್ರವಾರ ಸಂಜೆ 6.00 pm ರಿಂದ 7.00pm ಉದ್ಘಾಟನಾ ಕಾರ್ಯಕ್ರಮ – ಮಧು ಬಂಗಾರಪ್ಪ ( ಜಿಲ್ಲಾ ಉಸ್ತುವಾರಿ ಸಚಿವರು )

7.00 pm ರಿಂದ 10.00 pm ನೃತ್ಯ ಮತ್ತು ಮನೋರಂಜನಾ ಕಾರ್ಯಕ್ರಮ, ಮುಕ್ತ ವೇದಿಕೆಯಲ್ಲಿ ಯಾರಾದರೂ ಭಾಗವಹಿಸಬಹುದು.. ಹಾಡು, ನೃತ್ಯ, ಯಾವುದೇ ರೀತಿಯ ಪ್ರತಿಭೆಗೆ ಅವಕಾಶ ಸಿಗುತ್ತದೆ.

03-10-2026 ಶನಿವಾರ, 12.00 pm ರಿಂದ 3.00pm ಅಡುಗೆ ಸ್ಪರ್ಧೆ, ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ – ಬಿ ವೈ ರಾಘವೇಂದ್ರ ( ಸಂಸದರು ),  6.00 pm ರಿಂದ 7.00pm ನೃತ್ಯ ಮತ್ತು ಮನೋರಂಜನಾ ಕಾರ್ಯಕ್ರಮ, 7.30 pm 8.00 pm ಮುಕ್ತ ವೇದಿಕೆಯಲ್ಲಿ ಯಾರಾದರೂ ಭಾಗವಹಿಸಬಹುದು ಹಾಡು, ನೃತ್ಯ, ಯಾವುದೇ ರೀತಿಯ ಪ್ರತಿಭೆಗೆ ಅವಕಾಶ ಸಿಗುತ್ತದೆ.

04-10-2026 ಭಾನುವಾರ 11.00 am ರಿಂದ 01.00 pm ರಂಗೋಲಿ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆ, 1.00 pm ರಿಂದ 3.00 pm ಅಡುಗೆ ಸ್ಪರ್ಧೆ ಅಂತಿಮ ಸುತ್ತು 6.00 pm ರಿಂದ 7.00 pm ಫ್ಯಾಷನ್ ಶೋ ಕಾರ್ಯಕ್ರಮ, 8.00 pm ರಿಂದ 9.00pm ಮುಕ್ತ ವೇದಿಕೆಯಲ್ಲಿ ಯಾರಾದರೂ ಭಾಗವಹಿಸಬಹುದು. ಹಾಡು, ನೃತ್ಯ, ಯಾವುದೇ ರೀತಿಯ ಪ್ರತಿಭೆಗೆ ಅವಕಾಶ ಸಿಗುತ್ತದೆ. 9.00 pm ರಿಂದ 10.00pm ಬಹುಮಾನ ವಿತರಣಾ ಕಾರ್ಯಕ್ರಮ..

ಈ ಸ್ಪರ್ಧೆಯಲ್ಲಿ ಭಾಗವಹಿಸಲು ಸಂಪರ್ಕಿಸಿ : 9880147845 , 9632994666,

ಪ್ರಾಯೋಜಕತ್ವ ಮತ್ತು ಸ್ಟಾಲ್ ಬುಕ್ಕಿಂಗ್ ಗಾಗಿ ಸಂಪರ್ಕಿಸಿ : 9343330657,  9663104888

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7019050812 ವಿನಯ್ ಪುರದಾಳು ( ಜಿಲ್ಲಾ ವರದಿಗಾರರು, ನ್ಯೂಸ್ 18 ಕನ್ನಡ ಶಿವಮೊಗ್ಗ )

ಈ ಎಲ್ಲಾ ಕಾರ್ಯಕ್ರಮಗಳಿಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕರುನಾಡ ಹಬ್ಬವನ್ನು ಯಶಸ್ವಿಯಾಗಿಸಲು ತಿಳಿಸಿದೆ.