ಆನಂದಪುರದ ಕವನಾ ಡಬ್ಲುಎಚ್ಓ ವಿಜ್ಞಾನಿಯಾಗಿ ಆಯ್ಕೆ
ಆನಂದಪುರದ ಕವನಾ ಡಬ್ಲುಎಚ್ಓ ವಿಜ್ಞಾನಿಯಾಗಿ ಆಯ್ಕೆ ಸಾಗರ : ತಾಲೂಕಿನ ಆನಂದಪುರ ಸಮೀಪದ ಹೊಸೂರು ಗ್ರಾಪಂ ವ್ಯಾಪ್ತಿಯ ನೇದರವಳ್ಳಿ ಗ್ರಾಮದ ಯುವ ವಿಜ್ಞಾನಿ ಕವನಶ್ರೀ ವಿಶ್ವ ಆರೋಗ್ಯ ಸಂಸ್ಥೆಯ (WHO) ವಿಜ್ಞಾನಿಯಾಗಿ ಆಯ್ಕೆಗೊಂಡಿದ್ದಾರೆ. ಕಳೆದ ಸೋಮವಾರ ಸ್ವಿಡರ್‌ಲೆಂಡ್‌ನ ಕೇಂದ್ರ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಭಾರತದಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆದ 8 ಅಭ್ಯರ್ಥಿಗಳಲ್ಲಿ ಆಯ್ಕೆಯಾದ ಕವನಶ್ರೀ, ನೇದರವಳ್ಳಿಯ ಪ್ರಗತಿಪರ ಕೃಷಿಕ ಶುಂಠಿ ಮಂಜಪ್ಪ ಮತ್ತು ಜಯಲಕ್ಷ್ಮೀ ದಂಪತಿಗಳ ಪುತ್ರಿ.