POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ – ವ್ಯಕ್ತಿ ಗಂಭೀರ | ಸಮಯ ಪ್ರಜ್ಞೆ ಮೆರೆದ ಆನಂದಪುರ ಪಿಎಸ್‌ಐ

GridArt 20240915 201721841.jpg

ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ – ವ್ಯಕ್ತಿ ಗಂಭೀರ | ಸಮಯ ಪ್ರಜ್ಞೆ ಮೆರೆದ ಆನಂದಪುರ ಪಿಎಸ್‌ಐ

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಅಂಗಡಿ ಕಟ್ಟೆಗೆ ಡಿಕ್ಕಿಯಾಗಿ ಚಾಲಕನಿಗೆ ಗಂಭೀರ ಗಾಯವಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಯಡೆಹಳ್ಳಿ ಸರ್ಕಲ್ ನಲ್ಲಿ ನಡೆದಿದೆ.

ಸಾಗರದಿಂದ ಕೋಣಂದೂರು ಕಡೆಗೆ ತೆರಳುತಿದ್ದ ಟೊಯೊಟ ಕ್ವಾಲಿಸ್ ಕಾರು ಆನಂದಪುರದ ಯಡೆಹಳ್ಳಿ ಸರ್ಕಲ್ ನಲ್ಲಿ ನಿಯಂತ್ರಣ ತಪ್ಪಿ ಏಕಾಏಕಿ ಲೈಟ್ ಕಂಬದ ಪಕ್ಕದಲ್ಲಿರುವ ಕಟ್ಟೆಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಚಾಲಕನಿಗೆ ಗಂಭೀರ ಗಾಯವಾಗಿದೆ.

ಕೋಣಂದೂರಿನ ಮಹಾಂತೇಶ್(40) ಗಾಯಗೊಂಡಿರುವ ವ್ಯಕ್ತಿಯಾಗಿದ್ದಾರೆ.

ವಿಷಯ ತಿಳಿಯುತಿದ್ದಂತೆ ಸ್ಥಳಕ್ಕಾಗಮಿಸಿದ ಆನಂದಪುರ ಠಾಣೆಯ ಪಿಎಸ್‌ಐ ಯುವರಾಜ್ ಕಂಬಳಿ ಆಂಬ್ಯುಲೆನ್ಸ್ ಬರುವುದು ತಡವಾಗಿದ್ದರಿಂದ ತೀವ್ರ ರಕ್ರಸ್ರಾವವಾಗಿ ರಕ್ತದ ಮಡುವಿನಲ್ಲಿದ್ದ ಗಾಯಾಳುವನ್ನು ತಮ್ಮ ವಾಹನದಲ್ಲಿಯೇ ಕರೆದುಕೊಂಡು ಹೋಗುವ ಮೂಲಕ ಸಮಯ ಪ್ರಜ್ಞೆ ಮೆರೆದಿದ್ದಾರೆ.

ಗಾಯಾಳುವಿಗೆ ಆನಂದಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನಿಸಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.