w
Headlines
Home » ರಿಪ್ಪನ್‌ಪೇಟೆ: ಅಕ್ರಮವಾಗಿ ಕಡಿದ ಲಕ್ಷಾಂತರ ರೂ ಮೌಲ್ಯದ 24 ಸಾಗುವಾನಿ ತುಂಡುಗಳು ಅರಣ್ಯಾಧಿಕಾರಿಗಳ ವಶಕ್ಕೆ

ರಿಪ್ಪನ್‌ಪೇಟೆ: ಅಕ್ರಮವಾಗಿ ಕಡಿದ ಲಕ್ಷಾಂತರ ರೂ ಮೌಲ್ಯದ 24 ಸಾಗುವಾನಿ ತುಂಡುಗಳು ಅರಣ್ಯಾಧಿಕಾರಿಗಳ ವಶಕ್ಕೆ

Screenshot 2026 10 30 12 43 43 823 com.openai.chatgpt edit

ರಿಪ್ಪನ್‌ಪೇಟೆ: ಅಕ್ರಮವಾಗಿ ಕಡಿದ ಲಕ್ಷಾಂತರ ರೂ ಮೌಲ್ಯದ 24 ಸಾಗುವಾನಿ ತುಂಡುಗಳು ಅರಣ್ಯಾಧಿಕಾರಿಗಳ ವಶಕ್ಕೆ | Forest officials seize 24 pieces of illegally felled teak wood worth approximately ₹4 lakh in Belandur village near Ripponpete, Shivamogga district.

ರಿಪ್ಪನ್‌ಪೇಟೆ: ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಂದೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಡಿದಿದ್ದ ಸುಮಾರು ₹4 ಲಕ್ಷ ಮೌಲ್ಯದ ಸಾಗುವಾನಿ ಮರದ ನಾಟವನ್ನು ಅರಸಾಳು ವಲಯ ಅರಣ್ಯಾಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ.

ಬೆಳಂದೂರು ಗ್ರಾಮದ ಸರ್ವೆ ನಂಬರ್ 51ರ ಅರಣ್ಯ ಪ್ರದೇಶದಲ್ಲಿ ಬೆಲೆಬಾಳುವ ಸಾಗುವಾನಿ ಮರಗಳನ್ನು ಅಕ್ರಮವಾಗಿ ಕಡಿದಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಅರಸಾಳು ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಅಕ್ರಮವಾಗಿ ಕಡಿದಿದ್ದ ಸಾಗುವಾನಿ ಮರದ 24 ತುಂಡುಗಳು ಪತ್ತೆಯಾಗಿವೆ. ಇವುಗಳ ಒಟ್ಟು ಉದ್ದ ಸುಮಾರು 100 ಅಡಿ ಎಂದು ಅಂದಾಜಿಸಲಾಗಿದ್ದು, ವಶಪಡಿಸಿಕೊಂಡ ಮರದ ನಾಟದ ಮೌಲ್ಯ ಸುಮಾರು ₹4 ಲಕ್ಷ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಅರಸಾಳು ವಲಯ ಅರಣ್ಯಾಧಿಕಾರಿ ಶರಣಪ್ಪ, ಉಪ ವಲಯ ಅರಣ್ಯಾಧಿಕಾರಿಗಳಾದ ಸುನಿಲ್ ಮತ್ತು ಕುಮಾರ್ ಮಾಂಗ್ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.