Headlines

ಕೆಂಚನಾಲದಲ್ಲಿ ಈದ್ ಮಿಲಾದ್ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರ

ಕೆಂಚನಾಲದಲ್ಲಿ ಈದ್ ಮಿಲಾದ್ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಮದ ಜಾಮೀಯಾ ಮಸೀದಿ ಆವರಣದಲ್ಲಿ ಈದ್ ಮಿಲಾದ್ ಸಮಿತಿ ಹಾಗೂ ರಿಪ್ಪನ್‌ಪೇಟೆ ರೋಟರಿ ಕ್ಲಬ್ ಸಹಯೋಗದಲ್ಲಿ ಈದ್ ಮಿಲಾದ್ ಪ್ರಯುಕ್ತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ ಮಾತನಾಡಿ, ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸಬಹುದು.ರಕ್ತಕ್ಕೆ ಪರ್ಯಾಯ ಯಾವುದೇ ವಸ್ತು ಇಲ್ಲ. ರಕ್ತದಾನ ಮಾಡುವುದರಿಂದ ಮೂವರಿಗೆ ಜೀವದಾನ ಮಾಡಿದಂತಾಗುತ್ತದೆ. ಇದರಿಂದ ರಕ್ತದಾನಿಗಳ ಆರೋಗ್ಯವೂ ಸುಧಾರಿಸುತ್ತದೆ ಹಾಗಾಗಿ ಆರೋಗ್ಯವಂತ…

Read More

ಜೀವನದಲ್ಲಿ ಜಿಗುಪ್ಸೆ | ಮಾದಾಪುರದಲ್ಲಿ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಜೀವನದಲ್ಲಿ ಜಿಗುಪ್ಸೆ | ಮಾದಾಪುರದಲ್ಲಿ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ ರಿಪ್ಪನ್‌ಪೇಟೆ : ಕೆಂಚನಾಲ ಗ್ರಾಪಂ ವ್ಯಾಪ್ತಿಯ ಮಾದಾಪುರ ಗ್ರಾಮದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆಯೊಬ್ಬರು ಶನಿವಾರ ರಾತ್ರಿ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಶಾಹಿದಾ ಭಾನು (63) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಕೊರೊನಾ ಕಾಯಿಲೆಯಿಂದ ನಾಲ್ಕು ವರ್ಷಗಳ ಹಿಂದೆ ಮೃತ ಮಹಿಳೆಯ ಪತಿ ಮುನೀರ್ ಸಾಬ್ ಸಾವನ್ನಪ್ಪಿದರು. ಪತಿಯ ಅಗಲಿಕೆಯಿಂದ ಕೊರಗುತಿದ್ದ ಶಾಹಿದಾ ಭಾನು ಶನಿವಾರ ರಾತ್ರಿ ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ….

Read More

RIPPONPETE | ಕೆಂಚನಾಲದಲ್ಲಿ ಹಸುವಿನ ಕತ್ತರಿಸಿದ ತಲೆ ಪತ್ತೆ – ಪ್ರಕರಣ ದಾಖಲು

RIPPONPETE | ಕೆಂಚನಾಲದಲ್ಲಿ ಹಸುವಿನ ಕತ್ತರಿಸಿದ ತಲೆ ಪತ್ತೆ – ಪ್ರಕರಣ ದಾಖಲು ರಿಪ್ಪನ್‌ಪೇಟೆ : ಶುಕ್ರವಾರದಂದು ಬೆಳಕಿಗೆ ಬಂದ ಆಘಾತಕಾರಿ ಘಟನೆಯೊಂದರಲ್ಲಿ ಅಪರಿಚಿತ ದುಷ್ಕರ್ಮಿಗಳು ಹಸುವಿನ ತಲೆಯನ್ನು ಕೆರೆಯ ಬಳಿಯಲ್ಲಿ ಎಸೆದು ಹೋಗಿರುವ ಘಟನೆ ಕೆಂಚನಾಲ ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ಕೆಂಚನಾಲ ಗ್ರಾಮದಲ್ಲಿ ಪೊಲೀಸರು ಗಸ್ತು ತಿರುಗುತಿದ್ದ ಸಂಧರ್ಭದಲ್ಲಿ ಗಸ್ತು ತಿರುಗುತಿದ್ದಾಗ ಬಂದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಯಾರೋ ಅಪರಿಚಿತರು ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಹಸುವನ್ನು ಕಡಿದು ಕೆರೆಯ…

Read More

ಆಲುವಳ್ಳಿಯಲ್ಲಿ ಭಾರಿ ಮಳೆಗೆ ಮನೆ ಸಂಪೂರ್ಣ ಹಾನಿ – ಆತಂಕದಲ್ಲಿ ಬಡ ಕುಟುಂಬ

ಆಲುವಳ್ಳಿಯಲ್ಲಿ ಭಾರಿ ಮಳೆಗೆ ಮನೆ ಸಂಪೂರ್ಣ ಹಾನಿ – ಆತಂಕದಲ್ಲಿ ಬಡ ಕುಟುಂಬ ರಿಪ್ಪನ್‌ಪೇಟೆ : ಕೆಂಚನಾಲ ಗ್ರಾಪಂ ವ್ಯಾಪ್ತಿಯ ಆಲುವಳ್ಲೀ ಗ್ರಾಮದ ಹೊಳೆಮದ್ಲು ಗ್ರಾಮದಲ್ಲಿ ಇಂದು ಮಧ್ಯಾಹ್ನ ಸುರಿದ ಭಾರಿ ಮಳೆಗೆ ಮನೆ ಸಂಪೂರ್ಣ ಕುಸಿದು ಬಿದ್ದಿರುವ ಘಟನೆ ನಡೆದಿದೆ. ಆಲುವಳ್ಳಿ ಸಮೀಪದ ಹೊಳೆಮದ್ಲು ಗ್ರಾಮದ ಮಂಜಮ್ಮ ಕೋಂ ಈರಪ್ಪ ಎಂಬುವವರ ಮನೆ ಭಾರಿ ಗಾಳಿ ಮಳೆಗೆ ಸಂಪೂರ್ಣ ಕುಸಿತವಾಗಿ ಬಡ ಕುಟುಂಬದಲ್ಲಿ ಆತಂಕವನ್ನುಂಟು ಮಾಡಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ,ಕೆಂಚನಾಲ ಗ್ರಾಮ ಪಂಚಾಯತ್…

Read More

ಕೆಂಚನಾಲದಲ್ಲಿ ಸಡಗರ ಸಂಭ್ರಮದಿಂದ 78ನೇ ಸ್ವಾತಂತ್ರ್ಯೋತ್ಸವ ಆಚರಣೆ – ಸಾಧಕರಿಗೆ ಸನ್ಮಾನ

ಕೆಂಚನಾಲದಲ್ಲಿ ಸಡಗರ ಸಂಭ್ರಮದಿಂದ 78ನೇ ಸ್ವಾತಂತ್ರ್ಯೋತ್ಸವ ಆಚರಣೆ – ಸಾಧಕರಿಗೆ ಸನ್ಮಾನ ಕೆಂಚನಾಲದಲ್ಲಿ ಸಡಗರ ಹಾಗೂ ಸಂಭ್ರಮದಿಂದ 78ನೇಯ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಿರಿಯರು ತನು, ಮನ, ಧನವನ್ನು ಲೆಕ್ಕಿಸದೇ ತ್ಯಾಗ ಮಾಡಿ ಹುತಾತ್ಮರಾಗಿದ್ದು ಅವರಂತೆ ಪ್ರತಿಯೊಬ್ಬರೂ ಸ್ವಾತಂತ್ರ್ಯ ಪ್ರೇಮಿಯಾಗಿ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಇದೇ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಪ್ರಕಾಶ್ ಮಾದಾಪುರ , ಅಲ್ತಾಫ್…

Read More