POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಕೆಂಚನಾಲದಲ್ಲಿ ಸಡಗರ ಸಂಭ್ರಮದಿಂದ 78ನೇ ಸ್ವಾತಂತ್ರ್ಯೋತ್ಸವ ಆಚರಣೆ – ಸಾಧಕರಿಗೆ ಸನ್ಮಾನ

GridArt 20240815 214747646.jpg

ಕೆಂಚನಾಲದಲ್ಲಿ ಸಡಗರ ಸಂಭ್ರಮದಿಂದ 78ನೇ ಸ್ವಾತಂತ್ರ್ಯೋತ್ಸವ ಆಚರಣೆ – ಸಾಧಕರಿಗೆ ಸನ್ಮಾನ

ಕೆಂಚನಾಲದಲ್ಲಿ ಸಡಗರ ಹಾಗೂ ಸಂಭ್ರಮದಿಂದ 78ನೇಯ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.

ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಿರಿಯರು ತನು, ಮನ, ಧನವನ್ನು ಲೆಕ್ಕಿಸದೇ ತ್ಯಾಗ ಮಾಡಿ ಹುತಾತ್ಮರಾಗಿದ್ದು ಅವರಂತೆ ಪ್ರತಿಯೊಬ್ಬರೂ ಸ್ವಾತಂತ್ರ್ಯ ಪ್ರೇಮಿಯಾಗಿ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇದೇ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.

ಪ್ರಕಾಶ್ ಮಾದಾಪುರ , ಅಲ್ತಾಫ್ ಹೂವಿನಕೋಣೆ , ಪರಶುರಾಮ್ , ಅನ್ವರ್ ಸಾಬ್ , ಹಾಗೂ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಈ ಸಂಧರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಹೂವಮ್ಮ,  ಗ್ರಾಪಂ ಸದಸ್ಯರಾದ ಮಹಮ್ಮದ್ ಷರೀಫ್ , ಕೃಷ್ಣೋಜಿರಾವ್ , ಪುಟ್ಟಮ್ಮ , ರಮ್ಯ,ಗೌರಮ್ಮ , ಪರಮೇಷ್ ,ಲಕ್ಷ್ಮಮ್ಮ   ಪಿಡಿಓ ರವಿಕುಮಾರ್ , ಕಾರ್ಯದರ್ಶಿ ದುರ್ಗಪ್ಪ, ಸತೀಶ್ , ದೂದ್ ಪೀರ್ ಹಾಗೂ ಶಾಲಾ ಮಕ್ಕಳು ಶಿಕ್ಷಕರು ಇದ್ದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.