Hosanagara | ವಿವಿಧೆಡೆ 78ನೇ ಸ್ವಾತಂತ್ಯ್ರೋತ್ಸವ ಆಚರಣೆ
ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 78ನೇ ಸ್ವಾತಂತ್ಯ್ರೋತ್ಸವ ಆಚರಣೆ
ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು 78ನೇ ಸ್ವಾತಂತ್ಯ್ರ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಡಾ. ಉಮೇಶ್ ಕೆ. ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ. ಪ್ರಭಾಕರ್ ರಾವ್ ಕೆ. ಅವರು ಭಾರತದ ಸ್ವಾತಂತ್ರ್ಯದ ಚಳವಳಿಯ ಕುರಿತಾದ ವಿಶೇಷ ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಶ್ರೀ. ಸುಬ್ರಹ್ಮಣ್ಯ ಮಾಸ್ತಿಕಟ್ಟೆ, ಉಪಾಧ್ಯಕ್ಷರು, ಕಾಲೇಜು ಅಭಿವೃದ್ದಿ ಸಮಿತಿ, ಮತ್ತು ಸದಸ್ಯರಾದ ಶ್ರೀ. ಶ್ರೀಧರ್ ಹಳಗುಂದ, ಡಾ. ಕವಿತಾ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಮಂದಾರ ಟಿ. ಮಾಡಿದರು. ಶ್ರೀ ದೊಡ್ಡಯ್ಯ ಹೆಚ್. ಸ್ವಾಗತಿಸಿದ್ದರು. ಡಾ. ಬಸವರಾಜಪ್ಪ ಎಂ. ಟಿ. ವಂದಿಸಿದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
Hosanagara | ಬದ್ರಿಯಾ ಜುಮ್ಮಾ ಮಸೀದಿಯಲ್ಲಿ 78ನೇ ಸ್ವಾತಂತ್ಯ್ರೋತ್ಸವ ಆಚರಣೆ
ಹೊಸನಗರ ಟೌನ್ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಅದ್ದೂರಿಯಾಗಿ ಸ್ವತಂತ್ರೋತ್ಸವ ಧ್ವಜಾರಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಮಸೀದಿ ಅಧ್ಯಕ್ಷರಾದ ಕೆ ಅಮಾನುಲ್ಲ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು ಹೊಸನಗರ ಪೊಲೀಸ್ ಸರ್ಕಲ್ ಗುರಣ್ಣ ಹೆಬ್ಬಾಳ್ ಹಾಗೂ ಪಟ್ಟಣ ಪಂಚಾಯತ್ ಸದಸ್ಯರಾದ ಅಶ್ವಿನಿ ಕುಮಾರ್ ಸಾಹೀನ ನಾಸಿರ್ ಮುಖಂಡರಾದ ಶ್ರೀಧರ್ ಉಡುಪ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಸೀದಿಯ ಧರ್ಮ ಗುರುಗಳಾದ ಬದುರುದ್ದೀನ್ ಜೋಹರಿಯವರು ಪ್ರೀತಿ ಸೌಹಾರ್ದ ಸಹಿಷ್ಣತೆ ದೇಶಪ್ರೇಮ ಈಮನಿನ ಭಾಗವಾಗಿದೆ ಅದಾಗಿದೆ ನಮ್ಮ ಪೈಗಂಬರರ ಮಾರ್ಗದರ್ಶನ ಅವರ ಹಿಂಬಾಲಕರಾದ ನಾವು ವಾಸಿಸುವ ಪ್ರದೇಶದಲ್ಲಿರುವ ಜನರನ್ನ ಪ್ರೀತಿಸುವುದು ದೇಶಪ್ರೇಮ ನಮ್ಮದಾಗಬೇಕು ಮುಂದಿನ ಯುವ ಸಮೂಹಕ್ಕೆ ನಾವು ಬದುಕುವ ರೀತಿ ಮಾರ್ಗದರ್ಶನವಾಗಬೇಕು ಎಂದು ಹೇಳಿದರು.
ವಿಶೇಷ ಕಾರ್ಯಕ್ರಮವಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಶುಶ್ರೂಷಕಿ ಶೈಲಜಾ ಹಾಗೂ ಆಶಾ ಕಾರ್ಯಕರ್ತೆ ಸವಿತಾ ಅವರನ್ನು ಜಮಾತ್ ಬಾಂಧವರ ಪರವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಿತಿಯ ಅಹಮದ್ ಮೊಹಮ್ಮದ್ ಆಲಿ ಝುಬೇರ್ ಸೈಯದ್ ಯಾಸಿರ್ ಹಾಗೂ ಊರಿನ ಪ್ರಮುಖರಾದ ಮೊಹಮ್ಮದ್ ಹಾಜಿ ನಾಸಿರ್ ಯೂಸುಫ್ ರಫೀಕ್ ಫಾರೂಕ್ ಇನ್ನು ಹಲವಾರು ಗಣ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸ್ವತಂತ್ರ ದಿನಾಚರಣೆಯ ಪ್ರಯುಕ್ತ ಮದರಸದಲ್ಲಿ ನಡೆಸಿದ ಸ್ಪರ್ಧಾ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಮೂಲೇಗದ್ದೆ ಮಠದಲ್ಲಿ 78ನೇ ಸ್ವಾತಂತ್ಯ್ರೋತ್ಸವ ಆಚರಣೆ :
ಇಂದು ಶ್ರೀ ವ್ಯಾಸ ಮಹರ್ಷಿ ಗುರುಕುಲದಲ್ಲಿ ನಡೆದ 78ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಮೂಲೆಗದ್ದೆ ಶ್ರೀ ಸದಾನಂದ ಶಿವಾಯೋಗಾಶ್ರಮದ ಶ್ರೀ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ನೆರವೇರಿಸಿದರು.
ಈದಿನ ಹೊಸನಗರ ಅಂಚೆ ಕಚೇರಿ ಯಲ್ಲಿ ಹಿರಿಯರಾದ ನಾಗೇಶ್ ರಾವ್ ರವರು ದ್ವಜಾರೋಹಣ ನೆರವೇರಿಸಿದರು.