ಚಿಕ್ಕಜೇನಿ ಪ್ರೌಢ ಶಾಲೆಯಲ್ಲಿ ಕೇಂದ್ರ ಸಂವಹನ ಇಲಾಖೆಯಿಂದ ಸ್ವಾತಂತ್ರ್ಯ ಉತ್ಸವ
ರಿಪ್ಪನ್‌ಪೇಟೆ – ಇಲ್ಲಿಗೆ ಸಮೀಪದ ಚಿಕ್ಕಜೇನಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ಶಿವಮೊಗ್ಗದ ಕೇಂದ್ರ ಸಂವಹನ ಇಲಾಖೆಯಿಂದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಎಸ್.ಡಿ.ಎಂ.ಸಿ.ಅಧ್ಯಕ್ಷ ಪ್ರಕಾಶ್ ರಾಷ್ಟ್ರ ಧ್ವಜಾರೋಹಣ ನಡೆಸಿದರು. ಗ್ರಾ.ಪಂ.ಸದಸ್ಯ ಅಣ್ಣಪ್ಪ ಶೆಟ್ಟಿ ಸ್ವಾತಂತ್ರ್ಯ ಜಾಥಾಕ್ಕೆ ಚಾಲನೆ ನೀಡಿದರು.
ಚಿಕ್ಕಜೇನಿ ಗ್ರಾ.ಪಂ. ಅಧ್ಯಕ್ಷ ರಾಜು ಎನ್.ಪಿ.ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಕ್ಕಳು ದೇಶದ ಭವ್ಯ ಇತಿಹಾಸ ತಿಳಿದುಕೊಳ್ಳಬೇಕು ಎಂದರು.ಶಾಲೆಯ ಸಮಗ್ರ ಪ್ರಗತಿಗೆ ಗ್ರಾ. ಪಂ.ಸದಾ ಸಿದ್ಧವಿದೆ ಎಂದರು. ಕೇಂದ್ರ ಸಂವಹನ ಇಲಾಖೆ ಪ್ರಚಾರ ಅಧಿಕಾರಿ ಅಕ್ಷತಾ ಸಿ. ಹೆಚ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಏಕ ಭಾರತ ಶ್ರೇಷ್ಠ ಭಾರತ ಕನಸಿನ ನನಸಿಗೆ ವಿದ್ಯಾರ್ಥಿ ಸಮುದಾಯ ಕೈಜೋಡಿಸಬೇಕಾಗಿದೆ ಎಂದರು.
ಗ್ರಾಪಂ ಉಪಾಧ್ಯಕ್ಷೆ ಸುಮಿತ್ರ, ಸದಸ್ಯ ಅರುಣಾಚಲ , ಮುಖ್ಯ ಶಿಕ್ಷಕ ಶಿವಾಜಿ, ಎಸ್.ಡಿ.ಎಂ.ಸಿ ಯ ಎಲ್ಲ ಸದಸ್ಯರು,ಕೇಂದ್ರ ಸಂವನಹನ ಇಲಾಖೆಯ ಲಕ್ಷ್ಮೀಕಾಂತ್ ಪಾಲ್ಗೊಂಡಿದ್ದರು.
ಸಂಗೀತ ಮತ್ತು ನಾಟಕ ವಿಭಾಗದ ಕಲಾವಿದರಿಂದ ಸ್ವಚ್ಚ ಭಾರತ ಮತ್ತು ಸ್ವಾತಂತ್ರ್ಯ ಜಾಗೃತಿ ಕಿರು ನಾಟಕ ಪ್ರದರ್ಶನ ನಡೆಯಿತು. ಶಾಲಾ ಆವರಣ ಗಿಡ ನೆಡುವ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳಿಗೆ ಏಕ್ ಭಾರತ್ ಶ್ರೇಷ್ಠ ಭಾರತ್ ಎಂಬ ವಿಷಯ ಕುರಿತು ಪ್ರಬಂಧ ಸ್ಪರ್ಧೆ ಮತ್ತು ಸ್ವಾತಂತ್ರ್ಯ ಆಚರಣೆ ರಂಗೋಲಿ ಸ್ಪರ್ಧೆ ನಡೆಸಿ ಬಹುಮಾನ ನೀಡಲಾಯಿತ.