w
Headlines
Home » ರಿಪ್ಪನ್ ಪೇಟೆ : ತಾವರೆಕೆರೆಯಲ್ಲಿ ಗಣಪತಿಯ ಜಲಸ್ಥಂಭನ – 19 ಗಂಟೆಗಳ ರಾಜಬೀದಿ ಉತ್ಸವಕ್ಕೆ ತೆರೆ

ರಿಪ್ಪನ್ ಪೇಟೆ : ತಾವರೆಕೆರೆಯಲ್ಲಿ ಗಣಪತಿಯ ಜಲಸ್ಥಂಭನ – 19 ಗಂಟೆಗಳ ರಾಜಬೀದಿ ಉತ್ಸವಕ್ಕೆ ತೆರೆ

Screenshot 2026 09 25 16 46 17 661 com.openai.chatgpt edit

ರಿಪ್ಪನ್ ಪೇಟೆ : ತಾವರೆಕೆರೆಯಲ್ಲಿ ಗಣಪತಿಯ ಜಲಸ್ಥಂಭನ – 19 ಗಂಟೆಗಳ ರಾಜಬೀದಿ ಉತ್ಸವಕ್ಕೆ ತೆರೆ

Ripponpete Ganesh Visarjana concluded after a grand 19-hour Rajabeedhi procession, with cultural performances and public participation before immersion at Tavarekere.

ರಿಪ್ಪನ್‌ಪೇಟೆ: ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಯ ಅದ್ದೂರಿ ವಿಸರ್ಜನಾ ಮೆರವಣಿಗೆ ಸತತ 19 ಗಂಟೆಗಳ ಕಾಲ ನಡೆದ ಬಳಿಕ ಶುಕ್ರವಾರ ಹೊಸನಗರ ರಸ್ತೆಯಲ್ಲಿರುವ ತಾವರೆಕೆರೆಯಲ್ಲಿ ಜಲಸ್ಥಂಭನ ನೆರವೇರಿಸಲಾಯಿತು.

ಗುರುವಾರ ಸಂಜೆ 5.45ಕ್ಕೆ ರಿಪ್ಪನ್‌ಪೇಟೆಯ ತಿಲಕ್ ಮಂಟಪದಿಂದ ಆರಂಭವಾದ ಗಣಪತಿ ವಿಸರ್ಜನಾ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ಮೆರವಣಿಗೆಯಲ್ಲಿ ನಾಡಿನ ಹೆಸರಾಂತ ಜಾನಪದ ಕಲಾತಂಡಗಳು ವಿವಿಧ ಕಲಾ ಪ್ರಕಾರಗಳನ್ನು ಪ್ರದರ್ಶಿಸಿದ್ದು, ನೆರೆದಿದ್ದ ಭಕ್ತರು ಹಾಗೂ ಸಾರ್ವಜನಿಕರು ಕಲಾ ಪ್ರದರ್ಶನಗಳನ್ನು ಕಣ್ತುಂಬಿಕೊಂಡರು.

ಮೆರವಣಿಗೆಯು ವಿನಾಯಕ ವೃತ್ತಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಪಾಲ್ಗೊಂಡು ಗಣಪತಿಗೆ ಮಾಲಾರ್ಪಣೆ ಮಾಡಿ ದರ್ಶನ ಪಡೆದರು. ನಂತರ ಮಾತನಾಡಿದ ಅವರು ನಾಡಿನಲ್ಲಿ ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆ ಬೆಳೆದು ಜನರು ಸುಖ-ಶಾಂತಿಯಿಂದ ಬದುಕುವಂತಾಗಲಿ ಎಂದು ಪ್ರಾರ್ಥಿಸಿದರು.

ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಅವರು ಶುಕ್ರವಾರ ಬೆಳಗ್ಗೆ ಹೊಸನಗರಕ್ಕೆ ಕಾರ್ಯಕ್ರಮವೊಂದಕ್ಕೆ ತೆರಳುವ ಮಾರ್ಗಮಧ್ಯೆ ರಿಪ್ಪನ್‌ಪೇಟೆಗೆ ಆಗಮಿಸಿ ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದರ್ಶನ ಪಡೆದರು.

ತೀರ್ಥಹಳ್ಳಿ ಡಿವೈಎಸ್‌ಪಿ ಭಾನುಪ್ರಕಾಶ್, ವೃತ್ತ ನಿರೀಕ್ಷಕ ಗೌಡರ ಗೌಡಪ್ಪ, ಪಿಎಸ್‌ಐ ರಾಜುರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿಗಳು ಹಾಗೂ ತಹಶೀಲ್ದಾರ್ ಭರತ್‌ರಾಜ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಗಣಪತಿಗೆ ಮಾಲಾರ್ಪಣೆ ಮಾಡಿದರು.

ಇದೇ ವೇಳೆ ಮುಸ್ಲಿಂ ಸಮುದಾಯದ ಮುಖಂಡರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಗಣಪತಿಗೆ ಮಾಲಾರ್ಪಣೆ ಮಾಡಿ ದರ್ಶನ ಪಡೆದರು.


ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಭದ್ರತೆ ಕಲ್ಪಿಸಿತ್ತು.

ಅಂತಿಮವಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗಣಪತಿ ಮೂರ್ತಿಯನ್ನು ತಾವರೆಕೆರೆಯಲ್ಲಿ ಜಲಸ್ಥಂಭನ ಮಾಡುವ ಮೂಲಕ ಈ ಬಾರಿಯ ಗಣೇಶೋತ್ಸವಕ್ಕೆ ವಿಧಿವತ್ತಾಗಿ ತೆರೆ ಎಳೆಯಲಾಯಿತು.

ಶಾಂತಿಯುತ ಮೆರವಣೆಗೆ ಸಹಕರಿಸಿದ ಕಾರ್ಯಕರ್ತರಿಗೆ ಕೃತಜ್ಞತೆ;-

ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ಗಣೇಶನ ಅದ್ದೂರಿ ಮೆರವಣಿಗೆ ಸತತ 19 ಗಂಟೆಯ ರಾಜಬೀದಿ ಉತ್ಸವದ ಅದ್ದೂರಿಯಾಗಿ ಶಾಂತಿ ಸುವ್ಯವಸ್ಥೆಯೊಂದಿಗೆ ಸಹಕರಿಸಿದ ಹಿಂದೂ ಮಹಾಸಭಾ ಸಮಿತಿಯವರನ್ನು ಅಭಿನಂದಿಸಿ ಡಿ.ವೈ.ಎಸ್.ಪಿ.ಭಾನುಪ್ರಕಾಶ್ , ಸಿಪಿಐ ಗೌಡಪ್ಪ ಗೌಡರ್ ಹಾಗೂ ಪಿಎಸ್‌ಐ ರಾಜುರೆಡ್ಡಿ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹಿಂದು ಮಹಾಸಭಾ ಸಮಿತಿಯ ಅಧ್ಯಕ್ಷ ಸುದೀಂದ್ರಪೂಜಾರಿ, ಕಾರ್ಯದರ್ಶಿ ಅರ್.ಎಂ.ನವೀನ್, ಎಂ.ಬಿ.ಮಂಜುನಾಥ, ಎಂ.ಸುರೇಶಸಿಂಗ್,ಆರ್.ರಾಘವೇಂದ್ರ, ಹೆಚ್.ಆರ್.ಆಶೋಕ್, ಡಿ.ಈ.ರವಿಭೂಷಣ, ಸುಂದೀಪ್‌ಶೆಟ್ಟಿ, ಹೆಚ್.ಎನ್.ಚೋಳರಾಜ್, ಲಕ್ಷö್ಮಣಬಳ್ಳಾರಿ,ಶಾಂತಕುಮಾರ್, ಕಗ್ಗಲಿ ಲಿಂಗಪ್ಪ,ತೀರ್ಥೇಶ್ ಅಡಿಕಟ್ಟು, ಹೆಚ್.ಎನ್.ಉಮೇಶ್, ಸತೀಶ್‌ಶೆಟ್ಟಿ, ಚಂದ್ರು ಸಿದ್ದಪ್ಪನ ಗುಡಿ, ನಾಗರಾಜ್ ಕೆದಲುಗುಡ್ಡೆ, ಶ್ರೀಧರ ಚಿಗುರು, ರಾಘ ಅರ್ಟ್ಸ್, ಚಂದ್ರಕುಮಾರ್ ಸೂರ್ಯಗೌಡ, ರಾಘವೇಂದ್ರ ಚಿಪ್ಪಳಿ, ರವಿಚಂದ್ರ, ಸತೀಶ್ ಎಂ., ಸುಹಾಸ್, ಲಕ್ಷಣ ಅಟೋ, ಶ್ರೀನಿವಾಸ್ ಅಚಾರ್, ದೇವರಾಜ್ ಪವಾರ್, ಆರ್.ರಂಜನ್, ಮಂಜುನಾಥ ಅಚಾರ್, ಹೆಚ್.ವಿ.ಪ್ರಶಾಂತ, ಯೋಗೇಂದ್ರಗೌಡ ತರಕಾರಿ, ನಾಗರಾಜ ಇನ್ನಿತರ ಸಮಿತಿಯವರು ಪಾಲ್ಗೊಂಡಿದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.