Headlines

ಅನುದಾನ ತರುವಲ್ಲಿ ಸಂಸದ ರಾಘವೇಂದ್ರ, ದಾನ-ಧರ್ಮದಲ್ಲಿ ಶಾಸಕ ಬೇಳೂರು ಮುಂದು – ಮೂಲೆಗದ್ದೇ ಶ್ರೀಗಳು

Screenshot 2026 09 28 17 00 16 433 com.picsart.studio edit

ಅನುದಾನ ತರುವಲ್ಲಿ ಸಂಸದ ರಾಘವೇಂದ್ರ, ದಾನ-ಧರ್ಮದಲ್ಲಿ ಶಾಸಕ ಬೇಳೂರು ಮುಂದು – ಮೂಲೆಗದ್ದೇ ಶ್ರೀಗಳು | Moolagadde Sri Swamiji speaks about MP B.Y. Raghavendra’s efforts in bringing government grants and MLA Beluru Gopalakrishna’s contributions to charity and social service.

ರಿಪ್ಪನ್‌ಪೇಟೆ: ದೇಶದಲ್ಲಿಯೇ ಅತಿ ಹೆಚ್ಚು ಜನಪರ ಕೆಲಸಗಳನ್ನು ಮಾಡುವ ಮೂಲಕ ಸಂಸದ ಬಿ.ವೈ. ರಾಘವೇಂದ್ರ ಅವರು ಅಭಿವೃದ್ಧಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಕ್ಷೇತ್ರಾದ್ಯಂತ ದಾನ-ಧರ್ಮ ಹಾಗೂ ಬಡವರ ಕಲ್ಯಾಣದ ಕಾರ್ಯಗಳಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಒಂದು ಕೈ ಮುಂದಿದ್ದಾರೆ. ಹೀಗೆ ಇಬ್ಬರೂ ಜನನಾಯಕರು ತಮ್ಮದೇ ಆದ ಸೇವಾ ಮಾರ್ಗಗಳ ಮೂಲಕ ಅಪಾರ ಜನಮನ್ನಣೆ ಗಳಿಸಿದ್ದಾರೆ ಎಂದು ಮೂಲಗದ್ದೆ ಸದಾನಂದ ಶಿವಯೋಗಾಶ್ರಮದ ಮ.ನಿ.ಪ್ರ. ಅಭಿನವ ಚನ್ನಬಸವ ಮಹಾಸ್ವಾಮೀಜಿಯವರು ಉಭಯ ನಾಯಕರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

​ಪಟ್ಟಣದ ಶ್ರೀ ಬಸವೇಶ್ವರ ವೀರಶೈವ ಸಮಾಜದ ವತಿಯಿಂದ ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮ ಹಾಗೂ ಆನಂದಪುರಂ ಮುರುಘಾಮಠದ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿಯವರ ಅಮೃತ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಉಪದೇಶಾಮೃತ ನೀಡಿದರು.

​ಜನಪ್ರತಿನಿಧಿಗಳು ಕೇವಲ ಅಧಿಕಾರಕ್ಕೆ ಸೀಮಿತವಾಗದೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಅತ್ಯಂತ ಸಂತಸದ ವಿಚಾರ. ಒಂದೆಡೆ ಕ್ಷೇತ್ರಕ್ಕೆ ಅನುದಾನ ತಂದು ಅಭಿವೃದ್ಧಿಯ ಪರ್ವವನ್ನು ಸೃಷ್ಟಿಸುತ್ತಿರುವ ಸಂಸದರು, ಇನ್ನೊಂದೆಡೆ ದೀನದಲಿತರ ಆಶಾಕಿರಣವಾಗಿ ನಿಂತಿರುವ ಶಾಸಕರು ಈ ಕ್ಷೇತ್ರದ ಹೆಮ್ಮೆ. ಇಂತಹ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಈ ಇಬ್ಬರೂ ನಾಯಕರಿಗೂ ಸದಾ ಗುರುಪೀಠದ ಆಶೀರ್ವಾದ ಇರಲಿದ್ದು, ಅವರಿಗೆ ಇನ್ನಷ್ಟು ಒಳಿತಾಗಲಿ ಎಂದು ಶ್ರೀಗಳು ತುಂಬು ಹೃದಯದ ಹಾರೈಕೆ ತಿಳಿಸಿದರು.

​ಶರಣರ ಆದರ್ಶಗಳ ಸ್ಮರಣೆ:

ಇದೇ ಸಂದರ್ಭದಲ್ಲಿ ನಾಡಿನ ಮಹನೀಯರನ್ನು ಸ್ಮರಿಸಿದ ಮಹಾಸ್ವಾಮೀಜಿಯವರು, ಜಗಜ್ಯೋತಿ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ ಶಿವಶರಣರು ಸಮಾಜಕ್ಕೆ ನೀಡಿದ ಕೊಡುಗೆಗಳು ಅಪಾರ. ಹಾಗೆಯೇ ರಾಷ್ಟ್ರಕವಿ ಕುವೆಂಪು ಅವರಂತಹ ಸಾಹಿತಿಗಳ ವಿಚಾರಧಾರೆಗಳು ಸಾರ್ವಕಾಲಿಕ ಸತ್ಯ. ಇಂತಹ ಮಹನೀಯರ ತತ್ವಗಳನ್ನು ಅಳವಡಿಸಿಕೊಂಡು, ಗುರುಪೀಠದ ಸತ್ಸಂಗ ಹಾಗೂ ಆಶೀರ್ವಾದದೊಂದಿಗೆ ಜೀವನ ಸಾಗಿಸಿದಾಗ ಮಾತ್ರ ಮನುಷ್ಯನ ಬದುಕು ನೈಜ ಅರ್ಥದಲ್ಲಿ ಸಾರ್ಥಕವಾಗುತ್ತದೆ ಎಂದು ನೆರೆದಿದ್ದ ಭಕ್ತಸಮೂಹಕ್ಕೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಆನಂದಪುರಂ ಮುರುಘಾಮಠದ ಜಗದ್ಗುರು ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ , ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ , ಸಂಸದ ಬಿ ವೈ ರಾಘವೇಂದ್ರ , ಶಾಸಕ ಬೇಳೂರು ಗೋಪಾಲಕೃಷ್ಣ , ಮಾಜಿ ಸಚಿವ ಹರತಾಳು ಹಾಲಪ್ಪ , ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಡಾ. ಕೆ.ಬಿ. ಕಮಲಾಕ್ಷಪ್ಪ, ಉಪಾಧ್ಯಕ್ಷ ಜಿ.ಎಂ. ದುಂಡರಾಜಪ್ಪಗೌಡ, ಎಂ.ಆರ್. ಶಾಂತವೀರಪ್ಪಗೌಡ, ಶಿವಮೊಗ್ಗ ವೀರಶೈವ ಸಮಾಜದ ಅಧ್ಯಕ್ಷ ಜ್ಯೋತಿಪ್ರಕಾಶ, ಅಖಿಲ ಭಾರತ ವೀರಶೈವ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಎಂ.ಎಸ್. ಉಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.