ಪ್ರಧಾನಿ ಮೋದಿ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ – ವ್ಯಕ್ತಿ ವಶಕ್ಕೆ..!
ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ ಪಟ್ಟಣದ ನಿವಾಸಿಯೊಬ್ಬ ಅವಹೇಳನಕಾರಿ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಆತನನ್ನು ಸಾಗರದ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.
ಇತ್ತೀಚಿಗೆ ಭಾರತ ಪಾಕ್ ಯುದ್ಧ ಶುರುವಾಗಿ ಕದನ ವಿರಾಮದ ಬೆನ್ನಲ್ಲೇ ಮೋದಿ ವಿರುದ್ಧ ಸಾಕಷ್ಟು ಟೀಕೆ ಟಿಪ್ಪಣಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿವೆ. ಸಾಧ್ಯವಾದಷ್ಟನ್ನ ಪೊಲೀಸ್ ಇಲಾಖೆ ತೀವ್ರ ನಿಗಾವಹಿಸಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ.
ಕಾರ್ಗಲ್ ನ ಮಂದಾರ ಕಂಫರ್ಟ್ ಎಂಬ ಹೋಟೆಲ್ ಮಾಲೀಕ ಶಕೀರ್ ಹುಸೇನ್ ಪ್ರಧಾನಿ ಮೋದಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಫ್ ಎದುರು ಮಂಡಿಯೂರಿ ಕದನ ವಿರಮವೋ ಅಥವಾ ಅದಾನಿ ಬಂಧನವೋ ಎಂದು ಕೇಳುವ ಮತ್ತು ಮೋದಿ ಕದನವಿರಾಮವೇ ಇರಲಿ ಬಾಸ್ ಎಂಬ ಪೋಸ್ಟ್ ನ್ನ ವಾಟ್ಸಪ್ ಗ್ರೂಪ್ ನಲ್ಲಿ ಹರಿಬಿಟ್ಟಿದ್ದನು.
ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ್ ಅವರ ಆದೇಶದ ಮೇರೆಗೆ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
 
                         
                         
                         
                         
                         
                         
                         
                         
                         
                        