ರುಧ್ರಭೂಮಿ ಅಭಿವೃದ್ಧಿ ಶ್ಲಾಘನೀಯ – ಶ್ರೀಕಾಂತ್ ದುಂಡಿಗೌಡ್ರ | Bankapura

ರುಧ್ರಭೂಮಿ ಅಭಿವೃದ್ಧಿ ಶ್ಲಾಘನೀಯ – ಶ್ರೀಕಾಂತ್ ದುಂಡಿಗೌಡ್ರ

ಸ್ವಚ್ಚಂದ ವಾತಾವರಣ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು – ಪಿಎಸ್‌ಐ ನಿಂಗರಾಜ್ ಕೆ ವೈ

ಬಂಕಾಪುರ : ಜಾತಿ ಬೇಧ ಭಾವ, ಬಡವ, ಶ್ರೀಮಂತ ಎಂಬ ಭಾವನೆ ಇಲ್ಲದ ರುದ್ರ ಭೂಮಿಯನ್ನು ಅಭಿವೃದ್ಧಿಪಡಿಸಿದ ಸ್ಥಳೀಯ ಮುಕ್ತಿಧಾಮ ಸಮಿತಿ ಪದಾಧಿಕಾರಿಗಳ ಸಾಮಾಜಿಕ ಕಾರ್ಯ ಶ್ಲಾಘನೀಯವಾಗಿದೆ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.


ಭಾನುವಾರ ಪಟ್ಟಣದ ಮುಕ್ತಿ ಧಾಮ ಸೇವಾ ಸಮಿತಿ, ಬನ್ನೂರಿನ ಭಾರತ್ ಸೇವಾ ಸಂಸ್ಥೆ ಆಶ್ರಯದಲ್ಲಿ ಪಟ್ಟಣದ ರುದ್ರಭೂಮಿಯಲ್ಲಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಅಸ್ವಚ್ಛತೆಗೆ ಆಗರವಾಗಿದ್ದ ರುದ್ರಭೂಮಿಯನ್ನು ಸಾರ್ವಜನಿಕರ ಸಹಕಾರದೊಂದಿಗೆ ಕೈಗೊಂಡ ಅಭಿವೃದ್ಧಿ ಕೆಲಸವು ಕಾರ್ಯಕ್ಕೆ ಸಾಮಾಜಿಕ ಕೈಗನ್ನಡಿಯಾಗಿದೆ. ನಾನು ಸಹ ಆಗಬೇಕಾದ ಅಭಿವೃದ್ಧಿ ಕೆಲಸಕ್ಕೆ ಎಲ್ಲ ರೀತಿಯ ಸಹಾಯ ಮಾಡುವ ಭರವಸೆ ನೀಡಿದರು.

ಪಿಎಸ್‌ಐ ನಿಂಗರಾಜ ಕರಕಣ್ಣವರ ಮಾತನಾಡಿ, ಸ್ವಚ್ಛಂದ ವಾತಾವರಣ ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರಿಕರು ಕೈಜೋಡಿಸಬೇಕು. ಪ್ರಸ್ತುತ ವಾಹನಗಳ ದಟ್ಟಣೆಯಿಂದ ಅಪಾರ ಪ್ರಮಾಣದಲ್ಲಿ ಪರಿಸರ ಹಾನಿ ಉಂಟಾಗುತ್ತಿದೆ. ಹೀಗಾಗಿ ನಗರದಲ್ಲಿ ಹೆಚ್ಚು ಸಸಿಗಳನ್ನು ನೆಟ್ಟು ಉತ್ತಮ ವಾತಾವರಣ ನಿರ್ಮಿಸುವ ಕೆಲಸ ಮಾಡಬೇಕು, ಕಲುಷಿತ ವಾತಾವರಣದಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದರಿಂದ ಎಲ್ಲ ವರ್ಗದ ಕುಟುಂಬದ ಮೇಲೂ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಆದ್ದರಿಂದ ಪರಿಸರ ಕಾಳಜಿ ಮಾಡುವ ಮೂಲಕ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಪ್ರತಿಯೊಬ್ಬರು ಮುಕ್ತಿಧಾಮ ಸಮಿತಿಯಂತೆ ಮುಂದಾಗಬೇಕು ಎಂದರು.

ಪಟ್ಟಣದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುತ್ತಿರುವ ಮುಕ್ತಿಧಾಮ ಸಮಿತಿ ಪದಾಧಿಕಾರಿಗಳ ಕಾರ್ಯ ಶ್ಲಾಘನೀಯವಾಗಿದೆ. ಅಭಿವೃದ್ಧಿ ಸಾರ್ವಜನಿಕ ಸದ್ಬಳಕೆಗೆ ಸಹಾಯಕವಾಗಿದೆ ಎಂದರು. 

ಈ ಸಂಧರ್ಭದಲ್ಲಿ ಯಲ್ಲಪ್ಪ ಸುಂಕದ, ಸತೀಶ ಆಲಕಟ್ಟಿ, ತಿಪ್ಪಣ್ಣ ಸಾತಣ್ಣವರ, ನಿಂಗನಗೌಡ್ರ ಪಾಟೀಲ,ನಿಲಕಂಠಪ್ಪ ಸಕ್ರಿ, ಪುರಸಭೆ ಸದಸ್ಯರಾದ ಸುರೇಶ ಕುರಗೋಡಿ, ರಮೇಶ ಸಿದ್ದುನವರ, ಮಂಜುನಾಥ ತಳವಾರ, ಗಂಗಣ್ಣ ಪೂಜಾರ, ಬಾಪುಗೌಡ, ಕಲ್ಲಪ್ಪ ಹರವಿ, ಶಿವಪ್ಪ ಮಾಗಿ, ಸೋಮಣ್ಣ ಮಳ್ಳಳ್ಳಿ, ಶಿವರಾಜ ಅಳವಳ್ಳಿ, ಕಿರಣ ಸಕ್ರಿ, ಬಾಬುರಾವ್ ಹಂಡೆ ಮತ್ತಿತರರು ಉಪಸ್ಥಿತರಿದ್ದರು. 

ಇದೇ ಸಂದರ್ಭ ಅಭಿವೃದ್ಧಿಗೆ ಸಹಾಯ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *