ಸಿನಿಮೀಯ ಶೈಲಿಯಲ್ಲಿದೆ ಆಗುಂಬೆ ಮರ್ಡರ್ ಮಿಸ್ಟರಿ – ಸ್ನೇಹಿತನಿಂದಲೇ ಕೊಲೆಯಾದಳ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ..!!!ಪೊಲೀಸರು ರಣರೋಚಕ ಕೇಸ್ ಪತ್ತೆಹಚ್ಚಿದ್ದು ಹೇಗೆ!?
ತೀರ್ಥಹಳ್ಳಿ : ಅವರಿಬ್ಬರು ಪರಸ್ಪರ ಪರಿಚಯಸ್ಥರು ಮಾತ್ರವಲ್ಲದೆ ಸಂಬಂಧಿಕರು ಕೂಡ ಆಗಿದ್ದರು. ಅವರ ನಡುವೆ ಸಹಜವಾದ ಸಲಿಗೆ ಕೂಡ ಇತ್ತು. ಇತ್ತೀಚಿಗೆ ನಡೆದ ಕೆಲವು ಘಟನೆಗಳು ಅವರಿಬ್ಬರ ನಡುವೆ ಕಂದಕವನ್ನು ಸೃಷ್ಟಿ ಮಾಡಿದ್ದಲ್ಲದೆ ಈ ಕಂದಕವೇ ಇದೀಗ ಒಬ್ಬರ ಜೀವ ತೆಗೆಯುವಂತೆ ಮಾಡಿದೆ. ಇನ್ನು ಪೊಲೀಸರ ಅತಿಥಿ ಆಗಿರುವ ಆತ ಸಾಮಾನ್ಯ ಆಸಾಮಿಯನಲ್ಲ, ಕೊಲೆ ಮಾಡಿದರು ಮೂರ್ನಾಲ್ಕು ದಿನಗಳ ಕಾಲ ಪೊಲೀಸರ ಜೊತೆಗೆ ಅಮಾಯಕನ ರೀತಿ ಓಡಾಡಿಕೊಂಡಿದ್ದ ಆತ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ.
ಕಳೆದ ಜೂನ್ 29ರಂದು ತೀರ್ಥಹಳ್ಳಿ ತಾಲೂಕಿನ ಆಗುಂಬೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಹಸಿಮನೆ ಗ್ರಾಮದ ಪೂಜಾ ಎ.ಕೆ ಎಂಬ ವಿವಾಹಿತ ಮಹಿಳೆಯ ಕೆಲಸಕ್ಕೆಂದು ತೆರಳಿದವರು ವಾಪಸ್ ಆಗಿರಲಿಲ್ಲ. ಸಾಕಷ್ಟು ಕಡೆ ಶೋಧ ನಡೆಸಿದ ಕುಟುಂಸ್ಥರು ಆಗುಂಬೆ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು.
ಪ್ರಕರಣ ದಾಖಲಾದ ಬಳಿಕ ಒಂದು ವಾರಗಳ ಕಾಲ ನಿರಂತರ ಶೋಧ ನಡೆಸಿದ ಪೊಲೀಸರಿಗೆ ಯಾವುದೇ ಸುಳಿವು ಕೂಡ ಸಿಕ್ಕಿರಲಿಲ್ಲ. ಸ್ವತಃ ಆರೋಪಿಯೇ ಮುರ್ನಾಲ್ಕು ದಿನಗಳ ಕಾಲ ಪೊಲೀಸರ ಜೊತೆಗೆ ತನಿಖೆಗೆ ಸಹಾಯ ಮಾಡುತ್ತಿದ್ದರಿಂದ ಸಣ್ಣ ಅನುಮಾನವೂ ಪೊಲೀಸರಿಗೆ ಬಂದಿರಲಿಲ್ಲ. ಹೀಗೆ ತಲೆ ಕೆಡಿಸಿಕೊಂಡು ತನಿಖೆ ಮುಂದುವರೆಸಿದ್ದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಕನ್ನಡದ ದೃಶ್ಯಂ ಚಲನಚಿತ್ರದ ರೀತಿಯಲ್ಲಿ ಪ್ಲಾನ್ ಮಾಡಿದ್ದ ಆ ಅರೋಪಿ ಮಣಿಕಂಠ.
ಪೊಲೀಸರು ಶೋಧಕಾರ್ಯ ನಡೆಸಿದರು ವಾರ ಕಳೆದರು ಆಕೆಯ ಸುಳಿವೆ ಸಿಕ್ಕಿರಲಿಲ್ಲ. ಈ ಸಂಬಂಧ ಆಕೆಗೆ ಸಂಬಂಧಪಟ್ಟವರ ವಿಚಾರಣೆಯನ್ನ ಕೂಡ ಪೊಲೀಸರು ನಡೆಸಿದ್ದು ಆಯಿತು. ಆದರೆ ಪೊಲೀಸರ ಜೊತೆಗೆ ಇದ್ದ ಮಣಿಕಂಟನಿಗೆ ಪೊಲೀಸರ ಚಲನವಲನಗಳ ಬಗ್ಗೆ ತಿಳಿಯುತ್ತಿತ್ತು. ಕೊಲೆ ಮಾಡಿದ ಒಂದು ಗಂಟೆ ಒಳಗೆ ತನ್ನ ಜಾಗ ಬದಲಾಯಿಸಿ ಎಂದಿನಂತೆ ಕೆಲಸಕ್ಕೆ ಹೋಗಿ ಸ್ನೇಹಿತರ ಜೊತೆ ಹೆಬ್ರಿಗೂ ಆತ ಹೋಗಿದ್ದ.
ಇನ್ನು ಕೊಲೆ ಮಾಡಿ ಆ ದಟ್ಟ ಅರಣ್ಯ ಮಧ್ಯೆ ಬಾಡಿಯನ್ನು ಎಸೆದು ಏನು ಗೊತ್ತಿಲ್ಲದ ಹಾಗೆ ಪೊಲೀಸರಿಗೆ ಒಂದು ಕೆಂಪು ಕಾರಿನಲ್ಲಿ ಇದ್ದ ಯಾರದ್ದೋ ಜೊತೆಯಲ್ಲಿ ಇದ್ದ ಬಗ್ಗೆ ಸುಳ್ಳು ಕಥೆಯನ್ನು ಕಟ್ಟಿ ಪೊಲಿಸರಿಗೆ ಯಾಮಾರಿಸಲು ಹೋದ. ಆದರೆ ಪೊಲೀಸರು ಮಾತ್ರ ಎಲ್ಲ ಆಯಾಮಗಳಲ್ಲೂ ತನಿಖೆ ಆಗಾಗಲೇ ಆರಂಭ ಮಾಡಿದ್ದರು. ಈತನ ಮೇಲೆ ಯಾವದಕ್ಕು ಒಂದು ಕಣ್ಣು ಇರಲಿ ಎಂದು ಗಮನ ಇಟ್ಟಿದ್ದರು. ಒಂದು ಸಿಡಿಆರ್ ನಿಂದ ಈ ಮಣಿಕಂಠನ ಎಲ್ಲ ಪ್ಲಾನ್ ಉಲ್ಟಾ ಆಗುವಂತೆ ಮಾಡಿತು.
ಇಷ್ಟು ದಿನ ಪೊಲೀಸರಿಗೆ ಯಾಮಾರಿಸಲು ಹೋಗಿದನ ಕರೆದು ಬೆಂಡ್ ಎತ್ತಿದ್ದಾಗ ಕನ್ನಡದ ದೃಶ್ಯ ಸಿನಿಮಾ ಕಥೆ ಹೋಲುವ ಮರ್ಡರ್ ಮಿಸ್ಟ್ರಿ ಕಥೆಯಂತೆ ಆಯಿತು. ಮೊದ ಮೊದಲು ಅಮಾಕನ ಹಾಗೆ ಇದ್ದ ಆತ, ತನ್ನ ಹಾಗೂ ಕೊಲೆಯಾದ ವಿವಾಹಿತೆ ಪೂಜಾಗೂ ಇದ್ದ ಹಣಕಾಸಿನ ಸಂಬಂಧಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದ.
ಮಣಿಕಂಠ ಆಕೆಯನ್ನು ಕೊಲೆ ಮಾಡುವ ಉದ್ದೇಶದಿಂದಲ್ಲೇ ಎಲ್ಲ ರೀತಿಯಿಂದಲೂ ಪ್ಲಾನ್ ಮಾಡಿಕೊಂಡು ಬಂದಿದ್ದ ಅನಿಸುತ್ತದೆ. ಯಾಕೆಂದರೆ ಆತ ತಾನೂ ಆಕೆಗೆ ನೀಡಿದ್ದ 40 ಸಾವಿರ ಹಣ ಕೊಡುವಂತೆ ಮೆಸೇಜ್ ಮಾಡಿ ಮೊಬೈಲ್ ಸ್ವಿಚ್ ಆಫ್ ಆಗುತ್ತದೆ ಎಂದು ಹೇಳಿದ್ದ. ನಂತರ ಆತನೆ ಮೊಬೈಲ್ ಆಫ್ ಮಾಡಿ ನಂತರ ಚಾರ್ಜ್ ಹಾಕಿದ ಹಾಗೆ ಮಾಡಿ ಕೊಲೆ ಮಾಡಿದ ನಂತರ ಮತ್ತೆ ಆಕೆ ಮೊಬೈಲ್ ಗೆ ದುಡ್ಡು ನೀಡುವಂತೆ ಮೆಸೇಜ್ ಹಾಕಿದ್ದ ಇದು ಪೊಲೀಸರಿಗೂ ಹಾದಿ ತಪ್ಪುವಂತೆ ಮಾಡಿತ್ತು. ನಂತರ ಸಿಡಿಆರ್ ಮೇಲೆ ತನಿಖೆ ಆರಂಭಿಸಿದ ಪೊಲೀಸರು ಮಣಿಕಂಠನನ್ನು ಪ್ರಶ್ನೆ ಮಾಡಿದ್ದಾರೆ ಆಗ ತನ್ನ ಎಲ್ಲ ತಪ್ಪುಗಳನ್ನು ಒಪ್ಪಿಕೊಂಡು ಕೊಲೆ ಮಾಡಿ ಶವ ಎಸೆದ ಜಾಗದ ಬಗ್ಗೆ ತಿಳಿಸುತ್ತಾನೆ ಈ ಮಣಿಕಂಠ.
ಒಟ್ಟಾರೆ ದೃಶ್ಯ ಚಿತ್ರವನ್ನು ಹೋಲುವ ಹಾಗಿರುವ ಪೂಜಾ ಕೊಲೆ ಕೇಸ್ ಅನ್ನು ಪೊಲೀಸರು ಬೇಧಿಸಿದ್ದಾರೆ. ಕೊಲೆ ಆರೋಪಿಯನ್ನು ಸ್ಥಳ ಮಹಾಜರು ನಡೆಸಿ ಕೃಷ್ಣ ಜನ್ಮ ಸ್ಥಾನಕ್ಕೆ ಕಳುಹಿಸಿದ್ದಾರೆ. ತನ್ನ ಸಂಬಂಧಿಕನಿಂದಲೇ ಕೊಲೆಯಾಗಿ ಮಸಣ ಸೇರಿದ ಪೂಜಾ ಪೋಷಕರ ಆಕ್ರಂದ್ರನ ಮುಗಿಲು ಮುಟ್ಟಿದೆ. ಪೂಜಾ ಸಂಬಂಧಿಕರು ಆತನಿಗೆ ಉಗ್ರ ಶಿಕ್ಷೆ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಅದೇನೇ ಆಗಲಿ ಹೋದ ಜೀವ ಮತ್ತೆ ಬರುವುದಿಲ್ಲ ಒಂದು ಪರಿಚಯದ ಸಂಬಂಧ ಕೊಲೆಯಲ್ಲಿ ಅಂತ್ಯವಾಗಿದೆ.
ವರದಿ – ಅಕ್ಷಯ್ ತೀರ್ಥಹಳ್ಳಿ