Ripponpete | ಅಕ್ರಮ ಗೋ ಸಾಗಾಟ – ಮೂವರು ಆರೋಪಿಗಳ ಬಂಧನ ,ಜಾನುವಾರುಗಳ ರಕ್ಷಣೆ

ರಿಪ್ಪನ್‌ಪೇಟೆ : ಅಕ್ರಮ ಗೋ ಸಾಗಾಟ – ಮೂವರು ಆರೋಪಿಗಳ ಬಂಧನ ,ಜಾನುವಾರುಗಳ ರಕ್ಷಣೆ

ರಿಪ್ಪನ್‌ಪೇಟೆ : ಅಕ್ರಮವಾಗಿ ಜಾನುವಾರು ಗಳನ್ನು ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೆರೆಗೆ ಪೊಲೀಸರು ಟಾಟಾ ದೋಸ್ತ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 3 ಜಾನುವಾರುಗಳನ್ನು ರಕ್ಷಿಸಿದ್ದಾರೆ.


ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಪ್ರಮುಖ ಆರೋಪಿಗಳಾದ ಸೈಯದ್ ಖೈಜರ್ (45) , ರಾಹಿದ್ (18) ಮತ್ತು ಫಾಜಿಲ್ (48)ರನ್ನು ಬಂಧಿಸಿ 3 ಜಾನುವಾರುಗಳನ್ನು ರಕ್ಷಿಸಲಾಗಿದೆ.

ಸಿದ್ದಪ್ಪನಗುಡಿ ಬಳಿಯಲ್ಲಿ ಟಾಟಾ ದೋಸ್ತ್  (KA -37-A 2314) ವಾಹನದಲ್ಲಿ ಅಕ್ರಮವಾಗಿ ಸಾಗಿಸುತಿದ್ದ ಜಾನುವಾರನ್ನು ಪಿಎಸ್‌ಐ ಪ್ರವೀಣ್ ನೇತ್ರತ್ವದ ಸಿಬ್ಬಂದಿಗಳು ರಕ್ಷಿಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಘಟನೆಯ ವಿವರ :

ದೇವರಾಜ್ ಕೆರೆಹಳ್ಳಿ ಎಂಬುವವರು ಅರಸಾಳಿನಲ್ಲಿರುವ ತಮ್ಮ ಜಮೀನಿಗೆ ಹೋಗಲು ಸ್ನೇಹಿತರಾದ ರಾಘವೇಂದ್ರ ರವರೊಂದಿಗೆ ಬೈಕ್ ನಲ್ಲಿ ಸಿದ್ದಪ್ಪನ ಗುಡಿ ಹತ್ತಿರ ಹೋಗುತ್ತಿರುವಾಗ ಬೆಳಿಗ್ಗೆ ಸುಮಾರು 5-50 ಗಂಟೆಗೆ ಆಯನೂರು ಕಡೆಗೆ ಒಂದು ಅಶೋಕ ಲೈಲ್ಯಾಂಡ್ ದೋಸ್ತ್ ವಾಹನದಲ್ಲಿ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿಕೊಂಡು ಹೋಗುತ್ತಿದ್ದನ್ನು ನೋಡಿ ವಾಹನ ಅಡ್ಡ ಹಾಕಿ ನಿಲ್ಲಿಸಿ ಚಾಲಕನಲ್ಲಿ ಜಾನುವಾರುಗಳ ಬಗ್ಗೆ ವಿಚಾರಿಸಿದಾಗ ಒಮ್ಮೆ ಸಾಕಲು ಅಂತಲೂ ಇನ್ನೊಮ್ಮೆ ಖಸಾಯಿ ಖಾನೆಗೆ ಅಂತಲೂ ಅನುಮಾನಾಸ್ಪದವಾಗಿ ಉತ್ತರ ನೀಡಿದ್ದಾನೆ,ಅವರ ಬಳಿ ದಾಖಲಾತಿಗಳನ್ನು ಕೇಳಲಾಗಿ ಯಾವುದೇ ದಾಖಲಾತಿ ಇಲ್ಲವೆಂದು ತಿಳಿಸಿರುತ್ತಾನೆ.ವಾಹನದಲ್ಲಿ ಚಾಲಕ ಸಮೇತ ಮೂರು ಜನ ವ್ಯಕ್ತಿಗಳಿದ್ದು, ವಾಹನದಲ್ಲಿದ್ದ ಚಾಲಕನ ಹೆಸರು ವಿಳಾಸ ಕೇಳಲಾಗಿ 1)ಸೈಯದ್ ಬೈಜರ್ ಬಿನ್ ಸೈಯದ್ 2) ರಾಹಿದ್ 3) ಫಾಜಿಲ್ ಹಾರಳ್ಳಿ ಗ್ರಾಮ, ಶಿವಮೊಗ್ಗ ತಾಲೂಕು ಎಂದು ತಿಳಿಸಿದ್ದು,ವಾಹನದ ಹಿಂಬದಿ ಹೋಗಿ ನೋಡಿದಾಗ ವಾಹನದಲ್ಲಿ 03 ಜಾನುವಾರು ಹೋರಿ ಕರುಗಳಿದ್ದು,ಅವುಗಳಿಗೆ ಹಿಂಸೆಪಡಿಸುವ ರೀತಿಯಲ್ಲಿ ಹಗ್ಗದಿಂದ ಬಿಗಿದು,ಒತ್ತೊತ್ತಾಗಿ ಕಟ್ಟಿಕೊಂಡಿರುವುದು ಕಂಡು ಬಂದಿರುತ್ತದೆ.

ವಾಹನದ ನಂಬರ್ ನೋಡಲಾಗಿ ಕೆಎ37-2314 ನೇ ನಂಬರಿನ ಅಶೋಕ ಲೈಲ್ಯಾಂಡ್ ದೋಸ್ತ್ ವಾಹನವಾಗಿರುತ್ತದೆ. ನಂತರ ಮೂರು ಜನ ಆಸಾಮಿಗಳಿಗೆ ಇವುಗಳನ್ನು ಎಲ್ಲಿಂದ ತಂದಿದ್ದೀರಾ ಅಂತ ಕೇಳಲಾಗಿ ಚಾಲಕನ ಪಕ್ಕದಲ್ಲಿ ಕುಳಿತಿದ್ದ ರಾಹಿದ ಎಂಬಾತನು ತನಗೆ ಪರಿಚಯದ ಹಿರೆಮೈಥಿ ವಾಸಿ ಜಯಪ್ಪ ರವರಿಂದ ಹೋರಿಕರುಗಳನ್ನು ಖರೀದಿಸಿಕೊಂಡು ಬಂದಿರುವುದಾಗಿ ತಿಳಿಸಿರುತ್ತಾನೆ.

ಸದರಿ ವ್ಯಕ್ತಿಗಳ ಬಗ್ಗೆ ದೇವರಾಜ್ ಕೆರೆಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ತೆರಳಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *