ಅಪಘಾತದಲ್ಲಿ ಯುವಕ ಸಾವು – ಇದು ಅಪಘಾತವಲ್ಲ ಕೊಲೆ ಎಂದ ಕುಟುಂಬಸ್ಥರು

ಅಪಘಾತದಲ್ಲಿ ಯುವಕ ಸಾವು – ಇದು ಅಪಘಾತವಲ್ಲ ಕೊಲೆ ಎಂದ ಕುಟುಂಬಸ್ಥರು

ಶಿವಮೊಗ್ಗ: ಮರಕ್ಕೆ ಬೈಕ್‌  ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಯುವಕ  ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮೃತನನ್ನು ರಾಜು (27) ಎಂದು ಗುರುತಿಸಲಾಗಿದೆ.

ಸಾಗರ ರಸ್ತೆಯ ವಾಜಪೇಯಿ ಬಡಾವಣೆ ಬಳಿ ಬೈಕ್‌  ಮರಕ್ಕೆ ಡಿಕ್ಕಿಯಾಗಿದೆ. ನಂತರ ಬೈಕ್‌ ಸಹಿತ ಸವಾರ ರಾಜು ಚರಂಡಿಗೆ ಬಿದಿದ್ದಾನೆ. ಗಂಭೀರ ಗಾಯಗೊಂಡು ಅಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಸಿದ್ದರಹಳ್ಳಿಯ ರಾಜು ಕೂಲಿ ಕೆಲಸ ಮಾಡಿಕೊಂಡಿದ್ದು 6 ತಿಂಗಳ ಹಿಂದೆ ಮದುವೆಯಾಗಿದ್ದ. ನಿನ್ನೆ ರಾತ್ರಿ ವಾಜಪೇಯಿ ಲೇಔಟ್ ನಲ್ಲಿ ಚರಂಡಿಗೆ ಬೈಕ್ ಸಮೇತ ಬಿದ್ದಿದ್ದಾನೆ.
ಮೃತ ರಾಜುವಿನ ಕಣ್ಣು ಗುಡ್ಡೆಗಳು ಹೊರಗೆ ಬಿದ್ದಿದೆ. ಅಪಘಾತ ಸಂಭವಿಸಿದ್ದರೆ ಕಣ್ಣುಗುಡ್ಡೆಗಳು ಹೊರಗೆ ಯಾಕೆ ಬರುತ್ತವೆ ಎಂದು ಕುಟುಂಬ ಅನುಮಾನ ವ್ಯಕ್ತಪಡಿಸಿದೆ. ಮೊಬೈಲ್ ಹೊರಗೆ ಕಟ್ಟೆ ಮೇಲೆ ಕಾಣಿಸಿಕೊಂಡಿದೆ. ಇದೆಲ್ಲಾ ಅನುಮಾನಕ್ಕೆ ಕಾರಣವಾಗಿದ್ದು, ಅಪಘಾತದ ಹೆಸರಿನಲ್ಲಿ ಇದೊಂದು ಕೊಲೆ ಎಂದು ಆತನ ಕುಟುಂಬ ಅನುಮಾನ ವ್ಯಕ್ತಪಡಿಸಿದೆ.

ಪತಿ ಮೃತನಾದರೂ ಪತ್ನಿ ಸಾವಿಗೆ ಬಂದಿಲ್ಲದಿರುವುದು ಹಲವು ಅನುಮಾಕ್ಕೆ ಕಾರಣ ಎಂದು ಕುಟುಂಬ ಆರೋಪಿಸಿದೆ.

Leave a Reply

Your email address will not be published. Required fields are marked *