Ripponpete | ಮೋದಿ, ಬಿವೈಆರ್ ಗೆಲುವಿಗೆ ಪ್ರಾರ್ಥಿಸಿ ವಿಶೇಷ ಪೂಜೆ
ರಿಪ್ಪನ್‌ಪೇಟೆ : ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು, ಶಿವಮೊಗ್ಗ ಕ್ಷೇತ್ರದಲ್ಲಿ ಬಿ ವೈ ರಾಘವೇಂದ್ರ ಮತ್ತೆ ಗೆಲ್ಲಬೇಕು ಎಂದು ಪ್ರಾರ್ಥಿಸಿ ಶ್ರೀ ಕ್ಷೇತ್ರ ಕರಿಬಸವೇಶ್ವರ ಬಾಲಸುಬ್ರಹ್ಮಣ್ಯ ಮತ್ತು ಶ್ರೀ ನಾಗದೇವರ ಸನ್ನಿದಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ತಮ್ಮಡಿಕೊಪ್ಪ ಗ್ರಾಮದ ಶ್ರೀ ಕ್ಷೇತ್ರ ಕರಿಬಸವೇಶ್ವರ ಬಾಲಸುಬ್ರಹ್ಮಣ್ಯ ಮತ್ತು ಶ್ರೀ ನಾಗದೇವರ ಸನ್ನಿದಿಯಲ್ಲಿ ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು ,ಶಿವಮೊಗ್ಗ ಕ್ಷೇತ್ರದಲ್ಲಿ ಬಿ ವೈ ರಾಘವೇಂದ್ರ ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾಗಿ ಸಚಿವರಾಗಲಿ ಎಂದು ಪ್ರಾರ್ಥಿಸಿ ವಿಶೇಷವಾಗಿ ಶ್ರೀ ದುರ್ಗಾಹೋಮ ಹಾಗೂ ಶ್ರೀ ಗುರುವಿಗೆ ನವಕಲಶಾಭಿಷೇಕ ,ಕಲಾಹೋಮ ಗಳು ಶ್ರೀ ಕ್ಷೇತ್ರದ ಧರ್ಮದರ್ಶಿ ಪ್ರಕಾಶ್ ಹಾಗೂ ಮಲ್ಲೆಸರ ನವೀನ್ ಹಾಗೂ ಇತರೆ ಭಕ್ತರೊಂದಿಗೆ ಸಂಪನ್ನಗೊಂಡಿತ್ತು.
ಶುಕ್ರವಾರ ಕುಂದಾಪುರದ ಅಭಿಷೇಕ್ ಮಯ್ಯ ರವರ ನೇತೃತ್ವದಲ್ಲಿ ನಡೆದ ವಿಶೇಷ ಪೂಜೆಯೊಂದಿಗೆ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಭಕ್ತರು ಇದ್ದರು.