Ripponpete | ಬಟಾಣಿಜಡ್ಡು ಗ್ರಾಮದಲ್ಲಿ ಒಂಟಿಸಲಗನ ದಾಳಿ – ಬೇಸಿಗೆ ಭತ್ತದ ಬೆಳೆ ಹಾನಿ
ರಿಪ್ಪನ್‌ಪೇಟೆ;-ಕುಮದ್ವತಿ ನದಿಯ ಬಳಿಯ ಬಟಾಣಿ ಜಡ್ಡು ಗ್ರಾಮದ ರೈತ ದಾನಪ್ಪ ಎಂಬುವರ ಭತ್ತದ ಬೆಳೆಗೆ ಒಂಟಿಸಲಗ ನುಗ್ಗೆ ಭತ್ತದ ಬೆಳೆಯನ್ನು ನಾಶಗೊಳಿಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಸವಾಪುರ ಗ್ರಾಮದ ಕಡೆಗದ್ದೆ ಅರಣ್ಯದಲ್ಲಿ ತಿಮ್ಮಪ್ಪ ಎಂಬುವರು ಅನೆ ತುಳಿತದಿಂದ ಸಾವನ್ನಪ್ಪಿರುವ ದಿನವೇ ರಾತ್ರಿ ಅದೇ ಗ್ರಾಮಕ್ಕೆ ಹತ್ತಿರವಿರುವ ಬಟಾಣಿಜಡ್ಡು ಗ್ರಾಮದಲ್ಲಿ ಈ ರೀತಿಯಲ್ಲಿ ದಾಳಿನಡೆಸಿ ಬೆಳೆ ನಾಶಗೊಳಿಸಿರುವುದನ್ನು ನೋಡಿದರೆ ಅನೆ ಇಲ್ಲಿಯೇ ಸುತ್ತಮುತ್ತ ಇದ್ದು ರೈತನಾಗರೀಕರಲ್ಲಿ ಭಯ ಭೀತರನ್ನಾಗಿಸಿದೆ.
ಸಂಬಂಧಪಟ್ಟ ಅರಣ್ಯ ಇಲಾಖೆಯವರು ಈ ಬಗ್ಗೆ ಸೂಕ್ತ ಗಮನಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.