Ripponpete | ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಶ್ರೀಮನ್ಮಹಾರಥೋತ್ಸವ, ಜಾತ್ರೋತ್ಸವ , ಧಾರ್ಮಿಕ ಕಾರ್ಯಕ್ರಮ ಸಂಪನ್ನ
ರಿಪ್ಪನ್‌ಪೇಟೆ;-ಪುರಾಣ ಪ್ರಸಿದ್ದ ರಿಪ್ಪನ್‌ಪೇಟೆಯ ಶ್ರೀಸಿದ್ದಿವಿನಾಯಕ ಸ್ವಾಮಿ ದೇವಸ್ಥಾನ ಮತ್ತು ಜಗನ್ಮಾತೆ ಶ್ರೀಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ಶ್ರೀಮನ್ಮಹಾರಥೋತ್ಸವ ಹಾಗೂ ಜಾತ್ರೋತ್ಸವವು ಮೇ.1 ರಿಂದ 4 ರವರೆಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯದೊಂದಿಗೆ ಆದ್ದೂರಿಯಾಗಿ ನಡೆದು ಇಂದು ಸಂಪನ್ನಗೊಂಡಿತು.
ಶಿವಮೊಗ್ಗದ ವೇ.ಬ್ರ.ವಸಂತಭಟ್ ಇವರ ನೇತೃತ್ವದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕಚಂದ್ರಶೇಖರಭಟ್ ಮತ್ತು ಗುರುರಾಜಭಟ್ ಇವರ ಸಹಯೋಗದಲ್ಲಿ ಗಣಪತಿ ಮತ್ತು ಅಮ್ಮನವರಿಗೆ ಕುಂಭಾಭಿಷೇಕ.ಮಹಾಪೂಜೆ.ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗದೊಂದಿಗೆ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು.
ಪೂಜಾ ಕಾರ್ಯದ ನಂತರ ನಾಲ್ಕು ದಿನಗಳ ಕಾಲ ಸಾಮೂಹಿಕ ಅನ್ನಸಂತರ್ಪಣೆ ಜರುಗಿತು.
ಈ ಶ್ರೀಮನ್ಮಹಾರಥೋತ್ಸವ ಹಾಗೂ ಜಾತ್ರೋತ್ಸವವು ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆರ್.ಈ.ಈಶ್ವರಶೆಟ್ಟಿ,ಗಣೇಶ ಎನ್.ಕಾಮತ್, ಎಂ.ಡಿ.ಇಂದ್ರಮ್ಮ,ಮಂಜನಾಯ್ಕ್,ತುಳೋಜಿರಾವ್,ಸ್ವಾಮಿದೊಡ್ಡಿಕೊಪ್ಪ,ವೈ.ಜೆ.ಕೃಷ್ಣ,ಆಶಾ,ಸಿದ್ದಿವಿನಾಯಕ ಸೇವಾ ಸಮಿತಿ ಅಧ್ಯಕ್ಷ ಎನ್.ಸತೀಶ್,ಕೆ.ಎ.ಅರವಿಂದ,ಎಂ.ಬಿ.ಮಂಜುನಾಥ,ಎಂ ಸುರೇಶ ಸಿಂಗ್,ಸುದೀಂದ್ರಪೂಜಾರಿ, ನಾಗರತ್ನ, ಕೆ.ವಿ.ಮುರುಳಿಧರಕೆರೆಹಳ್ಳಿ,ಲಕ್ಷö್ಮಣಬಳ್ಳಾರಿ,ವಿವಿಧ ಸೇವಾ ಸಮಿತಿಯ ಪದಾಧಿಕಾರಿಗಳು ಸೇವಾಕಾರ್ಯದಲ್ಲಿ ತೊಡಗಿದ್ದರು.